ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ 8 ಮಂದಿಯನ್ನು ಬಂಧಿಸಿ, ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಪ್ರಕರಣ 1: ಕನಕದಾಸನಗರದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಯ ಮೇಲೆ ಸೆ.17ರಂದು ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಮಹಿಳೆ ಸೇರಿದಂತೆ 5 ಮಂದಿ ಯನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೀನಾಗುಂದ ನಿವಾಸಿ ವಿಶ್ವನಾಥ್(29), ಕಾಸರವಳ್ಳಿ ನಿವಾಸಿ ಸುರೇಶ್(40), ವೇಶ್ಯಾವಾಟಿಕೆ ನಡೆಸುತ್ತಿದ್ದ ಮೈಸೂರು ಕನಕದಾಸನಗರದ ಲಕ್ಷ್ಮಿ(40), ಶಾಂತಿನಗರದ ಸೈಯದ್ ತೌಸೀಫ್(28), ಅಜೀಜ್‍ಸೇಠ್‍ನಗರದ ಜಾಫರ್ ಷರೀಫ್(28) ಬಂಧಿತರು. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಮತ್ತೊಂದು ಪ್ರಕರಣ: ರೈಲ್ವೆ ಬಡಾವಣೆ ಮನೆಯೊಂದರ ಮೇಲೆ ಸೆ.25 ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಮೈಸೂರು ವಿದ್ಯಾರಣ್ಯ ಪುರಂ ನಿವಾಸಿ ಗೀತಾ (30), ನಗರ್ತಹಳ್ಳಿಯ ಕೃಷ್ಣನಾಯ್ಕ(25), ಶಿವರಾಜ್(23) ಬಂಧಿತರು. ಬಂಧಿತರಿಂದ 1900 ರೂ. ನಗದು, ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಹಣ ಸಂಪಾದನೆ ಮಾಡಬೇಕೆಂಬ ದುರಾಸೆಯಿಂದ ಲಕ್ಷ್ಮಿ ಮತ್ತು ಯಶವಂತ್ ಎಂಬುವವರು ಮನೆಯೊಂದನ್ನು ಬಾಡಿಗೆಗೆÀ ಪಡೆದು ಗೀತಾಳ ಮೂಲಕ ಹುಡುಗಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.