ಮೈಸೂರು: – ಮಹಾ ಜನ ಸ್ನಾತಕೋತ್ತರ ಕೇಂದ್ರದ ಪ್ರವಾಸೋ ದ್ಯಮ ಮತ್ತು ಆತಿಥ್ಯ ವಿಭಾಗ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿ ಆಶ್ರಯ ದಲ್ಲಿ ಅ.5 ಮತ್ತು 6ರಂದು `ಟ್ರಾವೆಲ್ ಲಾಗ್ -18’ ಶೀರ್ಷಿಕೆಯಡಿ 2 ದಿನಗಳ `ಪ್ರವಾ ಸೋದ್ಯಮ’ ಕುರಿತ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಮೇಟ ಗಳ್ಳಿಯ ಕೆಆರ್‍ಎಸ್ ರಸ್ತೆಯಲ್ಲಿರುವ ಸ್ನಾತ ಕೋತ್ತರ…
ಆಪರೇಷನ್ ಕಮಲ ವಿರುದ್ಧ ಪೊರಕೆ ಪ್ರತಿಭಟನೆ
September 27, 2018ಮೈಸೂರು: ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರ ವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿರುವ ಬಿಜೆಪಿ ವಿರುದ್ಧ ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಮಾನಿ ಬಳಗದ ಕಾರ್ಯಕರ್ತರು ಮೈಸೂರಿನ ನ್ಯಾಯಾಲಯದ ಮುಂದಿರುವ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು. ಪೊರಕೆಗಳನ್ನು ಹಿಡಿದ ಪ್ರತಿಭಟನಾಕಾರರು ಆಪÀರೇಷನ್ ಕಮಲವನ್ನು ಆಪರೇಷನ್ ಮುಳ್ಳಿಗೆ ಹೋಲಿಸಿ ಅಣಕು ಪ್ರದರ್ಶನ ನಡೆಸಿದರು. ಆಪರೇಷನ್ ಕಮಲದ ಮೂಲಕ ಬಿಜೆಪಿ ನಾಯಕರು ಸಂವಿಧಾನ ವಿರೋಧಿ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು. ರೈತರ…
ಫೇಸ್ ಬುಕ್‍ನಲ್ಲಿ ಯುವತಿಗೆ ನಿಂದಿಸಿದ ಯುವಕ ಬಂಧನ
September 27, 2018ಮೈಸೂರು: ಫೇಸ್‍ಬುಕ್‍ನಲ್ಲಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಮೈಸೂರಿನ ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಣಸೂರಿನ ಕಲ್ಕುಣಿಕೆಯ ರವಿ ಕೆ.ಗೌಡ ಬಂಧಿತ ಆರೋಪಿ. ಮೈಸೂರಿನ ಹೊಸ ಬಂಡಿಕೇರಿ ಯುವತಿ ಕೆ.ಆರ್.ಠಾಣೆಗೆ ದೂರು ನೀಡಿ ರವಿ ಕೆ.ಗೌಡ ತನಗೆ ಫೇಸ್ ಬುಕ್‍ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಮೆಂಟ್ ಮಾಡಿ ಮಾನಸಿಕ ನೋವುಂಟು ಮಾಡಿದ್ದಾನೆಂದು ಆರೋಪ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್. ಠಾಣೆ ಪೊಲೀಸರು ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.
