ಮೈಸೂರು

ನೃತ್ಯ ಕ್ಷೇತ್ರದಲ್ಲಿ ವಿನೂತನ ಪರಿಕಲ್ಪನೆ ಅಳವಡಿಸುವ ಸೃಜನಶೀಲ ಪ್ರಯತ್ನ ಅಗತ್ಯ
ಮೈಸೂರು

ನೃತ್ಯ ಕ್ಷೇತ್ರದಲ್ಲಿ ವಿನೂತನ ಪರಿಕಲ್ಪನೆ ಅಳವಡಿಸುವ ಸೃಜನಶೀಲ ಪ್ರಯತ್ನ ಅಗತ್ಯ

September 23, 2018

ಮೈಸೂರು: ಭಾರತೀಯ ಪರಂಪರೆಯ ಭಾಗವಾದ ನೃತ್ಯಕ್ಷೇತ್ರದಲ್ಲಿ ವಿನೂತನ ಪರಿಕಲ್ಪನೆಗಳನ್ನು ಅಳವಡಿಸುವ ಬಗ್ಗೆ ತಜ್ಞರಿಂದ ಸೃಜನಶೀಲ ಪ್ರಯತ್ನಗಳಾಗ ಬೇಕಿದೆ ಎಂದು ಹಿರಿಯ ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅಭಿಪ್ರಾಯಪಟ್ಟರು. ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತಾ ಸಭಾಂಗಣದಲ್ಲಿ ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದ ವತಿಯಿಂದ ನಡೆದ 32 ನೇ ವರ್ಷದ ರಾಷ್ಟ್ರಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲೆಗಳ ಐದು ದಿನಗಳ ಪಲ್ಲವೋತ್ಸವ-2018ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರದರ್ಶಕ ಕಲೆಗಳ ಉನ್ನತೀಕರಣಕ್ಕೆ ನೂತನ ಗೀತೆ ರಚನೆ, ಸಂಗೀತ ಮತ್ತು…

ಆಪರೇಷನ್ ಕಮಲ ಪ್ರತಿಯಾಗಿ ಆಪರೇಷನ್ ಕಾಂಗ್ರೆಸ್-ಜೆಡಿಎಸ್
ಮೈಸೂರು

ಆಪರೇಷನ್ ಕಮಲ ಪ್ರತಿಯಾಗಿ ಆಪರೇಷನ್ ಕಾಂಗ್ರೆಸ್-ಜೆಡಿಎಸ್

September 22, 2018

ಬೆಂಗಳೂರು:  ಆಪರೇ ಷನ್ ಕಮಲದ ಮೂಲಕ ಮೈತ್ರಿ ಸರ್ಕಾರ ಉರುಳಿಸಲು ಹೊರಟಿರುವ ಬಿಜೆಪಿಗೆ ಪಾಠ ಕಲಿಸಲು ಅಗತ್ಯ ಕಂಡು ಬಂದರೆ ಆಪರೇಷನ್ ಕಾಂಗ್ರೆಸ್-ಜೆಡಿಎಸ್ ಮೂಲಕ ಆ ಪಕ್ಷದ ಶಾಸಕರನ್ನು ಸೆಳೆಯಲು ಉಭಯ ಪಕ್ಷಗಳ ನಾಯಕರು ಇಂದಿಲ್ಲಿ ತೀರ್ಮಾನಿಸಿದ್ದಾರೆ. ದಿನದಿಂದ ದಿನಕ್ಕೆ ಸರ್ಕಾರ ಉರುಳಿಸಲು ಸಂಚು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಮತ್ತು ಕುಮಾರಸ್ವಾಮಿಯವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಲು ಕಾಂಗ್ರೆಸ್ ವರಿಷ್ಠರೇ ಮಧ್ಯಪ್ರವೇಶಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸಲಹೆ ಮೇರೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ…

