ಮೈಸೂರು

ಇಬ್ಬರು ಮಕ್ಕಳೊಂದಿಗೆ ರೈತ ದಂಪತಿ ಆತ್ಮಹತ್ಯೆ
ಮೈಸೂರು

ಇಬ್ಬರು ಮಕ್ಕಳೊಂದಿಗೆ ರೈತ ದಂಪತಿ ಆತ್ಮಹತ್ಯೆ

September 23, 2018

ಪಾಂಡವಪುರ:  ಸಾಲ ಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಶನಿವಾರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಡಲಾಗಿದೆ. ಗ್ರಾಮದ ಕೆಂಪೇಗೌಡರ ಪುತ್ರ ನಂದೀಶ್(40), ಪತ್ನಿ ಕೋಮಲ (32), ಪುತ್ರಿ ಚಂದನ(13) ಪುತ್ರ ಮನೋಜ್(11) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದವರು. ಘಟನೆ ವಿವರ: ರೈತ ನಂದೀಶ್, ಗ್ರಾಮದ ಹೊರವಲಯದಲ್ಲಿರುವ ತಮ್ಮ 3 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರು. ತಮ್ಮ ಜಮೀನಿನಲ್ಲಿ ವ್ಯವಸಾಯ…

ಒಡೆಯದ ಈಡುಗಾಯಿ, ಮೂಸಂಬಿ ಸ್ವೀಕರಿಸದ ಆನೆ!: ಶೃಂಗೇರಿಯಲ್ಲಿ ಗೌಡರ ಕುಟುಂಬ ಗಲಿಬಿಲಿ
ಮೈಸೂರು

ಒಡೆಯದ ಈಡುಗಾಯಿ, ಮೂಸಂಬಿ ಸ್ವೀಕರಿಸದ ಆನೆ!: ಶೃಂಗೇರಿಯಲ್ಲಿ ಗೌಡರ ಕುಟುಂಬ ಗಲಿಬಿಲಿ

September 23, 2018

ಶೃಂಗೇರಿ: ದೇವರು ಮತ್ತು ಶಕುನಗಳಲ್ಲಿ ಅಪಾರ ನಂಬಿಕೆ ಹೊಂದಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಇಂದು ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಹೋಮ-ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿದ ವೇಳೆ ಅಶುಭ, ಶಕುನಗಳು ಎದುರಾಗಿವೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು 11 ಈಡುಗಾಯಿಗಳನ್ನು ಹಾಕಬೇಕೆಂದು ಅರ್ಚಕರು ತಿಳಿಸಿದಾಗ ಮುಖ್ಯ ಮಂತ್ರಿಗಳು ಶ್ರದ್ಧಾಭಕ್ತಿಯಿಂದ ಈಡುಗಾಯಿ ಹಾಕಲು ಆರಂಭಿಸಿದರು. ಆದರೆ ಅವರು ಹಾಕಿದ 9ನೇ ಈಡುಗಾಯಿ ಒಡೆಯದೆ ಮೆಟ್ಟಲಲ್ಲಿ ಉರುಳಿ ಹೋಯಿತು. ಅದನ್ನು ಕಂಡು ಕುಮಾರಸ್ವಾಮಿ ಗಾಬರಿ ಗೊಂಡು, ಒಂದು ಕ್ಷಣ…

