ಮೈಸೂರು

ಮೊದಲ ಪತ್ನಿ ನಾಗರತ್ನರಿಂದ ವಿಚ್ಛೇದನ ಪಡೆಯಲು ದುನಿಯಾ ವಿಜಯ್ ಅರ್ಜಿ
ಮೈಸೂರು

ಮೊದಲ ಪತ್ನಿ ನಾಗರತ್ನರಿಂದ ವಿಚ್ಛೇದನ ಪಡೆಯಲು ದುನಿಯಾ ವಿಜಯ್ ಅರ್ಜಿ

October 30, 2018

ಬೆಂಗಳೂರು:  ತನ್ನ ಮೊದಲ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಪಡೆ ಯಲು ಚಿತ್ರನಟ ದುನಿಯಾ ವಿಜಯ್ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆಯೂ ಸಹ ವಿಚ್ಛೇದನಕ್ಕಾಗಿ ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು. ಆದರೆ, ಆಗ ಸಂಧಾನ ಏರ್ಪಟ್ಟು ಅರ್ಜಿಯನ್ನು ಹಿಂಪಡೆದಿದ್ದರು ಎಂದು ಹೇಳಲಾಗಿದೆ. ದುನಿಯಾ ವಿಜಯ್ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೇ ಕೀರ್ತಿಗೌಡ ಅವರನ್ನು ವಿವಾಹವಾಗಿದ್ದು, ವಿವಾದಕ್ಕೆ ಕಾರಣವಾಗಿತ್ತು. ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ದುನಿಯಾ ವಿಜಯ್ ಜೈಲಿನಲ್ಲಿದ್ದಾಗ ಅವರ…

ದೇಸೀಯ ಕೈಗಾರಿಕೆಗಳಿಗೆ ಸಿಎಸ್‍ಐಆರ್ ತಂತ್ರಜ್ಞಾನ ಬಳಕೆ
ಮೈಸೂರು

ದೇಸೀಯ ಕೈಗಾರಿಕೆಗಳಿಗೆ ಸಿಎಸ್‍ಐಆರ್ ತಂತ್ರಜ್ಞಾನ ಬಳಕೆ

October 30, 2018

ಮೈಸೂರು: ದೇಸೀಯ ಕೈಗಾರಿಕೆಗಳಿಗೆ ಸಿಎಸ್‍ಐಆರ್ ಪ್ರಯೋ ಗಾಲಯದಲ್ಲಿ ಅಭಿವೃದ್ಧಿಗೊಂಡು ವರ್ಗಾ ವಣೆಗೊಂಡ ತಂತ್ರಜ್ಞಾನವನ್ನು ಬಳಸ ಲಾಗುತ್ತಿದೆ ಎಂದು ಸಿಎಫ್‍ಟಿಆರ್‍ಐನ ಪ್ರಧಾನ ವಿಜ್ಞಾನಿ ಡಾ.ಆರ್.ಸುಬ್ರಹ್ಮಣ್ಯನ್ ಅವರು ಇಂದಿಲ್ಲಿ ತಿಳಿಸಿದ್ದಾರೆ. ಸಿಎಫ್‍ಟಿಆರ್‍ಐ ಆವರಣದಲ್ಲಿರುವ ಐಎಫ್‍ಟಿಟಿಸಿ ಸಭಾಂಗಣದಲ್ಲಿ ಏರ್ಪಡಿ ಸಿದ್ದ ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಸಂಸ್ಥಾಪನಾ ದಿನಾಚರಣೆ ಮತ್ತು ಮುಕ್ತದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಆಹಾರ ಭದ್ರತೆ ಮತ್ತು ದೇಶದ ಅಭಿವೃದ್ಧಿಗೆ ಸಂಶೋಧನೆ ಅಭಿವೃದ್ಧಿ ಮಾಡಿ ಕೊಡುಗೆ ನೀಡುತ್ತಿರುವ ಸಿಎಫ್‍ಟಿಆರ್‍ಐ ತನ್ನ ಪ್ರಯೋಗಾಲಯ ದಲ್ಲಿ ಹೊರಬಂದ ತಂತ್ರಜ್ಞಾನವನ್ನು ದೇಸೀಯ ಕೈಗಾರಿಕೆಗಳ(Domestic Industries)…