ಪತ್ನಿ ಹತ್ಯೆಗೆ ಯತ್ನಿಸಿದ ಪತಿಗೆ 4 ವರ್ಷ ಜೈಲು
September 27, 2018ಮೈಸೂರು: ಮಚ್ಚಿನಿಂದ ಹಲ್ಲೆ ಮಾಡಿ ಪತ್ನಿಯ ಕೊಲೆಗೆ ಯತ್ನಿಸಿದ ಪತಿ ರಾಯನಿಗೆ 4 ವರ್ಷ ಜೈಲು ಮತ್ತು 25 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಜಿ.ಕುರುವತ್ತಿ ಅವರು ಇಂದು ತೀರ್ಪು ನೀಡಿದ್ದಾರೆ. ಹುಣಸೂರು ತಾಲೂಕು ಕೊತ್ತೇಗಾಲ ಗ್ರಾಮದ ನಿವಾಸಿ ಸಿದ್ದರಾಜು (60) ತನ್ನ ಪತ್ನಿ ಮಹದೇವಮ್ಮ ಅವರ ಹತ್ಯೆಗೆ ಯತ್ನಿಸಿ, ಶಿಕ್ಷೆಗೆ ಗುರಿಯಾದವನು. ವಿವರ: ಈ ದಂಪತಿಗೆ 32 ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ ಮೂವರು ಪುತ್ರರು…
ಎಟಿಎಂನಲ್ಲಿ ಹಣ ತೆಗೆಯಲು ನೆರವಾಗುವವನಂತೆ 1.15 ಲಕ್ಷ ವಂಚಿಸಿದ ಖದೀಮ
September 27, 2018ಮೈಸೂರು: ಎಟಿಎಂನಿಂದ ಹಣ ಪಡೆಯಲು ಸಹಾಯ ಮಾಡುವನಂತೆ ನಂಬಿಸಿದ ಖದೀಮನೊಬ್ಬ, ವ್ಯಕ್ತಿಯೊಬ್ಬರ ಎಟಿಎಂ ಕಾರ್ಡ್ ಬದಲಿಸಿ, 1.15 ಲಕ್ಷ ರೂ. ಡ್ರಾ ಮಾಡಿಕೊಂಡು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೃಷ್ಣೇಗೌಡ ಹಣ ಕಳೆದುಕೊಂಡವರು. ಇವರು ಸೆ.20ರಂದು ನಗರ ಬಸ್ ನಿಲ್ದಾಣದ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಕೆನರಾ ಬ್ಯಾಂಕ್ ತಮ್ಮ ಎಟಿಎಂ ಕಾರ್ಡ್ ಅನ್ನು ಬಳಸಿ, ಹಣ ಪಡೆಯುವ ಸಂದರ್ಭದಲ್ಲಿ 30 ವರ್ಷದ ಖದೀಮ, ಸಹಾಯ ಮಾಡುವಂತೆ ನಟಿಸಿ, ಕೃಷ್ಣೇಗೌಡರ ಎಟಿಎಂ ಕಾರ್ಡ್‍ನ್ನು ಬದಲಾಯಿಸಿದ್ದಾನೆ. ಇದು ಕೃಷ್ಣೇಗೌಡರ…
ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ: ಇಬ್ಬರು ಮಹಿಳೆಯರು ಸೇರಿ 8 ಮಂದಿ ಬಂಧನ
September 27, 2018ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ 8 ಮಂದಿಯನ್ನು ಬಂಧಿಸಿ, ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಪ್ರಕರಣ 1: ಕನಕದಾಸನಗರದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಯ ಮೇಲೆ ಸೆ.17ರಂದು ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಮಹಿಳೆ ಸೇರಿದಂತೆ 5 ಮಂದಿ ಯನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೀನಾಗುಂದ ನಿವಾಸಿ ವಿಶ್ವನಾಥ್(29), ಕಾಸರವಳ್ಳಿ ನಿವಾಸಿ ಸುರೇಶ್(40), ವೇಶ್ಯಾವಾಟಿಕೆ ನಡೆಸುತ್ತಿದ್ದ ಮೈಸೂರು ಕನಕದಾಸನಗರದ…
ಬೆಂಗಳೂರು: ಸೆ.29, 30ಕ್ಕೆ ಕರ್ನಾಟಕ ಸರ್ಕಾರದಿಂದ ಉದ್ಯೋಗ ಮೇಳ
September 27, 2018ಬೆಂಗಳೂರು: ಮೇಳ ಹಮ್ಮಿ ಕೊಳ್ಳಲಾಗಿದೆ. ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಈ ಉದ್ಯೋಗ ಮೇಳ ನಡೆಯಲಿದ್ದು ಜನತಾ ದರ್ಶನದ ಸಮಯದಲ್ಲಿ ಉದ್ಯೋಗ ಕ್ಕಾಗಿ ಮನವಿ ಮಾಡಿರುವವರು ಇದರಲ್ಲಿ ಭಾಗವಹಿಸಬಹುದು ಎಂದು ಕರ್ನಾಟಕ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ಸೆ.29, 30ರಂದು ಉದ್ಯೋಗ ಮೇಳ; ಜನತಾದರ್ಶನ ಅರ್ಜಿದಾರರು ಭಾಗವಹಿಸಲು ಮನವಿ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 29 ಹಾಗೂ 30 ರಂದು ಉದ್ಯೋಗ ಮೇಳ ಏರ್ಪಡಿಸಲಾಗಿದ್ದು, ರಾಜ್ಯದ ವಿವಿಧ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ ಎಂದು…