ಚಾಮುಂಡಿಬೆಟ್ಟಕ್ಕೆ ರಾತ್ರಿ ವಾಹನ ಪ್ರವೇಶ ನಿಷಿದ್ಧ ನಿರ್ಧಾರ ನೆನೆಗುದಿಗೆ
ಮೈಸೂರು

ಚಾಮುಂಡಿಬೆಟ್ಟಕ್ಕೆ ರಾತ್ರಿ ವಾಹನ ಪ್ರವೇಶ ನಿಷಿದ್ಧ ನಿರ್ಧಾರ ನೆನೆಗುದಿಗೆ

September 23, 2018

ಮೈಸೂರು:  ರಾತ್ರಿ ವೇಳೆ ಸ್ವೇಚ್ಛಾಚಾರಕ್ಕೆ ಬ್ರೇಕ್ ಹಾಕಿ, ಬೆಟ್ಟದ ಪಾವಿತ್ರ್ಯತೆಯನ್ನು ಕಾಪಾಡಲು ಚಾಮುಂಡಿ ಬೆಟ್ಟಕ್ಕೆ ರಾತ್ರಿ 10ರಿಂದ ಮುಂಜಾನೆ 5 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸುವ ನಿರ್ಧಾರ ಸಿಬ್ಬಂದಿಗಳ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದಿದೆ. ಜಾಲಿ ರೈಡ್ ನೆಪದಲ್ಲಿ ರಾತ್ರಿ 9 ಗಂಟೆಯ ನಂತರ ಮೈಸೂರು ಸೇರಿದಂತೆ ವಿವಿಧೆಡೆಯಿಂದ ಬೈಕ್ ಹಾಗೂ ಕಾರುಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ತಂಡೋಪ ತಂಡವಾಗಿ ಬರುತ್ತಿರುವ ಯುವಪಡೆ ಮಾರ್ಗ ಮಧ್ಯೆ ರಸ್ತೆಯ ಬದಿ ವಾಹನ ನಿಲ್ಲಿಸಿ ಮದ್ಯಪಾನ ಮಾಡಿ, ಮಾಂಸಹಾರ ಸೇವಿಸುವ ಮೂಲಕ ಬೆಟ್ಟದ…

ವಾಣಿಜ್ಯ ವಹಿವಾಟು ಕೇಂದ್ರವಾಗುತ್ತಿರುವ ಚಾಮುಂಡಿಬೆಟ್ಟದ ರಸ್ತೆ
ಮೈಸೂರು

ವಾಣಿಜ್ಯ ವಹಿವಾಟು ಕೇಂದ್ರವಾಗುತ್ತಿರುವ ಚಾಮುಂಡಿಬೆಟ್ಟದ ರಸ್ತೆ

September 23, 2018

ಮೈಸೂರು: ಪ್ರಮುಖ ಪ್ರವಾಸಿ ತಾಣವೂ ಆದ, ಪವಿತ್ರ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ರಸ್ತೆ, ಇದೀಗ ವ್ಯಾಪಾರ, ವಾಣಿಜ್ಯ ವಹಿವಾಟಿನ ಕೇಂದ್ರವಾಗಿ ಬದಲಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಭಕ್ತರು, ಪ್ರವಾಸಿಗರು ಹಾಗೂ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿ ವರ್ಗದ ಅಸಡ್ಡೆಯಿಂದಾಗಿ ಪವಿತ್ರ ಕ್ಷೇತ್ರಕ್ಕೆ ತೆರಳುವ ಮಾರ್ಗದಲ್ಲಿ ಹತ್ತಾರು ವ್ಯಾಪಾರ ಮಳಿಗೆಗಳು, ಗೂಡಂಗಡಿಗಳು, ಫಾಸ್ಟ್‍ಫುಡ್ ಗಾಡಿಗಳು ತಳವೂರಿವೆ. ಇನ್ನು ದಸರಾ ಸಂದರ್ಭ ದಲ್ಲಿ ನಾನಾ ವಸ್ತುಗಳ ಮಾರಾಟಕ್ಕೆಂದು ಹೊರಗಿನಿಂದ ಮೈಸೂರಿಗೆ ಬರುವವರೂ ಈ ರಸ್ತೆಯಲ್ಲಿ…

ಕಾಂಗ್ರೆಸ್ ಅತೃಪ್ತ ಶಾಸಕರು ಚೆನ್ನೈಗೆ, ಮತ್ತೆ ಕೆಲವರು ಮುಂಬೈಗೆ ಹೋದರಂತೆ!
ಮೈಸೂರು

ಕಾಂಗ್ರೆಸ್ ಅತೃಪ್ತ ಶಾಸಕರು ಚೆನ್ನೈಗೆ, ಮತ್ತೆ ಕೆಲವರು ಮುಂಬೈಗೆ ಹೋದರಂತೆ!