ಹಸ್ತಶಿಲ್ಪಿ ವತಿಯಿಂದ ನ.4ರವರೆಗೆ ಸಿಲ್ಕ್ ಇಂಡಿಯಾ  ರೇಷ್ಮೆ ಸೀರೆಗಳ ಪ್ರದರ್ಶನ, ಮಾರಾಟ
ಮೈಸೂರು

ಹಸ್ತಶಿಲ್ಪಿ ವತಿಯಿಂದ ನ.4ರವರೆಗೆ ಸಿಲ್ಕ್ ಇಂಡಿಯಾ  ರೇಷ್ಮೆ ಸೀರೆಗಳ ಪ್ರದರ್ಶನ, ಮಾರಾಟ

October 30, 2018

ಮೈಸೂರು:  ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶದಿಂದ `ಹಸ್ತಶಿಲ್ಪಿ’ ಸಂಸ್ಥೆಯು ಭಾರತ ಸರ್ಕಾರದ ಜವಳಿ ಮಂತ್ರಾಲಯದ ಸಹಯೋಗದೊಂದಿಗೆ ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಅ.30 ರಿಂದ ನವೆಂಬರ್ 4ರವರೆಗೆ 6 ದಿನಗಳ ಸಿಲ್ಕ್ ಇಂಡಿಯಾ-2018, ರೇಷ್ಮೆ…

ನ.1ರಂದು ಕನ್ನಡ ರಾಜ್ಯೋತ್ಸವ
ಮೈಸೂರು

ನ.1ರಂದು ಕನ್ನಡ ರಾಜ್ಯೋತ್ಸವ

October 30, 2018

ಮೈಸೂರು: ಜಿಲ್ಲಾಡಳಿತದ ವತಿಯಿಂದ ನ.1ರಂದು ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 8.30 ಗಂಟೆಗೆ ಅರಮನೆ ಆವರಣದಲ್ಲಿರುವ ಶ್ರೀಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವುದು. ಬೆಳಿಗ್ಗೆ 9 ಗಂಟೆಗೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಅವರು ಧ್ವಜಾರೋಹಣ ನೆರವೇ ರಿಸಿ ಮೆರವಣಿಗೆಗೆ ಚಾಲನೆ ನೀಡುವರು. ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸುವರು. ಸಂಜೆ 5 ಗಂಟೆಗೆ ಕಲಾಮಂದಿರದಲ್ಲಿ ಸಾಂಸ್ಕøತಿಕ ಕಾರ್ಯ ಕ್ರಮ ನಡೆಯಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ…

ಅಕ್ರಮ ಸಂಬಂಧ: ಗುಡ್ಡಪ್ಪನ ವಿರುದ್ಧ ಪತ್ನಿ ದೂರು
ಮೈಸೂರು

ಅಕ್ರಮ ಸಂಬಂಧ: ಗುಡ್ಡಪ್ಪನ ವಿರುದ್ಧ ಪತ್ನಿ ದೂರು

October 30, 2018

ಮೈಸೂರು: ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದಾರೆಂದು ಆರೋ ಪಿಸಿ ಮಹಿಳೆಯೊಬ್ಬರು ಪತಿ ಗುಡ್ಡಪ್ಪನ ವಿರುದ್ಧ ಮೇಟಗಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಮೈಸೂರು ತಾಲೂಕು, ನಾಗನಹಳ್ಳಿ ಗ್ರಾಮದ ದೇವರಾಜು ಎಂಬುವರೇ ಆರೋಪ ಎದುರಿಸುತ್ತಿರು ವವರು. ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ದೇವರ ಗುಡ್ಡಪ್ಪನೆಂದೇ ಕರೆಯಲ್ಪಡುತಿದ್ದ ಆತ, ಶನಿವಾರ ಕಳಸ್ತವಾಡಿಯ ಪರ ಸ್ತ್ರೀಯೊಬ್ಬರೊಂದಿಗಿದ್ದರೆಂಬ ಮಾಹಿತಿ ತಿಳಿದ ಪತಿ ಹಾಗೂ ಸಂಬಂಧಿಕರು ಅಲ್ಲಿಗೆ ಹೋಗಿ ಗಲಾಟೆ ಮಾಡುತ್ತಿದ್ದಂತೆಯೇ ದೇವರಾಜು ಪರಾರಿ ಯಾಗಿದ್ದಾನೆ. ಭಾನುವಾರ ಪತ್ನಿ ಮೇಟಗಳ್ಳಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ದಾಖ…

