ದರ ಕಡಿತದ ನಂತರ ಶತಾಬ್ಧಿ ರೈಲು  ಪ್ರಯಾಣಿಕರ ಸಂಖ್ಯೆ, ಆದಾಯ ಹೆಚ್ಚಳ
ಮೈಸೂರು

ದರ ಕಡಿತದ ನಂತರ ಶತಾಬ್ಧಿ ರೈಲು  ಪ್ರಯಾಣಿಕರ ಸಂಖ್ಯೆ, ಆದಾಯ ಹೆಚ್ಚಳ

August 2, 2018

ಮೈಸೂರು: ರಿಯಾಯಿತಿ ದರ ಜಾರಿಗೆ ಬಂದ ನಂತರ ಮೈಸೂರು-ಚೆನ್ನೈ ನಡುವೆ ಸಂಚರಿಸುವ ಶತಾಬ್ಧಿ ಎಕ್ಸ್‍ಪ್ರೆಸ್‍ನ ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆದಾ ಯವೂ ಅಧಿಕವಾಗಿದೆ.

ಮೈಸೂರು-ಬೆಂಗಳೂರು ನಡುವಿನ ದರ ಕಡಿಮೆ ಮಾಡಿ ದ್ದರ ಪರಿಣಾಮ 2017ರಲ್ಲಿ ಶತಾಬ್ಧಿ ರೈಲಿನ ಆದಾಯ ಅದರ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. 2016ರ ಅಕ್ಟೋಬರ್‍ನಲ್ಲಿ ಎಸಿ-3 (ಚೇರ್‍ಕಾರ್) ಮೈಸೂರು- ಬೆಂಗಳೂರು ನಡುವೆ ಪ್ರಯಾಣ ದರವನ್ನು 490ರೂ. ಗಳಿಂದ 260ರೂಗಳಿಗೆ ಇಳಿಸಲಾಗಿತ್ತು. ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಸುಖಕರವಾಗಿ ಕೈಗೆಟುಕುವ ದರದಲ್ಲಿ ಪ್ರಯಾಣಿಸಲು ಅನುಕೂಲ ಕಲ್ಪಿಸಿದಲ್ಲಿ ಸಾರ್ವಜನಿಕರು ರೈಲು ಪ್ರಯಾಣದತ್ತ ಆಸಕ್ತಿ ತೋರುವ ಜತೆಗೆ ರೈಲ್ವೆ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗುವುದಲ್ಲದೆ ವಿಶ್ವಾಸ ಮೂಡುತ್ತದೆ ಎಂಬುದು ರೈಲ್ವೆ ಇಲಾಖೆ ಅಧಿಕಾರಿಗಳ ನಂಬಿಕೆ.

ಬೆಂಗಳೂರು-ಮೈಸೂರು ನಡುವಿನ ಶತಾಬ್ಧಿ ರೈಲಿನ ಈ ಯಶಸ್ಸಿನಿಂದ ಪ್ರೇರೇ ಪಿತವಾಗಿರುವ ರೈಲ್ವೆ ಮಂಡಳಿ ದೇಶದ ಇತರ ರೈಲ್ವೆ ವಿಭಾಗಗಳೂ ಸಹ ಇದೇ ಮಾದರಿ ವ್ಯವಸ್ಥೆ ಅನುಸರಿಸುವಂತೆ ನಿರ್ದೇಶನ ನೀಡಿದೆ ಎಂದು ಹೇಳಲಾಗಿದೆ.

ಮೈಸೂರು-ಚೆನ್ನೈ ನಡುವೆ ಸಂಚರಿಸುವ ಶತಾಬ್ಧಿ ರೈಲಿನಲ್ಲಿ(ಖಿಡಿಚಿiಟಿ ಓo.12008/ 12007) ಮೈಸೂರು-ಬೆಂಗಳೂರು ನಡುವೆ ದರದಲ್ಲಿ ಕಡಿತ ಮಾಡುವ ಮುನ್ನ (2016ರ ಜನವರಿಯಿಂದ ಡಿಸೆಂಬರ್‍ವರೆಗೆ) 4,598 ಲಕ್ಷ ರೂ. ಆದಾಯ ಬಂದಿತ್ತು. ನಂತರ 2017ರ ಜನವರಿಯಿಂದ ಡಿಸೆಂಬರ್‍ವರೆಗೆ 5,129.66 ಲಕ್ಷ ರೂ. ಆದಾಯ ಬಂದಂತಾಗಿದ್ದು, ರಿಯಾಯಿತಿ ನೀಡಿದಾಗಲೂ ರೈಲ್ವೆ ಇಲಾಖೆಗೆ ಅದರಿಂದ ಆದಾಯ ಹೆಚ್ಚಾಗಿರುವುದನ್ನು ಇಲ್ಲಿ ಗಮನಿಸಬಹುದು.

Translate »