ಸಚಿವ ಜಿಟಿಡಿ, ಸಂಸದ ಪ್ರತಾಪ್ ಸಿಂಹರಿಂದ ಭೂ ಸ್ವಾಧೀನಕ್ಕೆ ರೈತರ ಮನವೊಲಿಕೆ ಯತ್ನ ಯಶಸ್ವಿ
ಮೈಸೂರು

ಸಚಿವ ಜಿಟಿಡಿ, ಸಂಸದ ಪ್ರತಾಪ್ ಸಿಂಹರಿಂದ ಭೂ ಸ್ವಾಧೀನಕ್ಕೆ ರೈತರ ಮನವೊಲಿಕೆ ಯತ್ನ ಯಶಸ್ವಿ

September 22, 2018

ಮೈಸೂರು: ಬಹು ನಿರೀಕ್ಷಿತ ಮೈಸೂರಿನ ನಾಗನಹಳ್ಳಿ ಬಳಿಯ ಸ್ಯಾಟಲೈಟ್ ರೈಲ್ವೇ ಟರ್ಮಿನಲ್ ಯೋಜನೆ ಸಾಕಾರಗೊಳ್ಳುವ ಕಾಲ ಸಮೀಪಿಸುತ್ತಿದೆ. ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಜಿಲ್ಲಾಡಳಿತಕ್ಕೆ ಭೂಮಿ ಬಿಟ್ಟುಕೊಡುವ ಬಗ್ಗೆ ರೈತರ ಮನವೊಲಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಂಸದ ಪ್ರತಾಪ್ ಸಿಂಹ ಯಶಸ್ವಿಯಾಗಿದ್ದಾರೆ. ಇಂದು ನಾಗನಹಳ್ಳಿ ರೈಲು ನಿಲ್ದಾಣ ದಲ್ಲಿ ಸಭೆ ನಡೆಸಿ ಚರ್ಚಿಸಿದಾಗ, ತಮ್ಮ ಜಮೀನುಗಳಿಗೆ ಪ್ರಸಕ್ತ ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕು. ಭೂಮಿ ಕಳೆದುಕೊಂಡ ರೈತರ ಕುಟುಂಬದ ಸದಸ್ಯರಿ ಗೊಬ್ಬರಿಗೆ ಅವರ…

ಚಿತ್ರೀಕರಣ ಮುಗಿಸಿದ ಮೈಸೂರು `ಪ್ರೀಮಿಯರ್ ಸ್ಟುಡಿಯೋ’
ಮೈಸೂರು

ಚಿತ್ರೀಕರಣ ಮುಗಿಸಿದ ಮೈಸೂರು `ಪ್ರೀಮಿಯರ್ ಸ್ಟುಡಿಯೋ’

September 22, 2018

ಮೈಸೂರು: ಭಾರತ ಚಿತ್ರೋದ್ಯಮದಲ್ಲಿ ಹೆಗ್ಗುರುತಾಗಿದ್ದ ಮೈಸೂರಿನ ಪ್ರಿಮಿಯರ್ ಸ್ಟುಡಿಯೋ ಇದೀಗ ಇತಿಹಾಸ ಪುಟ ಸೇರಿದೆ. ವಿವಿಧ ಕಾರಣಗಳಿಂದ 2 ದಶಕಗಳ ಹಿಂದೆಯೇ ಸ್ಥಗಿತಗೊಂಡಿದ್ದ ಸ್ಟುಡಿಯೋ ಕಟ್ಟಡವನ್ನು ವರ್ಷದಿಂದ ಹಂತ ಹಂತವಾಗಿ ಕೆಡವಲಾಗಿದ್ದು, ಇದೀಗ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಪಕ್ಕದಲ್ಲೇ ಇರುವ ಗ್ರೀನ್ ಹೋಟೆಲ್ (ಹಿಂದಿನ ಚಿತ್ತರಂಜನ್ ಮಹಲ್) ಸೇರಿದಂತೆ ಹಲವು ಕಟ್ಟಡಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು, ಸ್ಟುಡಿಯೋ ಭಾಗವನ್ನು ಮಾತ್ರ ನೆಲಸಮಗೊಳಿಸಲಾಗಿದೆ. ಮೈಸೂರಿನ ವಿನೋಬಾ ರಸ್ತೆ, ಜಯಲಕ್ಷ್ಮೀಪುರಂನಲ್ಲಿರುವ ಪ್ರಿಮಿಯರ್ ಸ್ಟುಡಿಯೋವನ್ನು ಎಂ.ಎನ್.ಬಸವರಾಜಯ್ಯ ಅವರು 1957ರಲ್ಲಿ ಸ್ಥಾಪಿಸಿದ್ದರು. ನಂತರ 1964ರ ಸುಮಾರಿನಲ್ಲಿ…

