ಮೈಸೂರು

ಆಸ್ಪತ್ರೆಯಿಂದ ನಟ ದರ್ಶನ್ ಬಿಡುಗಡೆ
ಮೈಸೂರು

ಆಸ್ಪತ್ರೆಯಿಂದ ನಟ ದರ್ಶನ್ ಬಿಡುಗಡೆ

September 30, 2018

ಮೈಸೂರು: ಕಾರು ಅಪಘಾತದಲ್ಲಿ ಗಾಯ ಗೊಂಡು ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ನಟ ದರ್ಶನ್ ಇಂದು ಮಧ್ಯಾಹ್ನ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಬಿಡುಗಡೆಯಾದರು. ಮಧ್ಯಾಹ್ನ 3.45 ಗಂಟೆ ವೇಳೆಗೆ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆಯೇ ಎದುರಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದರ್ಶನ್, ಊಟ ಮಾಡಿ ಬರುತ್ತಿದ್ದಾಗ ರಿಂಗ್ ರಸ್ತೆ ತಿರುವಿನಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತ್ತು ಎಂದರು. ನಾನೂ ಸೇರಿದಂತೆ ನಾಲ್ವರಿಗೆ ಗಾಯಗಳಾಗಿತ್ತು. ನನ್ನ ಕಾರಿನಲ್ಲಿ ಐವರು ಕೂರಲು ಅವಕಾಶವಿದೆ. ನಾವು ಐವರಷ್ಟೇ ಕಾರಿನಲ್ಲಿದ್ದೆವು, ನನ್ನ…

ಮೈಸೂರಿಗೆ ಸರಬರಾಜಾಗುತ್ತಿರುವ ನೀರಿನ ಆಡಿಟ್‍ಗೆ ಶಾಸಕ ರಾಮದಾಸ್ ಆಗ್ರಹ
ಮೈಸೂರು

ಮೈಸೂರಿಗೆ ಸರಬರಾಜಾಗುತ್ತಿರುವ ನೀರಿನ ಆಡಿಟ್‍ಗೆ ಶಾಸಕ ರಾಮದಾಸ್ ಆಗ್ರಹ

September 30, 2018

ಮೈಸೂರು: ಮೈಸೂರು ನಗರಕ್ಕೆ ವಿವಿಧೆಡೆಯಿಂದ ಸರಬರಾಜಾಗುತ್ತಿರುವ ಕುಡಿಯುವ ನೀರು ಹಂಚಿಕೆಯಲ್ಲಿ ಹಗರಣ ನಡೆಯುತ್ತಿದ್ದು, ಕೂಡಲೇ ವಾಟರ್ ಸರಬರಾಜು ವಿಚಾರದಲ್ಲಿ ಆಡಿಟ್ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಮೈಸೂರಿಗೆ ಕುಡಿಯುವ ನೀರು ಪೂರೈಸುವ ಮೇಳಾಪುರದ ಕಾವೇರಿ ನದಿಯಿಂದ ನೀರೆತ್ತುವ ಕೇಂದ್ರ, ದೇವನೂರು, ರಮ್ಮನಹಳ್ಳಿಯಲ್ಲಿರುವ ನೀರು ಶುದ್ದೀಕರಣ ಘಟಕ ಹಾಗೂ ಜರ್ಮನ್ ಪ್ರೆಸ್ ಆವರಣದಲ್ಲಿರುವ ನೀರು ಸಂಗ್ರಹ ಘಟಕಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರಿನ ಕೆ.ಆರ್.ಕ್ಷೇತ್ರದ ಸಿದ್ದಾರ್ಥನಗರ, ಕೆ.ಸಿ.ಬಡಾವಣೆ,…

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಟಿಡಿ ಚಾಲನೆ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಟಿಡಿ ಚಾಲನೆ

