ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ
ಮೈಸೂರು

ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ

September 28, 2018

ನವದೆಹಲಿ: ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದು ಹೇಳಿ ರುವ ಸರ್ವೋಚ್ಛ ನ್ಯಾಯಾಲಯ, ಪತ್ನಿಗೆ ಪತಿಯೇ ಮಾಲೀಕನಲ್ಲ, ಮಹಿಳೆ-ಪುರುಷರು ಇಬ್ಬರು ಸಮಾನರು ಎಂದು ಹೇಳುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ. ಸೆಕ್ಷನ್ 497ರ ಅಸಾಂವಿಧಾನಿಕ ತೀರ್ಪು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅನೈತಿಕ ಸಂಬಂಧದ ಕುರಿತು ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕಾನೂನಿನ ಪ್ರಕಾರ, ಗಂಡನೇ ಎಲ್ಲ ದಕ್ಕೂ ಮುಖ್ಯಸ್ಥನಲ್ಲ, ಮಹಿಳೆಗೂ ಗೌರವ ತೋರ ಬೇಕು. ಮಹಿಳೆಯರ ಜೊತೆ ಅಗೌರವದ ವರ್ತನೆ ಸರಿಯಲ್ಲ, ಮಹಿಳೆಯರಿಗೆ ಅಗೌರವ ತೋರುವ ಕಾನೂನು ಸಾಂವಿಧಾನಿಕವಲ್ಲ ಎಂದು ದೀಪಕ್ ಮಿಶ್ರ ಅವರನ್ನೊಳಗೊಂಡ ಐವರು ನ್ಯಾಯಾ ಧೀಶರ ಪೀಠ ಅಭಿಪ್ರಾಯ ಪಟ್ಟಿದೆ. ಪತ್ನಿಯ ಪ್ರಿಯಕರನ ಬಗ್ಗೆ ಪ್ರಶ್ನಿಸುವ, ವಿಚಾರಿಸುವ ಹಕ್ಕು ಪತಿಗೆ ಇದೆ ಎಂದಾದರೇ,ಪತಿಯ ಪ್ರಿಯತಮೆಯ ಬಗ್ಗೆ ವಿಚಾರಣೆ ನಡೆಸುವ ಹಕ್ಕು ಪತ್ನಿ ಗೇಕಿಲ್ಲ.

ಕಾನೂನಿನ ಪ್ರಕಾರ, ಮಹಿಳೆಗೆ ತನ್ನ ಪತಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಇದೆ, ಆದರೆ ಅದು ಸರಿಯಲ್ಲ. ಪತ್ನಿಗೂ ಪ್ರಶ್ನಿಸುವ ಅಧಿಕಾರವಿದೆ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಪತಿ ಅವಿವಾಹಿತೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿ ದ್ದಾನೆಯೇ ಇಲ್ಲವೇ ಎಂಬುದು ಪರಿಗಣನೆಗೆ ಇಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.

ಪ್ರಾಣಾಪಾಯ ತರದ ವಿವಾಹ ಬಾಹಿರ ಸಂಬಂಧವನ್ನು ಅಪರಾಧ ಎಂದು ಪರಿಗಣಿಸ ಲಾಗದು ಎಂದು ಹೇಳುವ ಮೂಲಕ, 150 ವರ್ಷದ ಹಳೇಯ ಕಾನೂನನ್ನು ಅಸಂವಿ ಧಾನಿಕ ಎಂದು ಹೇಳಿದೆ. ವಿವಾಹ ಬಾಹಿರ ಸಂಬಂಧ ತೀರಾ ಖಾಸಗಿ ವಿಚಾರವಾಗಿದ್ದು, ಅನೇಕ ದೇಶಗಳು ಇದನ್ನು ಅಪರಾಧ ಮುಕ್ತಗೊಳಿಸಿವೆ. ಐಪಿಸಿ ಸೆಕ್ಷನ್ 407 ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಸಂವಿಧಾನ ಪೀಠ ನಡೆಸಿತ್ತು. ವಿವಾಹದ ಪಾವಿತ್ರ್ಯತೆ ಕಾಪಾಡಲು ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಕಾನೂನು ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

Translate »