ಮೈಸೂರು

ಮಹಾಸಭಾ ಉದ್ಘಾಟನೆ ವಿರೋಧಿಸಲು ಬಂದವರ ಬಂಧನ
ಮೈಸೂರು

ಮಹಾಸಭಾ ಉದ್ಘಾಟನೆ ವಿರೋಧಿಸಲು ಬಂದವರ ಬಂಧನ

September 24, 2018

ಮೈಸೂರು:  ಜಾಗತಿಕ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಉದ್ಘಾಟನೆ ಯನ್ನು ವಿರೋಧಿಸಿ, ಪ್ರತಿಭಟಿಸಿದ ವೀರಶೈವ ಲಿಂಗಾಯತ ಜಾಗೃತಿ ವೇದಿಕೆ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು, ಕೆಲ ಗಂಟೆ ಗಳ ನಂತರ ಬಿಡುಗಡೆ ಮಾಡಿದರು. ಮೈಸೂರಿನ ಹೊಸಮಠದ ಆವರಣ ದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಬಂದ ವೀರ ಶೈವ ಲಿಂಗಾಯತ ಜಾಗೃತಿ ವೇದಿಕೆ ಸದಸ್ಯ ರನ್ನು ಗೇಟಿನ ಬಳಿಯೇ ಪೊಲೀಸರು ತಡೆದರು. ನಾವು ಗಲಾಟೆ ಮಾಡಲು ಬಂದಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಏನೆಲ್ಲಾ ವಿಚಾರಗಳನ್ನು ಮಂಡಿಸುತ್ತಾರೆ ಎಂಬುದನ್ನು…

ಚಿತ್ರನಟರಿಂದ ಮಾವುತರಿಗೆ ಭೋಜನ
ಮೈಸೂರು

ಚಿತ್ರನಟರಿಂದ ಮಾವುತರಿಗೆ ಭೋಜನ

September 24, 2018

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಆನೆಗಳ ಮಾವುತರು ಮತ್ತು ಕಾವಾಡಿಗಳಿಗೆ ಭಾನುವಾರ ಚಲನಚಿತ್ರ ನಟ ದರ್ಶನ್ ಅವರು ಭೋಜನದ ವ್ಯವಸ್ಥೆ ಮಾಡಿದ್ದರು. ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ 12 ಆನೆಗಳ ಮಾವುತರು, ಕಾವಾಡಿಗಳು, ವಿಶೇಷ ಮಾವುತರು ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ಭೋಜನ ಕೂಟದಲ್ಲಿ ತುಪ್ಪದ ಹೋಳಿಗೆ, ಗೋಧಿ ಪಾಯಸ, ಚಿರೋಟಿ, ಬಾದಾಮಿ ಹಾಲು, ಮೊಳಕೆ ಕಾಳು ಕೋಸಂಬರಿ, ಸುವರ್ಣ ಗೆಡ್ಡೆ ಚಾಪ್ಸ್, ಬೆಂಡೆಕಾಯಿ ಪೆಪ್ಪರ್ ಡ್ರೈ, ಜೋಳದ ರೊಟ್ಟಿ,…

ವೈದ್ಯಕೀಯ ಕಾಲೇಜುಗಳ ಸಬಲೀಕರಣವಾಗಲಿ
ಮೈಸೂರು

ವೈದ್ಯಕೀಯ ಕಾಲೇಜುಗಳ ಸಬಲೀಕರಣವಾಗಲಿ

September 24, 2018

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭಿಮತ ಮೈಸೂರು: ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕಾದರೆ ಸರ್ಕಾರಗಳು ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದನ್ನು ನಿಲ್ಲಿಸಬೇಕು ಎಂದು ಹೃದ್ರೋಗ ತಜ್ಞ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು. ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಆಡಳಿತ ವ್ಯವಸ್ಥೆ ಯಲ್ಲಿ ಅನುದಾನಕ್ಕಿಂತ ಅನುಷ್ಠಾನ ಮುಖ್ಯ. ಹೊಸ ಕಾಲೇಜುಗಳನ್ನು ತೆರೆಯುವ ಬದಲು ಇರುವ ವೈದ್ಯಕೀಯ ಕಾಲೇಜುಗಳನ್ನು ಸಬಲೀಕರಣಗೊಳಿಸುವ…

ಮೈಸೂರಿನ ಜಯದೇವ ಆಸ್ಪತ್ರೆ ಸಿದ್ದರಾಮಯ್ಯ ಕೊಡುಗೆ: ಹೆಚ್.ಡಿ.ದೇವೇಗೌಡ
ಮೈಸೂರು

ಮೈಸೂರಿನ ಜಯದೇವ ಆಸ್ಪತ್ರೆ ಸಿದ್ದರಾಮಯ್ಯ ಕೊಡುಗೆ: ಹೆಚ್.ಡಿ.ದೇವೇಗೌಡ

September 24, 2018

ಮೈಸೂರು:  ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆ ಸ್ಥಾಪನೆಗೆ ಡಾ.ಮಂಜುನಾಥ್ ಪತ್ನಿ ಅನುಸೂಯ ಅವರೇ ಪ್ರ್ರಮುಖ ಕಾರಣ. ಇದನ್ನು ಮೈಸೂರಲ್ಲಿ ತೆರೆಯಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕೊಡುಗೆ ಕೂಡ ಇದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು. ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಯದೇವ ಹೃದ್ರೋಗ ಆಸ್ಪತ್ರೆ ಕರ್ನಾಟಕ ಮಾತ್ರವಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಮತ್ತಿತರೆ ರಾಷ್ಟ್ರಗಳ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ….

