ಮೈಸೂರು: ಮೈಸೂರಿನ ಪಡುವಾರಳ್ಳಿಯ ದೇವೇಂದ್ರ ಅಲಿಯಾಸ್ ದೇವು ಹತ್ಯೆ ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಹೇಳಿದ ಆರೋಪದಡಿ ಇಬ್ಬರ ವಿರುದ್ಧ ಪೊಲೀಸರು, ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದೇವು ಹತ್ಯೆ ಪ್ರಕರಣದ ಪ್ರತ್ಯಕ್ಷ ಸಾಕ್ಷೀದಾರರಾಗಿದ್ದ ಮುಕುಂದ ಹಾಗೂ ಪ್ರತಾಪ್, ನ್ಯಾಯಾಲಯ ದಲ್ಲಿ ಸುಳ್ಳು ಸಾಕ್ಷಿ ಹೇಳಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೆ.22ರಂದು ಸರ್ಕಾರದ ಪರವಾಗಿ ಅರ್ಜಿ ಸಲ್ಲಿಸಿರುವುದಾಗಿ ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ. ಮೈಸೂರಿನ ವಿನಾಯಕನಗರದ ಜೋಡಿ ಮಾರಮ್ಮನ…
ದಸರಾ ಕನ್ನಡ ಪುಸ್ತಕ ಮೇಳ: ಮಳಿಗೆಗೆ ಅರ್ಜಿ ಆಹ್ವಾನ
September 29, 2018ಮೈಸೂರು: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 10ರಿಂದ 19ವರೆಗೆ ಮೈಸೂರಿನಲ್ಲಿ ದಸರಾ ಕನ್ನಡ ಪುಸ್ತಕ ಮೇಳವನ್ನು ಕಾಡಾ ಮೈದಾನ ಇಲ್ಲಿ ನಡೆಯಲಿದೆ. ಈ ಪುಸ್ತಕ ಮೇಳದಲ್ಲಿ ಪ್ರಕಾಶನ ಸಂಸ್ಥೆ /ಪ್ರದರ್ಶಕರು ಭಾಗವಹಿಸಬಹುದಾಗಿದ್ದು, 50 ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು. ನಿಗದಿತ ಅರ್ಜಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಅಥವಾ ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ…
ಸ್ಪರ್ಧಾತ್ಮಕ ಪರೀಕ್ಷೆ: ಪ್ರಮತಿ ಹಿಲ್ ವ್ಯೂನ ಫಯಾಜ್ ಅಹಮದ್‍ಗೆ 30ನೇ ರ್ಯಾಂಕ್
September 29, 2018ಮೈಸೂರು: ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಫಯಾಜ್ ಅಹಮದ್ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ಶಾಲೆ ಮತ್ತು ಮೈಸೂರು ನಗರಕ್ಕೆ ಕೀರ್ತಿ ತಂದಿದ್ದಾರೆಂದು ಶಾಲೆಯ ಕಾರ್ಯದರ್ಶಿ ಹೆಚ್.ವಿ.ರಾಜೀವ್ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಈ ಕ್ಲಿಷ್ಟ್ಟಕರ ಪರೀಕ್ಷೆಯಲ್ಲಿ ಈತ 30ನೇ ರ್ಯಾಂಕ್ ಪಡೆದಿದ್ದಾರೆ ಎಂದು ತಿಳಿಸಿದರು. ಮೈಸೂರು ಜಿಲ್ಲೆಯಿಂದ ಪರೀಕ್ಷೆ…
ಮೈಸೂರು ಅರಮನೆ ಆವರಣದಲ್ಲಿ ಅರ್ಥಪೂರ್ಣ ವಿಶ್ವ ಪ್ರವಾಸೋದ್ಯಮ ದಿನಾಚರಣೆ
September 28, 2018ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತದಿಂದ ವಿಶ್ವ ಪ್ರವಾಸೋದ್ಯಮ ದಿನವನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರವಾಸೋದ್ಯಮ ಇಲಾಖೆ, ಅರಮನೆ ಮಂಡಳಿ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಮತ್ತು ಮೈಸೂರು ಹೋಟೆಲ್ ಅಸೋಸಿಯೇಷನ್ ಸಹಯೋಗದಲ್ಲಿ ಏರ್ಪ ಡಿಸಿದ್ಧ ಕಾರ್ಯಕ್ರಮದಲ್ಲಿ ಅರಮನೆ ದಕ್ಷಿಣ ದ್ವಾರದಲ್ಲಿ ಪ್ರವಾಸಿಗರನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಎಸ್.ಎ.ರಾಮದಾಸ್, ಬಿ.ಹರ್ಷವರ್ಧನ್ ಅವರು ಗುಲಾಬಿ ಹೂ ನೀಡಿ, ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭ…
