ಗೊರೂರು ರಾಮಸ್ವಾಮಿ ಅಯ್ಯಂಗಾರ್ ತಮ್ಮ ಸಾಹಿತ್ಯದಲ್ಲಿ ಗೊರೂರು, ಹೇಮಾವತಿಗೆ ನಾಯಕ ಸ್ಥಾನ ಕಲ್ಪಿಸಿದರು
ಮೈಸೂರು

ಗೊರೂರು ರಾಮಸ್ವಾಮಿ ಅಯ್ಯಂಗಾರ್ ತಮ್ಮ ಸಾಹಿತ್ಯದಲ್ಲಿ ಗೊರೂರು, ಹೇಮಾವತಿಗೆ ನಾಯಕ ಸ್ಥಾನ ಕಲ್ಪಿಸಿದರು

September 22, 2018

ಮೈಸೂರು: -ಹಿಂದಿನ ಕಾಲದಲ್ಲಿದ್ದ ಪ್ರಾದೇಶಿಕ ಸಾಹಿ ತ್ಯದ ನೆಲೆಗಟ್ಟು, ಇಂದು ಕಣ್ಮರೆಯಾಗು ತ್ತಿವೆ. ಇದರಿಂದ ನಮ್ಮ ಗ್ರಾಮಗಳು ಗತಿ ಬಿಂಬದಂತೆ ಭಾಸವಾಗುತ್ತಿವೆ ಎಂದು ಹಾಸನದ ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಹೆಚ್.ಎಲ್. ಮಲ್ಲೇಶ್‍ಗೌಡ ಬೇಸರ ವ್ಯಕ್ತಪಡಿಸಿದರು.

ಮೈಸೂರು ಅರಮನೆ ಉತ್ತರದ್ವಾರದಲ್ಲಿ ರುವ ಕಸಾಪ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಕಲಾಕೂಟ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ನಡೆದ ಸಾಹಿತ್ಯ ಸಂಜೆ ಶೀರ್ಷಿಕೆಯಡಿ `ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬದುಕು ಬರಹ-ಒಂದು ಚಿಂತನೆ’ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
ರಾಮಸ್ವಾಮಿ ಅವರ ಸಾಹಿತ್ಯದಲ್ಲಿ ಗೊರೂರು ಗ್ರಾಮ, ಹೇಮಾವತಿ ನದಿ ಹಾಗೂ ಸುತ್ತಮುತ್ತಲಿನ ಜಾನಪದÀ ಬದು ಕನ್ನು ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ. ಅಲ್ಲದೆ, ಅವರ ಸಾಹಿತ್ಯದಲ್ಲಿ ತಮ್ಮ ಹುಟ್ಟೂರು ಹಾಗೂ ಹೇಮಾವತಿ ನದಿಗೆ ಕಥಾ ನಾಯ ಕನ ಸ್ಥಾನಮಾನ ನೀಡಿ, ಪ್ರಾದೇಶಿಕ ಕಥಾ ವಸ್ತುವಾಗಿ ವರ್ಣಿಸಿದ್ದಾರೆ. ಹೀಗೆ ರಾಮ ಸ್ವಾಮಿಯವರಂತೆ ಊರು, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ಬೆರಳೆಣಿಕೆ ಮಂದಿ ಎಂದು ತಿಳಿಸಿದರು.

ಆರ್.ಕೆ.ನಾರಾಯಣ್ ಅವರ ಸಾಹಿತ್ಯ ದಲ್ಲಿ `ಮಾಲ್ಗುಡಿ’ ಕೇಂದ್ರಬಿಂಬವಾದಂತೆ, ಗೊರೂರು ಗ್ರಾಮ, ಹೇಮಾವತಿ ನದಿ ಇವೆರಡು ರಾಮಸ್ವಾಮಿ ಅವರ ಸಾಹಿತ್ಯ ದಲ್ಲಿ ಕಥಾ ನಾಯಕ ಸ್ಥಾನಮಾನ ಪಡೆದು ದೇಶಾದ್ಯಂತ ಮುನ್ನೆಲೆಗೆ ಬಂದಿದೆ. ಸ್ವಾತಂತ್ರ್ಯ ಚಳವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಹೋರಾಟ, ಕರ್ನಾಟಕ ಏಕೀಕರಣಕ್ಕಾಗಿ ಸಂಘಟನೆ, ಹರಿಜನೋ ದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ನಡೆಸಿದ ಅವಿರತ ಹೋರಾಟ ನಡೆಸಿ, ಅಪ್ರತಿಮ ಗಾಂಧಿವಾದಿಯಾಗಿದ್ದರು. ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು, 1904ರ ಜು.4ರಂದು ಲಕ್ಷಮ್ಮ, ಶ್ರೀನಿವಾಸ ಅಯ್ಯಂಗಾರ್ ದಂಪತಿ ಪುತ್ರರಾಗಿ ಜನಿಸಿದರು. ಗಾಂಧೀಜಿ ಕಂಡ ಗ್ರಾಮೀಣ ಭಾರತವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಗೊರೂರು ಗ್ರಾಮವನ್ನು ಕೇಂದ್ರವಾಗಿಸಿ ಕೊಂಡು ಅವರ ಸಾಹಿತ್ಯದಲ್ಲಿ ಎಲ್ಲಾ ಆಯಾಮಗಳಿಂದಲೂ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅವರ ಸಾಹಿತ್ಯದಲ್ಲಿ ಬಿಂಬ ಗ್ರಾಹಿಯೂ, ಗ್ರಾಮೀಣ ಜೀವನದ ಮಹತ್ವದ ಪಾತ್ರಗಳನ್ನು ಸಜೀವವಾಗಿ ಚಿತ್ರಿಸಿದ್ದಾರೆ. ನಂತರ 12 ವರ್ಷಗಳ ಕಾಲ ರಾಜಕಾರಣಿ ಯಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂದರು.

