ಮೈಸೂರು

ಶಿವಲಿಂಗ, ಪ್ರಧಾನಿ ಮೋದಿ ಸಂಬಂಧ ಅವಹೇಳನಕಾರಿ ಹೇಳಿಕೆ: ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ ಬಿಜೆಪಿ ಪ್ರತಿಭಟನೆ
ಮೈಸೂರು

ಶಿವಲಿಂಗ, ಪ್ರಧಾನಿ ಮೋದಿ ಸಂಬಂಧ ಅವಹೇಳನಕಾರಿ ಹೇಳಿಕೆ: ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ ಬಿಜೆಪಿ ಪ್ರತಿಭಟನೆ

October 31, 2018

ಮೈಸೂರು:  ದೇಶದ ಬಹುಸಂಖ್ಯಾತರ ಆರಾಧ್ಯ ದೈವ ಶಿವ ಲಿಂಗ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕುರಿತಂತೆ ಕೇಂದ್ರದ ಮಾಜಿ ಸಚಿವರೂ ಆದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ನಗರ ಯುವ ಮೋರ್ಚಾ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಗಾಂಧಿ ಚೌಕದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ದೇಶದ ಪ್ರಧಾನಮಂತ್ರಿಗಳಿಗೆ ಅಗೌರವ ತೋರಿರುವ ಕಾಂಗ್ರೆಸ್ ನಾಯಕ ಶಶಿ ತರೂರ್‍ಗೆ ಧಿಕ್ಕಾರ, ಹಿಂದೂಗಳ ಆರಾಧ್ಯ ದೈವ ಶಿವಲಿಂಗದ ಬಗ್ಗೆ ಕೀಳು ಮಟ್ಟದ…

ಅಂಗಡಿ-ಮುಂಗಟ್ಟು, ಸಂಘ-ಸಂಸ್ಥೆಗಳ ನಾಮಫಲಕ ಕನ್ನಡ ಕಡ್ಡಾಯ
ಮೈಸೂರು

ಅಂಗಡಿ-ಮುಂಗಟ್ಟು, ಸಂಘ-ಸಂಸ್ಥೆಗಳ ನಾಮಫಲಕ ಕನ್ನಡ ಕಡ್ಡಾಯ

October 31, 2018

ಮೈಸೂರು:  ರಾಜ್ಯದ ಎಲ್ಲಾ ಅಂಗಡಿ-ಮುಂಗಟ್ಟು, ಸಂಘ-ಸಂಸ್ಥೆಗಳ ನಾಮಫಲಕಗಳಲ್ಲಿ ಕಡ್ಡಾಯ ವಾಗಿ ಕನ್ನಡ ಭಾಷೆ ಬಳಕೆಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಜಿಲ್ಲಾ ನ್ಯಾಯಾಲಯದ ಎದುರಿನ ಗಾಂಧೀ ಪುತ್ಥಳಿ ಬಳಿ ಜಮಾ ಯಿಸಿದ ಪ್ರತಿಭಟನಾಕಾರರು, `ಕನ್ನಡ ನಾಮ ಫಲಕ ಇದ್ದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ’ ಎಂಬಿತ್ಯಾದಿ ಕನ್ನಡ ಪರ ಘೋಷಣೆ ಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಯಾವ ಭಾಗಕ್ಕೆ ಹೋದರೂ…

ಜಾತಿ ರಾಜಕಾರಣ ಮಾಡುವವರನ್ನು ಜನ ತಿರಸ್ಕರಿಸಿದ್ದಾರೆ: ಚುಂಚನಕಟ್ಟೆ ಪ್ರಚಾರ ಸಭೆಯಲ್ಲಿ ರೇಷ್ಮೆ ಸಚಿವ ಸಾ.ರಾ.ಮಹೇಶ್ ಗುಡುಗು
ಮೈಸೂರು

ಜಾತಿ ರಾಜಕಾರಣ ಮಾಡುವವರನ್ನು ಜನ ತಿರಸ್ಕರಿಸಿದ್ದಾರೆ: ಚುಂಚನಕಟ್ಟೆ ಪ್ರಚಾರ ಸಭೆಯಲ್ಲಿ ರೇಷ್ಮೆ ಸಚಿವ ಸಾ.ರಾ.ಮಹೇಶ್ ಗುಡುಗು