September 30, 2018

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡರು ಶನಿವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ದರು. ಗಮಚನಹಳ್ಳಿ ಗ್ರಾಮದ ಎಸ್‍ಟಿ ಕಾಲೋನಿ ಯಲ್ಲಿ ಕಾಂಕ್ರೀಟ್ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿ (32.84 ಲಕ್ಷ ರೂ.), 120 ಲಕ್ಷ ರೂ. ಅಂದಾಜು ವೆಚ್ಚದ ದಾರಿಪುರ ಗ್ರಾಮದ ಒಳಚರಂಡಿ ಮತ್ತು ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳಿಗೆ ಸಚಿವರು ಗುದ್ದಲಿ ಪೂಜೆ ಮಾಡಿದರು. ಬರಡನಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿ…

ಮೈಸೂರು ಜಿಲ್ಲೆಯ ಹಾಸ್ಟೆಲ್‍ಗಳ ಭಾರೀ ಅವ್ಯವಹಾರ ಅನಾವರಣ
ಮೈಸೂರು

ಮೈಸೂರು ಜಿಲ್ಲೆಯ ಹಾಸ್ಟೆಲ್‍ಗಳ ಭಾರೀ ಅವ್ಯವಹಾರ ಅನಾವರಣ

September 30, 2018

ಮೈಸೂರು: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಆಶ್ರಯ ಪಡೆದಿರುವ ಮೈಸೂರು ಜಿಲ್ಲೆಯ ಹಾಸ್ಟೆಲ್‍ಗಳ ದುಸ್ಥಿತಿ ಕಂಡು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ, ಸಿಇಓ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೆಚ್ಚಿಬಿದ್ದರು. ಮೈಸೂರಿನ ಜಿಪಂ ಕಚೇರಿ ಸಭಾಂಗಣ ದಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಸಾಮಾ ಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ. ನಂದೀಶ್ ಅವರು ಜಿಲ್ಲೆಯ ವಿವಿಧ ಇಲಾಖೆಗಳಡಿ ನಡೆಯುತ್ತಿರುವ ವಿದ್ಯಾರ್ಥಿನಿಲಯಗಳ ದುಸ್ಥಿತಿ ಬಗ್ಗೆ ಸಾಕ್ಷ್ಯ ಸಮೇತ ಪ್ರದರ್ಶಿಸಿದ್ದು, ಇಡೀ ಸಭೆ ಕೆಲ ಕ್ಷಣ ಸ್ತಬ್ಧವಾಯಿತು….

ಎನ್‍ಎಸ್‍ಎಸ್ ಕಾರ್ಯಚಟುವಟಿಕೆ  ಜಾತ್ಯಾತೀತ ಮನೋಭಾವ ಬೆಳೆಸುತ್ತದೆ
ಮೈಸೂರು

ಎನ್‍ಎಸ್‍ಎಸ್ ಕಾರ್ಯಚಟುವಟಿಕೆ  ಜಾತ್ಯಾತೀತ ಮನೋಭಾವ ಬೆಳೆಸುತ್ತದೆ

September 30, 2018

ಮೈಸೂರು: ವಿದ್ಯಾರ್ಥಿ ಗಳಲ್ಲಿ ಮಾನವೀಯ ಮೌಲ್ಯ ಹಾಗೂ ಸೇವಾ ಮನೋಭಾವ ಬೆಳೆಸಲು ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಪೂರಕವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ವಿವಿಯ ಎನ್‍ಎಸ್‍ಎಸ್ ಘಟಕ ಹಾಗೂ ವಿದ್ಯಾವರ್ಧಕ ಸಂಘದ ಶ್ರೀ ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜು ಜಂಟಿ ಆಶ್ರಯದಲ್ಲಿ ವಿವಿಯ ಎನ್‍ಎಸ್‍ಎಸ್‍ನ ಸುವರ್ಣ ಸಂಭ್ರಮದ ಅಂಗವಾಗಿ ಮೈಸೂರಿನ ಗೋಕುಲಂನಲ್ಲಿ ರುವ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಾಹುಕಾರ್ ಚನ್ನಯ್ಯ ಸಭಾಂ ಗಣದಲ್ಲಿ `ಎನ್‍ಎಸ್‍ಎಸ್ ಉದ್ದೇಶ, ಸಫಲತೆ ಮತ್ತು ಭವಿಷ್ಯದ…

