ಮೈಸೂರು: ಮೈಸೂರಿನ ಕನಕ ದಾಸನಗರ(ದಟ್ಟಗಳ್ಳಿ)ದಲ್ಲಿರುವ ಕೌಟಿಲ್ಯ ವಿದ್ಯಾಲಯದ ಕ್ಯಾಂಪಸ್‍ನಲ್ಲಿ ನೂತನ ವಾಗಿ ನಿರ್ಮಿಸಿರುವ ಸುಸಜ್ಜಿತ ಈಜು ಕೊಳವನ್ನು ಕೆಎಎಸ್ ಅಧಿಕಾರಿ ಕೃಷ್ಣ ವೇಣಿ ವಿದ್ಯುಕ್ತವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಠ್ಯ ಬೋಧನೆಯ ಜೊತೆಗೆ ಮಕ್ಕಳನ್ನು ಪಠ್ಯೇ ತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗ ವಹಿಸುವಂತೆ ಪ್ರೋತ್ಸಾಹಿಸಬೇಕು. ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳು ಬೌದ್ಧಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ. ಜೊತೆಗೆ ಶೈಕ್ಷಣಿಕ ವಾಗಿಯೂ ಉತ್ತಮ ಸಾಧನೆ ಮಾಡು ತ್ತಾರೆ ಎಂದು ಅಭಿಪ್ರಾಯಿಸಿದರು. ವಿದೇಶಗಳಲ್ಲಿ ಶಾಲಾ ಮಟ್ಟದಲ್ಲೇ ಮಕ್ಕ…
ರಸ್ತೆ, ಉದ್ಯಾನವನ ದತ್ತು ನೀಡಿ ನೈರ್ಮಲ್ಯ ಕಾಪಾಡುವ ಯೋಜನೆ
September 25, 2018ಮೈಸೂರು: ರಸ್ತೆ ಬದಿ ಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದು ನಡೆ ಯುತ್ತಿದೆ. ಯಾರು ರಸ್ತೆಯಲ್ಲಿ ಕಸ ಹಾಕುತ್ತಿ ದ್ದಾರೋ ಅವರನ್ನೇ ಸ್ವಚ್ಛತಾ ಕಾರ್ಯಕ್ರಮದ ಮುಖ್ಯಸ್ಥರನ್ನಾಗಿ ಮಾಡಲು ತೀರ್ಮಾನಿಸಿ ದ್ದೇವೆ. ಆ ಮೂಲಕ ನಿಮ್ಮ ಬೀದಿ, ರಸ್ತೆ, ಬಡಾವಣೆಗಳನ್ನು ದತ್ತು ನೀಡಿ ನೈರ್ಮಲ್ಯ, ಸ್ವಚ್ಛತೆ ಕೈಗೊಳ್ಳುವ ಯೋಜನೆ ರೂಪಿಸುತ್ತಿ ದ್ದೇವೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಇಂದಿಲ್ಲಿ ತಿಳಿಸಿದರು. ಮೈಸೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮೈಸೂರಿನ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ…
ಗಾಂಧಿ ಜಯಂತಿ ಅಂಗವಾಗಿ ಅ.6ರಂದು ನಂಜನಗೂಡಿನಲ್ಲಿ ಬೃಹತ್ ಉದ್ಯೋಗ ಮೇಳ
September 25, 2018ಮೈಸೂರು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಂಜನ ಗೂಡು ತಾಲೂಕು ಘಟಕದ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಅ.6ರಂದು ನಂಜನಗೂಡು ಪಟ್ಟಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ವೃತ್ತದ ಬಳಿಯ ವಿದ್ಯಾ ವರ್ಧಕ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ಎಐಸಿಸಿ ಮೈಸೂರು ವಿಭಾಗದ ಕಾರ್ಯದರ್ಶಿ…
ಓಲಾ ಅಟ್ಯಾಚ್ಡ್ ವಾಹನ ಚಾಲಕರ ಧರಣಿ ಅಂತ್ಯ