October 31, 2018

ಚುಂಚನಕಟ್ಟೆ:  ನನ್ನ ರಾಜಕೀಯ ಜೀವನದಲ್ಲಿ ಎಂದೂ ಜಾತಿ ರಾಜಕೀಯ ಮಾಡಿಲ್ಲ. ಹಾಗಾಗಿಯೇ ಮತದಾರರು ಸತತ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಜಾತಿ ರಾಜಕಾರಣ ಮಾಡು ವವರನ್ನು ತಾಲೂಕಿನ ಜನತೆ ತಿರಸ್ಕರಿಸಿದ್ದಾರೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದರು. ಪಟ್ಟಣದ ಹೆಚ್.ಡಿ.ದೇವೇಗೌಡ ಸಮು ದಾಯ ಭವನದಲ್ಲಿ ನಡೆದ ಮಂಡ್ಯ ಲೋಕ ಸಭಾ ಉಪಚುನಾವಣೆಯ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ತಾಲೂಕು ಕುರುಬ ಸಮಾಜದ ಅಧ್ಯಕ್ಷರ ಹೇಳಿಕೆಗೆ ತೀರುಗೇಟು ನೀಡಿದರು. ಆರೂವರೇ ಕೋಟಿ ಜನರ ತೆರಿಗೆಯ…

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ 20 ದಿನದಲ್ಲಿ 3.70 ಲಕ್ಷ ಮಂದಿ ಭೇಟಿ
ಮೈಸೂರು

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ 20 ದಿನದಲ್ಲಿ 3.70 ಲಕ್ಷ ಮಂದಿ ಭೇಟಿ

October 31, 2018

ಮೈಸೂರು:  ಪ್ರವಾಸಿಗರು ಹಾಗೂ ಮೈಸೂರಿಗರ ಪ್ರಮುಖ ಆಕರ್ಷಣೇಯ ಕೇಂದ್ರ ಬಿಂದು ದಸರಾ ವಸ್ತುಪ್ರದರ್ಶನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರದ ದೊಡ್ಡಕೆರೆ ಮೈದಾನದಲ್ಲಿ ನಡೆಯುತ್ತಿರುವ ದಸರಾ ವಸ್ತುಪ್ರದರ್ಶನ ಅ.10 ರಂದು ಆರಂಭವಾಗಿದ್ದು, ಈವರೆಗೆ 3.70 ಲಕ್ಷ ಜನ ಭೇಟಿ ನೀಡಿದ್ದಾರೆ. ವಿವಿಧ ಇಲಾಖೆಗಳಿಂದ ನಿರ್ಮಾಣವಾಗುತ್ತಿರುವ ಮಳಿಗೆಗಳನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಲ್ಯಾಂಟನ್ ಪಾರ್ಕ್: ಈ ಬಾರಿಯ ವಿಶೇಷ ಆಕರ್ಷಣೆ ಲ್ಯಾಂಟನ್ ಪಾರ್ಕ್ ನೋಡಲು ಬರುವವರ ಸಂಖ್ಯೆ ಹೆಚ್ಚಾಗಿದ್ದು, ರಾತ್ರಿ ವೇಳೆ ವಿಶೇಷ…

ಪಿರಿಯಾಪಟ್ಟಣ ತಾಲೂಕು ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾ ಯೋಜನೆ
ಮೈಸೂರು

ಪಿರಿಯಾಪಟ್ಟಣ ತಾಲೂಕು ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾ ಯೋಜನೆ

October 31, 2018

ಕುಂದು ಕೊರತೆ ಸಭೆಯಲ್ಲಿ ಶಾಸಕ ಕೆ.ಮಹದೇವ್ ಮಾಹಿತಿ ಬೈಲಕುಪ್ಪೆ: ತಾಲೂ ಕಿನ ಅಭಿವೃದ್ಧಿಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ Áಗಿದೆ ಎಂದು ಸಲ್ಲಿಸ¯ಶಾಸಕ ಕೆ.ಮಹದೇವ್ ತಿಳಿಸಿದರು. ತಾಲೂಕಿನ ಬೈಲಕುಪ್ಪೆ ಗ್ರಾಪಂನಲ್ಲಿ ನಡೆದ ವಿವಿಧ ಗ್ರಾಮಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮೂಲಭೂತ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ. 500 ಕೋಟಿ ರೂ.ಅನು ದಾನಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರಿಗೆ ಬೇಡಿಕೆ ಇಟ್ಟಿದ್ದೇನೆ. ಅನುದಾನ ಮಂಜೂರಾದ ಬಳಿಕ ಸಿಎಂ ಅವರಿಂದಲೇ…

3 ತಿಂಗಳಲ್ಲೇ ಕಾಮಗಾರಿಯ ಬಣ್ಣ ಬಯಲು ಮಾಡಿದ ರಸ್ತೆ …!
ಮೈಸೂರು

3 ತಿಂಗಳಲ್ಲೇ ಕಾಮಗಾರಿಯ ಬಣ್ಣ ಬಯಲು ಮಾಡಿದ ರಸ್ತೆ …!

