ಶಿವಮೊಗ್ಗ: ಉಪ ಚುನಾ ವಣೆ ದಿನಾಂಕ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿ ಯೂರಪ್ಪ, ಶಿವಮೊಗ್ಗ ಲೋಕ ಸಭಾ ಕ್ಷೇತ್ರಕ್ಕೆ ತಮ್ಮ ಪುತ್ರ ಹಾಗೂ ಮಾಜಿ ಸಂಸದ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಶಿಕಾರಿಪುರದಲ್ಲಿ ಪಕ್ಷದ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ಶಿವ ಮೊಗ್ಗ ಕ್ಷೇತ್ರಕ್ಕೆ ಬಿ.ವೈ. ರಾಘವೇಂದ್ರ ಅವರೇ ಬಿಜೆಪಿ ಅಭ್ಯರ್ಥಿ. ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಬ್ಯಾಂಕ್, ಮೊಬೈಲ್‍ಗೆ ಆಧಾರ್ ಲಿಂಕ್ ಕಡ್ಡಾಯ ಮುಂದುವರಿಕೆ
October 7, 2018ನವದೆಹಲಿ: ಬ್ಯಾಂಕ್ ಮತ್ತು ಮೊಬೈಲ್‍ಗೆ ಆಧಾರ್ ಲಿಂಕ್ ಕಡ್ಡಾಯ ನಿಯಮ ಮುಂದು ವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸಂಸತ್ ಪಾಸ್ ಮಾಡಿದ ಕಾನೂನು ಇದನ್ನು ಪುನರ್ ಸ್ಥಾಪಿಸಲಿದೆ. ಆದರೆ ಈ ಸಂಬಂಧ ಹೊಸ ಕಾನೂನು ತರುವುದಿಲ್ಲ ಅಂತ ಹೇಳುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಜೇಟ್ಲಿ ಶನಿವಾರ ಹೇಳಿದ್ದಾರೆ. ಕಳೆದ ತಿಂಗಳು ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಕೋರ್ಟ್ ಎತ್ತಿ ಹಿಡಿದಿತ್ತು.
ಹುಣಸೂರು ನಗರಸಭೆ ಜೆಡಿಎಸ್ ತೆಕ್ಕೆಗೆ
October 7, 2018ಹುಣಸೂರು: ನಗರಸಭಾ ಅಧ್ಯಕ್ಷ ಎಂ.ಶಿವಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹೆಚ್.ವೈ.ಮಹದೇವು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಪ್ರವಾಸದಲ್ಲಿದ್ದ ನಗರ ಸಭೆಯ 17 ಸದಸ್ಯರು ಇಂದು ಬೆಳಿಗ್ಗೆ ಚುನಾವಣಾ ಸಮಯಕ್ಕೆ ಹಾಜರಾದರು. ಶಾಸಕ ಹೆಚ್. ವಿಶ್ವನಾಥ್‍ರವರ ಸಾರಥ್ಯದಲ್ಲಿ ನಗರಸಭಾ ಸದಸ್ಯರಾದ ಜೆಡಿಎಸ್‍ನ ಹೆಚ್.ಪಿ.ಸತೀಶ್, ಎಸ್.ಶರವಣ್ಣ, ಮಹಮದ್ ಪೀರ್, ಕೃಷ್ಣ ರಾಜಗುಪ್ತ, ಹಜರತ್‍ಜಾನ್, ಹೆಚ್.ಎಂ. ನಸರುಲ್ಲಾ, ಎಸ್.ಎಲ್.ಪ್ರೇಮಕುಮಾರಿ ಕಾಂಗ್ರೆಸ್‍ನ ಎಂ.ಶಿವಕುಮಾರ್, ಕೆ.ಎನ್. ನರಸಯ್ಯ, ಆರ್.ವೆಂಕಟೇಶ್, ಶಿವರಾಜ್, ಸುನೀತಾ ಜಯರಾಮೇಗೌಡ, ಹೆಚ್.ಜೆ. ಯೋಗಾನಂದ, ಧನಲಕ್ಷ್ಮಿರಾಜಣ್ಣ,…
ಕೆ.ಆರ್.ನಗರ ನಾರಾಯಣಪುರ ಗ್ರಾಮದಲ್ಲಿ ಸಚಿವ ಸಾ.ರಾ.ಮಹೇಶ್ ಗ್ರಾಮ ವಾಸ್ತವ್ಯ
