ಮೈಸೂರು

ಕೊಡಗಿಗೆ ನೆರವಾಗಲು ರೈತ ಸಂಘ ಕಾರ್ಯಕ್ರಮ
ಮೈಸೂರು

ಕೊಡಗಿಗೆ ನೆರವಾಗಲು ರೈತ ಸಂಘ ಕಾರ್ಯಕ್ರಮ

September 17, 2018

ಮೈಸೂರು: ರಾಜ್ಯದ ಬರ ಪ್ರದೇಶಗಳು ಹಾಗೂ ನೆರೆ ಹಾವಳಿಗೆ ತುತ್ತಾಗಿರುವ ಕೊಡಗು ಜಿಲ್ಲೆಗೆ ನೆರವಾಗುವ ಸಂಬಂಧ ಕಾರ್ಯಕ್ರಮಗಳನ್ನು ರೂಪಿಸು ವುದು ಮತ್ತು ಅ.2 ಮತ್ತು ನ.30ರಂದು ದೆಹಲಿಯಲ್ಲಿ ನಡೆಯಲಿರುವ ರೈತರ ರ್ಯಾಲಿ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಭಾನುವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಯಿತು. ಮೈಸೂರಿನ ಹುಣಸೂರು ರಸ್ತೆಯಲ್ಲಿ ರುವ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ನಡೆದ ರಾಜ್ಯ ಕಾರ್ಯ ಕಾರಿಣಿ ಸಭೆಯಲ್ಲಿ ರಾಜ್ಯದ…

ಮೈಸೂರಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ
ಮೈಸೂರು

ಮೈಸೂರಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ

September 17, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಕೂರಿಸಲಾಗಿದ್ದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಯು ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಮೈಸೂರು ನಗರ ಸಾಮೂಹಿಕ ವಿನಾ ಯಕ ವಿಸರ್ಜನಾ ಮಂಡಳಿ ವತಿಯಿಂದ ಭಾನುವಾರ ಆಯೋಜಿಸಿದ್ದ 15ನೇ ವರ್ಷದ ಭವ್ಯ ಮೆರವಣಿಗೆಯಲ್ಲಿ ನಗರದ ವೀರನಗೆರೆ, ಎನ್.ಆರ್.ಮೊಹಲ್ಲಾ, ತಿಲಕ್‍ನಗರ, ಕೆಸರೆ, ಕ್ಯಾತಮಾರನಹಳ್ಳಿ, ಉದಯಗಿರಿ, ಕಲ್ಯಾಣಗಿರಿ, ಕುವೆಂಪು ನಗರ, ರಾಮಕೃಷ್ಣನಗರ, ನಾಯ್ಡುನಗರ ಮತ್ತಿತರೆ ಬಡಾವಣೆಗಳಲ್ಲಿ ಕೂರಿಸಲಾಗಿದ್ದ 30ಕ್ಕೂ ಹೆಚ್ಚು ಗಣಪತಿ ವಿಗ್ರಹಗ ಳೊಂದಿಗೆ ವಾಹನಗಳಲ್ಲಿ ಆಗಮಿಸಿದ್ದ ಭಕ್ತರು ಹಾಗೂ ಯುವಜನರು ಮೆರವಣಿಗೆಯಲ್ಲಿ…

ಮ್ಯಾರಾಥಾನ್ ಮೂಲಕ ಸ್ವಾಮಿ ವಿವೇಕಾನಂದರ ಸ್ಮರಣೆ
ಮೈಸೂರು

ಮ್ಯಾರಾಥಾನ್ ಮೂಲಕ ಸ್ವಾಮಿ ವಿವೇಕಾನಂದರ ಸ್ಮರಣೆ

September 17, 2018

ಮೈಸೂರು:  ಬೆಳಂಬೆಳಿಗ್ಗೆಯ ಪ್ರಶಾಂತಮಯ ವಾತಾವರಣದಲ್ಲಿ ನೂರಾರು ಮಂದಿ ಹೆಜ್ಜೆ ಹಾಕಿ ಸ್ವಾಮಿ ವಿವೇಕಾನಂದರನ್ನು ಸ್ಮರಿಸಿ ಸಂಭ್ರಮಿಸಿದರು. ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ದಿಕ್ಸೂಚಿ ಭಾಷಣ ಒಂದು ಐತಿಹಾಸಿಕ ಸನ್ನಿವೇಶವಾಗಿದ್ದು, ಇದೀಗ ವಿವೇಕಾನಂದರ ಈ ಮಾತುಗಳನ್ನಾಡಿ 125 ವರ್ಷಗಳೇ ತುಂಬಿವೆ. ಇದರ ಅಂಗವಾಗಿ ಯುವ ಬ್ರಿಗೇಡ್ ಮೈಸೂರು ಘಟಕದ ವತಿಯಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಮ್ಯಾರಾಥಾನ್ ನಲ್ಲಿ ಯುವಕರು, ಯುವತಿಯರು, ಹಿರಿ ಯರು ಹಾಗೂ ಕಿರಿಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಮೈಸೂರು ಅರಮನೆಯ ಕೋಟೆ…

`ಸ್ವಚ್ಛತಾ ಆಂದೋಲನ, ಸದೃಢ ಭಾರತ’ ಕಾರ್ಯಕ್ರಮ
ಮೈಸೂರು

`ಸ್ವಚ್ಛತಾ ಆಂದೋಲನ, ಸದೃಢ ಭಾರತ’ ಕಾರ್ಯಕ್ರಮ

September 17, 2018

ಮೈಸೂರು:  ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ `ರಕ್ಷಣೆಗಾಗಿ ಸೈನಿಕರು, ಭವಿಷ್ಯಕ್ಕಾಗಿ ಶಿಕ್ಷಕರು, ದೇಶಕ್ಕಾಗಿ ಮೋದಿ’ ವಿಷಯವನ್ನು ಇಟ್ಟುಕೊಂಡು ಸೆ.17ರಂದು ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಸದ್ಭಾವನಾ ದಿನಾಚರಣೆ ಹಮ್ಮಿಕೊಂಡಿ ರುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ್ ಸ್ವಚ್ಛ ಮೈಸೂರು, ಸದೃಢ ಭಾರತ ಘೋಷವಾಕ್ಯದಡಿ ಶಿಕ್ಷಕರಿಗೆ ಸನ್ಮಾನ ಹಾಗೂ ನರೇಂದ್ರ ಮೋದಿ ಹುಟ್ಟಿದ ದಿನದಂದು ಜನಿಸಿದ ಮಕ್ಕಳ…

ಜಗನ್ಮೋಹನ ಅರಮನೆಯಲ್ಲಿ ಲಕ್ಷ ಗೊಂಬೆಗಳ ಪ್ರದರ್ಶನ
ಮೈಸೂರು

ಜಗನ್ಮೋಹನ ಅರಮನೆಯಲ್ಲಿ ಲಕ್ಷ ಗೊಂಬೆಗಳ ಪ್ರದರ್ಶನ

September 17, 2018

ಆಂಧ್ರಪ್ರದೇಶ ಗಾಯಿತ್ರಿ ಸೇವಾ ಟ್ರಸ್ಟ್‍ನಿಂದ ಆಯೋಜನೆ ದಸರಾ ವೇಳೆ ವಿವಿಧ ರಾಜಮನೆತನಗಳ ಸಂಪ್ರದಾಯ ಅನಾವರಣ ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಜಗನ್ಮೋಹನ ಅರಮನೆ ಯಲ್ಲಿ ಗೊಂಬೆಗಳ ಮೇಳ ಮೇಳೈಸಲಿದ್ದು, ಯದು ವಂಶ ಸೇರಿದ ದೇಶದ ವಿವಿಧ ರಾಜಮನೆತನ ಗಳ ಸಂಪ್ರದಾಯ ಮತ್ತು ಆಚರಣೆಯನ್ನು ಒಂದು ಲಕ್ಷಕ್ಕೂ ಹೆಚ್ಚು ಗೊಂಬೆ ಗಳು ಅನಾವರಣಗೊಳಿಸಿ ಮುದ ನೀಡಲಿವೆ. ನಾಡ ಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ಮೈಸೂರಿ ಗರಿಗೆ ಗೊಂಬೆಗಳು ಹೇಳುವ ಕಥೆಯ ರಸದೌತಣವನ್ನು ಉಣಬಡಿಸುವುದಕ್ಕಾಗಿ ರಾಜ ವಂಶಸ್ಥೆ ಪ್ರಮೋದಾದೇವಿ…

