ಹಣ ಬಲ, ಮಾಧ್ಯಮ ದುರ್ಬಳಕೆ ತಡೆಗೆ ಪರಿಣಾಮಕಾರಿ ಕ್ರಮ
ಮೈಸೂರು

ಹಣ ಬಲ, ಮಾಧ್ಯಮ ದುರ್ಬಳಕೆ ತಡೆಗೆ ಪರಿಣಾಮಕಾರಿ ಕ್ರಮ

October 29, 2018

ನವದೆಹಲಿ: ಪ್ರತೀ ಚುನಾವಣೆ ಯಲ್ಲಿಯೂ ಪ್ರಚಾರದ ವೇಳೆ ಮತದಾರ ರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು, ರಾಜ ಕೀಯ ಪಕ್ಷಗಳ ನಾಯಕರು ಹೊಸ ಹೊಸ ಸೃಜನಾತ್ಮಕ ತಂತ್ರಗಳನ್ನು ಹೂಡುತ್ತಾರೆ. ಹಣದ ದುರ್ಬಳಕೆಯಂತೂ ಅತಿರೇಕಕ್ಕೇರಿದೆ. ಮಾಧ್ಯಮ ಸಂಸ್ಥೆಗಳ ಮಾಲೀಕತ್ವ ರಾಜ ಕೀಯ ಪಕ್ಷಗಳ ಕೈಸೇರಿವೆ. ಹೀಗಾಗಿ ಹಣ ಬಳಕೆ, ಮಾಧ್ಯಮ ದುರ್ಬಳಕೆ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ತಿಳಿಸಿದ್ದಾರೆ.

ಕೆಲ ಮಾಧ್ಯಮ ಸಂಸ್ಥೆಗಳು ರಾಜ ಕೀಯ ಪಕ್ಷಗಳ ಹಿಡಿತದಲ್ಲಿರುವುದರಿಂದ ಆ ಮಾಧ್ಯಮ ಆಯಾ ಪಕ್ಷ ಮತ್ತು ಅಭ್ಯರ್ಥಿ ಗಳ ಪರ ಪ್ರಚಾರ ಮಾಡುತ್ತಿರುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ತೆಲಂಗಾಣ ರಾಜ್ಯ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಚುನಾವಣಾ ಆಯೋಗಕ್ಕೆ ಇದೀಗ ಹಣ ಬಲ ಹಾಗೂ ಮಾಧ್ಯಮಗಳ ದುರ್ಬಳಕೆಯನ್ನು ನಿಗ್ರಹಿ ಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ತೆಲಂಗಾಣ ರಾಜ್ಯದಲ್ಲಿ ಡಿ.7ರಿಂದ ವಿಧಾನ ಸಭೆ ಚುನಾವಣೆ ಆರಂಭವಾಗಲಿದೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆ ಯಲ್ಲಿ ಪ್ರತಿಕ್ರಿಯೆ ನೀಡಿರುವ ಚುನಾವಣಾ ಮುಖ್ಯ ಆಯುಕ್ತ ಓಂ ಪ್ರಕಾಶ್ ರಾವತ್ ಅವರು, ಹಣ ಬಲ ಹಾಗೂ ಅದರ ದುರ್ಬಳಕೆ, ಮಾಧ್ಯಮಗಳ ದುರ್ಬಳಕೆ ಯನ್ನು ತಪ್ಪಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.

ತೆಲಂಗಾಣ ರಾಜ್ಯದಲ್ಲಿ 2014ರಲ್ಲಿ ನಡೆದ ಚುನಾವಣೆ ವೇಳೆ ರೂ.154 ಕೋಟಿಗೂ ಹೆಚ್ಚು ಹಣವನ್ನು ಆಂಧ್ರಪ್ರದೇಶವೊಂದರ ಲ್ಲಿಯೇ ವಶಕ್ಕೆ ಪಡೆಯಲಾಗಿತ್ತು. ಹಣ ಬಲ ಹಾಗೂ ಮಾಧ್ಯಮಗಳ ದುರ್ಬಳಕೆ ಕುರಿತಂತೆ ರಾಜಕೀಯ ಪಕ್ಷಗಳೂ ಕೂಡ ಕಳವಳ ವ್ಯಕ್ತಪಡಿಸಿವೆ. ಈ ಎರಡೂ ವಿಚಾರ ಗಳ ಬಗ್ಗೆಯೂ ಆಯೋಗಕ್ಕೆ ಮಾಹಿತಿ ಬಂದಿದೆ ಎಂದು ರಾವತ್ ಹೇಳಿದ್ದಾರೆ.

ಮತದಾರರ ಪಟ್ಟಿ ಕುರಿತಂತೆ ಎದ್ದಿ ರುವ ವಿವಾದ ಬಗ್ಗೆ ಇದೇ ವೇಳೆ ಪ್ರತಿ ಕ್ರಿಯೆ ನೀಡಿರುವ ಅವರು, ಚುನಾವಣಾ ಸಮಿತಿ ನೂತನ ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತಿದೆ. ಹಲವು ಕ್ಷೇತ್ರಗಳಲ್ಲಿದ್ದ ಮತ ದಾರರ ಹೆಸರುಗಳನ್ನು ಅಳಿಸಲಾಗಿದೆ. ಈ ಸಂಬಂಧ ಸಾಕಷ್ಟು ಕಾರ್ಯಕ್ರಮ ಗಳನ್ನು ಆರಂಭಿಸಿದ್ದೇವೆ ಎಂದರು. ಮತ ದಾರ ಚೀಟಿಗಳಲ್ಲಿನ ಲೋಪ ತೆಗೆದು ಶುದ್ಧೀಕರಣ ಮಾಡಲು ಹೊಸ ಸಾಫ್ಟ್‍ವೇರ್ ಪರಿಚಯಿಸಿದ್ದೇವೆ. ಇದನ್ನು 2015 ರಿಂದಲೂ ಮಾಡುತ್ತಿದ್ದೇವೆ. ತೆಲಂಗಾಣ ಸೇರಿ ಹಲವು ರಾಜ್ಯಗಳು ಈಗಾಗಲೇ ತಮ್ಮ ಪಟ್ಟಿಗಳನ್ನು ಸಲ್ಲಿಕೆ ಮಾಡಿವೆ. ಈ ಪಟ್ಟಿಗಳನ್ನು ಪರಿಶೀಲನೆ ನಡೆಸಲು ಅಧಿಕಾರಿ ಗಳಿಗೆ ಕಳುಹಿಸಿ ಕೊಟ್ಟಿದ್ದೇವೆ ಎಂದರು. ರಾಜ ಸ್ಥಾನ ದಲ್ಲಿಯೂ ನಾಗರಿಕರಿಂದ ದೂರು ಬಂದಿದೆ. ಈ ಸಂಬಂಧ ನಾವು ಕ್ರಮ ಗಳನ್ನು ಕೈಗೊಂಡಿದ್ದೇವೆ. ಈ ಬಾರಿ ಯಾವುದೇ ಸಮಸ್ಯೆಗಳಿಲ್ಲದೆ ಮತದಾರರ ಚೀಟಿಗಳು ಬರಲಿವೆ ಎಂದಿದ್ದಾರೆ.

Translate »