October 7, 2018ಚುಂಚನಕಟ್ಟೆ: ನನ್ನ ಜೀವಿತಾವಧಿಯಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲೇ ರಾಜಕೀಯವಾಗಿ ಮುಂದುವರೆಯುತ್ತೇನೆ, ಬೇರೆಲ್ಲೂ ಹೋಗುವುದಿಲ್ಲ. ಆದುದರಿಂದ ಮುಖಂಡರು ಮತ್ತು ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್ ಹೇಳಿದರು. ತಾಲೂಕಿನ ಕಗ್ಗೆರೆ ಗ್ರಾ.ಪಂ. ವ್ಯಾಪ್ತಿಯ ನಾರಾಯಣಪುರ ಗ್ರಾಮದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಜನರು ತಮ್ಮ ಕೆಲಸಗಳಿಗೆ ದಾಖಲೆಗಳನ್ನು ಹಿಡಿದು ಸರ್ಕಾರಿ ಕಚೇರಿಗಳಲ್ಲಿ ಅಲೆದಾಡು ವಂತಾಗಬಾರದು ಎಂಬ ಮುಖ್ಯ ಉದ್ದೇಶದಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ…
ಯುವಕರಿಂದಷ್ಟೇ ದೇಶದ ಅಭಿವೃದ್ಧಿ ಸಾಧ್ಯ: ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ಡಿ.ಹರೀಶ್‍ಗೌಡ ವಿಶ್ವಾಸ
October 7, 2018ತಿ.ನರಸೀಪುರ: ಯುವಕರು ಸಂಘಟಿತರಾಗಿ ಕೆಲಸ ಮಾಡಿದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ಮೈಸೂರಿನ ಎಂಸಿಡಿಸಿಸಿ ಬ್ಯಾಂಕ್‍ನ ನಿರ್ದೇಶಕರೂ ಆದ ಜೆಡಿಎಸ್ ಯುವ ಮುಖಂಡ ಜಿ.ಡಿ. ಹರೀಶ್‍ಗೌಡ ಹೇಳಿದರು. ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮೊದಲ ವರ್ಷದ ಕಬ್ಬಡಿ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಕರಲ್ಲಿ ಮಾತ್ರ ದೇಶವನ್ನು ಬದ ಲಾವಣೆ ಮಾಡುವ ಶಕ್ತಿ ಇದ್ದು, ರಾಜಕಾರಣಿ ಅಥವಾ ಅಧಿಕಾರಿಗಳಿಂದ ದೇಶದ ಅಭಿ…
ಸಚಿವರ ಮನವೊಲಿಕೆ ಯತ್ನ ವಿಫಲ
October 6, 2018ಮೈಸೂರು: ಖಾಯಂ ಮಾಡಬೇಕು. ಬೆಳಗಿನ ಉಪಾಹಾರಕ್ಕೆ ಹಣ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೂರು ದಿನದಿಂದ ಮೈಸೂರು ಮಹಾನಗರಪಾಲಿಕೆ ಎದುರು ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುತ್ತಿರುವ ಪೌರ ಕಾರ್ಮಿಕರ ಮನವೊಲಿಸುವ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಪ್ರವಾಸೋದ್ಯಮ ಸಚಿವರ ಯತ್ನ ವಿಫಲವಾಯಿತು. ಹೀಗಾಗಿ ತಮ್ಮ ಬೇಡಿಕೆ ಈಡೇರದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ಮುಷ್ಕರ ನಿರತರು ಪ್ರತಿಭಟನೆ ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಕೈಗೊಂಡಿರುವ ತೀರ್ಮಾನವನ್ನು ಜಾರಿಗೊಳಿಸುವ ಜತೆಗೆ ಇಂದಿರಾ ಕ್ಯಾಂಟೀನ್…
ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಯಾವುದೇ ಕ್ಷಣದಲ್ಲಿ ಆದೇಶ ಹೊರಬೀಳುವ ಸಾಧ್ಯತೆ
October 6, 2018ಬೆಂಗಳೂರು: ಕೃಷ್ಣ ರಾಜಸಾಗರ ಅಣೆಕಟ್ಟೆಯಿಂದ ಹರಿಯುವ ಭಾರೀ ಪ್ರಮಾಣದ ನೀರನ್ನು ಸಂಗ್ರಹಿಸಲು ಮೇಕೆದಾಟು ಸಮೀಪ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿ ದಂತೆ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಯಾವುದೇ ಕ್ಷಣದಲ್ಲಿ ಅನುಮತಿ ಆದೇಶ ಹೊರಡಿಸಲಿದ್ದು, ಸಮಾನಾಂತರ ಅಣೆ ಕಟ್ಟು ನಿರ್ಮಾಣ ಬೇಡಿಕೆ 35 ವರ್ಷಗಳ ನಂತರ ಕೊನೆಗೂ ಈಡೇರುತ್ತಿದೆ. ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ, ದೆಹಲಿಯಲ್ಲಿಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಈ…
