ಚುನಾವಣೆಯಲ್ಲಿ ಕಳಂಕಿತರ ಸ್ಪರ್ಧೆ ನಿರ್ಬಂಧಿಸಲಾಗದು: ಬೇಕಿದ್ದರೆ ಸಂಸತ್ತಿನಲ್ಲಿ  ನೀವೇ ಕಾನೂನು ರೂಪಿಸಿ ಎಂದ ‘ಸುಪ್ರೀಂ’
ಮೈಸೂರು

ಚುನಾವಣೆಯಲ್ಲಿ ಕಳಂಕಿತರ ಸ್ಪರ್ಧೆ ನಿರ್ಬಂಧಿಸಲಾಗದು: ಬೇಕಿದ್ದರೆ ಸಂಸತ್ತಿನಲ್ಲಿ ನೀವೇ ಕಾನೂನು ರೂಪಿಸಿ ಎಂದ ‘ಸುಪ್ರೀಂ’

September 26, 2018

ನವದೆಹಲಿ: ಚುನಾವಣೆಗಳಲ್ಲಿ ಕಳಂಕಿತ ರಾಜಕಾರಣಿಗಳ ಸ್ಪರ್ಧೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ತೀರ್ಪು ನೀಡಿದ್ದಾರೆ.

ದೋಷಾರೋಪ ಎದುರಿಸುತ್ತಿರುವವರ ಸ್ಪರ್ಧೆಗೆ ನಿರ್ಬಂಧ ಹೇರಬೇಕು ಮತ್ತು ಅಂತಹ ಅಭ್ಯರ್ಥಿಗಳನ್ನು ಅನರ್ಹಗೊಳಿಸ ಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ದೀಪಕ್ ಮಿಶ್ರಾ ಅವರು ತೀರ್ಪು ನೀಡಿದ್ದು ಚಾರ್ಜ್ ಶೀಟ್ ಆಧರಿಸಿ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕಳಂಕಿತ ರಾಜಕಾರಣಿಗಳ ಸ್ಪರ್ಧೆ ಕುರಿತಂತೆ ಸಂಸತ್‍ನಲ್ಲಿ ನಿರ್ಧಾರ ಕೈಗೊಳ್ಳಬೇಕು. ಈ ಕುರಿತು ಕಾನೂನು ರೂಪಿಸಬೇಕು. ಇನ್ನು ಜನರೇ ರಾಜಕಾರಣಿ ಗಳ ಹಣೆಬರಹ ನಿರ್ಧರಿಸಬೇಕು. ಕಳಂಕ ರಹಿತ ಅಭ್ಯರ್ಥಿಗಳನ್ನು ಚುನಾಯಿಸುವ ಅಧಿಕಾರ ಮತದಾರರಿಗಿರುವುದರಿಂದ ಅವರೇ ಉತ್ತಮ ಅಭ್ಯರ್ಥಿಗಳನ್ನು ಗೆಲ್ಲಿಸ ಬೇಕು ಎಂದು ಹೇಳಿದರು. ಇನ್ನು ಕಳಂಕಿತ ರಾಜಕೀಯ ನಾಯಕರು ಚುನಾವಣೆ ಯಲ್ಲಿ ಸ್ಪರ್ಧಿಸುವ ಮುನ್ನ ತಮ್ಮ ಕ್ರಿಮಿ ನಲ್ ಪ್ರಕರಣಗಳನ್ನು ಘೋಷಿಸಬೇಕು. ಮತದಾರರಿಗೆ ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ಕೇಸ್‍ಗಳ ಕುರಿತು ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಬೇಕು ಎಂದರು. ಭ್ರಷ್ಟಾಚಾರ ಒಂದು ರಾಷ್ಟ್ರೀಯ ಆರ್ಥಿಕ ಭಯೋತ್ಪಾದನೆಯಾಗಿದೆ. ಇದನ್ನು ಮಟ್ಟ ಹಾಕುವುದು ಮತದಾರರ ಕೈಯಲ್ಲಿದೆ.

Translate »