ಬೆಂಗಳೂರು: ಸೆ.29, 30ಕ್ಕೆ ಕರ್ನಾಟಕ  ಸರ್ಕಾರದಿಂದ ಉದ್ಯೋಗ ಮೇಳ
ಮೈಸೂರು

ಬೆಂಗಳೂರು: ಸೆ.29, 30ಕ್ಕೆ ಕರ್ನಾಟಕ  ಸರ್ಕಾರದಿಂದ ಉದ್ಯೋಗ ಮೇಳ

September 27, 2018

ಬೆಂಗಳೂರು:  ಮೇಳ ಹಮ್ಮಿ ಕೊಳ್ಳಲಾಗಿದೆ. ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಈ ಉದ್ಯೋಗ ಮೇಳ ನಡೆಯಲಿದ್ದು ಜನತಾ ದರ್ಶನದ ಸಮಯದಲ್ಲಿ ಉದ್ಯೋಗ ಕ್ಕಾಗಿ ಮನವಿ ಮಾಡಿರುವವರು ಇದರಲ್ಲಿ ಭಾಗವಹಿಸಬಹುದು ಎಂದು ಕರ್ನಾಟಕ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ಸೆ.29, 30ರಂದು ಉದ್ಯೋಗ ಮೇಳ; ಜನತಾದರ್ಶನ ಅರ್ಜಿದಾರರು ಭಾಗವಹಿಸಲು ಮನವಿ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 29 ಹಾಗೂ 30 ರಂದು ಉದ್ಯೋಗ ಮೇಳ ಏರ್ಪಡಿಸಲಾಗಿದ್ದು, ರಾಜ್ಯದ ವಿವಿಧ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ ಎಂದು ಟ್ವಿಟ್ಟರ್ ಪ್ರಕಟಣೆ ತಿಳಿಸಿದೆ.

Translate »