ಮೈಸೂರು

ಪಕ್ಷೇತರ ಕಾರ್ಪೊರೇಟರ್‍ಗಳಿಂದ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ
ಮೈಸೂರು

ಪಕ್ಷೇತರ ಕಾರ್ಪೊರೇಟರ್‍ಗಳಿಂದ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

October 1, 2018

ಮೈಸೂರು: ಮೈಸೂರಿನ ರಾಮಕೃಷ್ಣನಗರದಲ್ಲಿರುವ ಮಾಜಿ ಮುಖ್ಯ ಮಂತ್ರಿ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮೂವರು ಪಕ್ಷೇತರ ಪಾಲಿಕೆ ಸದಸ್ಯರುಗಳು ಸೇರಿದಂತೆ ಹಲವು ಮುಖಂಡರು ಭೇಟಿ ನೀಡುವ ಮೂಲಕ ಸಿದ್ದರಾಮಯ್ಯ ಅವರ ನಿವಾಸ ಶಕ್ತಿ ಕೇಂದ್ರವಾಗಿರುವುದನ್ನು ತೋರ್ಪಡಿಸಿದರು. ಮೈಸೂರು ನಗರಪಾಲಿಕೆಗೆ ಚುನಾವಣೆ ನಡೆದು ಹೊಸ ಸದಸ್ಯರು ಆಯ್ಕೆಯಾಗಿದ್ದರೂ, ಮೇಯರ್ ಚುನಾ ವಣೆ ನಡೆಯದೇ ಇರುವುದರಿಂದ ಮೈಸೂರು ನಗರದ ಮೇಯರ್ ಪಟ್ಟ ಯಾರಿಗೆ ಕೊಡಬೇ ಕೆಂಬ ಚರ್ಚೆ ಪ್ರಚಲಿತದಲ್ಲಿರುವ ಸಂದರ್ಭ ದಲ್ಲಿಯೇಭಾನುವಾರ ಮಾಜಿ ಸಿಎಂ ಮನೆಗೆ…

ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆ: ಅಧ್ಯಕ್ಷ ಟಿ.ಪಿ.ಸುಬ್ರಮಣ್ಯ ತಂಡಕ್ಕೆ ಗೆಲುವು
ಮೈಸೂರು

ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆ: ಅಧ್ಯಕ್ಷ ಟಿ.ಪಿ.ಸುಬ್ರಮಣ್ಯ ತಂಡಕ್ಕೆ ಗೆಲುವು

October 1, 2018

ತಿ.ನರಸೀಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಂಸಿಡಿಸಿಸಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ನೇತೃತ್ವದ ಹಾಲಿ ಅಧ್ಯಕ್ಷ ಟಿ.ಪಿ.ಸುಬ್ರಮಣ್ಯ ತಂಡಕ್ಕೆ ಭರ್ಜರಿ ಗೆಲುವು ದೊರೆಯಿತು. ‘ಎ’ ತರಗತಿಯಲ್ಲಿ ನಾಲ್ವರು ಹಾಗೂ ‘ಬಿ’ ತರಗತಿಯಲ್ಲಿ 8 ನಿರ್ದೇಶಕರು, ಇಬ್ಬರು ಸಹಕಾರಿ ಧುರೀಣರ ಬೆಂಬಲಿಗರು ಚುನಾಯಿತರಾದರು. ಪಟ್ಟಣದ ಲಿಂಕ್ ರಸ್ತೆಯಲ್ಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನಡೆದಂತಹ ಪ್ರಥಮ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಟಿ.ಪಿ.ಸುಬ್ರಮಣ್ಯ ಹಾಗೂ…

ಜೀವನವನ್ನು ಸವಾಲಾಗಿ ಸ್ವೀಕರಿಸಿ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್
ಮೈಸೂರು

ಜೀವನವನ್ನು ಸವಾಲಾಗಿ ಸ್ವೀಕರಿಸಿ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್