ತಂದೆಯ ಆಸ್ಪತ್ರೆ ಚಿಕಿತ್ಸಾ ವೆಚ್ಚ ಭರಿಸಲಾಗದೆ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ
September 28, 2018ಕೆ.ಆರ್.ಪೇಟೆ: ತಂದೆ ಮತ್ತು ಮಗ ಒಂದೇ ದಿನ ಇಹಲೋಕ ತ್ಯಜಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಇದರ ಹಿಂದಿರುವ ಕರುಣಾ ಜನಕ ಕತೆ ಕಲ್ಲು ಹೃದಯಿಗಳ ಕಣ್ಣಲ್ಲೂ ನೀರು ತರಿಸುವಂತಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ತಂದೆಯ ಚಿಕಿತ್ಸಾ ವೆಚ್ಚಕ್ಕೆ ಹಣ ಹೊಂದಿಸಲಾಗದೆ ಪುತ್ರ ಆತ್ಮಹತ್ಯೆ ಮಾಡಿ ಕೊಂಡರೆ, ಚಿಕಿತ್ಸೆ ಫಲಕಾರಿಯಾಗದೆ ತಂದೆಯೂ ಕೊನೆಯು ಸಿರೆಳೆದಿದ್ದಾರೆ. ಮಂಡ್ಯ ಜಿಲ್ಲೆ, ಕೃಷ್ಣರಾಜ ಪೇಟೆ ತಾಲೂಕು, ಬೂಕನಕೆರೆ ಗ್ರಾಮದ ಹಿರಣ್ಣಯ್ಯ(55) ಹಾಗೂ ಮಂಜು (23) ಒಂದೇ ದಿನ ಬದುಕಿನ ಪಯಣ ಮುಗಿಸಿದ್ದಾರೆ. ಇದ್ದಕ್ಕಿದ್ದಂತೆ…
ಕೆಆರ್‌ಎಸ್ ಜಲಾಶಯ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿ ಗಣಿಗಾರಿಕೆ ನಿಷಿದ್ಧ
September 28, 2018ಮಂಡ್ಯ: ಕಳೆದ ಎರಡು ದಿನಗಳ ಹಿಂದೆ ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದ ವರದಿ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಭದ್ರತೆಯ ದೃಷ್ಟಿಯಿಂದ ಕೆಆರ್‌ಎಸ್ ಜಲಾಶಯದ 20 ಕಿ.ಮೀ. ಸುತ್ತಳತೆಯಲ್ಲಿ ಗಣಿಗಾರಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಇಂದು ಆದೇಶ ಹೊರಡಿಸಿದ್ದಾರೆ. ಕೆಎಸ್‍ಎನ್‍ಡಿಎಂ ಎಚ್ಚರಿಕೆ ವರದಿ: ಮೈಸೂರು ಮತ್ತು ಶ್ರೀರಂಗಪಟ್ಟಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ.25ರಂದು ಮಧ್ಯಾಹ್ನ 2 ಸಲ ಭಾರೀ ಶಬ್ದ ಕೇಳಿ…
ಈ ದಸರೆ ವೇಳೆ ನಿಮ್ಮ ವಾಹನವನ್ನು ಪುರಭವನ ಆವರಣದಲ್ಲಿ ನಿಲ್ಲಿಸಬಹುದು
September 28, 2018ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರ ವಾಹನ ಪಾರ್ಕಿಂಗ್ ಸಮಸ್ಯೆಯನ್ನು ನೀಗಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಪುರಭವನ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಸದ್ಯಕ್ಕೆ ವಾಹನ ನಿಲುಗಡೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. 2011ರಲ್ಲಿ ಪುರಭವನದ ಆವರಣದಲ್ಲಿ 18.28 ಕೋಟಿ ರೂ. ವೆಚ್ಚದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಆರಂಭವಾಗಿತ್ತು. ಹೈದರಾಬಾದ್ ಮೂಲದ ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆಗೆ ಇದರ ಗುತ್ತಿಗೆ ನೀಡಲಾಗಿತ್ತು. 2011ರ…
ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ
September 28, 2018ನವದೆಹಲಿ: ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದು ಹೇಳಿ ರುವ ಸರ್ವೋಚ್ಛ ನ್ಯಾಯಾಲಯ, ಪತ್ನಿಗೆ ಪತಿಯೇ ಮಾಲೀಕನಲ್ಲ, ಮಹಿಳೆ-ಪುರುಷರು ಇಬ್ಬರು ಸಮಾನರು ಎಂದು ಹೇಳುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ. ಸೆಕ್ಷನ್ 497ರ ಅಸಾಂವಿಧಾನಿಕ ತೀರ್ಪು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅನೈತಿಕ ಸಂಬಂಧದ ಕುರಿತು ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕಾನೂನಿನ ಪ್ರಕಾರ, ಗಂಡನೇ ಎಲ್ಲ ದಕ್ಕೂ ಮುಖ್ಯಸ್ಥನಲ್ಲ, ಮಹಿಳೆಗೂ ಗೌರವ ತೋರ ಬೇಕು. ಮಹಿಳೆಯರ ಜೊತೆ ಅಗೌರವದ ವರ್ತನೆ ಸರಿಯಲ್ಲ, ಮಹಿಳೆಯರಿಗೆ…
ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ
September 28, 2018ನವದೆಹಲಿ: ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂಬ 1994ರ ಫಾರೂಕಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್‍ನ ತ್ರಿಸದಸ್ಯ ಪೀಠ ಎತ್ತಿ ಹಿಡಿದಿದೆ. ಮಸೀದಿಯು ಇಸ್ಲಾಂನ ಅವಿ ಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪಿನ ಪರಿಶೀಲನೆ ಸಂಬಂಧ ಸೆ.27ರಂದು ಮಹತ್ವದ ತೀರ್ಪು ಪ್ರಕಟಿಸಿರುವ ಮುಖ್ಯ ನ್ಯಾ. ದೀಪಕ್ ಮಿಶ್ರ, ಅಶೋಕ್ ಭೂಷನ್, ನ್ಯಾ. ನಜೀರ್ ಅವರಿದ್ದ ತ್ರಿಸದಸ್ಯ ಪೀಠದ ಪೈಕಿ ನ್ಯಾ.ಅಶೋಕ್ ಭೂಷಣ್ ಹಾಗೂ ನ್ಯಾ. ದೀಪಕ್ ಮಿಶ್ರಾ ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಾಗಿಲ್ಲ ಎಂದು ಅಭಿ…
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಂಡದಿಂದ ಪ್ಯಾರಿಸ್‍ನಲ್ಲಿ ಮೈಸೂರು ದಸರಾ ಪ್ರಚಾರ
September 28, 2018ಮೈಸೂರು: ರಾಜ್ಯ ಪ್ರವಾಸೋ ದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್, ವಿದೇಶದಲ್ಲಿ ಮೈಸೂರು ದಸರಾ ಮಹೋತ್ಸವದ ಪ್ರಚಾರ ಕೈಗೊಳ್ಳುವ ಮೂಲಕ ವಿಶಿಷ್ಟತೆ ಮೆರೆದಿದ್ದಾರೆ. ಇಂಟರ್‍ನ್ಯಾಷನಲ್ ಫ್ರೆಂಚ್ ಟ್ರಾವೆಲ್ ಮಾರ್ಟ್ ವತಿಯಿಂದ ಪ್ಯಾರಿಸ್‍ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಎಕ್ಸ್‌ಪೋದಲ್ಲಿ ಕರ್ನಾಟಕ ಪ್ರವಾಸೋ ದ್ಯಮವೂ ಭಾಗಿಯಾಗಿದೆ. ನಿನ್ನೆಯಷ್ಟೇ ಮೈಸೂ ರಿನಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆ ಯರ್ ಭೇಟಿಯಾಗಿದ್ದ ಸಾ.ರಾ.ಮಹೇಶ್ ಅವರು, ನಂತರ ಪ್ಯಾರಿಸ್‍ಗೆ ಪ್ರಯಾಣ ಬೆಳೆಸಿದ್ದರು. ಇಂದು ಎಕ್ಸ್‌ಪೋದಲ್ಲಿರುವ ರಾಜ್ಯ ಪ್ರವಾಸೋದ್ಯಮದ ಮಳಿಗೆಗೆ…