ಮೈಸೂರು, ಜ.10(ಆರ್‍ಕೆ)-ತಲೆಮರೆಸಿ ಕೊಂಡಿರುವ, ವೇಶ್ಯಾವಾಟಿಕೆಯೂ ಸೇರಿದಂತೆ ಇನ್ನಿತರೆ ಅಕ್ರಮ ದಂಧೆಕೋರ ಕೆ.ಎಸ್.ಮಂಜು ನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಶೀಘ್ರವೇ ಬಂಧಿಸುವುದಾಗಿ ಕಾನೂನು-ಸುವ್ಯ ವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಸ್ಯಾಂಟ್ರೋ ರವಿ ಪ್ರಕರಣ ಸಂಬಂಧ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಸಂಗ್ರಹಿಸಿದ ಅವರು, ದೂರುದಾರರಾದ ಸಂತ್ರಸ್ತೆ ಯನ್ನು ವಿಚಾರಣೆ ನಡೆಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದರು. ಮೈಸೂರು, ಮಂಡ್ಯ, ರಾಮನಗರ ಹಾಗೂ…
ಅಂಡಮಾನ್‍ನಲ್ಲಿ ಸ್ಯಾಂಟ್ರೋ ರವಿ?
January 11, 2023ಈ ನಡುವೆ ಸ್ಯಾಂಟ್ರೋ ರವಿ ಅಂಡಮಾನ್ ನಲ್ಲಿ ಅಡಗಿದ್ದಾನೆ ಎಂಬ ಮಾಹಿತಿಯ ಜಾಡು ಹಿಡಿದಿರುವ ಪೊಲೀಸರ ಒಂದು ತನಿಖಾ ತಂಡ ಅಲ್ಲಿಗೂ ತೆರಳಿದೆ ಎಂದು ಬಲ್ಲ ಮೂಲ ಗಳು ತಿಳಿಸಿವೆ. ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಬೇರೆ ಮೊಬೈಲ್‍ನಿಂದ ಕಾರ್ಯಾ ಚರಣೆ ನಡೆಸುತ್ತಿರುವ ಆತ, ದಿನದಿಂದ ದಿನಕ್ಕೆ ಸ್ಥಳ ಬದಲಾವಣೆ ಮಾಡುತ್ತಿದ್ದು, ಗುರುತು ಸಿಗದಂತೆ ವೇಷ ಬದಲಾಯಿಸಿಕೊಂಡು ಅಡಗಿದ್ದಾನೆ ಎಂದು ಹೇಳಲಾಗುತ್ತಿದೆ. ಮೈಸೂರು, ಜ.10(ಆರ್‍ಕೆ)-ರಾಜ್ಯವನ್ನೇ ತಲ್ಲಣಗೊಳಿಸಿರುವ ಸ್ಯಾಂಟ್ರೋ ರವಿ ವೇಶ್ಯಾವಾಟಿಕೆ ಹಾಗೂ ಅಕ್ರಮ ಚಟುವಟಿಕೆ ದಂಧೆ…
ಚಾಮುಂಡಿಬೆಟ್ಟದ ದೇವಿಕೆರೆ ಪುನರ್‍ಜೀವನಗೊಳಿಸುವ ಕಾರ್ಯ ಆರಂಭ
January 10, 2023ಮೈಸೂರು, ಜ.9- ಚಾಮುಂಡಿಬೆಟ್ಟದಲ್ಲಿ ಧಾರ್ಮಿಕ ಸನ್ನಿಧಿಯ ಮಹತ್ವದ ಕುರುಹಾಗಿರುವ ದೇವಿಕೆರೆಗೆ ಹೊಸ ರೂಪ ನೀಡಲು 7.5 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾ ವರಿ ಇಲಾಖೆ ಅಭಿವೃದ್ಧಿ ಕಾರ್ಯ ಆರಂಭಿಸಿದೆ. ನವರಾತ್ರಿ ಬಳಿಕ ನಡೆಯುವ ತೆಪ್ಪೋತ್ಸವ ಸೇರಿದಂತೆ ಹಲವು ಸಂದರ್ಭಗಳಲ್ಲಿ ಚಾಮುಂಡೇಶ್ವರಿ ದೇವಿಯ ಪೂಜಾ ಕಾರ್ಯದಲ್ಲಿ ದೇವಿಕೆರೆಗೆ ಮಹತ್ವದ ಸ್ಥಾನವಿದೆ. ದೇವಿಕೆರೆಯಲ್ಲಿನ ನೀರನ್ನು ಬೆಟ್ಟದ ದೇವಾಲಯಕ್ಕೆ ತಂದು ಪೂಜಾಕಾರ್ಯದಲ್ಲಿ ಬಳಸುವ ಸಂಪ್ರದಾಯವಿದ್ದು, ಕೆಲ ವರ್ಷಗಳಿಂದ ಚಾಮುಂಡಿಬೆಟ್ಟದ ವಿವಿಧ ಬೀದಿಗಳಿಂದ ಕೊಳಚೆ ನೀರು ಇಳಿಜಾರಿನ ಪ್ರದೇಶದಲ್ಲಿ ಹರಿದು ದೇವಿಕೆರೆ…
ಬಹುಮಹಡಿ ವಾಹನ ನಿಲ್ದಾಣ ಸಂಕೀರ್ಣ ನಿರ್ಮಾಣಕ್ಕೆ ಪಾಲಿಕೆಗೆ ಭೂಮಿ ಮಂಜೂರು
January 10, 2023ಮೈಸೂರು,ಜ.9(ಪಿಎಂ)-ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಬಹುಮಹಡಿ ವಾಹನ ನಿಲ್ದಾಣ ಕಟ್ಟಡ (ಮಲ್ಟಿ ಲೆವೆಲ್ ವೆಹಿಕಲ್ ಪಾರ್ಕಿಂಗ್ ಕಾಂಪ್ಲೆಕ್ಸ್) ನಿರ್ಮಿಸಲು ಪಾಲಿಕೆಗೆ ಭೂಮಿ ಮಂಜೂರು, ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಭೂಮಿ ನಿಗದಿ, ಸಾವಿರ ಎಕರೆಯಲ್ಲಿ ನಿವೇಶನಗಳ ನಿರ್ಮಾಣ ಯೋಜನೆಗೆ ಕ್ರಮ ವಹಿ ಸುವುದೂ ಸೇರಿದಂತೆ ನಗರದ ಅಭಿವೃದ್ಧಿಗೆ ಪೂರಕ ವಾಗಿ ಹಲವು ಮಹತ್ವದ ನಿರ್ಣಯಗಳನ್ನು ಇತ್ತೀಚೆಗೆ ನಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸಭೆಯಲ್ಲಿ ಕೈಗೊಳ್ಳಲಾಗಿದೆ. ಮುಡಾ ಸಭಾಂಗಣದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ…