September 25, 2018ಮೈಸೂರು: ಓಲಾ ಕಂಪನಿಯ ಅಧಿಕಾರಿಗಳು ನೀಡಿದ ಸೂಕ್ತ ಭರವಸೆ ಹಿನ್ನೆಲೆಯಲ್ಲಿ ಕಳೆದ 3 ದಿನದಿಂದ ಮೈಸೂರಿನ ನ್ಯೂ ಕಾಂತರಾಜ ಅರಸು ರಸ್ತೆಯಲ್ಲಿ ಓಲಾ ಕಚೇರಿ ಎದುರು ನಡೆಸುತ್ತಿದ್ದ ಧರಣಿಯನ್ನು ಓಲಾ ಅಟ್ಯಾಚ್ಡ್ ವಾಹನ ಚಾಲಕರು ಮತ್ತು ಮಾಲೀಕರು ಸೋಮವಾರ ಹಿಂಪಡೆದಿದ್ದಾರೆ. ಅಟ್ಯಾಚ್ಡ್ ಮತ್ತು ಲೀಸಿಂಗ್ ವಾಹನಗಳಿಗೆ ಸರಿ ಸಮಾನಾಂತರವಾದ ಬುಕ್ಕಿಂಗ್ ಹಾಗೂ ಒಂದೇ ಆ್ಯಪ್ ಬಳಸಬೇಕು. ಲೀಸ್ ವಾಹನಗಳಿಗೆ ಒಬ್ಬರೇ ಚಾಲಕರನ್ನು ನಿಗದಿ ಮಾಡಬೇಕು. ಇನ್ನು ಮುಂದೆ ಹೊಸದಾಗಿ ಯಾವುದೇ ಲೀಸಿಂಗ್ ವಾಹನಗಳನ್ನು ನೀಡಬಾರದು. ಹಳೇ ಎಂಬಿಜಿ…
ಬಿಪಿಎಲ್ ಕಾರ್ಡ್ ಸಮೀಕ್ಷೆ
September 25, 2018ಮೈಸೂರು: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಈ ಹಿಂದೆ ಧನಸಹಾಯ ಸ್ವರೂಪ ಹಾಗೂ ಸಮೂಹ ಬ್ಯಾಂಕ್ ಯೋಜನೆಯಡಿ ವಿವಿಧ ಉದ್ದಿಮೆಗಳಿಗೆ ಸಾಲ ಪಡೆದು, ಸಾಲವನ್ನು ಮರುಪಾವತಿ ಮಾಡದೇ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಸಮೀಕ್ಷೆ ನಡೆಸಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಧನಸಹಾಯ ಸ್ವರೂಪ ಹಾಗೂ ಸಮೂಹ ಬ್ಯಾಂಕ್ ಯೋಜನೆಯಡಿ ಸಾಲ ಪಡೆದು, ಸಾಲವನ್ನು ಮರುಪಾವತಿ ಮಾಡದೇ ಇರುವ ಫಲಾನುಭವಿಗಳು ಬಿಪಿಎಲ್ ಕಾರ್ಡ್‍ನ ಪ್ರತಿಯನ್ನು, ಒಂದು ವೇಳೆ ಫಲಾನುಭವಿಗಳು ಮೃತರಾಗಿದ್ದಲ್ಲಿ ಸದರಿಯವರ…
ಇಂದು ವಿಶ್ವ ಔಷಧೋತ್ಪಾದಕರ ದಿನ ಆಚರಣೆ
September 25, 2018ಮೈಸೂರು: ಭಾರತೀಯ ಔಷಧೀಯ ಸಂಘ (ಐಪಿಎ) ಮೈಸೂರು ಘಟಕ ಹಾಗೂ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಜಂಟಿ ಆಶ್ರಯದಲ್ಲಿ ನಾಳೆ(ಸೆ.25)ರಂದು `ವಿಶ್ವ ಔಷಧೋತ್ಪಾದಕರ ದಿನದ ಆಚರಣೆ ಆಯೋಜಿಸಲಾಗಿದೆ ಎಂದು ಐಪಿಎ ಮೈಸೂರು ಘಟಕದ ಅಧ್ಯಕ್ಷ ಹಾಗೂ ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶು ಪಾಲ ಡಾ.ಟಿ.ಎಂ.ಪ್ರಮೋದ್ ಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಬನ್ನಿಮಂಟಪದ ಶಿವರಾತ್ರೀಶ್ವರನಗರದಲ್ಲಿರುವ ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಹಮ್ಮಿ ಕೊಂಡಿರುವ…
ಜಂಬೂಸವಾರಿಯಲ್ಲಿ ಮಾರನಾಯಕರ ಕುರಿತ ಸ್ತಬ್ಧ ಚಿತ್ರಕ್ಕೆ ಆಗ್ರಹಿಸಿ ಧರಣಿ
September 25, 2018ಮೈಸೂರು: ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಮೈಸೂರಿನ ಪಾಳೇಗಾರರಾಗಿ ಆಳ್ವಿಕೆ ನಡೆಸಿದ ಮಾರನಾಯಕರ ಕುರಿತಂತೆ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕ್ರಮ ವಹಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೈಸೂರು ಜಿಲ್ಲಾ ನಾಯಕ ಯುವಕರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಜಂಬೂ ಸವಾರಿ ಮೆರವಣಿಗೆಯಲ್ಲಿ ಮಾರನಾಯಕರ ಸ್ತಬ್ಧಚಿತ್ರಕ್ಕೆ ಕ್ರಮ ವಹಿಸಬೇಕು. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿ ಹೈದರ್ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿಯವರ ಪ್ರತಿಮೆಗೆ ಅಪಮಾನ…
