ಕೊಡಗಿಗೆ ನೆರವಾಗಲು ರೈತ ಸಂಘ ಕಾರ್ಯಕ್ರಮ
ಮೈಸೂರು

ಕೊಡಗಿಗೆ ನೆರವಾಗಲು ರೈತ ಸಂಘ ಕಾರ್ಯಕ್ರಮ

September 17, 2018

ಮೈಸೂರು: ರಾಜ್ಯದ ಬರ ಪ್ರದೇಶಗಳು ಹಾಗೂ ನೆರೆ ಹಾವಳಿಗೆ ತುತ್ತಾಗಿರುವ ಕೊಡಗು ಜಿಲ್ಲೆಗೆ ನೆರವಾಗುವ ಸಂಬಂಧ ಕಾರ್ಯಕ್ರಮಗಳನ್ನು ರೂಪಿಸು ವುದು ಮತ್ತು ಅ.2 ಮತ್ತು ನ.30ರಂದು ದೆಹಲಿಯಲ್ಲಿ ನಡೆಯಲಿರುವ ರೈತರ ರ್ಯಾಲಿ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಭಾನುವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಯಿತು.

ಮೈಸೂರಿನ ಹುಣಸೂರು ರಸ್ತೆಯಲ್ಲಿ ರುವ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ನಡೆದ ರಾಜ್ಯ ಕಾರ್ಯ ಕಾರಿಣಿ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯ ದರ್ಶಿ ಮಾತನಾಡಿ, ಅ.2ರಂದು ದೆಹಲಿ ಯಲ್ಲಿ ಭಾರತೀಯ ರೈತ ಸಂಘಟನೆಗಳ ಸಮ ನ್ವಯ ಸಮಿತಿ ನೇತೃತ್ವದಲ್ಲಿ ರಾಷ್ಟ್ರ ಮಟ್ಟದ ಸಭೆ ನಡೆಯಲಿದೆ. ಅದೇ ರೀತಿ ನ.30ರಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿ ನೇತೃತ್ವದಲ್ಲಿ ದೆಹಲಿಯಲ್ಲಿ ರೈತರ ಬೃಹತ್ ರ್ಯಾಲಿ ನಡೆಯಲಿದ್ದು, ಈ ಎರಡೂ ಕಾರ್ಯ ಕ್ರಮಗಳು ರೈತಪರ ಕಾಳಜಿ ಹಿನ್ನೆಲೆಯಲ್ಲಿ ನಡೆಯುತ್ತಿವೆ. ಹೀಗಾಗಿ ರಾಜ್ಯ ರೈತ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಬೇಕಾಗು ತ್ತದೆ ಎಂದು ತಿಳಿಸಿದರು.

ಮುಂಬರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ರೈತ ಮುಖಂಡರೂ ಆದ ಸಂಸದ ರಾಜು ಶೆಟ್ಟಿ ಅವರು ರೈತಪರ ವಾದ `ಋಣಮುಕ್ತ’ ಹಾಗೂ `ಲಾಭ ದಾಯಕ ಬೆಲೆ’ ಎಂಬ ಖಾಸಗಿ ಬಿಲ್ಲುಗಳನ್ನು ಮಂಡಿ ಸಲಿದ್ದಾರೆ. ಈ ಬಿಲ್ಲುಗಳಿಗೆ ಸುಮಾರು 21 ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಈ ವಿಷಯಗಳಿಗೆ ಬೆಂಬಲ ಸೂಚಿಸಿ ನ.30ರಂದು ರೈತರ ರ್ಯಾಲಿ ನಡೆಯಲಿದೆ ಎಂದು ವಿವರಿಸಿದರು.

ದೆಹಲಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊ ಳ್ಳುವ ಸಂಬಂಧ ಅಭಿಪ್ರಾಯ ವ್ಯಕ್ತಪಡಿ ಸಿದ ವಿವಿಧ ಜಿಲ್ಲೆಯ ಪದಾಧಿಕಾರಿಗಳು, ಅ.2ರ ವೇಳೆಯಲ್ಲಿ ಬೇಸಾಯದ ಚಟು ವಟಿಕೆಗಳು ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಸಂಘಟಿಸಲು ಕಷ್ಟಸಾಧ್ಯ. ಹೀಗಾಗಿ ಅ.2ಕ್ಕೆ ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲವಾದರೂ ನ.30ರಂದು ನಡೆಯುವ ರ್ಯಾಲಿಯಲ್ಲಿ ಹೆಚ್ಚು ಮಂದಿ ಭಾಗವಹಿಸಲು ವ್ಯವಸ್ಥೆ ಮಾಡಬಹುದು ಎಂದು ತಿಳಿಸಿದರು.

ಬಳಿಕ ಮಾತನಾಡಿದ ಬಡಗಲಪುರ ನಾಗೇಂದ್ರ, ಕಡಿಮೆ ಸಂಖ್ಯೆಯಾದರೂ ಅ.2ರಂದು ಕೂಡ ರಾಜ್ಯ ರೈತ ಸಂಘ ಪಾಲ್ಗೊಳ್ಳಲೇಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲೆಗಳ ಪದಾಧಿಕಾರಿಗಳು ಕನಿಷ್ಠ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಯುವ ರೈತ ಕಾರ್ಯಾಗಾರ: ಚಾಮರಾಜ ನಗರ ಜಿಲ್ಲೆಯ ಹೊಂಡರಬಾಳು ಅಮೃತ ಭೂಮಿಯಲ್ಲಿ ಸೆ.21, 22 ಮತ್ತು 23ರಂದು ರೈತ ಸಂಘದ ವತಿಯಿಂದ ನಡೆಯಲಿ ರುವ ಯುವ ರೈತ ಕಾರ್ಯಾಗಾರದಲ್ಲಿ ಪ್ರತಿ ಜಿಲ್ಲೆಯಿಂದ ಐವರು ಯುವಕರು ಹಾಗೂ ಐವರು ಯುವತಿಯರನ್ನು ಪಾಲ್ಗೊಳ್ಳಲು ವ್ಯವಸ್ಥೆ ಮಾಡುವಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳಿಗೆ ಸಲಹೆ ನೀಡಲಾಯಿತು.
ಸೆ.17ರಂದು ಸ್ವರಾಜ್ ಇಂಡಿಯಾ ಸಭೆ: ಮೈಸೂರಿನಲ್ಲಿ ಸೆ.17ರಂದು ಸ್ವರಾಜ್ ಇಂಡಿಯಾ ಸಭೆ ನಡೆಯಲಿದ್ದು, ಈ ಸಭೆ ಯಲ್ಲಿ ರಾಜ್ಯ ಮಟ್ಟದ ಪದಾಧಿಕಾರಿ ಗಳ ಆಯ್ಕೆ ನಡೆಯಲಿದೆ. ಹೀಗಾಗಿ ಈ ಸಭೆಗೆ ಸ್ವರಾಜ್ ಇಂಡಿಯಾ ಪದಾಧಿಕಾರಿಗಳು ಹಾಗೂ ಸದಸ್ಯರು ಕಡ್ಡಾಯವಾಗಿ ಪಾಲ್ಗೊ ಳ್ಳುವಂತೆ ಇದೇ ವೇಳೆ ತಿಳಿಸಲಾಯಿತು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾ ಧರ್, ಮೈಸೂರು ಜಿಲ್ಲಾಧ್ಯಕ್ಷ ಹೊಸಕೋಟೆ ಬಸವರಾಜು, ಚಾಮರಾಜನಗರ ಜಿಲ್ಲಾ ಮಟ್ಟದ ಪದಾಧಿಕಾರಿ ಸಿದ್ದರಾಜು, ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ರಾಮ ನಗರ ಜಿಲ್ಲಾಧ್ಯಕ್ಷ ಮಲ್ಲಯ್ಯ, ಬಾಗಲಕೋಟೆ ಜಿಲ್ಲೆಯ ಕಾರ್ಯಾಧ್ಯಕ್ಷ ಸಿದ್ದಪ್ಪ ಗುರುಪಾದಪ್ಪ ಟಗ್ಗಿ, ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ಶಿವಪ್ಪ, ಹಾಸನ ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಮತ್ತಿತರರು ಪಾಲ್ಗೊಂಡಿದ್ದರು.

Translate »