ಉದ್ದೇಶಿತ ಕೆರೆಗಳಿಗೆ ನೀರು ಹರಿಸಲು ಕ್ರಮ
ಚಾಮರಾಜನಗರ

ಉದ್ದೇಶಿತ ಕೆರೆಗಳಿಗೆ ನೀರು ಹರಿಸಲು ಕ್ರಮ

August 2, 2018

ಗುಂಡ್ಲುಪೇಟೆ:  ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಹಂತಹಂತವಾಗಿ ಉದ್ದೇಶಿತ ಎಲ್ಲಾ ಕೆರೆ ಗಳಿಗೂ ಕಬಿನಿ ನದಿ ಮೂಲದಿಂದ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೇಳಿದರು.

ಪಟ್ಟಣದ ಸಿ.ಎಂ.ಎಸ್.ಕಲಾಮಂದಿರ ದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕ ರಸಿ ಮಾತನಾಡಿ, ಈಗಾಗಲೇ ಬೆಳಚಲವಾಡಿ ಕೆರೆಗೆ ನೀರು ಹರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಮರಹಳ್ಳಿ ಸೇರಿದಂತೆ ಹಂತಹಂತವಾಗಿ ಉದ್ದೇಶಿತ ಎಲ್ಲಾ ಕೆರೆಗಳಿಗೂ ಕಬಿನಿ ನದಿ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನು ದಾನ ನೀಡದಿದ್ದರೂ ತಾವು ಕ್ಷೇತ್ರದಲ್ಲಿ ಸಂಚರಿಸಿ ಅಧಿಕಾರಿಗಳ ಸಭೆ ನಡೆಸಿ ಮೂಲ ಸೌಕರ್ಯಗಳ ಕೊರತೆ ನಿವಾರಣೆಗೆ ಶ್ರಮಿಸುತ್ತಿದ್ದೇನೆ. ಪಟ್ಟಣಕ್ಕೆ ಸರಬರಾಜಾಗುವ ನದಿ ನೀರನ್ನು ಮಾರ್ಗದ 34 ಹಳ್ಳಿಗಳಿಗೂ ಸರಬರಾಜು ಮಾಡುತ್ತಿರುವುದರಿಂದ ನೀರಿನ ಕೊರತೆಯಾಗುತ್ತಿದೆ. ಈ ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಲ್ಲಿ ನೀರು ಸರಬರಾಜು ಮಾಡುವ ಮೂಲಕ ಪಟ್ಟಣಕ್ಕೆ ಇನ್ನೂ ಹೆಚ್ಚಿನ ನೀರು ಪೂರೈಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಹಂಗಳದಲ್ಲಿ ನೀರಿನ ಸಂಗ್ರಹ ತೊಟ್ಟಿ ನಿರ್ಮಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಾಲಿಡಲೂ ಸಾಧ್ಯ ವಾಗದಂತಹ ರಸ್ತೆಗಳಿರುವ ಗ್ರಾಮಗಳಿಗೆ ಉತ್ತಮ ರಸ್ತೆ ನಿರ್ಮಾಣ ಮಾಡ ಲಾಗುವುದು ಎಂದರು.

ಶಾಸಕ ಎ.ರಾಮದಾಸ್ ಮಾತನಾಡಿ, ರಾಜ್ಯದ ಸಮ್ಮಿಶ್ರ ಸರ್ಕಾರವು ಅಧಿಕಾರಕ್ಕೆ ಬಂದು ಬಜೆಟ್ ಮಂಡಿಸಿದ್ದರೂ ಸಹ ವಿಧಾನಸಭಾ ಸದಸ್ಯರಿಗೆ ಇನ್ನೂ ಯಾವುದೇ ಅನುದಾನ ನೀಡದ ಪರಿಣಾಮ ಹೊಸ ದಾಗಿ ಯಾವುದೇ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳಲಾಗುತ್ತಿಲ್ಲ.

