ಅಕ್ರಮ ಸಂಬಂಧ: ಗುಡ್ಡಪ್ಪನ ವಿರುದ್ಧ ಪತ್ನಿ ದೂರು
ಮೈಸೂರು

ಅಕ್ರಮ ಸಂಬಂಧ: ಗುಡ್ಡಪ್ಪನ ವಿರುದ್ಧ ಪತ್ನಿ ದೂರು

October 30, 2018

ಮೈಸೂರು: ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದಾರೆಂದು ಆರೋ ಪಿಸಿ ಮಹಿಳೆಯೊಬ್ಬರು ಪತಿ ಗುಡ್ಡಪ್ಪನ ವಿರುದ್ಧ ಮೇಟಗಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಮೈಸೂರು ತಾಲೂಕು, ನಾಗನಹಳ್ಳಿ ಗ್ರಾಮದ ದೇವರಾಜು ಎಂಬುವರೇ ಆರೋಪ ಎದುರಿಸುತ್ತಿರು ವವರು. ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ದೇವರ ಗುಡ್ಡಪ್ಪನೆಂದೇ ಕರೆಯಲ್ಪಡುತಿದ್ದ ಆತ, ಶನಿವಾರ ಕಳಸ್ತವಾಡಿಯ ಪರ ಸ್ತ್ರೀಯೊಬ್ಬರೊಂದಿಗಿದ್ದರೆಂಬ ಮಾಹಿತಿ ತಿಳಿದ ಪತಿ ಹಾಗೂ ಸಂಬಂಧಿಕರು ಅಲ್ಲಿಗೆ ಹೋಗಿ ಗಲಾಟೆ ಮಾಡುತ್ತಿದ್ದಂತೆಯೇ ದೇವರಾಜು ಪರಾರಿ ಯಾಗಿದ್ದಾನೆ. ಭಾನುವಾರ ಪತ್ನಿ ಮೇಟಗಳ್ಳಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ದಾಖ ಲಿಸಿಕೊಂಡಿ ರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Translate »