ಮೈಸೂರು: ರೈತ ಮಹಿಳೆ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಲಘುವಾಗಿ ಮಾತನಾಡಿದ್ದು, ಇದು ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನ. ಇವರು ಈ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಮೈಸೂರು ನಗರಾಧ್ಯಕ್ಷ ಗೋಕುಲ್ ಗೋವರ್ಧನ್ ಆಗ್ರಹಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಮಹಿಳೆ ಜಯಶ್ರೀ ಕುರಿತಂತೆ ಮುಖ್ಯಮಂತ್ರಿಗಳು ಲಘುವಾಗಿ ಮಾತನಾಡಿದ್ದಾರೆ. ಆ ಮೂಲಕ ನಮ್ಮದು ರೈತರ ಹಿತ ಕಾಯುವ ಪಕ್ಷ ಎಂದು ಹೇಳಿಕೊಳ್ಳುವವರ ನಿಜಬಣ್ಣ ಬಯಲಾಗಿದೆ ಎಂದು ಟೀಕಿಸಿದರು….
ಇಂದು ಉದ್ಯೋಗ ಮೇಳ
November 20, 2018ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಲಕ ಮತ್ತು ತಾಂತ್ರಿಕ ತರಬೇತಿ ಕೇಂದ್ರ ಮಳವಳ್ಳಿ, ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಂಯು ಕ್ತಾಶ್ರಯದಲ್ಲಿ ನ.20ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಮಳವಳ್ಳಿ ಕೆಎಸ್‍ಆರ್‍ಟಿಸಿ ಚಾಲಕ ಮತ್ತು ತಾಂತ್ರಿಕ ತರಬೇತಿ ಕೇಂದ್ರದಲ್ಲಿ ಹಮ್ಮಿ ಕೊಳ್ಳಲಾಗಿದೆ. ಉದ್ಯೋಗ ಮೇಳದಲ್ಲಿ ಉಬರ್, ಜಮೋಟೋ, ಸಿಂಪ್ಲಿ ಗ್ರಾಮೀಣ್ ಬಿಜಿನೆಸ್ ಸಲೂಷನ್, ವುಡ್‍ಲ್ಯಾಂಡ್, ಕಣ್ವಗ್ರೂಪ್ಸ್, ಎಸ್.ಬಿ.ಐ ಲೈಫ್‍ಇನ್‍ಶೂರೆನ್ಸ್ ಹಾಗೂ ಇತರೆ ಕಂಪನಿಗಳು ಭಾಗವಹಿಸಲಿವೆ. ಅಭ್ಯರ್ಥಿಗಳು ಪದವಿ, ಡಿಪ್ಲೊಮೊ, ಎಸ್‍ಎಸ್‍ಎಲ್‍ಸಿ, ಪಿಯುಸಿ,…
ಗೃಹಿಣಿ ಮೇಲೆ ಹಲ್ಲೆ: ನಾಲ್ವರ ಬಂಧನ
November 20, 2018ಮೈಸೂರು: ಗೃಹಿಣಿ ಮೇಲೆ ಮಾರ ಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮೈಸೂರಿನ ಎನ್.ಆರ್. ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಶಿವಾಜಿ ರಸ್ತೆ ನಿವಾಸಿ, ಗುಜರಿ ವ್ಯಾಪಾರಿ ಮೀರ್ ಸಲಾವುದ್ದೀನ್ ಅವರ 2ನೇ ಪತ್ನಿ ಆಯಿಷಾ ಸಿದ್ಧಿಕ್ ಅವರ ಮೇಲೆ ಹಲ್ಲೆ ನಡೆಸಿದ್ದ ಮುಜೀಬ್ ಉರ್ ರೆಹಮಾನ್, ಉಮರ್ ಖಾನ್, ಸಿದ್ಧಿಖ್ ಖಾನ್ ಹಾಗೂ ಆದಿಲ್‍ನನ್ನು 3 ದಿನಗಳ ಹಿಂದೆ ಬಂಧಿಸಿರುವ ಪೊಲೀಸರು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕುಶಾಲನಗ ರದ…
