ಮೈಸೂರು: ಮೈಸೂರಿನ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಆ.2ರಿಂದ 4 ದಿನಗಳ `ಯೋಗ ಜೀವನ ದರ್ಶನ’ ಶಿಬಿರ ಆಯೋಜಿಸಿದೆ. ಮೈಸೂರಿನ ಬೋಗಾದಿ ಜಂಕ್ಷನ್ ಜಿಎಲ್‍ಎನ್ ಕಲ್ಯಾಣ ಮಂಟಪದಲ್ಲಿ ನಡೆಯುವ ಶಿಬಿರದಲ್ಲಿ ಪ್ರಾಥಮಿಕ, ಯುವ ಪ್ರಾಥಮಿಕ, ಮಾತೆಯರ ಪ್ರಾಥ ಮಿಕ ಹಾಗೂ ಹಿರಿಯ ನಾಗರಿಕರ ಪ್ರಾಥ ಮಿಕ ಹೀಗೆ 4ವಿಭಾಗಗಳಲ್ಲಿ ಜಿಲ್ಲಾ ಮಟ್ಟದ ಯೋಗ ಪ್ರಶಿಕ್ಷಣ ಶಿಬಿರಗಳು ನಡೆಯಲಿವೆ ಎಂದು ಪ್ರಚಾರ ಪ್ರಮುಖ ಎನ್.ಎಸ್.ಸತ್ಯನಾರಾಯಣ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆ.2ರಂದು ಸಂಜೆ 6 ಗಂಟೆಗೆ ಶಿಬಿರ ಉದ್ಘಾಟನೆ ನೆರವೇರಲಿದ್ದು, ಡಿಸಿ ಅಭಿರಾಂ ಜಿ.ಶಂಕರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಶಿಬಿರದಲ್ಲಿ 500 ಮಂದಿ ಭಾಗವಹಿಸಲಿದ್ದಾರೆ. ಪ್ರತಿ ದಿನ ಮುಂಜಾನೆ 5 ಗಂಟೆಗೆ ಶಿಬಿರ ಆರಂಭವಾಗಿ, ಸಂಜೆ 6 ಗಂಟೆವರೆಗೂ ನಡೆಯಲಿದೆ. ಪ್ರಾರ್ಥನೆ, ಯೋಗಾಭ್ಯಾಸ, ಯೋಗ ಶಿಕ್ಷಣ ವಿಧಿ, ಪ್ರಾಣಾಯಾಮ, ಸಂಜೆ ಸತ್ಸಂಗಗಳು ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಕಾಳಾಜಿ, ನಾಗಭೂಷಣ್, ಶಾಮಣ್ಣ, ಪುಟ್ಟಸ್ವಾಮಿ ಉಪಸ್ಥಿತರಿದ್ದರು.