ಪ್ರತ್ಯೇಕ ರಾಜ್ಯ ದನಿ ಅಕ್ಷಮ್ಯ  ಅಪರಾಧ: ವಿ.ಎಸ್.ಉಗ್ರಪ್ಪ
ಮೈಸೂರು

ಪ್ರತ್ಯೇಕ ರಾಜ್ಯ ದನಿ ಅಕ್ಷಮ್ಯ  ಅಪರಾಧ: ವಿ.ಎಸ್.ಉಗ್ರಪ್ಪ

August 2, 2018

ಮೈಸೂರು: ಅಖಂಡ ಕರ್ನಾಟಕದ ಅರಿವಿಲ್ಲದ ಕೆಲವರು ರಾಜಕೀಯ ಕ್ಕೋಸ್ಕರ ಪ್ರತ್ಯೇಕ ರಾಜ್ಯಕ್ಕಾಗಿ ದನಿ ಎತ್ತುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧ. ರಾಜಕಾರಣಕ್ಕಾಗಿ ರಾಜ್ಯ ವನ್ನು ಇಬ್ಭಾಗಿಸುವ ಕೆಲಸ ಮಾಡಬಾರದು ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಅಖಂಡ ಕರ್ನಾಟಕ ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಅದನ್ನು ಕಟ್ಟುವಲ್ಲಿ ಅನೇಕರ ಪರಿಶ್ರಮ, ತ್ಯಾಗ ಬಲಿದಾನಗಳಿವೆ. ಅಖಂಡ ಕರ್ನಾಟಕದ ಅರಿವಿಲ್ಲದ ಕೆಲವರು ರಾಜಕಾರಣಕ್ಕೋಸ್ಕರ ಪ್ರತ್ಯೇಕ ರಾಜ್ಯಕ್ಕಾಗಿ ಕೂಗು ಎತ್ತುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧ. ಹೀಗಾಗಿ ಯಾರೂ ಇದನ್ನು ಒಪ್ಪಲು ಸಾಧ್ಯವಿಲ್ಲ. ಅಖಂಡ ಕರ್ನಾಟಕದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಬಿಜೆಪಿಯ ಕೆಲವರು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ವಿಚಾರವನ್ನು ಬಳಸಿಕೊಳ್ಳುತ್ತಿ ದ್ದಾರೆ. ಕೇವಲ ಇಂತಹ ವಿಷಯಗಳಿಗೆ ದನಿಯೆತ್ತುವ ಬಿಜೆಪಿಯವರು ಮಹದಾಯಿ ವಿಚಾರವಾಗಿ ಏಕೆ ಮಾತನಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಜನರೇ ಬುದ್ಧಿ ಕಲಿಸುತ್ತಾರೆ ಎಂದ ಅವರು, ಪಕ್ಷಾತೀತವಾಗಿ ಕೆಲಸ ಮಾಡಿದಾಗ ಮಾತ್ರ ಸಮಗ್ರ ಕರ್ನಾಟಕ ಅಭಿವೃದ್ಧಿ ಯಾಗುತ್ತದೆ. ಅದನ್ನು ಬಿಟ್ಟು ಒಬ್ಬರ ಮೇಲೊಬ್ಬರು ಕೆಸರೆರಚಾಡುವುದು ಕೇವಲ ಓಟ್‍ಬ್ಯಾಂಕ್ ಪ್ರವೃತ್ತಿಯಾಗುತ್ತದೆ. ಹೀಗಾಗಿ ರಾಜಕೀಯಕ್ಕಾಗಿ ಈ ರೀತಿಯ ರಾಜ್ಯದ ಇಬ್ಭಾಗದ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

Translate »