October 1, 2018

ನಂಜನಗೂಡು:  ‘ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ಬಗ್ಗೆ ತಲೆಕೆಡಿಸಿಕೊಳ್ಳದೇ ಜೀವನವನ್ನು ಸವಾಲಾಗಿ ಸ್ವೀಕರಿಸಿ ಧೈರ್ಯ, ಆತ್ಮವಿಶ್ವಾಸ, ಸಾಧನೆ, ಛಲವನ್ನು ರೂಢಿಸಿಕೊಳ್ಳಬೇಕು. ಸಂಪದ್ಭರಿತ ಭಾರತದಲ್ಲಿ ಮಕ್ಕಳೇ ಆಸ್ತಿ’ ಎಂದು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದರು.ನಂಜನಗೂಡಿನ ಬ್ರಾಹ್ಮಣ ಧರ್ಮ ಸಹಾಯ ಸಭಾದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಪ್ರರು ಮುಂಚಿನಿಂದಲೂ ತಮ್ಮ ವಿದ್ಯಾ ಪಾಂಡಿತ್ಯದಿಂದಲೇ ತಮ್ಮ ಜೀವನವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇಂದಿನ ಮಕ್ಕಳು ಸಹ ಬುದ್ದಿವಂತರಿದ್ದು, ಅದನ್ನು ಗುರುತಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳಿಗಾಗಿ ಆಸ್ತಿ…

ಹುಣಸೂರು: ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ
ಮೈಸೂರು

ಹುಣಸೂರು: ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ

October 1, 2018

ಹುಣಸೂರು: ನಗರದ ಚೆಸ್ಕ್‍ಂ ವಿಭಾಗದ ಕಚೇರಿಯಲ್ಲಿ ಶನಿವಾರ ಮೈಸೂರು ವಿಭಾಗದ ಇಇ ಮುಜಾಹಿದ್ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ವಿದ್ಯುತ್ ಸಮಸ್ಯೆಗಳು ಅನಾವರಣಗೊಂಡಿತ್ತು. ಗ್ರಾಮಹರೊಬ್ಬರು ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ನಿಗದಿತ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಸೆಸ್ಕ್ ಸಿಬ್ಬಂದಿ ಗ್ರಾಹಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ದೂರಿದರು. ತಾಲೂಕಿನ ಕಣಗಾಲ್ ಗ್ರಾಮದ ರಾಮೇಗೌಡರ ಮನೆಯ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಇಲಾಖೆಯ ಸಿಬ್ಬಂದಿ ಮನೆಯಲ್ಲಿದ ಮಹಿಳೆಯರಿಗೆ ಅವಾಚ್ಯ ಶಬ್ದಗಳನ್ನು ಬಳಸಿ…

ಮೈಸೂರಲ್ಲಿ ಹಾಡಹಗಲೇ ಮಹಿಳೆ ಸರ ಅಪಹರಣ
ಮೈಸೂರು

ಮೈಸೂರಲ್ಲಿ ಹಾಡಹಗಲೇ ಮಹಿಳೆ ಸರ ಅಪಹರಣ

October 1, 2018

ಕೃತ್ಯ ನಡೆಯುತ್ತಿದ್ದರೂ ಆಕೆಯ ರಕ್ಷಣೆಗೆ ಬಾರದ ವಾಯುವಿಹಾರಿಗಳು ಮೈಸೂರು: ವಾಯುವಿಹಾರದಲ್ಲಿದ್ದ ಮಹಿಳೆ ಕೊರಳಿನಲ್ಲಿದ್ದ 80 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಅಪರಿಚಿತ ಯುವಕ ಪರಾರಿಯಾಗಿರುವ ಘಟನೆ ಮೈಸೂರಿನ ಜೆಎಸ್‍ಎಸ್ ಬಡಾವಣೆಯ ಡಾ. ರಾಜ್‍ಕುಮಾರ್ ರಸ್ತೆ ಬಳಿ ಶನಿವಾರ ಸಂಜೆ ಸಂಭವಿಸಿದೆ. ಮೈಸೂರಿನ ರಾಘವೇಂದ್ರನಗರ ನಿವಾಸಿ ಸುಮತಿ (34) ಚಿನ್ನದ ಸರ ಕಳೆದುಕೊಂಡವರು. ಜೆಎಸ್‍ಎಸ್ ಬಡಾವಣೆ ಬಳಿ ವಾಯುವಿಹಾರ ಮಾಡುತ್ತಿ ದ್ದಾಗ ಹೋಂಡಾ ಆಕ್ಟೀವಾ ಸ್ಕೂಟರ್‍ನಲ್ಲಿ ಬಂದ ಯುವಕನೋರ್ವ ಹಠಾತ್ತನೇ ಎರಗಿ ಅವರ ಕೊರಳಿನಲ್ಲಿದ್ದ ಸುಮಾರು 2.5 ಲಕ್ಷ…