ತಾಯಿ, ಮಕ್ಕಳಿಬ್ಬರ ಮೃತದೇಹ ಪತ್ತೆ
ಮೈಸೂರು

ತಾಯಿ, ಮಕ್ಕಳಿಬ್ಬರ ಮೃತದೇಹ ಪತ್ತೆ

September 22, 2018

ಮೈಸೂರು: ಕೆಆರ್‌ಎಸ್‌ ಬಳಿ ವರುಣಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಮೃತದೇಹಗಳು ಇಂದು ಬೆಳಿಗ್ಗೆ ಬೆಳಗೊಳ ಸಮೀಪ ನಾಲೆಯಲ್ಲಿ ಪತ್ತೆಯಾಗಿವೆ. ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ, ಹಾಲಿನ ವ್ಯಾಪಾರಿ ಕುಮಾರ್ ಎಂಬುವರ ಪತ್ನಿ ಶ್ರೀಮತಿ ಕಮಲ(45), ಮಕ್ಕಳಾದ ವೈಷ್ಣವಿ (17) ಹಾಗೂ ವರ್ಷಾ(14) ಎಂಬುವರೇ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದವರು. ತಮ್ಮ ಮನೆ ಬಳಿ ಪ್ರತಿಷ್ಠಾಪಿಸಿದ್ದ ಗಣಪತಿ ಪೂಜೆಗೆಂದು ಹೋಗಿ ದ್ದಾಗ ವೈಷ್ಣವಿ ಮತ್ತು ವರ್ಷಾ ಅಲ್ಲಿದ್ದಕೆಲ ಯುವಕರೊಂದಿಗೆ ಸೆಲ್ಫಿ…

ಸಿಎಂ ಕುಮಾರಸ್ವಾಮಿ ವಿರುದ್ಧ ಡಿಜಿಪಿಗೆ ಬಿಜೆಪಿ ದೂರು
ಮೈಸೂರು

ಸಿಎಂ ಕುಮಾರಸ್ವಾಮಿ ವಿರುದ್ಧ ಡಿಜಿಪಿಗೆ ಬಿಜೆಪಿ ದೂರು

September 22, 2018

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದರೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಜನರಿಗೆ ಕರೆ ಕೊಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಡಿಜಿಪಿ ನೀಲಮಣಿ ರಾಜು ಅವರಿಗೆ ಬಿಜೆಪಿ ದೂರು ನೀಡಿದೆ. ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ನಿಯೋಗದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸದಸ್ಯರಾದ ಮಾಡಾಳು ವಿರೂಪಾಕ್ಷಪ್ಪ, ಸಿ.ಎಂ. ಉದಾಸಿ, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ತೇಜಸ್ವಿನಿ ರಮೇಶ್‍ಗೌಡ ಮತ್ತಿತರನ್ನೊಳಗೊಂಡ ನಿಯೋಗವು ಡಿಜಿಪಿಗೆ ದೂರು…

ದಸರಾ ಗಜಪಡೆ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಭರ್ಜರಿ ಭೋಜನ ವ್ಯವಸ್ಥೆ
ಮೈಸೂರು

