ಪಿರಿಯಾಪಟ್ಟಣ ತಾಲೂಕು ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾ ಯೋಜನೆ
ಮೈಸೂರು

ಪಿರಿಯಾಪಟ್ಟಣ ತಾಲೂಕು ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾ ಯೋಜನೆ

October 31, 2018

ಕುಂದು ಕೊರತೆ ಸಭೆಯಲ್ಲಿ ಶಾಸಕ ಕೆ.ಮಹದೇವ್ ಮಾಹಿತಿ
ಬೈಲಕುಪ್ಪೆ: ತಾಲೂ ಕಿನ ಅಭಿವೃದ್ಧಿಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ Áಗಿದೆ ಎಂದು ಸಲ್ಲಿಸ¯ಶಾಸಕ ಕೆ.ಮಹದೇವ್ ತಿಳಿಸಿದರು.

ತಾಲೂಕಿನ ಬೈಲಕುಪ್ಪೆ ಗ್ರಾಪಂನಲ್ಲಿ ನಡೆದ ವಿವಿಧ ಗ್ರಾಮಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮೂಲಭೂತ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ. 500 ಕೋಟಿ ರೂ.ಅನು ದಾನಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರಿಗೆ ಬೇಡಿಕೆ ಇಟ್ಟಿದ್ದೇನೆ. ಅನುದಾನ ಮಂಜೂರಾದ ಬಳಿಕ ಸಿಎಂ ಅವರಿಂದಲೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.25 ವರ್ಷ ಅಭಿವೃದ್ಧಿ ಕಾಣದ ಹಿನ್ನೆಲೆ ಯಲ್ಲಿ ನನಗೆ ಮತ ನೀಡಿ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದೀರಾ. ಈ ಋಣ ವನ್ನು ತೀರಿಸಲು ಶ್ರಮಿಸುತ್ತೇನೆ ಎಂದರು.

ನಿವೇಶನ ರಹಿತರಿಗೆ ಜಮೀನು ಖರೀದಿಸಿ ಸರ್ಕಾರದ ಮೂಲಕ ವಿತರಿಸಲು ಕ್ರಮ ಕೈಗೋಳ್ಳುತ್ತೇನೆ. ಯುವಕರು ಮತ್ತು ಮಹಿಳೆ ಯರಿಗೆ ಸ್ವಯಂ ಉದ್ಯೋಗಕ್ಕಾಗಿ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ತಾಲೂಕಿನ ಅಧಿಕಾರಿಗಳು ಅಭಿ ವೃದ್ಧಿಯ ಕಾರ್ಯಗಳಲ್ಲಿ ಸಹಕಾರ ನೀಡ ದಿದ್ದಲ್ಲಿ ಅವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು. ವಿದ್ಯುತ್ ಕೊರತೆ ಬಗ್ಗೆ ಗಮನ ಸೆಳೆದ ಗ್ರಾಮಸ್ಥರು ರಸ್ತೆ ದುರಸ್ತಿ, ಶುದ್ಧ ಕುಡಿ ಯುವ ನೀರಿನ ಘಟಕಕ್ಕಾಗಿ ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ರಾಜೇಂದ್ರ, ತಾಪಂ ಸದಸ್ಯ ಐಲಾಪುರ ರಾಮು, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಸದಸ್ಯ ಮಂಜುನಾಥ, ದಿನೇಶ್, ಎಂ.ಎ.ಸುರೇಶ್, ಮಾಜಿ ಸದಸ್ಯರಾದ ವರ್ಗೀಸ್, ಕೆ. ವಿಜಯ್‍ಕುಮಾರ್, ನವಿಲೂರು ಚನ್ನಪ್ಪ, ಪಿ.ಟಿ.ಶ್ರೀನಿವಾಸ, ದೊಡ್ಡಹೊನ್ನೂರು ರಘು, ಎಇಇ ಗಳಾದ ಪ್ರಭು, ಪಾಷ, ಬೋರೇ ಗೌಡ, ನಾಗರಾಜು, ಸಿಡಿಪಿಓ ಇಂದಿರಾ, ಬಿಇಓ ಚಿಕ್ಕಸ್ವಾಮಿ ಮತ್ತಿತರರಿದ್ದರು.

Translate »