ಇಬ್ಭಾಗವಾದ ಕೇರಳದ ಸಮುದ್ರ: ಜನರಲ್ಲಿ ಒಂದೆಡೆ ಕುತೂಹಲ, ಮತ್ತೊಂದೆಡೆ ಭಯ..!
ಮೈಸೂರು

ಇಬ್ಭಾಗವಾದ ಕೇರಳದ ಸಮುದ್ರ: ಜನರಲ್ಲಿ ಒಂದೆಡೆ ಕುತೂಹಲ, ಮತ್ತೊಂದೆಡೆ ಭಯ..!

September 16, 2018

ತಿರುವನಂತಪುರಂ: ಶತಮಾನದಲ್ಲೇ ಕಂಡು ಕೇಳರಿಯದ ಭಾರೀ ಮಳೆ, ಪ್ರವಾಹ ಹಾಗೂ ಭೂ ಕುಸಿತಗಳಿಂದ ಹಲವಾರು ಸಾವು-ನೋವು, ಆಸ್ತಿ-ಪಾಸ್ತಿ ಹಾನಿಯಿಂದ ಕಂಗೆಟ್ಟಿರುವ ಕೇರಳದಲ್ಲಿ ವಿಸ್ಮಯಕಾರಿ ವಿದ್ಯಮಾನವೊಂದು ಜನರಲ್ಲಿ ಆತಂಕ ಮೂಡಿಸಿದೆ. ಕೇರಳದ ಮಲಪ್ಪಂ ಜಿಲ್ಲೆಯ ಪೊನ್ನಾನಿ ತಾಲೂಕಿನ ಪೊನ್ನಾನಿ ಸಮುದ್ರವು ಎರಡು ಭಾಗಗಳಾಗಿದ್ದು, ಜನರು ಭಯಮಿಶ್ರಿತ ಕುತೂಹಲದಿಂದ ತಂಡೋಪತಂಡವಾಗಿ ವೀಕ್ಷಿಸುತ್ತಿದ್ದಾರೆ. ದಂಡೆ ಬಳಿ ಕಳೆದ 3 ದಿನಗಳಿಂದ ಸಮುದ್ರ ಇಬ್ಭಾಗವಾಗಿದ್ದು, ಮಧ್ಯದಲ್ಲಿ ಜನರು 1 ಕಿ.ಮೀ ತನಕ ನಡೆದುಕೊಂಡು ಹೋಗಬಹುದಾಗಿದೆ. ಎಡ ಮತ್ತು ಬಲ ಭಾಗದಲ್ಲಿ ನೀರು ಅಲೆಗಳಂತೆ…

ಸರ್‌ಎಂವಿ ಕೊಡುಗೆಗೆ ಅವರಿಗೆ ಯಾವ ಪ್ರಶಸ್ತಿ ನೀಡಿದರೂ ಕಮ್ಮಿ
ಮೈಸೂರು

ಸರ್‌ಎಂವಿ ಕೊಡುಗೆಗೆ ಅವರಿಗೆ ಯಾವ ಪ್ರಶಸ್ತಿ ನೀಡಿದರೂ ಕಮ್ಮಿ

September 16, 2018

ಮೈಸೂರು:  ಸರ್.ಎಂ. ವಿಶ್ವೇಶ್ವರಯ್ಯ ಅವರು ನೀಡಿರುವ ಕೊಡುಗೆಗೆ ಯಾವ ಪ್ರಶಸ್ತಿಯನ್ನು ನೀಡಿದರೂ ಕಡಿಮೆ ಎಂದು ಬಾಹ್ಯಾಕಾಶ ಆಯೋಗದ ಸದಸ್ಯ ಎ.ಎಸ್.ಕಿರಣ್‍ಕುಮಾರ್ ಅಭಿಪ್ರಾಯಪಟ್ಟರು. ನಗರದ ಜೆಎಲ್‍ಬಿ ರಸ್ತೆಯ ದಿ ಇನ್ಸ್‍ಟಿ ಟೂಷನ್ ಆಫ್ ಇಂಜಿನಿಯರಿಂಗ್ (ಇಂಡಿಯಾ) ಸಂಸ್ಥೆ ವತಿಯಿಂದ ಸರ್‌ಎಂವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 51ನೇ ಇಂಜಿನಿಯರುಗಳ ದಿನಾಚರಣೆ ಮತ್ತು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ ಎಂ.ವಿ. ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ, ಅವರು ಮಾತನಾಡಿದರು. ನಮ್ಮ ದೇಶ ಕಂಡ ಅದ್ಭುತ…

ದಸರಾ ಗಜಪಡೆಯ ಎರಡನೇ ತಂಡದಲ್ಲಿ ಅಭಿಮನ್ಯುವೇ ಬಲಶಾಲಿ
ಮೈಸೂರು

ದಸರಾ ಗಜಪಡೆಯ ಎರಡನೇ ತಂಡದಲ್ಲಿ ಅಭಿಮನ್ಯುವೇ ಬಲಶಾಲಿ

September 16, 2018

ಮೈಸೂರು:  ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಕ್ಯಾಂಪ್‍ಗಳಿಂದ ಅರಮನೆಗೆ ಆಗಮಿಸಿರುವ ಎರಡನೇ ತಂಡದ ಆರು ಆನೆಗಳನ್ನು ಶನಿವಾರ ಹೈವೇ ವೃತ್ತದ ಬಳಿಯಿರುವ ವೇಯಿಂಗ್ ಸೆಂಟರ್‍ನಲ್ಲಿ ತೂಕ ಮಾಡಿಸಲಾಯಿತು. ಶುಕ್ರವಾರ ಸಂಜೆಯಷ್ಟೇ ಅರಮನೆಗೆ ಎರಡನೇ ತಂಡದ ಆನೆಗಳು ಆಗಮಿಸಿದ್ದವು. ಇಂದಿನಿಂದ ಎಲ್ಲಾ ಆನೆಗಳಿಗೂ ತಾಲೀಮು ನಡೆಸಲಾಯಿತು. ಅಲ್ಲದೆ ಎರಡನೆ ಹಂತದ ಆನೆಗಳಿಗೆ ಕಳೆದ ರಾತ್ರಿಯಿಂದಲೇ ಪೌಷ್ಟಿಕ ಆಹಾರ ನೀಡವುದಕ್ಕೆ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ತಂಡದ ಆನೆಗಳ ತೂಕವನ್ನು ನಿಖರವಾಗಿ ದಾಖಲಿಸಲು ವೇಯಿಂಗ್ ಸೆಂಟರ್‍ನಲ್ಲಿ ತೂಕ ಮಾಡಿಸಲಾಯಿತು. ತಾಲೀಮಿಗೆ…