ದಸರಾ ಗಜಪಡೆ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಭರ್ಜರಿ ಭೋಜನ ವ್ಯವಸ್ಥೆ

September 22, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಶಿಬಿರಗಳಿಂದ ಆಗಮಿಸಿರುವ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಶುಕ್ರವಾರ ಅರಮನೆಯ ಆಡಳಿತ ಮಂಡಳಿ ವತಿಯಿಂದ ಭೋಜನದ ವ್ಯವಸ್ಥೆ ಮಾಡಿ, ಮಕ್ಕಳಿಗೆ ಆಟಿಕೆಗಳನ್ನು ವಿತರಿಸಲಾಯಿತು. ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ 12 ಆನೆಗಳೊಂದಿಗೆ ಅರ ಮನೆಯ ಅಂಗಳಕ್ಕೆ ಬಂದು ಬೀಡುಬಿಟ್ಟಿರುವ ಆನೆಗಳ ಮಾವುತರು, ಕಾವಾಡಿ ಗಳು, ವಿಶೇಷ ಮಾವುತರು ಹಾಗೂ ಅವರ ಕುಟುಂಬ ಸದಸ್ಯರಿಗೆ ಭೋಜನ ವ್ಯವಸ್ಥೆ ಮಾಡುವ ಮೂಲಕ ಸತ್ಕರಿಸುವ ಸಂಪ್ರದಾಯವಿದ್ದು, ಇಂದು ಮಧ್ಯಾಹ್ನ ಅರಮನೆಯ…

ಈ ಬಾರಿಯ ದಸರಾ ವಸ್ತುಪ್ರದರ್ಶನ ಗುತ್ತಿಗೆಗೆ ಹಿಂದೇಟು
ಮೈಸೂರು

ಈ ಬಾರಿಯ ದಸರಾ ವಸ್ತುಪ್ರದರ್ಶನ ಗುತ್ತಿಗೆಗೆ ಹಿಂದೇಟು

September 22, 2018

ಮೈಸೂರು:  ಕಳೆದ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ದಸರಾ ವಸ್ತುಪ್ರದರ್ಶನದ ಆವರಣಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿ, ಮನರಂಜನಾ ವಿಭಾಗದ ಯಂತ್ರೋಪಕರಣಗಳು ಹಾನಿಗೀಡಾಗಿ ನಷ್ಟ ಸಂಭವಿಸಿದ್ದೇ ಈ ಬಾರಿ ಟೆಂಡರ್‌ದಾರರು ಹಿಂದೆ ಸರಿಯಲು ಕಾರಣ ಎನ್ನಲಾಗಿದೆ. ಅಲ್ಲದೆ ಪ್ರತಿ ವರ್ಷ ಶೇ.5ರಷ್ಟು ಟೆಂಡರ್ ಮೊತ್ತವನ್ನು ಹೆಚ್ಚಳ ಮಾಡುವ ನಿಯಮವಿದ್ದು, ಪ್ರವೇಶ ದರ ಹೆಚ್ಚಳ ಮಾಡದೆ ಇರುವುದನ್ನು ಮನಗಂಡು ಗುತ್ತಿಗೆದಾರರು ಟೆಂಡರ್ ನಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕಿದ್ದಾರೆ ಎಂದು ಪ್ರಾಧಿಕಾರದ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಮರು ಟೆಂಡರ್ ಅವಧಿ…

