ದೂರ ಕ್ರಮಿಸುವ ರೈಲುಗಳಿಗೆ ಟ್ರೈನ್ ಕ್ಯಾಪ್ಟನ್ ನೇಮಕ
ಮೈಸೂರು

ದೂರ ಕ್ರಮಿಸುವ ರೈಲುಗಳಿಗೆ ಟ್ರೈನ್ ಕ್ಯಾಪ್ಟನ್ ನೇಮಕ

July 14, 2018

ಮೈಸೂರು: ಅತೀ ದೂರ ಸಂಚರಿಸುವ ಎಕ್ಸ್‍ಪ್ರೆಸ್ ರೈಲು ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಟ್ರೈನ್ ಕ್ಯಾಪ್ಟನ್‍ಗಳನ್ನು ನೇಮಿಸಲಾಗಿದೆ.

2018ರ ಜುಲೈ6ರಿಂದ ಟ್ರೈನ್ ಕ್ಯಾಪ್ಟನ್ ಪರಿಕಲ್ಪನೆಯನ್ನು ಪರಿಚಯಿಸಿದ್ದು, ಮೈಸೂರು -ನಿಜಾಮುದ್ದೀನ್ ಸ್ವರ್ಣ ಜಯಂತಿ ಸೂಪರ್ ಫಾಸ್ಟ್ ವಾರದ ಎಕ್ಸ್‍ಪ್ರೆಸ್ ಪ್ರಥಮವಾಗಿ ಜಾರಿಗೊಳಿಸಿದ ರೈಲಾಗಿದೆ.

ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಆಪರೇ ಷನ್ಸ್, ಭದ್ರತೆ, ಕೇಟರಿಂಗ್, ಹೌಸ್ ಕೀಪಿಂಗ್ ಸೇವಾ ಸಿಬ್ಬಂದಿಯೊಂದಿಗೆ ಸಹಕರಿಸಿ ರೈಲು ಪ್ರಯಾಣದ ಅವಧಿಯಲ್ಲಿ ದೂರು, ಪ್ರಯಾಣಿಕರ ಕುಂದು-ಕೊರತೆಗಳನ್ನು ವಿಚಾರಿಸಿ ಸಮಸ್ಯೆ ಪರಿಹರಿಸಲು ಟ್ರೈನ್ ಕ್ಯಾಪ್ಟನ್ ಕಾರ್ಯ ನಿರ್ವಹಿಸುವರು ಎಂದು ಮೈಸೂರು ರೈಲ್ವೆ ವಿಭಾಗದ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ತಿಳಿಸಿದ್ದಾರೆ.

ವಾರಕ್ಕೊಮ್ಮೆ ಸಂಚರಿಸುವ ಮೈಸೂರು -ದಾದರ್ ಶರಾವತಿ ಎಕ್ಸ್‍ಪ್ರೆಸ್ ಮತ್ತು ವಾರಕ್ಕೆರಡು ಬಾರಿ ಸಂಚರಿಸುವ ಮೈಸೂರು ಅಜ್ಮೀರ್ ಎಕ್ಸ್‍ಪ್ರೆಸ್‍ಗಳಲ್ಲೂ ಸಹ ಟ್ರೈನ್ ಕ್ಯಾಪ್ಟನ್‍ಗಳನ್ನು ನಿಯೋಜಿಸಲಾಗಿದೆ ಎಂದೂ ಅವರು ತಿಳಿಸಿದರು.

ಟ್ರೈನ್ ಕ್ಯಾಪ್ಟನ್‍ಗಳು ವಿಶೇಷ ಬ್ಯಾಡ್ಜ್ ಹೊಂದಿದ್ದು, ಮೊಬೈಲ್‍ನಿಂದ ರೈಲಿ ನಲ್ಲಿರುವ ಸಿಬ್ಬಂದಿಗಳೊಂದಿಗೆ ಸಂಪರ್ಕ ದಲ್ಲಿದ್ದು, ಪ್ರಯಾಣಿಕರಿಗೆ ಸಮಸ್ಯೆ ಯಾದಲ್ಲಿ ತಕ್ಷಣ ಧಾವಿಸಿ ಪರಿಹರಿಸು ತ್ತಾರೆ ಎಂದೂ ತಿಳಿಸಿದ್ದಾರೆ.

Translate »