ಮೈಸೂರು ಜಿಲ್ಲಾ ಪೊಲೀಸ್ ವೆಬ್‍ಸೈಟ್ ಸ್ಥಗಿತ
November 20, 2018ಮೈಸೂರು: ಮೈಸೂರು ಜಿಲ್ಲಾ ಪೊಲೀಸ್ ವೆಬ್‍ಸೈಟ್‍ನಿಂದ ದೂರ ಉಳಿದಿದ್ದು, ಇದರಿಂದ ಜಿಲ್ಲಾ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣದ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಜಿಲ್ಲಾ ಪೊಲೀಸ್ ವೆಬ್‍ಸೈಟ್‍ನ ಕ್ರೈಂ ಫೈಲ್‍ನಲ್ಲಿ 2017ರ ಮೇ 9ರವರೆಗೆ ಜಿಲ್ಲೆಯ ವಿವಿಧ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ವಿವರ ಬಿಟ್ಟರೆ, ನಂತರ ನಡೆದ ಪ್ರಕರಣದ ವಿವರಗಳ ಮಾಹಿತಿ ದೊರಕುತ್ತಿಲ್ಲ. ಮೇ.9ರಂದು ಜಯಪುರ, ಮೈಸೂರು ದಕ್ಷಿಣ, ಹುಣಸೂರು, ಬೆಟ್ಟದಪುರ ಪೊಲೀಸ್ ಠಾಣೆಗಳಲ್ಲಿ ಹಲ್ಲೆ ಪ್ರಕರಣ, ಹೆಚ್.ಡಿ.ಕೋಟೆ ಹಾಗೂ ಹುಲ್ಲಹಳ್ಳಿ ಪೊಲೀಸ್ ಠಾಣೆಗಳಲ್ಲಿ ಅಕ್ರಮ ಮದ್ಯ ಮಾರಾಟಗಾರರ…
ಕಂಪ್ಯೂಟರ್ ಬಳಕೆ ಹೆಚ್ಚಾಗಿದ್ದರೂ ಪುಸ್ತಕಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ
November 20, 2018ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅಭಿಮತ ಮೈಸೂರು: ಆಧುನಿಕ ಯುಗದಲ್ಲಿ ಕಂಪ್ಯೂಟರ್‍ಗಳ ಬಳಕೆ ಹೆಚ್ಚಾಗಿದ್ದರೂ ಪುಸ್ತಕಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಪುಸ್ತಕಗಳು ಎಂದೆಂದಿಗೂ ಶಾಶ್ವತ ದಾಖಲೆಗಳು ಎಂದು ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅಭಿವ್ಯಕ್ತಪಡಿಸಿದರು. ಕುವೆಂಪುನಗರದಲ್ಲಿರುವ ಗ್ರಂಥಾಲಯ ದಲ್ಲಿ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2018’ರ ಅಂಗವಾಗಿ ಆಯೋಜಿಸಿದ್ದ ‘ಪುಸ್ತಕ ಪ್ರದರ್ಶನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕಗಳನ್ನು ಓದುವುದರಿಂದ ಸಿಗುವಂ ತಹ ಗ್ರಹಿಕೆ ಕಂಪ್ಯೂಟರ್ ಬಳಕೆಯಿಂದ ದೊರೆಯುವುದಿಲ್ಲ. ಕಂಪ್ಯೂಟರ್ ಹಾಗೂ ಮೊಬೈಲ್‍ಗಳು ಹೆಚ್ಚಾಗುತ್ತಿದ್ದರೂ ಪುಸ್ತಕ ಗಳಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ….