ಮೈಸೂರು ವಿವಿಗೆ 6ನೇ ಹಂಗಾಮಿ ಕುಲಪತಿಯಾಗಿ ಪ್ರೊ.ಆಯಿಷಾ ಎಂ.ಶರೀಫ್ ನೇಮಕ
ಮೈಸೂರು

ಮೈಸೂರು ವಿವಿಗೆ 6ನೇ ಹಂಗಾಮಿ ಕುಲಪತಿಯಾಗಿ ಪ್ರೊ.ಆಯಿಷಾ ಎಂ.ಶರೀಫ್ ನೇಮಕ

September 22, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 6ನೇ ಹಂಗಾಮಿ ಕುಲಪತಿಗಳಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಆಯಿಷಾ ಎಂ.ಶರೀಫ್ ನೇಮಕವಾಗಿದ್ದಾರೆ. ಇದುವರೆಗೆ ಮೈವಿವಿ ಹಂಗಾಮಿ ಕುಲಪತಿಗಳಾಗಿದ್ದ ಪ್ರೊ.ಟಿ.ಕೆ.ಉಮೇಶ್ ಅವರ ಡೀನ್ ಶಿಪ್ ಅಂತ್ಯಗೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲ ವಜುಬಾಯಿ ರೂಢಾಬಾಯಿ ವಾಲಾರವರು ಇಂದು ಪ್ರೊ.ಆಯಿಷಾ ಎಂ.ಶರೀಫ್ ಅವರನ್ನು ಹಂಗಾಮಿ ಕುಲಪತಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 2017ರ ಜ.6ರಂದು ಪ್ರೊ.ಕೆ.ಎಸ್.ರಂಗಪ್ಪ ಅವರು ಕುಲಪತಿ ಸ್ಥಾನದಿಂದ ನಿವೃತ್ತಿಯಾದ ನಂತರ ಪ್ರೊ.ಆಯಿಷಾ ಎಂ.ಶರೀಫ್‍ರವರು 6ನೇ ಹಂಗಾಮಿ ಕುಲಪತಿಗಳಾಗಿ ನೇಮಕವಾಗಿದ್ದಾರೆ. ಶತಮಾನೋತ್ಸವ ಆಚರಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಖಾಯಂ…

ಮೈಸೂರು ರೈಲು ನಿಲ್ದಾಣದಲ್ಲಿ ಅಪರೂಪದ ಕಲಾ ಶಿಬಿರ
ಮೈಸೂರು

ಮೈಸೂರು ರೈಲು ನಿಲ್ದಾಣದಲ್ಲಿ ಅಪರೂಪದ ಕಲಾ ಶಿಬಿರ

September 22, 2018

ಮೈಸೂರು: ಕಲೆಯನ್ನು ಪ್ರಶಂಸಿ ಸುವ ಮತ್ತು ಉತ್ತೇಜಿಸುವ ದೃಷ್ಟಿಯಿಂದ, ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ‘ಗ್ಯಾಲರಿ ಆಲ್ಟೇರ್ನೇಟಿವ್’ನ ಸಹಯೋಗ ದೊಂದಿಗೆ ಕಲಾ ಶಿಬಿರ ಏರ್ಪಡಿಸಿದ್ದು, ಅದರ ಉದ್ಘಾಟನೆಯನ್ನು ಕರ್ನಾಟಕ ಲಲಿತಾ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಎಂ.ಜೆ. ಕಮಲಾಕ್ಷಿ ಮೈಸೂರು ರೈಲು ನಿಲ್ದಾಣದಲ್ಲಿ ನೆರವೇರಿಸಿದರು. ಶ್ರೀಮತಿ ಕಮಲಾಕ್ಷಿರವರು ಮಾತನಾ ಡುತ್ತಾ, ಚಿತ್ರಕಲೆ ತಪಸ್ಸಿಗೆ ಸಮಾನವೆಂದು ಬಣ್ಣಿಸಿ, ಚಿತ್ರ ಕಲಾವಿದರಿಗೆ ರೈಲ್ವೆ ಇಲಾ ಖೆಯು ಕಲ್ಪಿಸಿ ಕೊಟ್ಟ ಈ ಅವಕಾಶ ಪ್ರಶಂಸನೀಯ ವೆಂದು ತಿಳಿಸಿದರು. ಇತರ ಸರ್ಕಾರಿ ಇಲಾಖೆಗಳು ಕೂಡ…

1 1,374 1,375 1,376 1,377 1,378 1,611
Translate »