ನಂಜನಗೂಡು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿ.ನರಸೀ ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತ ನಂತರ ಹಲವು ತಿಂಗಳ ಕಾಲ ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ಭಾನುವಾರ ಮೈಸೂರಿ ನಲ್ಲಿ ಅಭಿಮಾನಿಗಳು ನಂಜನಗೂಡಿಗೆ ಆಗಮಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿ ನಂಜನಗೂಡು ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಹುಲ್ಲಹಳ್ಳಿ ರಸ್ತೆಯಲ್ಲಿ ನೂರಾರು ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ಅವರು ಮುಡಾ ಬಡಾವಣೆಯಲ್ಲಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ…
ಕುರುಬ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
October 30, 2018ಮೈಸೂರು: ಸಂತ ಶ್ರೀ ಕನಕದಾಸರ ಜಯಂತ್ಯೋತ್ಸವ ಸಮಿತಿಯು ಮೈಸೂರು ಜಿಲ್ಲೆಯಲ್ಲಿ ವಾಸಿಸುತ್ತಿರುವ ಕುರುಬ ಜನಾಂಗದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರ ಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ. 85ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕನಕ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಆಸಕ್ತರು ಜಾತಿ ಪ್ರಮಾಣ ಪತ್ರ, ಅಂಕಪಟ್ಟಿ, ಪೂರ್ಣ ವಿಳಾಸದೊಂದಿಗೆ ನ.20ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಮೊ. 9845116664 ಅನ್ನು ಸಂಪರ್ಕಿಸಬಹುದು.
ಚೀನಾ ಮಾದರಿ ಲ್ಯಾಂಟನ್ ಪಾರ್ಕ್, ತ್ರಿಡಿ ಆಕೃತಿಗಳ ವೈಭೋಗ
October 29, 2018ಮೈಸೂರು: ದೇಶದಲ್ಲೇ ಇದೇ ಮೊದಲ ಬಾರಿಗೆ ಚೀನಾ ಮಾದರಿಯಲ್ಲಿ ನಿರ್ಮಿಸಿರುವ ಲ್ಯಾಂಟನ್ ಪಾರ್ಕ್‍ನಲ್ಲಿ ಮಹಿಷಾಸುರ ಮರ್ಧಿನಿ ಅವತಾರದಲ್ಲಿ ಚಾಮುಂಡೇಶ್ವರಿಯ ತ್ರಿಡಿ ಆಕೃತಿ. ನಾಡಿನ ಪರಂಪರೆ ಬಿಂಬಿಸುವ ಇನ್ನಿತರೆ ತ್ರಿಡಿ ಆಕೃತಿಗಳು, 5 ಸಾವಿರ ಎಲ್‍ಇಡಿ ಲೈಟ್‍ಗಳುಳ್ಳ ರೋಜ್ ಗಾರ್ಡನ್ ಜನರನ್ನು ಆಕರ್ಷಿಸುತ್ತಿದೆ. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 90 ದಿನ ಪ್ರದರ್ಶನಗೊಳ್ಳಲಿರುವ ‘ಲ್ಯಾಂಟನ್ ಪಾರ್ಕ್’ ಅನ್ನು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಪತ್ನಿ ಅನಿತಾ ಸಾ.ರಾ.ಮಹೇಶ್ ಜೊತೆಗೂಡಿ ಉದ್ಘಾಟಿಸಿದರು. ಏನೇನಿದೆ: ವಸ್ತು ಪ್ರದರ್ಶನದ…
ಹಣ ಬಲ, ಮಾಧ್ಯಮ ದುರ್ಬಳಕೆ ತಡೆಗೆ ಪರಿಣಾಮಕಾರಿ ಕ್ರಮ