ಮಾಹಿತಿ, ಮೋಜಿಗೆ ಮಾತ್ರವಲ್ಲ ವಾಟ್ಸಾಪ್, ಫೇಸ್‍ಬುಕ್: ಜೀವನಕ್ಕೆ ದಾರಿಯು ಉಂಟು
November 20, 2018ಸಾಮಾಜಿಕ ಜಾಲತಾಣದ ಮೂಲಕ ಉದ್ಯೋಗದಾತ! ಮೈಸೂರು: ಪ್ರಸ್ತುತ ದಿನಗಳಲ್ಲಿ ಫೇಸ್‍ಬುಕ್, ವಾಟ್ಸಾಪ್ ಮತ್ತಿತರೆ ಸಾಮಾಜಿಕ ಜಾಲತಾಣದಿಂದ ಉಂಟಾಗುತ್ತಿ ರುವ ಅವಾಂತರಗಳ ಪಟ್ಟಿಯೇ ದೊಡ್ಡದಿದೆ. ಆದರೆ, ಇಲ್ಲೊಬ್ಬರು ವಾಟ್ಸಾಪ್ ಅನ್ನೇ ಬಳಸಿ ಕೊಂಡು ಹಲವರಿಗೆ ಉದ್ಯೋಗ ದೊರೆಯು ವಂತೆ ಮಾಡುವ ಮೂಲಕ ಸಾಮಾಜಿಕ ಜಾಲತಾಣವನ್ನು ಹೀಗೂ ಬಳಸಿಕೊಳ್ಳ ಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ, ಪ್ರಸ್ತುತ ಬೆಂಗಳೂರಿನ ಇನ್‍ಸೈನ್ ಎಕ್ವಿಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಕಾಫಿ ಪಾಯಿಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಬ್ಯುಸಿನೆಸ್ ಯೂನಿಟ್ ಹೆಡ್…
ಬೆಳಗಾವಿಯಲ್ಲಿ ರೈತರ ರೋಷಾಗ್ನಿ
November 19, 2018ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಸಭೆ ನಡೆಸಿ ಕಬ್ಬು ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಮುಂತಾದ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತು ತಪ್ಪಿದ ಹಿನ್ನೆಲೆಯಲ್ಲಿ ರೈತರು ಇಂದು ತೀವ್ರ ಆಕ್ರೋಶ ಪ್ರದರ್ಶಿಸಿಸಿದರು. ಹಲವೆಡೆ ರಸ್ತೆ ತಡೆ ನಡೆಸಿದ ರೈತರು, ಬೆಳ ಗಾವಿಯ ಜಿಲ್ಲಾಧಿಕಾರಿಗಳ ಕಚೇರಿಗೆ ಕಬ್ಬು ತುಂಬಿದ ಲಾರಿಗಳೊಂದಿಗೆ ಮುತ್ತಿಗೆ ಹಾಕಿ ದರು. ಸುವರ್ಣ ಸೌಧದ ಬೀಗ ಮುರಿದು ಅದರೊಳಗೆ ಲಾರಿಗಳನ್ನು ನುಗ್ಗಿಸಿ ಕಬ್ಬು ಸುರಿ ದರು….