ಕಾಡಾನೆ ದಾಳಿ ತಡೆಯದ ಅರಣ್ಯಾಧಿಕಾರಿಗಳ ವಿರುದ್ಧ ಉತ್ತೇನಹಳ್ಳಿ ಗ್ರಾಮಸ್ಥರ ಆಕ್ರೋಶ
ಮೈಸೂರು

ಕಾಡಾನೆ ದಾಳಿ ತಡೆಯದ ಅರಣ್ಯಾಧಿಕಾರಿಗಳ ವಿರುದ್ಧ ಉತ್ತೇನಹಳ್ಳಿ ಗ್ರಾಮಸ್ಥರ ಆಕ್ರೋಶ

October 30, 2018

ಪಿರಿಯಾಪಟ್ಟಣ:  ಕಾಡಾನೆಗಳ ದಾಳಿ ನಿಯಂತ್ರಿಸದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನ ಉತ್ತೇನಹಳ್ಳಿ ಗ್ರಾಮದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ 10 ವರ್ಷಗಳಿಂದ ಈ ಕಾಡುಪ್ರಾಣಿಗಳ ಹಾವಳಿಯಿಂದ ಜಮೀನಿನಲ್ಲಿ ಬೆಳೆದ ಬೆಳೆ ಕೈ ಸೇರದೆ ಇದ್ದರೂ ಕೇಳುವವರೇ ಇಲ್ಲವಾಗಿದ್ದಾರೆ. 75ಕ್ಕೂ ಹೆಚ್ಚು ಕುಟುಂಬಗಳನ್ನು ಹೊಂದಿ ರುವ ಉತ್ತೇನಹಳ್ಳಿ ಗ್ರಾಮದಲ್ಲಿ 180ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅರಣ್ಯದ ಅಂಚಿನಲ್ಲಿರುವ ಈ ಗ್ರಾಮದ ರೈತರಿಗೆ ಕಂದಕದ ಪಕ್ಕದಲ್ಲಿ ಹೆಚ್ಚು ಜಮೀನಿದ್ದು,…

ನಾಳೆ ಮೈಸೂರು ಜಿಲ್ಲಾ ಕಾರ್ಮಿಕ ಸಮ್ಮೇಳನ
ಮೈಸೂರು

ನಾಳೆ ಮೈಸೂರು ಜಿಲ್ಲಾ ಕಾರ್ಮಿಕ ಸಮ್ಮೇಳನ

October 30, 2018

ಮೈಸೂರು: ಮೈಸೂರಿನ ರೈಲ್ವೆ ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಅಕ್ಟೋಬರ್ 31ರಂದು ಮಧ್ಯಾಹ್ನ 2 ಗಂಟೆಗೆ ಮೈಸೂರು ಜಿಲ್ಲಾ ಕಾರ್ಮಿಕ ಸಮ್ಮೇಳನ ಆಯೋಜಿಸಿರುವುದಾಗಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಮಾವಿನಹಳ್ಳಿ ಸಿ.ರವಿ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿ ದಿವಸ್ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಜಯಂತಿ ಅಂಗವಾಗಿ ಈ ಕಾರ್ಮಿಕ ಸಮ್ಮೇಳನ ಆಯೋಜಿಸಿರುವುದಾಗಿ ತಿಳಿಸಿದರು. ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್‍ಗೌಡ ಸಮ್ಮೇಳನಕ್ಕೆ ಚಾಲನೆ…