ಬಾನಲ್ಲಿ ಚಿತ್ತಾರ ಮೂಡಿಸಿದ ಬಗೆ ಬಗೆಯ ಗಾಳಿಪಟ
ಮೈಸೂರು

ಬಾನಲ್ಲಿ ಚಿತ್ತಾರ ಮೂಡಿಸಿದ ಬಗೆ ಬಗೆಯ ಗಾಳಿಪಟ

September 30, 2018

ಮೈಸೂರು: ಒಂದೆಡೆ ಬಾನಿಂದ ಸೂರ್ಯ ತೆರೆಮರೆಗೆ ಸರಿಯಲು ಅಣಿಯಾಗುತ್ತಿದ್ದಂತೆ ಆಗಸ ದಲ್ಲಿ ಅಸ್ಥಿಪಂಜರ, ಚಾರ್ಲಿಚಾಪ್ಲಿನ್, ಯಕ್ಷಗಾನ, ವೆಲ್ ಕಂ ಟು ಮೈಸೂರು ದಸರಾ, ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಚಿತ್ರಣ ಹೀಗೆ ವಿವಿಧ ಆಕೃತಿಯ ಗಾಳಿಪಟಗಳು ಹಾರಾಟ ನಡೆಸಿದರೆ, ಮತ್ತೊಂದೆಡೆ ಕಾರ್ಮೋಡ ಕವಿದಾಗ ವಿವಿಧ ಚಿತ್ತಾರದ ಎಲ್‍ಇಡಿ ಗಾಳಿಪಟಗಳು ಬಾನಿನಲ್ಲಿ ಹಾರಾಟ ನಡೆಸಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸುವ ಮೂಲಕ ನೆರೆದ ಭಾರೀ ಪ್ರೇಕ್ಷಕರನ್ನು ಆಕರ್ಷಿಸಿದವು. ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿರುವ ವಿಶ್ವವಿಖ್ಯಾತ…

ಅಕ್ಟೋಬರ್ 3ರಂದು  ಮಂತ್ರಿಮಂಡಲ ವಿಸ್ತರಣೆ
ಮೈಸೂರು

ಅಕ್ಟೋಬರ್ 3ರಂದು  ಮಂತ್ರಿಮಂಡಲ ವಿಸ್ತರಣೆ

September 30, 2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲವನ್ನು ಅಕ್ಟೋಬರ್ 3ರಂದು ವಿಸ್ತರಿಸಲು ನಿರ್ಧರಿಸಿದ್ದಾರೆ. ಮೈತ್ರಿ ಪಕ್ಷ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆಯಂತೆ ತಮ್ಮ ಮಂತ್ರಿ ಮಂಡಲವನ್ನು ವಿಸ್ತರಿಸಿ ಐದರಿಂದ ಆರು ಮಂದಿಯನ್ನು ಹೊಸದಾಗಿ ಸೇರ್ಪಡೆ ಮಾಡಿ ಕೊಳ್ಳಲಿದ್ದಾರೆ. ಬಹುತೇಕ ಕಾಂಗ್ರೆಸ್‍ಗೆ ನಿಗದಿಯಾಗಿ ಸಂಪುಟದಲ್ಲಿ ಖಾಲಿ ಉಳಿ ದಿರುವ ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡ ಲಿದ್ದು, ಕಾಂಗ್ರೆಸ್ ವರಿಷ್ಠರು ಹೆಸರಿಸುವವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರ್ಪಡೆ ಮಾಡಿಕೊಳ್ಳ ಲಿದ್ದಾರೆ. ಇದೇ ಕಾರಣಕ್ಕಾಗಿ ತಮ್ಮ ಚಿಕ್ಕಬಳ್ಳಾಪುರ ಪ್ರವಾಸವನ್ನು ರದ್ದುಪಡಿಸಿ…

ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭ
ಮೈಸೂರು

ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭ

September 30, 2018

ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಆಂಗ್ಲ ಮಾಧ್ಯಮ ಆರಂಭಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಜೊತೆಯಲ್ಲೇ ಕಡ್ಡಾಯ ಶಿಕ್ಷಣ ಕಾಯಿದೆ (ಆರ್‌ಟಿಇ) ರದ್ದುಗೊಳಿಸಲು ತೀರ್ಮಾನಿಸಿದೆ. ಹಳ್ಳಿಯ ಮಕ್ಕಳು ಜಾಗತಿಕ ಮಟ್ಟಕ್ಕೆ ಮುಟ್ಟಲು ಸಹಕಾರಿಯಾಗುವಂತೆ ಪ್ರಥಮ ಹಂತದಲ್ಲಿ 1000 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು. ಒಂದು ಮತ್ತು 5ನೇ ತರಗತಿಗೆ ಪ್ರವೇಶಾವಕಾಶ ಕಲ್ಪಿಸಿ ಮೊದಲ ವರ್ಷದ ತರಗತಿಗಳು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭ ವಾಗಲಿವೆ. ಇದಕ್ಕಾಗಿ ಪ್ರತ್ಯೇಕ ಶಿಕ್ಷಕರ ನೇಮಕಾತಿ ಮತ್ತು ಸರಳ ಪಠ್ಯ ಸಿದ್ಧಪಡಿಸುವ ಪ್ರಕ್ರಿಯೆ ಆರಂಭ…

ರಾಹು, ಕೇತು, ಶನಿಗಳು ಸೇರಿ ನನ್ನ ಸೋಲಿಸಿ ಬಿಟ್ಟವು…!?
ಮೈಸೂರು

ರಾಹು, ಕೇತು, ಶನಿಗಳು ಸೇರಿ ನನ್ನ ಸೋಲಿಸಿ ಬಿಟ್ಟವು…!?

September 30, 2018

ನಂಜನಗೂಡು: ನಾನು ಮುಖ್ಯಮಂತ್ರಿಯಾಗುವುದನ್ನು ತಪ್ಸೋಕೆ ರಾಹು-ಕೇತು, ಶನಿ ಎಲ್ಲಾ ಸೇರ್ಕೊಂಡು ನನ್ನನ್ನ ಸೋಲಿಸಿಬಿಟ್ಟವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸೋಲಿನ ಬಗ್ಗೆ ವಿಶ್ಲೇಷಿಸಿದರು. ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಡಿ ಆಯೋಜಿಸಿದ್ದ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಹೊಟ್ಟೆಗಿಚ್ಚಿಗೆ ಔಷಧಿ ಇದ್ಯಾ…? ಏನಪ್ಪಾ… ನಾನು ಮತ್ತೆ ಮುಖ್ಯಮಂತ್ರಿ ಆಗಬಾರದು ಅಂತ ವಿರೋಧಿ ಗಳೆಲ್ಲಾ ಒಟ್ಟಾಗಿ ಸೇರಿ ಕಾಲೆಳೆದರು. ರಾಹು-ಕೇತು, ಶನಿ ಎಲ್ಲಾ…

ತಾಯಿ ನಿಂದಿಸಿದ ಸ್ನೇಹಿತನ ರುಂಡ ಚೆಂಡಾಡಿದ ಯುವಕ
ಮೈಸೂರು

ತಾಯಿ ನಿಂದಿಸಿದ ಸ್ನೇಹಿತನ ರುಂಡ ಚೆಂಡಾಡಿದ ಯುವಕ

September 30, 2018

ಮಳವಳ್ಳಿ: ತನ್ನ ತಾಯಿಯನ್ನು ನಿಂದಿಸಿದ ಸ್ನೇಹಿತನ ತಲೆ ಕಡಿದ ಯುವಕ, ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾದ ಭಯಾನಕ ಘಟನೆ ಶನಿವಾರ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ತಾಲೂಕಿನ ಚಿಕ್ಕಬಾಗಿಲು ಗ್ರಾಮದ ನಾಗಣ್ಣ ಎಂಬುವರ ಪುತ್ರ ಪಶುಪತಿ ಎಂಬಾತನೇ ಅದೇ ಗ್ರಾಮದ ತನ್ನ ಸ್ನೇಹಿತ ಪರಶಿವಮೂರ್ತಿ ಎಂಬುವರ ಪುತ್ರ ಗಿರೀಶ್ (29) ಎಂಬಾತನನ್ನು ಗ್ರಾಮದ ಹೊರ ವಲಯದಲ್ಲಿ ಹತ್ಯೆ ಮಾಡಿ, ಆತನ ತಲೆ ಕಡಿದು 24 ಕಿ.ಮೀ. ದೂರದಿಂದ ಬೈಕಿನಲ್ಲಿ ರುಂಡವನ್ನು ತೆಗೆದುಕೊಂಡು ಬಂದು ಇಲ್ಲಿನ ಪೊಲೀಸರಿಗೆ ಶರಣಾದವನಾಗಿದ್ದಾನೆ….

1 1,354 1,355 1,356 1,357 1,358 1,611
Translate »