October 31, 2018

ನಂಜನಗೂಡು: ಅಂದಾಜು 70 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣಗೊಂಡು ಸಂಚಾರಕ್ಕೆ ಮುಕ್ತವಾಗಿದ್ದ ಸಿಟಿಜನ್ ಶಾಲೆ ಹಿಂಬದಿಯ ರಸ್ತೆ ಮೂರು ತಿಂಗಳಲ್ಲೇ ಹದಗೆಟ್ಟಿದ್ದು, ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರ ಹಾಗೂ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಹುಲ್ಲಹಳ್ಳಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಸಿಟಿಜನ್ ಶಾಲೆ ಹಿಂಬದಿ ಒಂದೂವರೆ ಕಿ.ಮೀ. ರಸ್ತೆಯನ್ನು 3 ತಿಂಗಳ ಹಿಂದಷ್ಟೇ 70 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತಾದರೂ ಸದ್ಯ ಈ ರಸ್ತೆಗೆ ಡಾಂಬರೀಕರಣವಾಗಿದೆ…

ಹುಣಸೇಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯುತ್ತಮ ಶಾಲಾ ಪ್ರಶಸ್ತಿ
ಮೈಸೂರು

ಹುಣಸೇಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯುತ್ತಮ ಶಾಲಾ ಪ್ರಶಸ್ತಿ

October 31, 2018

ಪ್ರಶಸ್ತಿ ದೊರೆತಿದ್ದಕ್ಕೆ ಶಾಲೆ ಆವರಣದಲ್ಲಿ ಶಿಕ್ಷಕರು, ಗ್ರಾಮಸ್ಥರ ಸಂಭ್ರಮ ಪಿರಿಯಾಪಟ್ಟಣ:  ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಹೊಂದಿರುವ ತಾಲೂಕಿನ ಪ್ರಥಮ ಸರ್ಕಾರಿ ಶಾಲೆ ಹಿರಿಮೆಗೆ ಪಾತ್ರವಾಗಿರುವ ಹುಣಸೇಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ `ತಾಲೂಕಿನ ಅತ್ಯುತ್ತಮ ಶಾಲಾ ಪ್ರಶಸ್ತಿ’ ದೊರಕಿದ್ದು, ಗ್ರಾಮಸ್ಥರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಉತ್ತಮ ಶಿಕ್ಷಕರ ಪರಿಶ್ರಮ ಹಾಗೂ ಗ್ರಾಮಸ್ಥರು, ದಾನಿಗಳ ನೆರವಿನಿಂದ ಶಾಲೆ ತಾಲೂಕಿನಲ್ಲೇ ಉತ್ತಮ ಶಾಲೆ ಪ್ರಶಸ್ತಿ ಪಡೆದುಕೊಳ್ಳುವುದು ಸಾಧ್ಯವಾಗಿದೆ. ಶಿಕ್ಷಕರ ದಿನಾಚರಣೆಯಂದೇ ಇಲಾಖೆಯಿಂದ ಪ್ರಶಸ್ತಿ ದೊರೆತಿರುವುದು ಅತೀವ ಸಂತಸ ತಂದಿದೆ ಎಂದು…

ಮೈಸೂರು ಮೃಗಾಲಯದಲ್ಲಿ ಭಯಂಕರ ಕಾದಾಟ: ಜಾಗ್ವಾರ್-ನಾಗರಹಾವು ಸಾವು
ಮೈಸೂರು

ಮೈಸೂರು ಮೃಗಾಲಯದಲ್ಲಿ ಭಯಂಕರ ಕಾದಾಟ: ಜಾಗ್ವಾರ್-ನಾಗರಹಾವು ಸಾವು

October 30, 2018

ಮೈಸೂರು: ಅದೊಂದು ಅತೀ ಭಯಂಕರ ಕಾದಾಟ! ಹೆಸರೇಳಿದರೆ ಸಾಕು ಮನುಷ್ಯರು ಬೆಚ್ಚಿ ಬೀಳುವ ಕ್ರೂರ ಪ್ರಾಣಿಗಳು ಸೆಣಸಾಟದಲ್ಲಿ ಜೀವ ಬಿಟ್ಟಿವೆ. ಈ ಕಾಳಗವನ್ನು ಕಣ್ಣಾರೆ ಕಂಡ ನೂರಾರು ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ. ಮೈಸೂರು ಮೃಗಾಲಯದಲ್ಲಿ ಹಾಡಹಗಲೇ ಜಾಗ್ವಾರ್ (ಆಫ್ರಿಕನ್ ಚಿರತೆ) ಹಾಗೂ ನಾಗರಹಾವಿನ ನಡುವೆ ನಡೆದ ಭಾರೀ ಕದನದಲ್ಲಿ ಪಾಪ, ಎರಡೂ ಪ್ರಾಣ ಬಿಟ್ಟಿವೆ. ಜಾಗ್ವಾರ್ ಆವರಣ ಪ್ರವೇಶಿಸಿರುವ ನಾಗರ ಹಾವು, ತನಗೆ ಎದುರಾದ ರಾಜು ಹೆಸರಿನ 14 ವರ್ಷದ ಜಾಗ್ವರ್ ಕಂಡು ಹೆಡೆ ಎತ್ತಿ, ಬುಸುಗುಟ್ಟಿದೆ….

ಗ್ರಾಮಸ್ಥರಿಗೆ ಕಂಟಕವಾಗಿದ್ದ ಹುಲಿ ಸೆರೆ
ಮೈಸೂರು

ಗ್ರಾಮಸ್ಥರಿಗೆ ಕಂಟಕವಾಗಿದ್ದ ಹುಲಿ ಸೆರೆ

October 30, 2018

ಮೇಟಿಕುಪ್ಪೆ,ಅ.29: ಕಾಡಂಚಿನ ಗ್ರಾಮಗಳ ಜಾನು ವಾರುಗಳನ್ನು ತಿಂದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟು ಮಾಡಿದ್ದ ಹೆಣ್ಣು ಹುಲಿಯೊಂದು ಅರಣ್ಯ ಇಲಾಖೆಯ ಬೋನ್‍ಗೆ ಬಿದ್ದಿದೆ. ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯ ಮೇಟಿಕುಪ್ಪೆ ವಲಯದ ಅಗಸನಹುಂಡಿ ಗ್ರಾಮದ ಬಳಿ ಸೆರೆಸಿಕ್ಕ ಈ ಹುಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಮತ್ತೆ ನಾಗರಹೊಳೆ ಅಭಯಾ ರಣ್ಯದಲ್ಲೇ ಬಿಡುಗಡೆ ಮಾಡಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವಲಯ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಳೆದ ಆರು ತಿಂಗಳಿಂದ ಜಾನುವಾರುಗಳನ್ನು ತಿಂದು ಉಪಟಳ ನೀಡುತ್ತಿದ್ದ ಹುಲಿಯನ್ನು ಸೆರೆ…

ಒಂದೇ ವೇದಿಕೆಯಲ್ಲಿ ರಾಜಕೀಯ ದುಷ್ಮನ್‍ಗಳು!
ಮೈಸೂರು

ಒಂದೇ ವೇದಿಕೆಯಲ್ಲಿ ರಾಜಕೀಯ ದುಷ್ಮನ್‍ಗಳು!

October 30, 2018

ಬೆಂಗಳೂರು, ಅ.29: ಉಪಚುನಾವಣೆಯಲ್ಲಿ ಬಿಜೆಪಿ ಮಣಿಸಿ, ಮೈತ್ರಿ ಸರ್ಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿ ಹಿನ್ನೆಲೆಯಲ್ಲಿ, ಹಾವು-ಮುಂಗುಸಿಯಂತಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 13 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಬಿಜೆಪಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಪ್ರತಿಪಕ್ಷಗಳನ್ನು ಒಂದು ಮಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲೂ ಮೈತ್ರಿಯೊಂದಿಗೆ ಕಣಕ್ಕಿಳಿ ಯುವ ಉದ್ದೇಶದಿಂದ ತಮ್ಮೆಲ್ಲಾ ವೈಮನಸ್ಸನ್ನು ಬದಿಗಿರಿಸಿ ಮತದಾರರ ಮನವೊಲಿಸಲು ಹೊರಟಿದ್ದಾರೆ. ದೇವೇಗೌಡರ ಕುಟುಂಬದ ವಿರುದ್ಧ ಸದಾ…

1 1,304 1,305 1,306 1,307 1,308 1,611
Translate »