4 ವರ್ಷ ನೀನೆಲ್ಲಿ ಮಲಗಿದ್ದೆ ತಾಯಿ? ರೈತ ಮಹಿಳೆ ಮೇಲೆ ಸಿಎಂ ಗರಂ
November 19, 2018ಬೆಂಗಳೂರು: ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ತಾಯಿ… ಸಕ್ಕರೆ ಕಾರ್ಖಾನೆ ಮಾಲೀಕನಿಗೆ ಓಟು ಒತ್ತುವಾಗ ಗೊತ್ತಾಗ್ಲಿಲ್ವಾ… ಸುವರ್ಣ ಸೌಧ ಗೇಟ್ ಮುರಿದವರು ರೈತರಲ್ಲ, ಗೂಂಡಾಗಳು… ಕೆಲವು ಮಾಧ್ಯಮ ಗಳು ಸಮ್ಮಿಶ್ರ ಸರ್ಕಾರ ಉರುಳಿಸಲು ನೋಡುತ್ತಿವೆ… ಇವು ಬೆಳ ಗಾವಿ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ವ್ಯಕ್ತಪಡಿಸಿದ ಆಕ್ರೋಶದ ನುಡಿಗಳು. ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಭಾನುವಾರ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇಂದು ಸಂಪೂರ್ಣವಾಗಿ ಸಹನೆ ಕಳೆದುಕೊಂಡಿದ್ದರು. ತನ್ನ ವಿರುದ್ಧ ಟೀಕೆ ಮಾಡಿದ್ದ ರೈತ…
ಮೈಸೂರು ಸಾಹಿತ್ಯ ಸಂಭ್ರಮ: ನೋಟು ರದ್ದತಿ ಉದ್ದೇಶ ಪರಿಪೂರ್ಣವಾಗಿ ಈಡೇರಿಲ್ಲ
November 19, 2018ಮೈಸೂರು: ಭಾರತೀಯ ರಿಸರ್ವ್ ಬ್ಯಾಂಕಿನ ನೋಟು ಮುದ್ರಣ ಘಟಕಗಳಲ್ಲಿ ಮುದ್ರಣವಾಗುವ ನೋಟುಗಳ ಸಾಮಥ್ರ್ಯ ಅರಿಯದೆ 500 ರೂ ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಪರಿಣಾಮವಾಗಿ ನಿಷೇಧದ ಉದ್ದೇಶ ಈಡೇರಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‍ನ ಮಾಜಿ ಗವರ್ನರ್ ಡಾ.ವೈ.ವಿ.ರೆಡ್ಡಿ ವಿಷಾದಿಸಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ವಿಂಡ್ ಚೈಮ್ಸ್ ಆವರಣದಲ್ಲಿ ಭಾನುವಾರ ಮೈಸೂರು ಲಿಟರರಿ ಫೋರಮ್ ಚಾರಿ ಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್-2015ರ ಸಂಯುಕ್ತಾಶ್ರಯದಲ್ಲಿ ನಡೆದ ಎರಡನೇ `ಮೈಸೂರು ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ,…
ರೈತ ಮಹಿಳೆ, ಹೋರಾಟಗಾರರನ್ನು ಅವಮಾನಿಸಿರುವುದು ಸಹಿಸಲಾಗಲ್ಲ
November 19, 2018ಬೆಂಗಳೂರು: ರೈತ ಮಹಿಳೆ ಹಾಗೂ ರೈತ ಹೋರಾಟ ಗಾರರನ್ನು ಅವಮಾನಿಸಿರುವುದನ್ನು ಸಹಿಸಲಾಗಲ್ಲ ಎಂದು ಗುಡುಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಸಿಎಂ ಕುಮಾರಸ್ವಾಮಿ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, `ನಾಲ್ಕು ವರ್ಷ ಎಲ್ಲಿ ಮಲಗಿದ್ದೆ’? ಎಂದು ಮುಖ್ಯಮಂತ್ರಿಗಳು ರೈತ ಮಹಿಳೆಯನ್ನು ಕೇಳಿದ್ದಾರಲ್ಲಾ, ಅದರ ಅರ್ಥವೇನು? ಎಂದು ಪ್ರಶ್ನಿಸಿದರು. ಪ್ರತಿಭಟನೆ ಮಾಡಿದ ರೈತರನ್ನು ಗೂಂಡಾಗಳು, ದರೋಡೆಕೋರರು ಎಂದೆಲ್ಲಾ ಕರೆದಿದ್ದಾರೆ. ಇಂತಹ ಧಿಮಾಕಿನ ಮಾತುಗಳು ಬೇಡ ಎಂದು ಕಿಡಿಕಾರಿದರು. `ನನಗೆ…