ಮೈಸೂರು ರೈಲು ನಿಲ್ದಾಣದಲ್ಲಿ ಅಪರೂಪದ ಕಲಾ ಶಿಬಿರ
ಮೈಸೂರು

ಮೈಸೂರು ರೈಲು ನಿಲ್ದಾಣದಲ್ಲಿ ಅಪರೂಪದ ಕಲಾ ಶಿಬಿರ

September 22, 2018

ಮೈಸೂರು: ಕಲೆಯನ್ನು ಪ್ರಶಂಸಿ ಸುವ ಮತ್ತು ಉತ್ತೇಜಿಸುವ ದೃಷ್ಟಿಯಿಂದ, ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ‘ಗ್ಯಾಲರಿ ಆಲ್ಟೇರ್ನೇಟಿವ್’ನ ಸಹಯೋಗ ದೊಂದಿಗೆ ಕಲಾ ಶಿಬಿರ ಏರ್ಪಡಿಸಿದ್ದು, ಅದರ ಉದ್ಘಾಟನೆಯನ್ನು ಕರ್ನಾಟಕ ಲಲಿತಾ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಎಂ.ಜೆ. ಕಮಲಾಕ್ಷಿ ಮೈಸೂರು ರೈಲು ನಿಲ್ದಾಣದಲ್ಲಿ ನೆರವೇರಿಸಿದರು. ಶ್ರೀಮತಿ ಕಮಲಾಕ್ಷಿರವರು ಮಾತನಾ ಡುತ್ತಾ, ಚಿತ್ರಕಲೆ ತಪಸ್ಸಿಗೆ ಸಮಾನವೆಂದು ಬಣ್ಣಿಸಿ, ಚಿತ್ರ ಕಲಾವಿದರಿಗೆ ರೈಲ್ವೆ ಇಲಾ ಖೆಯು ಕಲ್ಪಿಸಿ ಕೊಟ್ಟ ಈ ಅವಕಾಶ ಪ್ರಶಂಸನೀಯ ವೆಂದು ತಿಳಿಸಿದರು.

ಇತರ ಸರ್ಕಾರಿ ಇಲಾಖೆಗಳು ಕೂಡ ಈ ರೀತಿಯ ಕಲಾ ಶಿಬಿರವನ್ನು ಏರ್ಪ ಡಿಸಿದರೆ ಕಲಾ ಬೆಳವಣಿಗೆಗೆ ಪೆÇ್ರೀತ್ಸಾಹ ಕಾರಿಯಾಗುವುದರದೊಂದಿಗೆ ಕಲಾ ವಿದರ ಆರ್ಥಿಕ ಬೆಳವಣಿಗೆಗೂ ಅನು ಕೂಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾ ಗಿದ್ದ ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯ ಕಲೆಯ ಇತಿಹಾಸ ವಿಭಾಗದ ಮುಖ್ಯಸ್ಥ ವಿಜಯರಾವ್ ಮಾತ ನಾಡಿ, ರೈಲ್ವೆ ಇಲಾಖೆಯು ಕಲಾವಿದರ ವೈಯ ಕ್ತಿಕ ಕನಸ್ಸು ಹಾಗೂ ರೈಲ್ವೆ ಪ್ರಯಾಣಿಕರ ಕನಸ್ಸುಗಳನ್ನು ಬೆಸೆದು ಚಿತ್ರಕಲೆಗಳನ್ನು ರಚಿಸಲು ರೈಲ್ವೆ ಇಲಾಖೆಯು ಒದಗಿಸಿದ ವೇದಿಕೆ ಅಮೂಲ್ಯವಾದುದೆಂದು ಹೇಳಿದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗ್ ಮಾತನಾಡಿ, ಈ ಕಲಾ ಶಿಬಿರವು ಕಲಾವಿದರಲ್ಲದೆ ಪ್ರಯಾ ಣಿಕರು, ಮಾರಾಟಗಾರರು, ರೈಲ್ವೆ ಸಿಬ್ಬಂದಿ ಹಾಗೂ ಕುತೂಹಲಭರಿತ ಜನಸಾಮಾನ್ಯ ರಿಗೂ ಕಲೆಯ ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆಂದು ತಿಳಿಸಿದರು. ಈ ವೇದಿಕೆಯು ಸಮಕಾಲೀನ ನುರಿತ ಮತ್ತು ಬೆಳೆಯು ತ್ತಿರುವ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಪಡಿಸಿ, ಹೊಸ ಆಯಾಮಗಳಲ್ಲಿ ರೈಲ್ವೆ ಸಂಬಂಧಿತ ಕಲಾರಚನೆಗೆ ಸೂಕ್ತ ಅವಕಾಶವೆಂದು ಹೇಳಿದರು. ಈ ಶಿಬಿರವು ಮೈಸೂರು ರೈಲ್ವೆ ವಿಭಾಗದಲ್ಲಿ ಪ್ರಪ್ರಥಮ ವಾಗಿ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಇಂಡಿಯನ್ ಆಯಿಲ್ ಕಾಪೆರ್Çೀರೇಶನ್‍ನ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್.ವರದಾಚಾರಿ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದರು. ಸಂಜೆ 5.00 ಗಂಟೆಗೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ರಂಗಾ ಯಣ ನಿರ್ದೇಶಕಿ ಶ್ರೀಮತಿ ಭಾಗೀರಥಿ ಬಾಯಿ ಕದಮ್ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ರಚಿಸಲ್ಪಟ್ಟ ಕಲಾಕೃತಿಗಳನ್ನು ಸಾರ್ವಜನಿಕರ ವೀಕ್ಷಣೆಗಾಗಿ 22.09.2018 ರಿಂದ 24.09.2018ರವರೆಗೆ ಬೆಳಗ್ಗೆ 10.00 ಗಂಟೆಯಿಂದ ಸಂಜೆ 06.00 ಗಂಟೆವರಗೆ ಮೈಸೂರು ರೈಲ್ವೆ ನಿಲ್ದಾಣದ 1ನೇ ಪ್ಲಾಟ ಫಾರ್ಮ್‍ನಲ್ಲಿ ಪ್ರದರ್ಶನಕ್ಕಿಡಲಾಗುವುದು.

Translate »