ವೇಶ್ಯಾವಾಟಿಕೆ ನಡೆಸುತ್ತಿದ್ದ ಬ್ಯೂಟಿ ಪಾರ್ಲರ್‌ಗೆ ಕಲ್ಲು ತೂರಾಟ
ಮೈಸೂರು

ವೇಶ್ಯಾವಾಟಿಕೆ ನಡೆಸುತ್ತಿದ್ದ ಬ್ಯೂಟಿ ಪಾರ್ಲರ್‌ಗೆ ಕಲ್ಲು ತೂರಾಟ

August 2, 2018

ಮೈಸೂರು: ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತೆಂಬ ಆರೋಪದ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದ ಮೈಸೂರಿನ ಹೂಟಗಳ್ಳಿಯಲ್ಲಿರುವ ಬ್ಯೂಟಿ ಪಾರ್ಲರ್‌ಗೆ ರೊಚ್ಚಿಗೆದ್ದ ಸಾರ್ವಜನಿಕರು ಮಂಗಳವಾರ ರಾತ್ರಿ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.

ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾ ವಾಟಿಕೆ ನಡೆಸಿ ಸಿಕ್ಕಿಬಿದ್ದು, ಬಡಾವಣೆಗೆ ಕಳಂಕ ತರಲಾಗಿದೆ ಎಂದು ಆರೋಪಿಸಿದ ಕೆಲವರು ಅಲ್ಲಿನ ಐಶ್ವರ್ಯ ಬ್ಯೂಟಿ ಸಲೂನ್ ಗಾಜುಗಳನ್ನು ಹೊಡೆದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿಜಯನಗರ ಠಾಣೆ ಗರುಡ ಪೊಲೀಸರು ಮಹಜರು ಮಾಡಿದರು. ಆ ವೇಳೆ ಸ್ಥಳೀಯರು ಸುತ್ತುವರೆದು ಇಂತಹ ಬ್ಯೂಟಿ ಪಾರ್ಲರ್‌ಗಳ ಮೇಲೆ ನಿಗಾ ಇರಿಸದ ಕಾರಣ ವೇಶ್ಯಾವಾಟಿಕೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. ಆದರೆ ಬ್ಯೂಟಿ ಪಾರ್ಲರ್‌ಗೆ ಕಲು ತೂರಿದವರಾರು ಎಂಬುದು ತಿಳಿದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »