ಜಗನ್ಮೋಹನ ಅರಮನೆಯಲ್ಲಿ ಲಕ್ಷ ಗೊಂಬೆಗಳ ಪ್ರದರ್ಶನ
ಮೈಸೂರು

ಜಗನ್ಮೋಹನ ಅರಮನೆಯಲ್ಲಿ ಲಕ್ಷ ಗೊಂಬೆಗಳ ಪ್ರದರ್ಶನ

September 17, 2018
  • ಆಂಧ್ರಪ್ರದೇಶ ಗಾಯಿತ್ರಿ ಸೇವಾ ಟ್ರಸ್ಟ್‍ನಿಂದ ಆಯೋಜನೆ
  • ದಸರಾ ವೇಳೆ ವಿವಿಧ ರಾಜಮನೆತನಗಳ ಸಂಪ್ರದಾಯ ಅನಾವರಣ

ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಜಗನ್ಮೋಹನ ಅರಮನೆ ಯಲ್ಲಿ ಗೊಂಬೆಗಳ ಮೇಳ ಮೇಳೈಸಲಿದ್ದು, ಯದು ವಂಶ ಸೇರಿದ ದೇಶದ ವಿವಿಧ ರಾಜಮನೆತನ ಗಳ ಸಂಪ್ರದಾಯ ಮತ್ತು ಆಚರಣೆಯನ್ನು ಒಂದು ಲಕ್ಷಕ್ಕೂ ಹೆಚ್ಚು ಗೊಂಬೆ ಗಳು ಅನಾವರಣಗೊಳಿಸಿ ಮುದ ನೀಡಲಿವೆ. ನಾಡ ಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ಮೈಸೂರಿ ಗರಿಗೆ ಗೊಂಬೆಗಳು ಹೇಳುವ ಕಥೆಯ ರಸದೌತಣವನ್ನು ಉಣಬಡಿಸುವುದಕ್ಕಾಗಿ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಆಂಧ್ರಪ್ರದೇಶದ ಗಾಯಿತ್ರಿ ಸೇವಾ ಟ್ರಸ್ಟ್‍ನೊಂದಿಗೆ ಮಾತುಕತೆ ನಡೆಸಿ ಗೊಂಬೆಗಳ ಪ್ರದರ್ಶನ ನಡೆಸುವಂತೆ ಆಹ್ವಾನಿಸಿದ್ದಾರೆ. ದೇಶದಲ್ಲಿಯೇ ಲಕ್ಷಕ್ಕೂ ಅಧಿಕ ಗೊಂಬೆಗಳ ಸಂಗ್ರಹ ಮಾಡಿರುವ ಸಂಸ್ಥೆ ಗಾಯಿತ್ರಿ ಸೇವಾ ಟ್ರಸ್ಟ್ ಆಗಿದ್ದು, ವಿವಿಧೆಡೆ ಗೊಂಬೆಗಳ ಬೃಹತ್ ಪ್ರದ ರ್ಶನವನ್ನು ಏರ್ಪಡಿಸಿ ಗಮನ ಸೆಳೆದಿದೆ.

ಈ ಹಿನ್ನೆಲೆಯಲ್ಲಿ ದಸರಾ ಮಹೋತ್ಸವ ಆಚರಣೆ ವೇಳೆ ಮೈಸೂರಿಗೆ ದೇಶ-ವಿದೇಶಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಅವರಿಗೆ ಗೊಂಬೆಗಳ ಮೂಲಕ ವಿವಿಧ ಪರಂಪರೆ ಮತ್ತು ಸಂಸ್ಕøತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಗೊಂಬೆಗಳ ಪ್ರದರ್ಶನ ಏರ್ಪಡಿಸುವಂತೆ ಕೋರಲಾಗಿದೆ. ಜಗನ್ಮೋಹನ ಅರಮನೆಯಲ್ಲಿ ಸ್ಥಳಾವಕಾಶವನ್ನು ಪ್ರಮೋದಾದೇವಿ ಒಡೆಯರ್ ಅವರು ನೀಡಿದ್ದು, ಗೊಂಬೆಗಳನ್ನು ಪ್ರದರ್ಶಿಸುವುದಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಗೊಂಬೆಗಳ ಪ್ರದರ್ಶನ ಕುರಿತು ಮಾತನಾಡಿದ ಪ್ರಮೋದಾದೇವಿ ಒಡೆಯರ್ ಅವರು ಗಾಯಿತ್ರಿ ಸೇವಾ ಟ್ರಸ್ಟ್ ಲಕ್ಷಕ್ಕೂ ಅಧಿಕ ಗೊಂಬೆಗಳನ್ನು ಹೊಂದಿದೆ. ಅದರಲ್ಲಿ ಮೈಸೂರು ರಾಜಮನೆತನ ಸೇರಿದಂತೆ ದೇಶದ ವಿವಿಧ ರಾಜಮನೆತನಗಳಲ್ಲಿನ ಸಂಪ್ರದಾಯ ಮತ್ತು ಪರಂಪರೆಯನ್ನು ವಿವರಿಸುವ ಗೊಂಬೆಗಳು ಅವರ ಬಳಿ ಇದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬೃಹತ್ ಗೊಂಬೆ ಪ್ರದರ್ಶನಕ್ಕಾಗಿ ಸ್ಥಳಾವಕಾಶ ನೀಡಲಾಗಿದ್ದು, ನವರಾತ್ರಿಯ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗೊಂಬೆಗಳು ಜಗನ್ಮೋಹನ ಅರಮನೆಯ ಆವರಣದಲ್ಲಿ ಪ್ರದರ್ಶನಗೊಳ್ಳಲಿದೆ. ಇದಕ್ಕೆ ಗಾಯಿತ್ರಿ ಸೇವಾ ಟ್ರಸ್ಟ್ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಿದೆ. ಪ್ರವೇಶ ಶುಲ್ಕದ ವಿಚಾರದಲ್ಲಿ ಮೈಸೂರು ರಾಜಮನೆತನ ಮಧ್ಯ ಪ್ರವೇಶಿಸುವುದಿಲ್ಲ. ಕೇವಲ ಸ್ಥಳಾವಕಾಶದ ವ್ಯವಸ್ಥೆಯನ್ನು ನಾವು ಮಾಡಿಕೊಟ್ಟಿದ್ದೇವೆ. ಗೊಂಬೆಗಳ ಪ್ರದರ್ಶನ ನಗರದ ಜನತೆಗೆ ಮುದ ನೀಡಿ ಆಕರ್ಷಿಸಲಿದೆ ಎಂದು ಅವರು ವಿವರಿಸಿದರು.

Translate »