ಮೈಸೂರು: ಜಿಲ್ಲಾಡಳಿತದ ವತಿಯಿಂದ ನ.1ರಂದು ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 8.30 ಗಂಟೆಗೆ ಅರಮನೆ ಆವರಣದಲ್ಲಿರುವ ಶ್ರೀಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವುದು. ಬೆಳಿಗ್ಗೆ 9 ಗಂಟೆಗೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಅವರು ಧ್ವಜಾರೋಹಣ ನೆರವೇ ರಿಸಿ ಮೆರವಣಿಗೆಗೆ ಚಾಲನೆ ನೀಡುವರು. ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸುವರು. ಸಂಜೆ 5 ಗಂಟೆಗೆ ಕಲಾಮಂದಿರದಲ್ಲಿ ಸಾಂಸ್ಕøತಿಕ ಕಾರ್ಯ ಕ್ರಮ ನಡೆಯಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು.
ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರಾದ ಸಾ.ರಾ.ಮಹೇಶ್, ಜಿಪಂ ಅಧ್ಯಕ್ಷರಾದ ನಯೀಮಾ ಸುಲ್ತಾನ ನಜಿûೀರ್ ಅಹಮದ್, ಸಂಸದರಾದ ಪ್ರತಾಪ ಸಿಂಹ, ಆರ್.ಧ್ರುವನಾರಾಯಣ್, ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರಾದ ತನ್ವೀರ್ ಸೇಠ್, ಅಡಗೂರು ಹೆಚ್.ವಿಶ್ವನಾಥ್, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಎಸ್.ನಾಗರಾಜು, ಕೆ.ವಿ. ನಾರಾಯಣಸ್ವಾಮಿ, ಕೆ.ಮಹದೇವ, ಆರ್. ಧರ್ಮಸೇನ, ಡಾ. ಯತೀಂದ್ರ, ಹರ್ಷವರ್ಧನ್, ಅನಿಲ್‍ಕುಮಾರ್, ಅಶ್ವಿನ್‍ಕುಮಾರ್, ಜಿಲ್ಲಾ ಪಂಚಾ ಯತ್ ಉಪಾಧ್ಯಕ್ಷ ಜಿ.ನಟರಾಜು, ತಾಪಂ ಅಧ್ಯಕ್ಷರಾದ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್.ಬಿ. ಮಂಜು ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.