ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್  ತಂಡದಿಂದ ಪ್ಯಾರಿಸ್‍ನಲ್ಲಿ ಮೈಸೂರು ದಸರಾ ಪ್ರಚಾರ
ಮೈಸೂರು

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್  ತಂಡದಿಂದ ಪ್ಯಾರಿಸ್‍ನಲ್ಲಿ ಮೈಸೂರು ದಸರಾ ಪ್ರಚಾರ

September 28, 2018

ಮೈಸೂರು:  ರಾಜ್ಯ ಪ್ರವಾಸೋ ದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್, ವಿದೇಶದಲ್ಲಿ ಮೈಸೂರು ದಸರಾ ಮಹೋತ್ಸವದ ಪ್ರಚಾರ ಕೈಗೊಳ್ಳುವ ಮೂಲಕ ವಿಶಿಷ್ಟತೆ ಮೆರೆದಿದ್ದಾರೆ.

ಇಂಟರ್‍ನ್ಯಾಷನಲ್ ಫ್ರೆಂಚ್ ಟ್ರಾವೆಲ್ ಮಾರ್ಟ್ ವತಿಯಿಂದ ಪ್ಯಾರಿಸ್‍ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಎಕ್ಸ್‌ಪೋದಲ್ಲಿ ಕರ್ನಾಟಕ ಪ್ರವಾಸೋ ದ್ಯಮವೂ ಭಾಗಿಯಾಗಿದೆ. ನಿನ್ನೆಯಷ್ಟೇ ಮೈಸೂ ರಿನಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆ ಯರ್ ಭೇಟಿಯಾಗಿದ್ದ ಸಾ.ರಾ.ಮಹೇಶ್ ಅವರು, ನಂತರ ಪ್ಯಾರಿಸ್‍ಗೆ ಪ್ರಯಾಣ ಬೆಳೆಸಿದ್ದರು. ಇಂದು ಎಕ್ಸ್‌ಪೋದಲ್ಲಿರುವ ರಾಜ್ಯ ಪ್ರವಾಸೋದ್ಯಮದ ಮಳಿಗೆಗೆ ತೆರಳಿ, ಮೈಸೂರು ಸೇರಿದಂತೆ ಕರ್ನಾಟಕದ ಪ್ರೇಕ್ಷಣೀಯ ಸ್ಥಳ ಗಳ ಬಗ್ಗೆ ಪ್ರಚಾರ ಮಾಡಿದರು. ಹೀಗೆ ವಿದೇಶ ದಲ್ಲಿ ನಡೆದ ಎಕ್ಸ್‌ಪೋದಲ್ಲಿ ಪಾಲ್ಗೊಂಡು ಪ್ರವಾಸೋದ್ಯಮದ ಬಗ್ಗೆ ಪ್ರಚಾರ ನಡೆಸಿದ ಪ್ರಥಮ ಸಚಿವ ಎಂಬ ಹೆಗ್ಗಳಿಕೆಗೂ ಸಾ.ರಾ. ಮಹೇಶ್ ಪಾತ್ರರಾದರು.

ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಸಂತಸ ಹಂಚಿಕೊಂಡ ಸಾ.ರಾ.ಮಹೇಶ್, ಪ್ಯಾರಿಸ್‍ನಲ್ಲಿ ನಡೆಯುತ್ತಿರುವ ಕಾರ್ಯ ಕ್ರಮದಲ್ಲಿ ಜಗತ್ತಿನ ಹಲವು ದೇಶಗಳ ಪ್ರತಿ ನಿಧಿಗಳು ಭಾಗಿಯಾಗಿ, ತಮ್ಮ ರಾಷ್ಟ್ರಗಳ ವಿಶೇಷತೆಯ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಹಾಗೆಯೇ ಕರ್ನಾಟಕ ಪ್ರವಾಸೋ ದ್ಯಮವೂ ಪಾಲ್ಗೊಂಡಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಹಿನ್ನೆಲೆ, ಸಾಂಪ್ರದಾಯಿಕ ಆಚರಣೆಗಳ ಬಗ್ಗೆಯೂ ಹೆಚ್ಚು ಪ್ರಚಾರ ಮಾಡುತ್ತಿದ್ದೇವೆ. ಹೆಚ್ಚು ಪ್ರವಾ ಸಿಗರು ಭೇಟಿ ನೀಡಿದರೆ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮಹತ್ವದ್ದಾಗಿದೆ. ಸೆ.25ರಿಂದ ನಡೆಯುತ್ತಿರುವ ಈ ಕಾರ್ಯಕ್ರಮ ನಾಳೆ(ಸೆ.28) ಮುಕ್ತಾಯವಾಗಲಿದೆ. ನಂತರ ಲಂಡನ್ ಹಾಗೂ ಗ್ಲಾಸ್ಗೋದಲ್ಲಿ ನಡೆಯಲಿರುವ ಬೃಹತ್ ರ‍್ಯಾಲಿಯಲ್ಲೂ ಪಾಲ್ಗೊಳ್ಳಲಿದ್ದೇವೆ ಎಂದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮು, ಜಂಗಲ್ ಲಾಡ್ಜ್ ವ್ಯವಸ್ಥಾಪಕ ನಿರ್ದೇ ಶಕ ವಿಜಯ್‍ಶರ್ಮ, ಕೆಎಎಸ್‍ಟಿಡಿಸಿ ವ್ಯವ ಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಆರ್ಗನೈಸಿಂಗ್ ಏಜೆನ್ಸಿ ಸಂಸ್ಥೆಯ ಓಂ ಮತ್ತಿತರರು ಕರ್ನಾಟಕ ಪ್ರವಾಸೋದ್ಯಮದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಟ್ರಾವೆಲ್ ಏಜೆಂಟ್ಸ್, ಟ್ರಾವೆಲ್ ಏಜೆನ್ಸಿ ವ್ಯವಸ್ಥಾಪಕರು, ನಿರ್ದೇ ಶಕರು, ಪ್ರವಾಸೋದ್ಯಮದ ಮುಖ್ಯಸ್ಥರು, ಉದ್ಯಮದ ಏಜೆನ್ಸಿಗಳು, ಉತ್ಪನ್ನ ವ್ಯವಸ್ಥಾಪಕರು ಸೇರಿದಂತೆ ವಿವಿಧ ಕ್ಷೇತ್ರದ ಪ್ರತಿನಿಧಿಗಳು ಭೇಟಿ ನೀಡಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

Translate »