ಜಾನಪದ ಮನುಷ್ಯನ ಬದುಕಿನ ಪದ್ಧತಿ
ಮೈಸೂರು

ಜಾನಪದ ಮನುಷ್ಯನ ಬದುಕಿನ ಪದ್ಧತಿ

September 24, 2018

ಮೈಸೂರು: ಜಾನಪದ ಕೇವಲ ಗೆಜ್ಜೆ ಕಟ್ಟಿ ಕುಣಿಯುವುದಲ್ಲ. ಅದ ರಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂದು ತಿಳಿಸುವ ಜೀವನ ಶೈಲಿ, ಆಹಾರ ಪದ್ದತಿ ಮತ್ತು ವೈದ್ಯ ಪದ್ದತಿಯಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಅಭಿಪ್ರಾಯಿಸಿದರು. ಮೈಸೂರಿನ ರಂಗಾಯಣದ ವನರಂಗ ದಲ್ಲಿ ನಡೆದ ರಂಗಹೆಜ್ಜೆ ಕಲ್ಚರಲ್ ಟ್ರಸ್ಟ್‍ನ ಉದ್ಘಾಟನೆ ಹಾಗೂ ಜನಪದ ನೃತ್ಯೋ ತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಎಂಬುದು ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಎಲ್ಲೆಡೆ ಹರಡಬೇಕು ಎಂದರು. ಜಾನಪದ ಕಾರ್ಯಕ್ರಮಗಳು ದಸರಾ…

`ಸುಳಿ’ ಕೃತಿ ಬಿಡುಗಡೆ
ಮೈಸೂರು

`ಸುಳಿ’ ಕೃತಿ ಬಿಡುಗಡೆ

September 24, 2018

ಮೈಸೂರು:  ಕಲಾಮಂದಿರದ ಮನೆ ಯಂಗಳದಲ್ಲಿ ಹುಣಸೂರಿನ ಮಹಿಳಾ ಸರ್ಕಾರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಬಿ.ನಂಜುಂಡಸ್ವಾಮಿ ಹರದನಹಳ್ಳಿ ಅವರು ರಚಿಸಿರುವ `ಸುಳಿ’ ಕೃತಿಯನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು. ಸ್ಪಂದನ ಸಾಂಸ್ಕøತಿಕ ಪರಿಷತ್ತು ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ನೀಲಗಿರಿ ಎಂ.ತಳವಾರ್ `ಸುಳಿ’ ಕೃತಿಯನ್ನು ಬಿಡುಗಡೆ ಗೊಳಿಸಿದರು. ಇದಕ್ಕೂ ಮುನ್ನ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ.ಹರೀಶ್‍ಗೌಡ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ನಾನು ಪುಸ್ತಕ ಓದುವುದು ಕಡಿಮೆ. ಹಾಗಾಗಿ ಈ ಪುಸ್ತಕ ಹೇಗೆ ಮೂಡಿಬಂದಿದೆ…

ಶಾಸಕ ಎಸ್.ಎ.ರಾಮದಾಸ್ ಅವರಿಂದ ಗುಂಡೂರಾವ್‍ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಮೈಸೂರು

ಶಾಸಕ ಎಸ್.ಎ.ರಾಮದಾಸ್ ಅವರಿಂದ ಗುಂಡೂರಾವ್‍ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ

September 24, 2018

ಮೈಸೂರು: ಕೃಷ್ಣ ರಾಜ ಕ್ಷೇತ್ರಾದ್ಯಂತ ಸ್ವಚ್ಛತಾ ಅಭಿಯಾನ ಕೈಗೊಂಡಿರುವ ಶಾಸಕ ಎಸ್.ಎ.ರಾಮ ದಾಸ್ ಭಾನುವಾರ ತಮ್ಮ ತಂಡದೊಂ ದಿಗೆ ಗುಂಡೂರಾವ್‍ನಗರದ ಗವಿಮಠದ ಎದುರಿನ ಭಾಗದಲ್ಲಿ ಸ್ವಚ್ಛತಾ ಕಾರ್ಯ ಕ್ರಮ ಕೈಗೊಂಡರು. 55ನೇ ವಾರ್ಡ್ ವ್ಯಾಪ್ತಿಯ ಮೇದರ ಕೇರಿ ಭಾಗದಲ್ಲಿ ಸದ್ಭಾವನಾ ದಿನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಈ ವ್ಯಾಪ್ತಿ ಯಲ್ಲಿ ಕಾರ್ಯ ನಿರ್ವಹಿಸಬೇಕಾದ 39 ಮಂದಿ ಪೌರ ಕಾರ್ಮಿಕರ ಪೈಕಿ 9 ಮಂದಿ ಪೌರ ಕಾರ್ಮಿಕರು ಮಾತ್ರ ಹಾಜರಿದ್ದು ಕೆಲಸ ನಿರ್ವಹಿಸುತ್ತಿದ್ದದ್ದು ಹಾಜರಾತಿ ಪುಸ್ತಕ…

ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ
ಮೈಸೂರು

ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ

September 24, 2018

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 23ನೇ ವಾರ್ಡ್‍ನಲ್ಲಿ 25 ಲಕ್ಷ ರೂ. ಅಂದಾಜು ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಭಾನುವಾರ ಚಾಲನೆ ನೀಡಿದರು. ದಸರಾ ರಸ್ತೆ ಅಭಿವೃದ್ಧಿ ಯೋಜನೆಯ ಅನುದಾನದಲ್ಲಿ ಜೆಎಲ್‍ಬಿ ರಸ್ತೆ ಮುಡಾ ಜಂಕ್ಷನ್‍ನಿಂದ ರಮಾವಿಲಾಸ ರಸ್ತೆ, ಸಯ್ಯಾಜಿರಾವ್ ರಸ್ತೆವರೆಗಿನ ಸುಮಾರು 1.5 ಕಿ.ಮೀ. ಉದ್ದದ ರಸ್ತೆಗೆ ಡಾಂಬರೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಅಲ್ಲದೆ ಚಾಮರಾಜ ಕ್ಷೇತ್ರದ ವಿವಿಧ ಭಾಗಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹಳ್ಳಗಳನ್ನು ಡಾಂಬರು ಹಾಕಿ ಮುಚ್ಚುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು…

ಓಲಾ ಅಟ್ಯಾಚ್ಡ್ ವಾಹನ ಚಾಲಕರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ 2ನೇ ದಿನಕ್ಕೆ
ಮೈಸೂರು

ಓಲಾ ಅಟ್ಯಾಚ್ಡ್ ವಾಹನ ಚಾಲಕರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ 2ನೇ ದಿನಕ್ಕೆ

September 24, 2018

ಮೈಸೂರು: ಅಟ್ಯಾಚ್ಡ್ ಮತ್ತು ಲೀಸಿಂಗ್ ವಾಹನಗಳಿಗೆ ಸರಿ ಸಮಾ ನಾಂತರವಾದ ಬುಕ್ಕಿಂಗ್ ಹಾಗೂ ಒಂದೇ ಆ್ಯಪ್ ಬಳಸಬೇಕು. ಲೀಸ್ ವಾಹನಗಳಿಗೆ ಒಬ್ಬರೇ ಚಾಲಕರನ್ನು ನಿಗದಿ ಮಾಡಬೇಕು. ಇನ್ನು ಮುಂದೆ ಹೊಸದಾಗಿ ಯಾವುದೇ ಲೀಸಿಂಗ್ ವಾಹನಗಳನ್ನು ನೀಡಬಾರದು. ಹಳೇ ಎಂಬಿಜಿ ಪ್ಲಾನ್ ನೀಡಬೇಕು ಹಾಗೂ ಇಂಧನ ದರ ಹೆಚ್ಚಾಗಿರುವುದರಿಂದ ಎಂಬಿಜಿಯಲ್ಲಿ ಹೆಚ್ಚಿನ ದರ ನೀಡಬೇಕು. ಇರುವ ವಾಹನಗಳಿಗೆ ಆಡಿಟಿಂಗ್ ಮತ್ತು ಔಟ್ ಸ್ಟೇಷನ್ ರೆಂಟಲ್ ನೀಡಬೇಕು ಎಂದು ಆಗ್ರಹಿಸಿ ಓಲಾ ಚಾಲಕರು ಮೈಸೂರಿನ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿರುವ…

ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
ಮೈಸೂರು

ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

September 24, 2018

ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮೈಸೂರು ವಿಭಾಗದೊಳಗಿನ ಅಂತರ್ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ವೃಂದದ ಘಟಕದೊಳಗಿನ ಕೋರಿಕೆ ವರ್ಗಾವಣೆಗೆ ಸಂಬಂಧಿಸಿದ ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಇಲಾಖೆಯ ವೆಬ್‍ಸೈಟ್ www.schooleducation.kar.nic.in ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ವರ್ಗಾವಣಾ ಆದ್ಯತಾ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕ ವೃಂದದವರು ಆಕ್ಷೇಪಣೆಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೇರವಾಗಿ ಸೆಪ್ಟೆಂಬರ್ 25 ರೊಳಗೆ ಆಕ್ಷೇಪಣೆ ಸಲ್ಲಿಸಿ ಸ್ವೀಕೃತಿ ಪಡೆಯುವಂತೆ ವಿಭಾಗೀಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1 1,371 1,372 1,373 1,374 1,375 1,611
Translate »