ಕೇವಲ ಅಧಿಕಾರ ಹಿಡಿಯಲು ಮೈತ್ರಿ ಮಾಡಿಕೊಂಡು ರಚನೆಯಾದ ಸಮ್ಮಿಶ್ರ ಸರ್ಕಾರವು ಗೊಂದಲದಗೂಡಾಗಿದ್ದು ಇನ್ನೂ ಟೇಕಾಫ್ ಆಗಿಲ್ಲ. ಸರ್ಕಾರ ಬಜೆಟ್ ಮಂಡಿಸಿದರೂ ಇನ್ನೂ ಅನುದಾನ ನೀಡಿಲ್ಲದಿರುವುದರಿಂದ ಹಿಂದೆ ಇದ್ದ ಶಾಸಕರು ಬಳಕೆ ಮಾಡದ ಹಣವನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕಾಗಿದ್ದು, ಇದರಿಂದ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದರು.

ಸಾರಿಗೆ ಇಲಾಖೆಯಲ್ಲಿ ನಿವೃತ್ತರಾಗುವ ನೌಕರರಿಗೆ ಕೊಡಲು ಹಣವಿಲ್ಲವಾಗಿದ್ದು, ಅವರ ಸೇವೆಯನ್ನು ಇನ್ನೂ ಎರಡು ವರ್ಷ ಮುಂದುವರೆಸುವ ಚಿಂತನೆಯಲ್ಲಿ ಸರ್ಕಾರ ಇದೆ. ಪ್ರತಿನಿತ್ಯ ಬಳಕೆಯ ವಸ್ತುಗಳ ಮೇಲೆ ತೆರಿಗೆ ಹಾಕುತ್ತಿದೆ. ಇದರಿಂದ ಬೇಸತ್ತ ಜನರಲ್ಲಿ ಈ ಸರ್ಕಾರ ಯಾವಾಗ ಬೀಳು ತ್ತದೋ ಎಂಬ ಭಾವನೆಯುಂಟಾಗಿದ್ದು, ವ್ಯಾಪಕ ಚರ್ಚೆ ನಡೆಯುತ್ತಿದೆ ಎಂದರು.

ನೂತನ ಮಂಡಲಾಧ್ಯಕ್ಷರಾಗಿ ಎನ್. ಮಲ್ಲೇಶ್ ಪದಗ್ರಹಣ: ಪಟ್ಟಣದ ಹಿರಿಯ ಮುಖಂಡ ಎನ್.ಮಲ್ಲೇಶ್ ಅವರಿಗೆ ಪಕ್ಷದ ಬಾವುಟ ಹಸ್ತಾಂತರಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿ ಕಾರ್ಜುನಪ್ಪ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿ ರುವ ಉಜ್ವಲ್, ಜನಧನ್, ಇಂದ್ರಧನುಷ್, ಫಸಲುಬೀಮಾ ಮುಂತಾದ ಯೋಜನೆ ಗಳ ಬಗ್ಗೆ ಮನೆಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡುವ ಮೂಲಕ ಕಾರ್ಯ ಕರ್ತರು ಮುಂದಿನ ಪುರಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತ ದೊರಕುವಂತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮೈಸೂರಿನ ಶಾಸಕ ನಾಗೇಂದ್ರ, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನ, ಮೈಸೂರು ಬ್ಯಾಂಕ್ ನಿರ್ದೇಶಕ ಎಂ.ಪಿ.ಸುನಿಲ್, ತಾಲೂಕು ಪಂಚಾಯಿತಿ ಸದಸ್ಯರಾದ ಪ್ರಭಾಕರ್, ಆರ್.ಮಹೇಶ್, ಮುಖಂಡರಾದ ಸಿ.ಎಂ. ಶಿವಮಲ್ಲಪ್ಪ, ಎಂ.ಪುಟ್ಟರಂಗನಾಯಕ್, ಕೆ.ಆರ್.ಲೋಕೇಶ್, ಆಲತ್ತೂರು ರಾಜೇಶ್, ರಾಜ್ಯ ಸಮಿತಿ ಸದಸ್ಯರಾದ ಸಿ.ಹುಚ್ಚೇಗೌಡ, ಕೊಡಸೋಗೆ ಸಿದ್ದರಾಮಪ್ಪ, ಯುವ ಮುಖಂಡರಾದ ಕಿರಣ್‍ಗೌಡ, ಸತೀಶ್, ಎಲ್.ಮಣಿಕಾಂತ್, ಎಸ್.ಸಿ.ಮಂಜು ನಾಥ್, ಮಡಳ್ಳಿರಾಜಪ್ಪ, ದೊಡ್ಡಹುಂಡಿ ಜಗದೀಶ್, ನಂಜುಂಡ ಸ್ವಾಮಿ (ಮಾಲಿ) ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿ ಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Translate »