ತಮ್ಮ ಹಳ್ಳಿಯಲ್ಲಿ ಎಲ್‍ಎಸ್ ಶಿಕ್ಷಣ ವನ್ನು ಮುಗಿಸಿ, ಮುಂದಿನ ವ್ಯಾಸಂಗಕ್ಕಾಗಿ ಹಾಸನದ ಸರ್ಕಾರಿ ಪ್ರೌಢಶಾಲೆಗೆ ಸೇರಿ ಕೊಂಡಿದ್ದಾಗ, ಗಾಂಧೀಜಿಯ ಅಸಹಕಾರ ಚಳವಳಿಯಿಂದ ಆಕರ್ಷಿತರಾದ ರಾಮ ಸ್ವಾಮಿ ಅವರು, ಶಿಕ್ಷಣಕ್ಕೆ ವಿದಾಯ ಹೇಳಿ ದರು. ನಂತರ ಗುಜರಾತಿ ಸಬರಮತಿ ಆಶ್ರಮ ಸೇರಿ, ಗಾಂಧೀಜಿ ಅವರೊಂದಿಗೆ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದು, ಈಗ ಇತಿಹಾಸದ ಭಾಗವಾಗಿದೆ ಎಂದರು.

ರಾಮಸ್ವಾಮಿ ಅವರ ಸಾಹಿತ್ಯ ಸೇವೆ ಸಮೃದ್ಧವಾದುದು. ಪ್ರಬಂಧ, ಕಥೆ, ಕಾದಂ ಬರಿ, ಪ್ರವಾಸಕಥನ, ವಿಮರ್ಶೆ, ಸಾಧಕರ ಜೀವನ ಚರಿತ್ರೆ, ಭಾಷಾಂತರ ಕ್ಷೇತ್ರದಲ್ಲಿ ಅವರ ಕೊಡುಗೆಯಿದೆ. ಇವರ ಸಾಹಿತ್ಯದ ಹಾಸ್ಯ ಪ್ರಜ್ಞೆ, ಹರಿಜನರ ಸಾಂಸ್ಕøತಿಕ ಬದುಕು ಹಾಗೂ ಗ್ರಾಮೀಣ ಭಾಗದ ಜಾನಪದ ಪ್ರಜ್ಞೆಯ ಚಿತ್ರಣ ಓದುಗರ ಮೇಲೆ ಸಾಕಷ್ಟು ಬೀರಿದ್ದು, ಇವರ ಬಹುಮುಖ ಪ್ರತಿಭೆಗೆ ಅನೇಕ ಪ್ರಶಸ್ತಿಗಳು ಬಂದಿವೆ ಎಂದರು.

ಒಟ್ಟಿನಲ್ಲಿ ಕನ್ನಡಕ್ಕೆ ಗೊರೂರರ ಕೊಡುಗೆ ಯೇನೆಂದು ಕೇಳುವವರಿಗೆ ಕುವೆಂಪು ಅವರು ಹೀಗೆ ಹೇಳುತ್ತಾರೆ. ಚಾಲ್ರ್ಸ್ ಡಿಕನ್ಸ್, ಆಲಿವರ್ ಗೋಲ್ಡ್ ಸ್ಮಿತ್, ಎ.ಜಿ. ಗಾರ್ಡಿನರ್ ಸೇರಿದಂತೆ ಮುಂತಾದ ಇಂಗ್ಲಿಷ್ ಲೇಖಕರ ಬರಹಗಳನ್ನು ಓದಿ, ಅಲ್ಲಿನ ಹಾಸ್ಯ ಕಣಜವನ್ನು ರಾಮಸ್ವಾಮಿ ಅವರ ಲೇಖಕದಲ್ಲಿ ಕಾಣಬಹುದಾಗಿದೆ. ಇವರ `ಹೇಮಾವತಿ’ ಕಾದಂಬರಿ ಚಲನ ಚಿತ್ರವಾಗಿ, ಜಯಪ್ರಿಯತೆ ಗಳಿಸಿದೆ. ಹೀಗೆ ರಾಮಸ್ವಾಮಿ ಅವರ 87 ವರ್ಷಗಳ ಜೀವಿ ತಾವಧಿಯಲ್ಲಿ ಸಾರ್ವಜನಿಕ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡು 1991ರಲ್ಲಿ ನಿಧನರಾದರು. ಅವರ ಸಾಧನೆ ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದರು. ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ. ಮಳಲಿ ವಸಂತಕುಮಾರ್, ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹೆಚ್.ಎಂ.ವಿಜಯ ಕುಮಾರ್ ಸೇರಿದಂತೆ ಅನೇಕರಿದ್ದರು.

Translate »