ಶಾಶ್ವತ ನೆಲೆ ಕಲ್ಪಿಸುವವರೆಗೆ ಕೊಡಗಿನ ನೆರೆ ಸಂತ್ರಸ್ತರಿಗೆ ಮಾಸಿಕ 10 ಸಾವಿರ ರೂ. ಧನಸಹಾಯ
September 26, 2018ಬೆಂಗಳೂರು: ಭಾರೀ ಮಳೆ, ನೆರೆಯಿಂದ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡಗು ನೆರೆ ಸಂತ್ರಸ್ತ ಪ್ರತಿ ಕುಟುಂಬಕ್ಕೆ ನಿರ್ವಹಣೆಗಾಗಿ ಮಾಸಿಕ ಹತ್ತು ಸಾವಿರ ರೂ.ಗಳನ್ನು ನೀಡುವುದಾಗಿ ಸರ್ಕಾರ ಇಂದಿಲ್ಲಿ ಪ್ರಕಟಿಸಿದೆ. ರಾಜ್ಯ ಸರ್ಕಾರ ಅವರಿಗೆ ಶಾಶ್ವತ ಸೂರು ಕಲ್ಪಿಸುವವರೆಗೂ ಈ ಮಾಸಿಕ ಧನಸಹಾಯ ಲಭ್ಯವಾಗಲಿದೆ ಎಂದು ವಸತಿ ಸಚಿವ ಯು.ಟಿ. ಖಾದರ್ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 800 ರಿಂದ 900 ಕುಟುಂಬಗಳು ಸೂರು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರಿಗೆ ಮನೆ ನಿರ್ಮಾಣ ಮಾಡಿಕೊಡುವವರೆಗೂ ಅವರು ವಸತಿ ಹಾಗೂ…
ಎಲ್ಲದಕ್ಕೂ ಕಡ್ಡಾಯವಾಗುತ್ತಾ ಆಧಾರ್?: ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
September 26, 2018ನವದೆಹಲಿ: ವಿಶಿಷ್ಟ ಗುರುತಿನ ಸಂಖ್ಯೆ(ಆಧಾರ್)ಯ ಸಾಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ಪ್ರಕಟಿಸ ಲಿದೆ. ದೇಶದ ಏಕೈಕ ಬಯೋಮೆಟ್ರಿಕ್ ರಾಷ್ಟ್ರೀಯ ಗುರುತಿನ ಚೀಟಿಯ ಸಾಂವಿ ಧಾನಿಕ ಮಾನ್ಯತೆ ಪ್ರಶ್ನಿಸಿ ದೇಶಾದ್ಯಂತ ಹಲವಾರು ಅರ್ಜಿಗಳು ಸರ್ವೋಚ್ಚ ನ್ಯಾಯಾ ಲಯಕ್ಕೆ ಸಲ್ಲಿಸಲಾಗಿತ್ತು. 38 ದಿನಗಳ ಕಾಲ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿ ಸಿದ್ದು, ನಾಳೆ ಪ್ರಕಟಿಸಲಿದೆ. ಸುಪ್ರೀಂ ಕೋರ್ಟ್ ಈ…
ಚುನಾವಣೆಯಲ್ಲಿ ಕಳಂಕಿತರ ಸ್ಪರ್ಧೆ ನಿರ್ಬಂಧಿಸಲಾಗದು: ಬೇಕಿದ್ದರೆ ಸಂಸತ್ತಿನಲ್ಲಿ ನೀವೇ ಕಾನೂನು ರೂಪಿಸಿ ಎಂದ ‘ಸುಪ್ರೀಂ’
September 26, 2018ನವದೆಹಲಿ: ಚುನಾವಣೆಗಳಲ್ಲಿ ಕಳಂಕಿತ ರಾಜಕಾರಣಿಗಳ ಸ್ಪರ್ಧೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ತೀರ್ಪು ನೀಡಿದ್ದಾರೆ. ದೋಷಾರೋಪ ಎದುರಿಸುತ್ತಿರುವವರ ಸ್ಪರ್ಧೆಗೆ ನಿರ್ಬಂಧ ಹೇರಬೇಕು ಮತ್ತು ಅಂತಹ ಅಭ್ಯರ್ಥಿಗಳನ್ನು ಅನರ್ಹಗೊಳಿಸ ಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ದೀಪಕ್ ಮಿಶ್ರಾ ಅವರು ತೀರ್ಪು ನೀಡಿದ್ದು ಚಾರ್ಜ್ ಶೀಟ್ ಆಧರಿಸಿ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕಳಂಕಿತ ರಾಜಕಾರಣಿಗಳ ಸ್ಪರ್ಧೆ ಕುರಿತಂತೆ ಸಂಸತ್‍ನಲ್ಲಿ ನಿರ್ಧಾರ ಕೈಗೊಳ್ಳಬೇಕು. ಈ ಕುರಿತು ಕಾನೂನು ರೂಪಿಸಬೇಕು. ಇನ್ನು ಜನರೇ ರಾಜಕಾರಣಿ…