September 23, 2018

ಬೆಂಗಳೂರು: ಕಾಂಗ್ರೆಸ್‍ನ 8 ಅತೃಪ್ತ ಶಾಸಕರು ಮುಂಬೈಗೆ ತೆರಳಿ ದ್ದಾರೆ…ಮೂವರು ಶಾಸಕರು ಚೆನ್ನೈನತ್ತ ಪ್ರಯಾಣ ಬೆಳೆಸಿದ್ದು, ಅವರು ಅಲ್ಲಿಂದ ಮುಂಬೈಗೆ ತೆರಳಲಿದ್ದಾರೆ… ಕಾಂಗ್ರೆಸ್ ಶಾಸಕರ ಬಂಡಾಯದ ಬಗ್ಗೆ ಶೃಂಗೇರಿ ಯಲ್ಲಿ ಮುಖ್ಯಮಂತ್ರಿಗಳಿಗೆ ಗುಪ್ತಚರ ಇಲಾಖೆಯಿಂದ ಕ್ಷಣಕ್ಷಣದ ಮಾಹಿತಿ… ಇವೆಲ್ಲವೂ ಇಂದು ದಿನವಿಡೀ ಖಾಸಗಿ ವಾಹಿನಿಗಳಲ್ಲಿ ಹರಿದಾಡಿದ ಸುದ್ದಿಗಳ ಮಹಾಪೂರ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ಇಂದು ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಮೃತ್ಯುಂಜಯ ಹಾಗೂ ಗಣಪತಿ ಹೋಮ ಏರ್ಪಡಿಸಿತ್ತು. ಅದರಲ್ಲಿ ಗೌಡರ ಕುಟುಂಬವರ್ಗದವರು ಭಾಗವಹಿಸಿದ್ದರು. ಆದರೆ ಆಪರೇಷನ್…

ದಸರೆ ಕಾಮಗಾರಿಗಳಿಗೆ 27 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ
ಮೈಸೂರು

ದಸರೆ ಕಾಮಗಾರಿಗಳಿಗೆ 27 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ

September 23, 2018

ಮೈಸೂರು: ಈ ಬಾರಿಯ ದಸರಾ ಉತ್ಸವದಲ್ಲಿ ನಗರದ ಸಮಗ್ರ ಸೌಂದರ್ಯ ವೃದ್ಧಿ ಗಾಗಿ ಅಂದಾಜು 27 ಕೋಟಿ ವ್ಯಯಿ ಸಲು ಪಾಲಿಕೆ ಚಿಂತಿಸಿದ್ದು, ಈ ಸಂಬಂಧ ಅಂದಾಜು ಪಟ್ಟಿ ಯನ್ನು ರಾಜ್ಯ ಸರ್ಕಾ ರಕ್ಕೆ ಕಳು ಹಿಸಲಾ ಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ತಿಳಿಸಿದ್ದಾರೆ. ಈ ಬಗ್ಗೆ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ 25 ಕೋಟಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಸರಕಾರ ಬಿಡುಗಡೆ ಮಾಡಿದ್ದು 10 ಕೋಟಿ ರೂ. ಮಾತ್ರ. ಈ…