ಗ್ರಾಪಂ ಸದಸ್ಯರಿಗೆ ನಿಂದನೆ: ಎಸ್‍ಐ ವಿರುದ್ಧ ಪ್ರತಿಭಟನೆ
ಮೈಸೂರು

ಗ್ರಾಪಂ ಸದಸ್ಯರಿಗೆ ನಿಂದನೆ: ಎಸ್‍ಐ ವಿರುದ್ಧ ಪ್ರತಿಭಟನೆ

September 30, 2018

ಮೈಸೂರು:  ಇಲವಾಲ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಗ್ರಾಪಂ ಸದಸ್ಯರೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಮೈಸೂರು ಜಿಲ್ಲಾ ನಾಯಕ ಯುವಕರ ಸಂಘದ ನೇತೃತ್ವ ದಲ್ಲಿ ಗುಂಗ್ರಾಲ್ ಛತ್ರದ ಗ್ರಾಮಸ್ಥರು ಠಾಣೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜನಾಯಕ ಅವರು ರಾಮನಹಳ್ಳಿ ಗ್ರಾಮದಲ್ಲಿ ಗಣಪತಿ ಪ್ರತಿಷ್ಠಾಪಿಸಿದರು. ಇಲವಾಲ ಠಾಣೆ ಎಎಸ್‍ಐ ಮುದ್ದು ಮಾದಪ್ಪ ಗಣಪತಿಯನ್ನು ವಿಸರ್ಜಿಸುವಂತೆ ಸಿದ್ದರಾಜ ನಾಯಕ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಕೂಡಲೇ ಅವರನ್ನು ಅಮಾ ನತು…

ಇಂದಿನಿಂದ ಯುವ ಸಂಭ್ರಮ
ಮೈಸೂರು

ಇಂದಿನಿಂದ ಯುವ ಸಂಭ್ರಮ

September 30, 2018

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2018 ಸೆ.30ರಿಂದ ಅ.7ರವರೆಗೆ ಸಂಜೆ 6ರಿಂದ 10 ಗಂಟೆಯವರೆಗೆ ಯುವ ಸಂಭ್ರಮ ಮೈಸೂರು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಸೆ.30ರಂದು ಸಂಜೆ 6 ಗಂಟೆಗೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲ, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ನಜಿûೀರ್ ಅಹಮದ್, ಸಂಸದರಾದ ಪ್ರತಾಪ್ ಸಿಂಹ, ಆರ್.ಧ್ರುವನಾರಾಯಣ್, ಶಾಸಕರಾದ…

ಮೈಸೂರು ತಾಪಂ ಅಧ್ಯಕ್ಷರು, ಸದಸ್ಯರ ನಡುವೆ ಮುಸುಕಿನ ಗುದ್ದಾಟ: ಕೋರಂ ಅಭಾವದಿಂದ ವಿಶೇಷ ಸಭೆ ಮುಂದೂಡಿಕೆ
ಮೈಸೂರು

ಮೈಸೂರು ತಾಪಂ ಅಧ್ಯಕ್ಷರು, ಸದಸ್ಯರ ನಡುವೆ ಮುಸುಕಿನ ಗುದ್ದಾಟ: ಕೋರಂ ಅಭಾವದಿಂದ ವಿಶೇಷ ಸಭೆ ಮುಂದೂಡಿಕೆ

September 30, 2018

ಮೈಸೂರು: ಮೈಸೂರು ತಾಲೂಕು ಪಂಚಾಯಿತಿಯ ಆಡಳಿತ ಚುಕ್ಕಾಣಿ ಹಿಡಿದಿರುವ ಜೆಡಿಎಸ್‍ನಲ್ಲಿ ಅಧ್ಯ ಕ್ಷರು ಹಾಗೂ ಸದಸ್ಯರ ನಡುವೆ ಮುಸುಕಿನ ಗುದ್ದಾಟದಿಂದ ಶನಿವಾರ ನಿಗದಿಯಾಗಿದ್ದ ತಾಪಂ ವಿಶೇಷ ಸಭೆ ಕೋರಂ ಅಭಾವ ದಿಂದ ಮುಂದೂಡಲ್ಪಟ್ಟಿತು. ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಂಡರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಉಪಾ ಧ್ಯಕ್ಷ ಮಂಜು ಹಾದಿಯಾಗಿ ಸ್ವಪಕ್ಷೀಯರೇ ಮುನಿಸಿಕೊಂಡು ಇಂದಿನ ಸಭೆಗೆ ಗೈರಾಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ ಮಿನಿ ವಿಧಾನಸೌಧದ ತಾಪಂ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11ಕ್ಕೆ…