ಎಲ್ ಅಂಡ್ ಟಿ ಸಿಬ್ಬಂದಿಯಿಂದ ಸಂಚಾರ ಜಾಗೃತಿ
ಮೈಸೂರು

ಎಲ್ ಅಂಡ್ ಟಿ ಸಿಬ್ಬಂದಿಯಿಂದ ಸಂಚಾರ ಜಾಗೃತಿ

September 16, 2018

ಮೈಸೂರು:  ಎಲ್ ಆಂಡ್ ಟಿ ಸಂಸ್ಥೆಯ ಕಾರ್ಪೂ ರೇಟ್ ಸಾಮಾಜಿಕ ಹೊಣೆಗಾರಿಕೆ ವಿಭಾಗದ ಸಿಬ್ಬಂದಿ ಇತ್ತೀಚೆಗೆ ಮೈಸೂರು ನಗರದ ನಾಲ್ಕು ಸ್ಥಳಗಳಲ್ಲಿ ಸಂಚಾರಿ ಜಾಗೃತಿ ಅಭಿಯಾನ ಆಯೋಜಿಸಿದ್ದರು. ಸಂಸ್ಥೆಯ 93 ಎಂಜಿನಿಯರ್‌ಗಳು, ವಿವಿ ಮೊಹಲ್ಲಾ, ಕೆ.ಆರ್. ಮೊಹಲ್ಲಾ, ಎನ್.ಆರ್.ಮೊಹಲ್ಲಾ ಹಾಗೂ ದೇವರಾಜ ಮೊಹಲ್ಲಾ ವ್ಯಾಪ್ತಿಯ ಟ್ರಾಫಿಕ್ ಪೊಲೀಸ್ ಠಾಣೆ ಸಿಬ್ಬಂದಿ ನೆರವಿನೊಂದಿಗೆ ನಗರದ ವಿವಿಧೆಡೆ ಸಂಚಾರಿ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಅದರಲ್ಲೂ ವಾಹನ ಚಾಲಕರು, ಪಾದಚಾರಿಗಳಲ್ಲಿ ಜಾಗೃತಿ ಮೂಡಿಸಿದರು. ಮುಂಜಾನೆಯೇ ವಿವಿ ಮೊಹಲ್ಲಾ ಟ್ರಾಫಿಕ್ ಠಾಣೆ ಸಿಬ್ಬಂದಿ…

ಶ್ರೀ ನಟರಾಜ ಮಹಿಳಾ ವಸತಿ ಕಾಲೇಜಲ್ಲಿ  ಜಾಣ-ಜಾಣೆಯರ ಬಳಗ ಉದ್ಘಾಟನೆ
ಮೈಸೂರು

ಶ್ರೀ ನಟರಾಜ ಮಹಿಳಾ ವಸತಿ ಕಾಲೇಜಲ್ಲಿ  ಜಾಣ-ಜಾಣೆಯರ ಬಳಗ ಉದ್ಘಾಟನೆ

September 16, 2018

ಮೈಸೂರು: ಕನ್ನಡ ಪುಸ್ತಕ ಪ್ರಾಧಿ ಕಾರ, ಬೆಂಗಳೂರು ಹಾಗೂ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ “ಜಾಣ-ಜಾಣೆಯರ ಬಳಗದ ಉದ್ಘಾಟನೆ ಮತ್ತು ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿನಿಯರ ಅಭಿಪ್ರಾಯ ಮಂಡನೆ ಸ್ಪರ್ಧೆ” ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಮಹಿಳಾ ಚಿಂತಕ ರಾದ ಡಾ.ಚಂದ್ರಮತಿ ಸೋಂದಾ ಉದ್ಘಾ ಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಭಾವನೆಗಳನ್ನು ಹೊರ ಹಾಕು ವುದು ತಮ್ಮ ಮಾತೃಭಾಷೆಯಲ್ಲಿ. ಹಾಗೆಯೇ ಕರ್ನಾಟಕದಲ್ಲಿ ನಮ್ಮ ಮಾತೃಭಾಷೆ ಕನ್ನಡವಾಗಿದ್ದು, ಅದನ್ನು ನಮ್ಮ ಉಸಿರ ನ್ನಾಗಿ ಮಾಡಿಕೊಳ್ಳಬೇಕು,…

1 1,387 1,388 1,389 1,390 1,391 1,611
Translate »