ದಸರೆ ವೇಳೆ ಗನ್‍ಹೌಸ್‍ನಲ್ಲಿ ಆಹಾರ ಉತ್ಸವ
ಮೈಸೂರು

ದಸರೆ ವೇಳೆ ಗನ್‍ಹೌಸ್‍ನಲ್ಲಿ ಆಹಾರ ಉತ್ಸವ

September 23, 2018

ಮೈಸೂರು: ದಸರಾ ಮಹೋತ್ಸವದ ವೇಳೆ ಮೈಸೂರಿನ ಗನ್ ಹೌಸ್ ಇಂಪೀರಿಯಲ್ ರೆಸ್ಟೋರೆಂಟ್‍ನಲ್ಲಿ ಆಹಾರ ಉತ್ಸವ ನಡೆಸಲಾಗುವುದು.

ಬೆಂಗಳೂರಿನ ನಾಗಾರ್ಜುನ್ ಇಂಜಿನಿಯರಿಂಗ್ ಎಂಟರ್ ಪ್ರೈಸಸ್ ಚೀಫ್ ಎಕ್ಸಿಕ್ಯೂಟಿವ್ ಎಸ್.ಸುನಂದ ಗಿರೀಶ ಅವರು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ್ದು, ಮೈಸೂರಿಗರಿಗೆ ಅಚ್ಚುಮೆಚ್ಚಿನ ದಾದ ಗನ್‍ಹೌಸ್ ಅನ್ನು ನವೀಕರಿಸಲು ರಾಜಮಾತೆ ಪ್ರಮೋದಾದೇವಿ ಅವರು ಆಸಕ್ತಿ ತೋರಿದ್ದಾರೆ ಎಂದರು. ಅದನ್ನು ಮತ್ತೆ ಜನಪ್ರಿಯಗೊಳಿಸಲು ಅಕ್ಟೋಬರ್ ಮೊದಲ ವಾರದಿಂದ ಅಲ್ಲಿ ಆಹಾರ ಉತ್ಸವ ಏರ್ಪಡಿಸಲಾಗಿದೆ. ದಸರಾ ಅಂಗವಾಗಿ ನಡೆಯುವ ಉತ್ಸವವನ್ನು ಅಕ್ಟೋಬರ್ 5 ಅಥವಾ 8ರಂದು ಉದ್ಘಾಟಿಸಲಾಗುವುದು ಎಂದು ತಿಳಿಸಿದ್ದಾರೆ. ಜರ್ಮನ್ ತಂತ್ರಜ್ಞಾನದ ತಾತ್ಕಾಲಿಕ ಟೆಂಟ್ ಸೇರಿದಂತೆ ಮೂಲ ಸೌಲಭ್ಯ ಒದಗಿಸಲಾಗುವುದು ಎಂದ ಅವರು, ಹಲವು ಪ್ರಸಿದ್ಧ ಹೋಟೆಲುಗಳನ್ನು ಆಹಾರ ಉತ್ಸವಕ್ಕೆ ಆಹ್ವಾನಿಸಲಾಗುವುದು ಎಂದು ಅವರು ನುಡಿದರು.

Translate »