ದಸರೆ ವೇಳೆ ಗನ್‍ಹೌಸ್‍ನಲ್ಲಿ ಆಹಾರ ಉತ್ಸವ
ಮೈಸೂರು

ದಸರೆ ವೇಳೆ ಗನ್‍ಹೌಸ್‍ನಲ್ಲಿ ಆಹಾರ ಉತ್ಸವ

September 23, 2018

ಮೈಸೂರು: ದಸರಾ ಮಹೋತ್ಸವದ ವೇಳೆ ಮೈಸೂರಿನ ಗನ್ ಹೌಸ್ ಇಂಪೀರಿಯಲ್ ರೆಸ್ಟೋರೆಂಟ್‍ನಲ್ಲಿ ಆಹಾರ ಉತ್ಸವ ನಡೆಸಲಾಗುವುದು. ಬೆಂಗಳೂರಿನ ನಾಗಾರ್ಜುನ್ ಇಂಜಿನಿಯರಿಂಗ್ ಎಂಟರ್ ಪ್ರೈಸಸ್ ಚೀಫ್ ಎಕ್ಸಿಕ್ಯೂಟಿವ್ ಎಸ್.ಸುನಂದ ಗಿರೀಶ ಅವರು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ್ದು, ಮೈಸೂರಿಗರಿಗೆ ಅಚ್ಚುಮೆಚ್ಚಿನ ದಾದ ಗನ್‍ಹೌಸ್ ಅನ್ನು ನವೀಕರಿಸಲು ರಾಜಮಾತೆ ಪ್ರಮೋದಾದೇವಿ ಅವರು ಆಸಕ್ತಿ ತೋರಿದ್ದಾರೆ ಎಂದರು. ಅದನ್ನು ಮತ್ತೆ ಜನಪ್ರಿಯಗೊಳಿಸಲು ಅಕ್ಟೋಬರ್ ಮೊದಲ ವಾರದಿಂದ ಅಲ್ಲಿ ಆಹಾರ ಉತ್ಸವ ಏರ್ಪಡಿಸಲಾಗಿದೆ. ದಸರಾ ಅಂಗವಾಗಿ ನಡೆಯುವ ಉತ್ಸವವನ್ನು ಅಕ್ಟೋಬರ್ 5 ಅಥವಾ…

ಎಲಿಫೆಂಟ್ ಕಾರಂಜಿ ಬ್ರಿಗೇಡ್ ಗ್ರೂಪ್‍ನಿಂದಲೇ ಅ.5ರೊಳಗೆ ಪುನರ್ ನಿರ್ಮಾಣ
ಮೈಸೂರು

ಎಲಿಫೆಂಟ್ ಕಾರಂಜಿ ಬ್ರಿಗೇಡ್ ಗ್ರೂಪ್‍ನಿಂದಲೇ ಅ.5ರೊಳಗೆ ಪುನರ್ ನಿರ್ಮಾಣ

September 23, 2018

ಮೈಸೂರು: ಕಿಡಿಗೇಡಿಗಳ ಕೃತ್ಯಕ್ಕೆ ಧ್ವಂಸವಾಗಿದ್ದ ಹೈವೇ ಸರ್ಕಲ್‍ನ ಎಲಿಫೆಂಟ್ ಕಾರಂಜಿ ದಸರಾ ವೇಳೆಗೆ ಮತ್ತೆ ತಲೆ ಎತ್ತಲಿದೆ. ಬ್ರಿಗೇಡ್ ಗ್ರೂಪ್‍ನಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ವಿಶೇಷ ಕಲಾಕೃತಿ ಎಲಿಫೆಂಟ್ ಕಾರಂಜಿಯನ್ನು ಬನ್ನಿಮಂಟಪದ ಹೈವೇ ವೃತ್ತದಲ್ಲಿ ನಿರ್ಮಿಸಿ, ನಿರ್ವಹಣೆಯನ್ನು ಆರಂಭದಲ್ಲಿ ಅವರೇ ಮಾಡುತ್ತಿದ್ದರು. ಆದರೆ, ಸೆ.12ರಂದು ಯಾರೋ ಕಿಡಿಗೇಡಿ ಗಳು ಎಲಿಫೆಂಟ್ ಕಾರಂಜಿಗೆ ದೀಪಾಲಂ ಕಾರ ಮಾಡಲು ಅದರ ಮೇಲೆ ಹತ್ತಿದಾಗ ಕಲಾಕೃತಿ ಮುರಿದು ಬಿದ್ದಿತ್ತು. ಕಲಾಕೃತಿ ಮೇಲಿನ ಅಲಂಕಾರಿಕ ತಟ್ಟೆ, ಕಾರಂಜಿ ಅಲ್ಲದೆ ಉತ್ತರ…

ಟಾಂಗಾವಾಲಾಗಳಿಗೆ ರಾಜಪರಂಪರೆ ಬಿಂಬಿಸುವ ಸಮವಸ್ತ್ರ ವಿತರಣೆಗೆ ನಿರ್ಧಾರ
ಮೈಸೂರು

ಟಾಂಗಾವಾಲಾಗಳಿಗೆ ರಾಜಪರಂಪರೆ ಬಿಂಬಿಸುವ ಸಮವಸ್ತ್ರ ವಿತರಣೆಗೆ ನಿರ್ಧಾರ

September 23, 2018

ಮೈಸೂರು:  ಈ ಬಾರಿಯ ದಸರಾ ಮಹೋತ್ಸವದ ದಿನಗಳಲ್ಲಿ ರಾಜ ಪರಂಪರೆ ಬಿಂಬಿಸುವ ಪೇಟ, ಉಡುಪು ಧರಿಸಿ ಟಾಂಗಾವಾಲಾಗಳು ಗತಕಾಲದ ರಾಜ ವೈಭವವನ್ನು ಅನಾವರಣ ಮಾಡಲಿದ್ದಾರೆ. ಮೈಸೂರು ಶಾ ಪಸಂದ್ ಟಾಂಗಾ ಸಂಘದ ಆಯ್ದ 50 ಮಂದಿ ಟಾಂಗಾವಾಲಾಗಳಿಗೆ ರಾಜ ಪರಂಪರೆ ಬಿಂಬಿಸುವ ತಲಾ ಎರಡು ಜೊತೆ ಸಮವಸ್ತ್ರ ನೀಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಪ್ರತಿ ದಸರಾ ವೇಳೆ ಟಾಂಗಾವಾಲಾ ಗಳಿಗೆ ರಾಜ ಪ್ರಭುತ್ವದ ಶೈಲಿಯ ಸಮವಸ್ತ್ರಗಳನ್ನು ನೀಡಲಾಗುತ್ತಿತ್ತು. ಅರಮನೆ ಆವರಣದಲ್ಲಿ ಪೂಜಾ ಸಮಯದಲ್ಲಿ ಈ ಟಾಂಗಾಗಳು ಸಾಲಾಗಿ…

ಫೋಟೋಗ್ರಫಿ, ವಿಡಿಯೋಗ್ರಫಿ, ಆಲ್ಬಮ್, ಡಿಜಿಟಲ್ ಇಮೇಜಿಂಗ್ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ
ಮೈಸೂರು

ಫೋಟೋಗ್ರಫಿ, ವಿಡಿಯೋಗ್ರಫಿ, ಆಲ್ಬಮ್, ಡಿಜಿಟಲ್ ಇಮೇಜಿಂಗ್ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ

September 23, 2018

ಮೈಸೂರು:  ಫೋಟೋ ಗ್ರಫಿ ಹಾಗೂ ವಿಡಿಯೋಗ್ರಫಿಯ ಅತ್ಯಾ ಧುನಿಕ ತಂತ್ರಜ್ಞಾನದ ಸಮಗ್ರ ನೋಟದ ಮೇಲೆ ಬೆಳಕು ಚೆಲ್ಲುವ ಅಂತಾರಾಷ್ಟ್ರೀಯ ಫೋಟೋಗ್ರಫಿ, ವಿಡಿಯೋಗ್ರಫಿ, ಆಲ್ಬಮ್ ಮತ್ತು ಡಿಜಿಟಲ್ ಇಮೇಜಿಂಗ್ ಕುರಿತ ಎರಡು ದಿನಗಳ ವಸ್ತು ಪ್ರದರ್ಶನಕ್ಕೆ ಶನಿವಾರ ಚಾಲನೆ ದೊರೆಯಿತು. ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವಿಡಿಯೋಗ್ರಾಫರ್ಸ್ ಅಸೋಸಿ ಯೇಷನ್, ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ (ಕೆವಿ ಪಿಎ), ಬೈ-ಸೇಲ್ ಇಂಟ್ರಾಕ್ಷನ್ ಕಂಪನಿ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಿಂಗ್ ರಸ್ತೆಯಲ್ಲಿನ ಶುಭೋದಿನಿ ಕನ್ವೆನ್ಷನ್ ಹಾಲ್‍ನಲ್ಲಿ…

1 1,372 1,373 1,374 1,375 1,376 1,611
Translate »