ಎಟಿಎಂನಲ್ಲಿ ಹಣ ತೆಗೆಯಲು ನೆರವಾಗುವವನಂತೆ 1.15 ಲಕ್ಷ ವಂಚಿಸಿದ ಖದೀಮ
ಮೈಸೂರು

ಎಟಿಎಂನಲ್ಲಿ ಹಣ ತೆಗೆಯಲು ನೆರವಾಗುವವನಂತೆ 1.15 ಲಕ್ಷ ವಂಚಿಸಿದ ಖದೀಮ

September 27, 2018

ಮೈಸೂರು: ಎಟಿಎಂನಿಂದ ಹಣ ಪಡೆಯಲು ಸಹಾಯ ಮಾಡುವನಂತೆ ನಂಬಿಸಿದ ಖದೀಮನೊಬ್ಬ, ವ್ಯಕ್ತಿಯೊಬ್ಬರ ಎಟಿಎಂ ಕಾರ್ಡ್ ಬದಲಿಸಿ, 1.15 ಲಕ್ಷ ರೂ. ಡ್ರಾ ಮಾಡಿಕೊಂಡು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೃಷ್ಣೇಗೌಡ ಹಣ ಕಳೆದುಕೊಂಡವರು. ಇವರು ಸೆ.20ರಂದು ನಗರ ಬಸ್ ನಿಲ್ದಾಣದ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಕೆನರಾ ಬ್ಯಾಂಕ್ ತಮ್ಮ ಎಟಿಎಂ ಕಾರ್ಡ್ ಅನ್ನು ಬಳಸಿ, ಹಣ ಪಡೆಯುವ ಸಂದರ್ಭದಲ್ಲಿ 30 ವರ್ಷದ ಖದೀಮ, ಸಹಾಯ ಮಾಡುವಂತೆ ನಟಿಸಿ, ಕೃಷ್ಣೇಗೌಡರ ಎಟಿಎಂ ಕಾರ್ಡ್‍ನ್ನು ಬದಲಾಯಿಸಿದ್ದಾನೆ. ಇದು ಕೃಷ್ಣೇಗೌಡರ ಗಮನಕ್ಕೆ ಬಂದಿಲ್ಲ. ಸೆ.22ರಂದು ಪರಿ ಶೀಲಿಸಿದಾಗ ಖಾತೆಯಿಂದ 1.15 ಲಕ್ಷ ರೂ., ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ದೇವರಾಜ ಠಾಣೆಯಲ್ಲಿ ಪ್ರಕರಣ ತಡವಾಗಿ ದಾಖಲಾಗಿದೆ.

Translate »