October 29, 2018ನವದೆಹಲಿ: ಪ್ರತೀ ಚುನಾವಣೆ ಯಲ್ಲಿಯೂ ಪ್ರಚಾರದ ವೇಳೆ ಮತದಾರ ರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು, ರಾಜ ಕೀಯ ಪಕ್ಷಗಳ ನಾಯಕರು ಹೊಸ ಹೊಸ ಸೃಜನಾತ್ಮಕ ತಂತ್ರಗಳನ್ನು ಹೂಡುತ್ತಾರೆ. ಹಣದ ದುರ್ಬಳಕೆಯಂತೂ ಅತಿರೇಕಕ್ಕೇರಿದೆ. ಮಾಧ್ಯಮ ಸಂಸ್ಥೆಗಳ ಮಾಲೀಕತ್ವ ರಾಜ ಕೀಯ ಪಕ್ಷಗಳ ಕೈಸೇರಿವೆ. ಹೀಗಾಗಿ ಹಣ ಬಳಕೆ, ಮಾಧ್ಯಮ ದುರ್ಬಳಕೆ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ತಿಳಿಸಿದ್ದಾರೆ. ಕೆಲ ಮಾಧ್ಯಮ ಸಂಸ್ಥೆಗಳು ರಾಜ ಕೀಯ ಪಕ್ಷಗಳ…
ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆಯ ಕೌನ್ಸಿಲಿಂಗ್ ಸ್ಥಗಿತ: ಪ್ರಕ್ರಿಯೆ ಮುಂದುವರಿಸಲು ಆಗ್ರಹಿಸಿ ಪ್ರತಿಭಟನೆ
October 29, 2018ಮೈಸೂರು: ಮೈಸೂ ರಿನ ನಾರಾಯಣಶಾಸ್ತ್ರಿ ರಸ್ತೆ ಎನ್‍ಟಿಎಂ ಶಾಲಾವರಣದಲ್ಲಿ ಭಾನುವಾರ ಆರಂಭ ವಾದ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆಯ ಕೌನ್ಸಿಲಿಂಗ್ ಅನ್ನು ಏಕಾಏಕಿ ಸ್ಥಗಿತಗೊಳಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕ್ರಮ ವನ್ನು ಖಂಡಿಸಿ ನೂರಾರು ಶಿಕ್ಷಕರು ಪ್ರತಿ ಭಟನೆ ನಡೆಸಿದ ಪ್ರಸಂಗ ನಡೆಯಿತು. ಡಿಡಿಪಿಐ ಎಸ್.ಮಮತಾ ಸಮ್ಮುಖ ದಲ್ಲಿ ಸಹ ಶಿಕ್ಷಕರ ಕೋರಿಕೆ ವರ್ಗಾವಣೆ ಕಾರ್ಯ ಬೆಳಿಗ್ಗೆ 9 ಗಂಟೆಯಿಂದ ಆರಂಭ ಗೊಂಡಿತು. ಅಲ್ಲಿವರೆಗೆ 25ಕ್ಕೂ ಹೆಚ್ಚು ಮಂದಿಗೆ ಅವರ ಕೋರಿಕೆಯನ್ನು ಪರಿಶೀಲಿಸಿ…
ನೇರ ಹಣ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಿ
October 29, 2018ನವದೆಹಲಿ: ಸರ್ಕಾರದ ಸಬ್ಸಿಡಿ ಮತ್ತು ಇತರೆ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು ಆಧಾರ್ ಇ-ಕೆವೈಸಿ ಬಳಸುವಂತೆ ಬ್ಯಾಂಕ್‍ಗಳಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಸ್ಪಷ್ಟಪಡಿಸಿದೆ. ಸರ್ಕಾರದ ಕಲ್ಯಾಣ ಯೋಜನೆಗಳನ್ನು ಹೊರತುಪಡಿಸಿ ಇತರೆ ಸೌಲಭ್ಯ ಪಡೆ ಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದ ನಂತರ ಬ್ಯಾಂಕ್‍ಗಳು ಕಾನೂನು ಸಲಹೆ ಕೇಳಿ ಯುಐಡಿಎಐಗೆ ಪತ್ರ ಬರೆದಿದ್ದವು. ಈ ಸಂಬಂಧ ಕಳೆದ ವಾರ ಬ್ಯಾಂಕ್‍ಗಳಿಗೆ ಪತ್ರ ಬರೆದಿರುವ ಯುಐಡಿಎಐ, ಯಾವುದಕ್ಕೆ ಮತ್ತು…
ದುನಿಯಾ ವಿಜಿ 2ನೇ ಪತ್ನಿ ಮೇಲೆ ಹಲ್ಲೆ; ಮೊದಲ ಪತ್ನಿ ವಿರುದ್ಧ ಎಫ್‍ಐಆರ್
October 29, 2018ಬೆಂಗಳೂರು: ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಲ್ಲಿ ಮೊದಲ ಪತ್ನಿ ನಾಗರತ್ನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕೀರ್ತಿಗೌಡ ನೀಡಿದ ದೂರಿನ ಮೇರೆಗೆ ಗಿರಿನಗರ ಪೆÇಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈಗಾ ಗಲೇ ನಾಗರತ್ನ ವಿರುದ್ಧ ಐಪಿಸಿ ಸೆಕ್ಷನ್ 306 ಮತ್ತು 309 ಅಡಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ 326ನೇ ಸೆಕ್ಷನ್ ಹಾಕಲು ನಿರ್ಧಾರ ಮಾಡಿದ್ದು, ಈ…
ಕಾಂಗ್ರೆಸ್ ಸೇರದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ
October 29, 2018ಬಾಗಲಕೋಟೆ: ಕಾಂಗ್ರೆಸ್ ಸೇರದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಇಲ್ಲಿ ಹೇಳಿದ್ದಾರೆ. ಜಮಖಂಡಿಯಲ್ಲಿ ಕುರುಬ ಸಮುದಾಯದ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾದೆ. ನಾನೇ ಮುಖ್ಯಮಂತ್ರಿ ಆಗಬೇಕೆಂದು ಶಾಸಕರೂ ನನ್ನನ್ನು ಬೆಂಬಲಿಸಿದರು ಎಂದರು. ನಾನು ಮತ್ತೆ ಮುಖ್ಯಮಂತ್ರಿ ಆಗಿ ಬಿಡುತ್ತೇನೆ ಎಂದು ಹೊಟ್ಟೆಕಿಚ್ಚಿನಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದರು. ನಾನು ಅದಕ್ಕೆ ರಾಹು, ಕೇತು, ಶನಿ ಎಲ್ಲರೂ…
ಸಾಲ ಮನ್ನಾದಿಂದ 15 ಲಕ್ಷ ರೈತರಿಗೆ ಅನುಕೂಲ
October 29, 2018ಬಳ್ಳಾರಿ: ರಾಜ್ಯ ಸರ್ಕಾರದ ಸಾಲ ಮನ್ನಾ ಘೋಷಣೆಯಿಂದ ರಾಜ್ಯದ 15 ಲಕ್ಷ ರೈತರಿಗೆ ಅನುಕೂಲ ವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ರೈತರ ಸಾಲ ಮನ್ನಾ ಆಗಿರುವ ಎಲ್ಲಾ ರೈತರಿಗೆ ಸರ್ಕಾರ ಪ್ರಮಾಣ ಪತ್ರ ನೀಡಲಿದ್ದು, ಇನ್ನೂ 15-20 ದಿನಗಳ ಕಾಲ ರೈತರು ಕಾಯುವಂತೆ ತಿಳಿಸಿದರು. ಬಳ್ಳಾರಿ ಲೋಕಸಭಾ ಉಪ ಚುನಾ ವಣೆಯ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರವಾಗಿ ಬಿರುಸಿನ ಪ್ರಚಾರ ನಡೆಸಿದ ರೇವಣ್ಣ, ಸರ್ಕಾರ ಇನ್ನೂ…
ಪುರಾಂತಕ ಅವರ ಅಂಕಣಗಳ ಗುಚ್ಛ `ಬದುಕೊಂದು ಯಾತ್ರೆ’ ಪುಸ್ತಕ ಬಿಡುಗಡೆ
October 29, 2018ಎಡಪಂಥ, ಬಲಪಂಥಗಳು ಸಮಾಜಘಾತುಕ ಸಿದ್ಧಾಂತಗಳು ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ಕಿಡಿನುಡಿ ಮೈಸೂರು: ಎಡ- ಬಲ ಪಂಥೀಯ ಲೇಪವಿಲ್ಲದೆ ಬದುಕನ್ನು ಯಾತ್ರೆಯಾಗಿ ನೋಡಿರುವ ತ್ರಿಪುರಾಂತಕ ಅವರ ಅಂಕಣಗಳು ಓದುಗರ ಮನಸ್ಸಿಗೆ ನಾಟುತ್ತವೆ ಎಂದು ಹಿರಿಯ ಸಾಹಿತಿ ಮಲೆ ಯೂರು ಗುರುಸ್ವಾಮಿ ಅವರು ಬಣ್ಣಿಸಿದರು. ಮೈಸೂರಿನ ಸರಸ್ವತಿಪುರಂ ಜೆಎಸ್‍ಎಸ್ ಶಾಲೆ ಸಭಾಂಗಣದಲ್ಲಿ ಅನನ್ಯ ಪುಸ್ತಕಗಳು ಪ್ರಕಾಶನದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, `ಮೈಸೂರು ಮಿತ್ರ’ದಲ್ಲಿ ಪ್ರಕಟವಾಗಿರುವ ಜಿ.ಎಲ್.ತ್ರಿಪುರಾಂತಕ ಅವರ ಅಂಕಣಗಳ ಗುಚ್ಛ `ಬದುಕೊಂದು ಯಾತ್ರೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ…