ಚುಂಚನಕಟ್ಟೆ: ನನ್ನ ರಾಜಕೀಯ ಜೀವನದಲ್ಲಿ ಎಂದೂ ಜಾತಿ ರಾಜಕೀಯ ಮಾಡಿಲ್ಲ. ಹಾಗಾಗಿಯೇ ಮತದಾರರು ಸತತ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಜಾತಿ ರಾಜಕಾರಣ ಮಾಡು ವವರನ್ನು ತಾಲೂಕಿನ ಜನತೆ ತಿರಸ್ಕರಿಸಿದ್ದಾರೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಹೆಚ್.ಡಿ.ದೇವೇಗೌಡ ಸಮು ದಾಯ ಭವನದಲ್ಲಿ ನಡೆದ ಮಂಡ್ಯ ಲೋಕ ಸಭಾ ಉಪಚುನಾವಣೆಯ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ತಾಲೂಕು ಕುರುಬ ಸಮಾಜದ ಅಧ್ಯಕ್ಷರ ಹೇಳಿಕೆಗೆ ತೀರುಗೇಟು ನೀಡಿದರು.
ಆರೂವರೇ ಕೋಟಿ ಜನರ ತೆರಿಗೆಯ ಹಣದಿಂದ ಪಟ್ಟಣದಲ್ಲಿ ನಿರ್ಮಿಸಿರುವ ಕುರುಬ ಸಮುದಾಯ ಭವನದ ಉದ್ಘಾಟನೆಗೆ ತಾಲೂಕಿನ ಶಾಸಕನಾದ ನನ್ನನ್ನೇ ಕಡೆ ಗಣಿಸುವ ಕೆಲಸ ಮಾಡಿದ ಕುರುಬ ಸಮಾ ಜದ ಅಧ್ಯಕ್ಷನಿಂದ ನಾನು ಪಾಠ ಕಲಿಯ ಬೇಕಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ಆಯ್ಕೆಯಾದ ನನ್ನನ್ನು ಅವಮಾನಿಸಿದ್ದು, ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಎಂದು ಕಿಡಿಕಾರಿದರು.
ತಾಲೂಕಿನಲ್ಲಿ ಚುನಾವಣೆ ಸಂದರ್ಭದಲ್ಲಿ ಗೊಂದಲದ ಹೇಳಿಕೆಗಳನ್ನು ನೀಡುತ್ತಾ, ಜನತೆಯ ದಿಕ್ಕು ತಪ್ಪಿಸುವ ಹಳದಿ ಕಣ್ಣಿನ ಕೆಲವರಿದ್ದಾರೆ. ಅವರನ್ನು ಜನ ನಂಬದೇ ಈ ಉಪ ಚುನಾ ವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡರನ್ನು ಅತೀ ಹೆಚ್ಚು ಮತಗಳಿಂದ ಆರಿಸುವ ಮೂಲಕ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರ್‍ಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರ ಉಪ ಚುನಾವಣೆ ಅಭ್ಯರ್ಥಿ ಎಲ್.ಆರ್.ಶಿವ ರಾಮೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಡಾ.ಮೆಹ ಬೂಬ್‍ಖಾನ್, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಸದಸ್ಯ ಅಮಿತ್ ವಿ.ದೇವರಹಟ್ಟಿ ಮಾತನಾಡಿದರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಧನಂಜಯ, ವಕ್ತಾರ ಕೆ.ಎಲ್.ರಮೇಶ್, ಪುರಸಭಾಧ್ಯಕ್ಷೆ ಹರ್ಷಲತಾ ಶ್ರೀಕಾಂತ್, ಸದಸ್ಯರಾದ ಉಮೇಶ್, ಕೆ.ಎಲ್. ಜಗದೀಶ್, ಗೀತಾ ಮಹೇಶ್, ಬಾಂಬೆರಾಜು, ನಂಜುಂಡ, ಯುವ ಜೆಡಿಎಸ್ ಅಧ್ಯಕ್ಷ ಮಧುಚಂದ್ರ, ಡಾ.ದೇವೆಂದ್ರ ಕುಮಾರ್, ಕಿಶೋರ್, ಮಂಜುನಾಥ್, ದೊಡ್ಡಕೊಪ್ಪಲು ಸಂಪತ್ ಕುಮಾರ್ ಮತ್ತಿತರರಿದ್ದರು.
ನಾನು ಸಾಲಿಗ್ರಾಮದ ರಾಮೇಗೌಡನ ಮಗನಾಗಿ ನಿಮ್ಮ ಸವಾಲುಗಳನ್ನು ಎದುರಿಸಲು ಸಿದ್ಧನಿದ್ದೇನೆ. ಎಲ್ಲಾ ರಂಗ ದಲ್ಲಿಯೂ ಅನುಭವ ಪಡೆದು ಈಗ ವಾಲ್ಮೀಕಿಯವರಂತಾಗಿದ್ದೇನೆ. ತಾಲೂಕಿ ನಲ್ಲಿ 11 ವರ್ಷಗಳ ಶಾಸಕ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯ ದಂತೆ ಎಚ್ಚರವಹಿಸಿ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇದನ್ನು ಹಳದಿ ಕಣ್ಣಿನ ಕುರುಬ ಸಮುದಾಯದ ತಾಲೂಕು ಅಧ್ಯಕ್ಷ ಮನಗಾಣಲಿ. – ಸಾ.ರಾ.ಮಹೇಶ್,ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