ಬಸ್‍ನಲ್ಲಿ ಮಹಿಳೆಯ ಚಿನ್ನಾಭರಣ, ನಗದು ದೋಚಿದ ಖದೀಮರು
ಮೈಸೂರು

ಬಸ್‍ನಲ್ಲಿ ಮಹಿಳೆಯ ಚಿನ್ನಾಭರಣ, ನಗದು ದೋಚಿದ ಖದೀಮರು

October 30, 2018

ಮೈಸೂರು: ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಚಿನ್ನಾಭರಣ ಮತ್ತು 12 ಸಾವಿರ ರೂ. ನಗದನ್ನು ಖದೀಮರು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ರಾಮಕೃಷ್ಣನಗರದ ನಿವಾಸಿ ಗೀತಾಶೇಖರ್ ಅವರು ಅ.22ರಂದು ಬೆಳಿಗ್ಗೆ ಕೆಲಸ ನಿಮಿತ್ತ ನಗರ ಸಾರಿಗೆ ಬಸ್‍ನಲ್ಲಿ ಪ್ರಯಾಣಿಸಿ ನಗರ ಬಸ್‍ನಿಲ್ದಾಣದಲ್ಲಿ ಇಳಿದು, ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ತಾವು ಪ್ರಯಾಣಿಸಿದ ಬಸ್‍ನಲ್ಲಿ ಹೆಚ್ಚು ಪ್ರಯಾಣಿಕರಿಂದ ಹಿನ್ನೆಲೆಯಲ್ಲಿ ಅನುಮಾನಗೊಂಡು ತಮ್ಮ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ, ವ್ಯಾನಿಟಿ ಬ್ಯಾಗ್‍ನಲ್ಲಿದ್ದ 36 ಸಾವಿರ ರೂ. ಮೌಲ್ಯದ ಚಿನ್ನಾಭರಣ, 12 ಸಾವಿರ ರೂ….

ನ.3ರಂದು `ನವನವೋನ್ಮೇಷಶಾಲಿನಿ-ನಾದರೂಪಿಣಿ’ ವಿಶೇಷ ಸಂಗೀತ-ದೃಶ್ಯ ರೂಪಕ
ಮೈಸೂರು

ನ.3ರಂದು `ನವನವೋನ್ಮೇಷಶಾಲಿನಿ-ನಾದರೂಪಿಣಿ’ ವಿಶೇಷ ಸಂಗೀತ-ದೃಶ್ಯ ರೂಪಕ

October 30, 2018

ಮೈಸೂರು: ಗೋಕುಲಂ ಸುರಭಿ ಗಾನಕಲಾಮಂದಿರ ಚಾರಿ ಟಬಲ್ ಟ್ರಸ್ಟ್‍ನ ವಾರ್ಷಿಕೋತ್ಸವದ ಅಂಗವಾಗಿ ನ.3ರಂದು ಸಂಜೆ 6 ಗಂಟೆಗೆ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ `ನವನವೋನ್ಮೇಷಶಾಲಿನಿ-ನಾದರೂಪಿಣಿ’ ವಿಶೇಷ ಸಂಗೀತ -ದೃಶ್ಯ ರೂಪಕ ಆಯೋಜಿಸಲಾಗಿದೆ ಎಂದು ವಿದುಷಿ ಡಾ.ಸುಕನ್ಯಾ ಪ್ರಭಾಕರ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಸುರಭಿಯ ಗೌರವಾಧ್ಯಕ್ಷ ಕೆ.ವಿ.ಮೂರ್ತಿ ಅಧ್ಯಕ್ಷತೆ ವಹಿಸ ಲಿದ್ದು, ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ ಹೆಚ್.ಶ್ರೀನಿವಾಸ್, ಸಂಗೀತ ವಿದ್ವಾನ್ ಡಾ.ಆರ್.ಎಸ್.ನಂದಕುಮಾರ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ನವರಾತ್ರಿಯ 9 ದಿನಗಳಲ್ಲಿ ದೇವಿ…

ಡಿ.ಬಿ.ಕುಪ್ಪೆ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ಮುಂದುವರಿಕೆ: ಬಿಇಓ
ಮೈಸೂರು

ಡಿ.ಬಿ.ಕುಪ್ಪೆ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ಮುಂದುವರಿಕೆ: ಬಿಇಓ

October 30, 2018

ಎಚ್.ಡಿ.ಕೋಟೆ: ಡಿ.ಬಿ.ಕುಪ್ಪೆ ಗ್ರಾಮದ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಪ್ರತಿಭಾ ಅವರನ್ನು ಇಲ್ಲೇ ಮುಂದುವರೆಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುಂದರ್ ತಿಳಿಸಿದರು. ತಾಲೂಕಿನ ಗಡಿ ಭಾಗ ಡಿ.ಬಿ.ಕುಪ್ಪೆ ಗ್ರಾಮದ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಪೋಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಮತಾರವರ ಮೌಖಿಕ ಆದೇಶದ ಮೇರೆಗೆ ತಾವು ಇಲ್ಲಿಗೆ ಬಂದಿದ್ದೇನೆ. ಅವರು ಸಮಸ್ಯೆ ಪರಿಹರಿಸುವಂತೆ ತಮಗೆ ತಿಳಿಸಿದ್ದರು. ಶಾಲೆಯ 8ನೇ ತರಗತಿ ಮಕ್ಕಳಿಗೆ ಶಾಲಾ ಲಾಗ್‍ಇನ್ ಬಳಸಿ,…

1 1,306 1,307 1,308 1,309 1,310 1,611
Translate »