ವಿಪಕ್ಷಗಳ ಅಪಪ್ರಚಾರದಿಂದ ಕಾಂಗ್ರೆಸ್‍ಗೆ ಸೋಲು
September 25, 2018ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಸಂಗೊಳ್ಳಿ ರಾಯಣ್ಣ ಸಮುದಾಯ ಭವನ ಉದ್ಘಾಟನೆ ಕೆ.ಆರ್.ನಗರ: ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ವರ್ಗದ ಬಡವರಿಗಾಗಿ ಮಾಡಿದ್ದ ಜನಪರ ಕೆಲಸಗಳು ವಿಪಕ್ಷಗಳ ಅಪಪ್ರಚಾರದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಆಗಲಿಲ್ಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ಕಾಗಿನೆಲೆ ಕನಕಗುರು ಪೀಠದ ಆವರಣದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ನಿರ್ಮಾಣ ಮಾಡಿರುವ ಸಂಗೊಳ್ಳಿರಾಯಣ್ಣ ಸಮುದಾಯ ಭವನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪಕ್ಷ ಸೋತಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ, ಜನರಿಗೆ ಉತ್ತಮ ಕಾರ್ಯಕ್ರಮ…
ನೃತ್ಯ ವಿದ್ಯಾಪೀಠಕ್ಕೆ ಶೇ.100 ಫಲಿತಾಂಶ
September 25, 2018ಮೈಸೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ 2018ರ ಮೇ ತಿಂಗಳಿನಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯಲ್ಲಿ ವಿಜಯ ನಗರ 4ನೇ ಹಂತದಲ್ಲಿರುವ ನೃತ್ಯ ವಿದ್ಯಾಪೀಠಕ್ಕೆ ಶೇ.100ರಷ್ಟು ಫಲಿತಾಂಶ ಬಂದಿದೆ. ಭರತ ನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕು.ಶ್ರೇಯಾ ಎಸ್.(366/400), ಕು. ರಾಗ ಎಂ.ಆಚಾರ್ (362/400) ಅಂಕಗಳನ್ನು ಪಡೆದು ಮೈಸೂರು ಕೇಂದ್ರಕ್ಕೆ ಕ್ರಮವಾಗಿ 3ನೇ ಹಾಗೂ 6ನೇ ಸ್ಥಾನ ಪಡೆದಿದ್ದಾರೆ. ಜೂನಿಯರ್ ಹಂತ: ಗರಿಷ್ಠ ದರ್ಜೆ: ಐರಾನಿ ಆರ್.ಕೆ. (ಶೇ.80), ಅನನ್ಯ ಸಜ್ಜನರ್ (ಶೇ.87.75), ಭಾರ್ಗವ ಆರ್….
ಮಕ್ಕಳ ಪೋಷಣೆ : ಅರ್ಜಿ ಸಲ್ಲಿಸಿ
September 25, 2018ಮೈಸೂರು: ಮೈಸೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಾಲಮಂದಿರಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಏಕಪೋಷಕ, ಅನಾಥ ಅಥವಾ ಕುಟುಂಬ ಪೋಷಣೆಯಿಂದ ವಂಚಿತವಾದ ಮಕ್ಕಳಿದ್ದು, ಇಂತಹ ಮಕ್ಕಳಿಗೆ ಸರ್ಕಾರದ ಪೋಷಕತ್ವ ಯೋಜನೆಯಲ್ಲಿ ಮಕ್ಕಳಿಗೆ ತಾತ್ಕಾಲಿಕವಾಗಿ ಕುಟುಂಬದಲ್ಲಿ ಪಾಲನೆ ಮಾಡಲು ಬಾಲನ್ಯಾಯ ಕಾಯ್ದೆ (ರಕ್ಷಣೆ ಮತ್ತು ಪೋಷಣೆ) 2015 ಸೆಕ್ಷನ್ 44 ರಡಿ ಅವಕಾಶವಿರುತ್ತದೆ. ಸದರಿ ಮಕ್ಕಳನ್ನು ಒಂದು ವರ್ಷದ ಅವಧಿಗೆ ಕುಟುಂಬ ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಕುಟುಂಬಕ್ಕೆ ಹಾಗೂ…