ರಂಗ ಕಲೆಗಳಿಂದ ನೆಮ್ಮದಿ ಜೀವನ ಸಾಧ್ಯ
ಮೈಸೂರು

ರಂಗ ಕಲೆಗಳಿಂದ ನೆಮ್ಮದಿ ಜೀವನ ಸಾಧ್ಯ

September 30, 2018

ಮೈಸೂರು: ಒತ್ತಡ ಬದುಕಿನಿಂದ ದೂರವಾಗಿ ರಂಗಕಲೆಯಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ನೆಮ್ಮದಿಯ ಜೀವನ ನಡೆಸಬಹುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗಪ್ರಭ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊ ಬ್ಬರ ನಿತ್ಯ ಬದುಕಿನಲ್ಲಿ ಒತ್ತಡ, ಜಿಜ್ಞಾಸೆ ಗಳೇ ತುಂಬಿರುವಾಗ, ರಂಗಕಲಾವಿದರಿಂದ ಮಾತ್ರ ನೆಮ್ಮದಿ ಬದುಕು ಕಾಣಲು ಸಾಧ್ಯವಾಗುತ್ತದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ವಾಗಿ ತೊಡಗಿಸಿಕೊಳ್ಳದಿದ್ದರೆ ಮನುಷ್ಯ ಮಾನಸಿಕವಾಗಿ ಸ್ಥಿತಿವಂತನಾಗಿರಲು ಸಾಧ್ಯ ವಿಲ್ಲ. ರಂಗಚಟುವಟಿಕೆಯಲ್ಲಿ ತೊಡಗಿಸಿ…

ಅ.2ರಿಂದ ಡಿ.ಬನುಮಯ್ಯ ವಿದ್ಯಾ ಸಂಸ್ಥೆ  ಶತಮಾನೋತ್ಸವ ಸಂಭ್ರಮ ಆಚರಣೆ
ಮೈಸೂರು

ಅ.2ರಿಂದ ಡಿ.ಬನುಮಯ್ಯ ವಿದ್ಯಾ ಸಂಸ್ಥೆ  ಶತಮಾನೋತ್ಸವ ಸಂಭ್ರಮ ಆಚರಣೆ

September 30, 2018

ಮೈಸೂರು:  ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಕ್ಕಾಗಿ ಸ್ಥಾಪಿತಗೊಂಡ ಮೈಸೂರಿನ ಡಿ.ಬನುಮಯ್ಯ ವಿದ್ಯಾ ಸಂಸ್ಥೆಯ ಶತಮಾನೋತ್ಸವ ಸಮಾರಂಭ ಅ.2ರಂದು 1 ವರ್ಷಗಳ ಕಾಲ ವಿವಿಧ ಕಾರ್ಯಕ್ರಮ ಗಳ ಮೂಲಕ ಆಚರಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ.ವಿ.ಬಿ.ಜಯದೇವ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಮೈಸೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಡಿ.ಬನುಮಯ್ಯ ಶಿಕ್ಷಣ ಸಂಸ್ಥೆಯನ್ನು 1919ರ ಅ.2ರಂದು ಡಿ.ಬನುಮಯ್ಯನವರು ಸ್ಥಾಪಿಸಿದರು. ಇದೀಗ ಈ ವಿದ್ಯಾಸಂಸ್ಥೆ ಶತಮಾನೋತ್ಸವ ಸಂಭ್ರಮಾಚರಣೆಯನ್ನು ಅ.2ರಿಂದ 2019ರ…

1 1,355 1,356 1,357 1,358 1,359 1,611
Translate »