ಬಿಡಿಎ, ಕೆಐಎಡಿಬಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ, 4 ಕೆಜಿ ಚಿನ್ನ, 10 ಕೋಟಿ ನಗದು ಪತ್ತೆ
October 6, 2018ಬೆಂಗಳೂರು: ಅಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಶುಕ್ರವಾರ ಕರ್ನಾಟಕ ಕೈಗಾರಿಕಾ ಪ್ರಾದೇಶಾಭಿವೃದ್ಧಿ ಮಂಡಳಿಯ(ಕೆಐಎಡಿಬಿ) ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಮತ್ತು ಬಿಡಿಎ ಚೀಫ್ ಎಂಜಿನಿಯರ್ ಗೌಡಯ್ಯ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಟಿ.ಆರ್. ಸ್ವಾಮಿ ಮತ್ತು ಗೌಡಯ್ಯ ಅವರು ಆದಾಯಕ್ಕೂ ಮೀರಿ ಅಪಾರ ಪ್ರಮಾಣದ ಆಸ್ತಿಗಳಿಸಿದ ಬಗ್ಗೆ ದೂರು ಹಾಗೂ ಮಾಹಿತಿಯನ್ನು ಆಧರಿಸಿ ಎಸಿಬಿ ಅಧಿಕಾರಿಗಳ ತಂಡ ಇಂದು ಇಬ್ಬರ ಕಚೇರಿ ಮನೆ ಸೇರಿದಂತೆ 8…
ಯುವ ಸಂಭ್ರಮ: ಒಂದೆಡೆ ಸಮಾನತೆ ಸಂದೇಶ ಮತ್ತೊಂದೆಡೆ ವಿಶೇಷ ಮಕ್ಕಳ ಪ್ರತಿಭೆ ಅನಾವರಣ
October 6, 2018ಮೈಸೂರು: ಒಂದೆಡೆ ನೈಸರ್ಗಿಕ ವಿಕೋಪ ಕುರಿತು ಪ್ರಕೃತಿಯ ಮುಂದೆ ಎಲ್ಲರೂ ಸಮಾನರು. ಎಲ್ಲರನ್ನು ಪ್ರೀತಿಸಿ, ಎಲ್ಲರ ಜೊತೆ ಜೀವಿಸಿ, ನಾವೆಲ್ಲರು ಒಂದೇ… ಸಂದೇಶ ಸಾರಿದರೆ, ಮತ್ತೊಂದೆಡೆ ನಾವ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ವಿಶೇಷ ಮಕ್ಕಳು ನೃತ್ಯ ರೂಪಕದ ಮೂಲಕ ದೇಶಕ್ಕಾಗಿ ವೀರಮರಣ ಹೊಂದಿದ ಪತಿಯ ಮುಂದೆ ಪತ್ನಿ ಕಣ್ಣೀರಿಡುವಾಗ ಮಗು ತಂದೆಯ ಬಳಿಯಿದ್ದ ಧ್ವಜವನ್ನು ಎತ್ತಿ ಹಿಡಿದು ದೇಶಪ್ರೇಮ ಸಾರಿತು. ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿರುವ…
ಕಾಂಗ್ರೆಸ್ ಒಪ್ಪಿದರೆ ಮಾತ್ರ ಸಂಪುಟ ವಿಸ್ತರಣೆ
October 6, 2018ನವದೆಹಲಿ: ಕಾಂಗ್ರೆಸ್ ಒಪ್ಪಿದರೆ ಮಾತ್ರ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಂಪುಟ ವಿಸ್ತರಣೆ ಮಾಡಬೇಕು ಎಂದು ಹಲವು ನಾಯಕರು ಬಯಸಿದ್ದಾರೆ. ಆದರೆ ಯಾರನ್ನು ಸಂಪುಟಕ್ಕೆ ಸೇರಿಸ ಬೇಕು ಎಂಬುದನ್ನು ಕಾಂಗ್ರೆಸ್ ನಿರ್ಧಾರ ಮಾಡಬೇಕಿದೆ ಎಂದರು. ಇಂದು ಅಥವಾ ನಾಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಯತ್ನಿಸುತ್ತೇನೆ ಮತ್ತು ಅವರ ನಿರ್ಧಾರದಂತೆ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು…