ದಸರೆ ಕಾಮಗಾರಿಗಳಿಗೆ 27 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ
ಮೈಸೂರು

ದಸರೆ ಕಾಮಗಾರಿಗಳಿಗೆ 27 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ

September 23, 2018

ಮೈಸೂರು: ಈ ಬಾರಿಯ ದಸರಾ ಉತ್ಸವದಲ್ಲಿ ನಗರದ ಸಮಗ್ರ ಸೌಂದರ್ಯ ವೃದ್ಧಿ ಗಾಗಿ ಅಂದಾಜು 27 ಕೋಟಿ ವ್ಯಯಿ ಸಲು ಪಾಲಿಕೆ ಚಿಂತಿಸಿದ್ದು, ಈ ಸಂಬಂಧ ಅಂದಾಜು ಪಟ್ಟಿ ಯನ್ನು ರಾಜ್ಯ ಸರ್ಕಾ ರಕ್ಕೆ ಕಳು ಹಿಸಲಾ ಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ತಿಳಿಸಿದ್ದಾರೆ.

ಈ ಬಗ್ಗೆ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ 25 ಕೋಟಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಸರಕಾರ ಬಿಡುಗಡೆ ಮಾಡಿದ್ದು 10 ಕೋಟಿ ರೂ. ಮಾತ್ರ. ಈ ಬಾರಿ ಖಾಸಗಿಯವರನ್ನು ದಸರಾ ಸಂಭ್ರಮದ ಅಭಿವೃದ್ಧಿಯಲ್ಲಿ ಪಾಲು ದಾರರನ್ನಾಗಿಸಲು ಚಿಂತನೆ ನಡೆದಿದೆ. ಅವರಿಂದ ಪ್ರಾಯೋಜಕತ್ವ ಪಡೆದು ಪ್ರಮುಖ ರಸ್ತೆಗಳ ಗೋಡೆಗಳ ಮೇಲೆ ಕಲಾಕೃತಿಗಳ ರಚನೆ, ರಸ್ತೆಗಳ ಮಧ್ಯೆ ಸಸಿ ಬೆಳೆಸುವುದು ಸೇರಿ ದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಾಯೋಜಕತ್ವ ನೀಡುವಂತೆ ಮೈಸೂರು ಹೋಟೆಲ್ ಮಾಲೀಕರ ಸಂಘ, ಜಿಲ್ಲಾ ಡಳಿತ ಮತ್ತು ಇನ್ನಿತರ ಪ್ರಾಯೋಜಕ ರೊಂದಿಗೆ ಮೈಸೂರು ಮಹಾನಗರ ಪಾಲಿಕೆ ಮಾತುಕತೆ ನಡೆಸಿ, ಸಹಕಾರ ಕೇಳಿದೆ.

ಪ್ರಾಯೋಜಕರಾದ ಮಹಾಲಕ್ಷ್ಮಿ ಸ್ವೀಟ್ಸ್, ಭೀಮ ಜ್ಯುವೆಲರ್ಸ್ ಹಾಗೂ ಬ್ರಿಗೇಡ್ ಗ್ರೂಪ್ ಸಂಸ್ಥೆಗಳು ಈಗಾಗಲೇ ನಗರ ಸೌಂದರ್ಯ ಕಾಮಗಾರಿಗೆ ಹಣವನ್ನು ನೀಡಿವೆ. ಭಾರತದ ಸರ್ಫಾಕೋಟ್ಸ್‍ಸಂಸ್ಥೆ ಕಲಾಕೃತಿಗಳ ರಚನೆಗೆ ಬೇಕಾಗುವ ಸಂಪೂರ್ಣ ಬಣ್ಣ, ಬ್ರಷ್, ಇನ್ನಿತರ ಬಣ್ಣಗಳು ಹಾಗೂ ಬಣ್ಣಕ್ಕೆ ಬೇಕಾಗುವ ಬಿಡಿ ಭಾಗಗಳನ್ನು ನೀಡಲಿದೆ. ಇನ್ನು ಕೆಲವು ಸಂಸ್ಥೆ ಗಳು ಕಲಾತ್ಮಕ ಹೂ-ಗಿಡಗಳು ಹಾಗೂ ವಸ್ತು ಗಳನ್ನು ನೀಡಲು ಮುಂದೆ ಬಂದಿವೆ ಎಂದರು. ಸಾರ್ವಜನಿಕರು ಗೋಡೆಗಳನ್ನು ಶೌಚಾಲಯ ದಂತೆ ಬಳಸುವುದನ್ನು ತಪ್ಪಿಸಲು ಗೋಡೆಗಳ ಮೇಲೆ ಕಲಾ ಕೃತಿಗಳನ್ನು ಬಿಡಿಸುವುದು ಮುಖ್ಯ ಉದ್ದೇಶವಾಗಿದೆ. ಇಡೀ ದಿನ ಸ್ವಚ್ಛತೆ ಬಗ್ಗೆ ಗಮನಹರಿಸಲು ಹೆಚ್ಚಿನ ಸ್ವಚ್ಛತಾ ಸಿಬ್ಬಂದಿ ಯನ್ನು ನೇಮಿಸಲಾಗಿದೆ. ಆರೋಗ್ಯ, ಸ್ವಚ್ಛತೆ ಬಗ್ಗೆ ಗಮನ ನೀಡುವ ಜತೆಗೆ ಮೊಬೈಲ್ ಶೌಚಾಲಯಗಳನ್ನು ಬಳಸಲಾಗುತ್ತಿದೆ ಎಂದರು.

Translate »