ಎನ್‍ಎಸ್‍ಎಸ್ ಕಾರ್ಯಚಟುವಟಿಕೆ  ಜಾತ್ಯಾತೀತ ಮನೋಭಾವ ಬೆಳೆಸುತ್ತದೆ
ಮೈಸೂರು

ಎನ್‍ಎಸ್‍ಎಸ್ ಕಾರ್ಯಚಟುವಟಿಕೆ  ಜಾತ್ಯಾತೀತ ಮನೋಭಾವ ಬೆಳೆಸುತ್ತದೆ

September 30, 2018

ಮೈಸೂರು: ವಿದ್ಯಾರ್ಥಿ ಗಳಲ್ಲಿ ಮಾನವೀಯ ಮೌಲ್ಯ ಹಾಗೂ ಸೇವಾ ಮನೋಭಾವ ಬೆಳೆಸಲು ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಪೂರಕವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರು ವಿವಿಯ ಎನ್‍ಎಸ್‍ಎಸ್ ಘಟಕ ಹಾಗೂ ವಿದ್ಯಾವರ್ಧಕ ಸಂಘದ ಶ್ರೀ ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜು ಜಂಟಿ ಆಶ್ರಯದಲ್ಲಿ ವಿವಿಯ ಎನ್‍ಎಸ್‍ಎಸ್‍ನ ಸುವರ್ಣ ಸಂಭ್ರಮದ ಅಂಗವಾಗಿ ಮೈಸೂರಿನ ಗೋಕುಲಂನಲ್ಲಿ ರುವ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಾಹುಕಾರ್ ಚನ್ನಯ್ಯ ಸಭಾಂ ಗಣದಲ್ಲಿ `ಎನ್‍ಎಸ್‍ಎಸ್ ಉದ್ದೇಶ, ಸಫಲತೆ ಮತ್ತು ಭವಿಷ್ಯದ ಸವಾಲುಗಳು’ ಕುರಿತು ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎನ್‍ಎಸ್‍ಎಸ್ ಕಾರ್ಯಚಟುವಟಿಕೆ ಗಳು ವಿದ್ಯಾರ್ಥಿಗಳಲ್ಲಿ ಜಾತ್ಯಾತೀತ ಮನೋ ಭಾವ ಬೆಳೆಸುತ್ತವೆ. ಜೊತೆಗೆ ಗ್ರಾಮೀಣ ಪ್ರದೇಶದ ಬದುಕು ಪರಿಚಯಿಸಿ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಅವ ಕಾಶ ಕಲ್ಪಿಸುತ್ತದೆ. ಸಹಾಯ-ಸಂಸ್ಕಾರದ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಲು ಈ ಯೋಜನೆ ಸಹಕಾರಿಯಾಗಿದೆ. ಪ್ರಸ್ತುತ ವಿದ್ಯಾರ್ಥಿಗಳು ಅಂಕ ಗಳಿಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಆದರೆ ಇದರಿಂದಷ್ಟೇ ವಿದ್ಯಾರ್ಥಿ ಬದುಕು ಪರಿಪೂರ್ಣವಾಗದು. ವಿದ್ಯಾಭ್ಯಾಸದೊಂದಿಗೆ ಸಮಾಜದ ಒಡ ನಾಟ ಹೊಂದಬೇಕಿದ್ದು, ಇದಕ್ಕಾಗಿ ಎನ್‍ಎಸ್‍ಎಸ್ ಸೂಕ್ತ ವೇದಿಕೆ ಕಲ್ಪಿಸಲಿದೆ ಎಂದು ಅವರು ತಿಳಿಸಿದರು.

ಉದ್ಘಾಟನೆ ನೆರವೇರಿಸಿದ ಮೈಸೂರು ವಿವಿ ಹಂಗಾಮಿ ಕುಲಪತಿ ಡಾ.ಆಯಿಷಾ ಎಂ.ಶರೀಫ್ ಮಾತನಾಡಿ, ಎನ್‍ಎಸ್‍ಎಸ್ ಶಿಬಿರಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಶಿಬಿರ ನಡೆಸುವುದರಿಂದ ಶ್ರೀಸಾಮಾನ್ಯರಲ್ಲಿ ನೈರ್ಮಲ್ಯ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿ ಸಲಿದ್ದಾರೆ. ಆ ಮೂಲಕ ಗ್ರಾಮೀಣ ಪ್ರದೇಶ ದಲ್ಲಿ ಉನ್ನತ ಬದಲಾವಣೆ ತರಲು ತಮ್ಮದೇ ಆದ ಕೊಡುಗೆ ನೀಡಲಿದ್ದಾರೆ. ವರ್ಷದಿಂದ ವರ್ಷಕ್ಕೆ ಎನ್‍ಎಸ್‍ಎಸ್ ಶಿಬಿರಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಉತ್ತಮ ಬೆಳೆವಣಿಗೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೈಸೂರು ವಿವಿಯ ಎನ್‍ಎಸ್‍ಎಸ್‍ನ ನಿವೃತ್ತ ಕಾರ್ಯಕ್ರಮ ಸಂಯೋಜನಾಧಿ ಕಾರಿ ಬಿ.ಕೆ.ಶಿವಣ್ಣ ಮಾತನಾಡಿ, ಮೈಸೂರು ವಿವಿ ವ್ಯಾಪ್ತಿಯಲ್ಲಿ ಎನ್‍ಎಸ್‍ಎಸ್ ಉತ್ತಮ ವಾಗಿ ಕಾರ್ಯಚಟುವಟಿಕೆ ನಡೆಸುತ್ತಿದೆ. ಇದೇ ರೀತಿ ಮುನ್ನಡೆಯಲು ಕಾಲೇಜಿನ ಅಧ್ಯಾಪಕರು ನೆರವಾಗಬೇಕಾಗುತ್ತದೆ. ಅಧ್ಯಾ ಪಕರು ಎನ್‍ಎಸ್‍ಎಸ್‍ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಅವರಲ್ಲಿ ಆಸಕ್ತಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ.ಗಣನಾಥಶೆಟ್ಟಿ ಎಕ್ಕಾರ್, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಕೋಶಾಧ್ಯಕ್ಷ ಎಸ್.ಎನ್. ಲಕ್ಷ್ಮಿನಾರಾಯಣ, ಮೈಸೂರು ವಿವಿ ಎನ್‍ಎಸ್‍ಎಸ್‍ನ ಕಾರ್ಯಕ್ರಮ ಸಂಯೋ ಜನಾಧಿಕಾರಿ ಡಾ.ಬಿ.ಚಂದ್ರಶೇಖರ್, ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಶಿವಲಿಂಗೇಗೌಡ ಮತ್ತಿ ತರರು ಹಾಜರಿದ್ದರು.

Translate »