ದಸರಾ ವಸ್ತುಪ್ರದರ್ಶನ ಆವರಣದಲ್ಲಿ ವರ್ಷಪೂರ್ತಿ ಸ್ವದೇಶಿ ವಸ್ತುಗಳ ಮಾರಾಟ
January 7, 2023ಮೈಸೂರು, ಜ. 6(ಆರ್‍ಕೆ)- ಕೇಂದ್ರ ಸರ್ಕಾರದ ‘ಸ್ವದೇಶ ದರ್ಶನ’ ಯೋಜನೆಯಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೈಸೂರು ನಗರ ಆಯ್ಕೆಯಾ ಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿ ಸಿದ್ದಾರೆ. ಮೈಸೂ ರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಜಾರಿಗೆ ತಂದಿರುವ ಸ್ವದೇಶ ದರ್ಶನ ಮಹತ್ವಾಕಾಂಕ್ಷೆ ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯದ ಮೈಸೂರು ಮತ್ತು ಹಂಪಿಯನ್ನು ಆಯ್ಕೆ ಮಾಡಲಾಗಿದ್ದು, ಈ ಬಗ್ಗೆ ಇಷ್ಟರಲ್ಲೇ ಅಧಿಕೃತ ಆದೇಶ ಹೊರ ಬೀಳಲಿದೆ ಎಂದರು. ಈ…
ಫೆಬ್ರವರಿಯಿಂದ ಖಾತಾ ನೀಡಿಕೆ
January 7, 2023ಮೈಸೂರು, ಜ.6(ಎಂಟಿವೈ)- ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ನೂತನ ನಗರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಫೆಬ್ರವರಿ ಮೊದಲ ವಾರದಿಂದ ಖಾತಾ ನೀಡಲಾಗುವುದು. ಇದಕ್ಕಾಗಿ `ಇ-ಆಸ್ತಿ’ ತಂತ್ರಾಂಶ ರೂಪಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ತಿಳಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಮೈಸೂರು ಮಹಾ ನಗರ ಪಾಲಿಕೆ ಗಡಿಗೆ ಹೊಂದಿಕೊಂಡಿ ರುವ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ 10 ಗ್ರಾಮ ಪಂಚಾಯ್ತಿಗಳನ್ನು(ಕೆಲವು ಪೂರ್ಣ ಮತ್ತು ಕೆಲವು ಭಾಗಶಃ)…
ನಿರೀಕ್ಷಿತ ಗುರಿಸಾಧನೆಗೆ ವಿದ್ಯಾರ್ಹತೆ ಜೊತೆಗೆ ಕೌಶಲ್ಯ ಅತ್ಯಗತ್ಯ
January 7, 2023ಮೈಸೂರು, ಜ. 6 (ಆರ್‍ಕೆ)-ಜೀವನದಲ್ಲಿ ಗುರಿ ಸಾಧನೆಗೆ ವಿದ್ಯಾರ್ಹತೆ ಜೊತೆಗೆ ಕೌಶಲ್ಯಾಭಿವೃದ್ಧಿ ಅತ್ಯಗತ್ಯ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (ಕೆಎಸ್‍ಟಿಡಿಸಿ)ದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಡಿ.ಗೌಡ, ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಬಿ.ಎನ್.ಬಹ ದ್ದೂರ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸೈನ್ಸಸ್ (ಬಿಎಂಎಂಎಸ್) ವತಿಯಿಂದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಿದ್ದ `ಕೌಶಲ್ಯ’ ಭಾರತ-ಸವಾಲುಗಳು ಮತ್ತು ಅವಕಾಶಗಳು ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವಿಜ್ಞಾನ-ತಂತ್ರಜ್ಞಾನ ಅತೀ ವೇಗವಾಗಿ ಬೆಳೆಯುತ್ತಿರುವ…
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯದಲ್ಲಿ ಸಂಚಾರಕ್ಕೆ ಮುಕ್ತ
January 6, 2023ಮೈಸೂರು,ಜ.5(ಆರ್‍ಕೆ)-ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು 2023ರ ಫೆಬ್ರವರಿ ಮಾಸಾಂತ್ಯಕ್ಕೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಸಂಸದ ಪ್ರತಾಪ್‍ಸಿಂಹ ಅವರೊಂದಿಗೆ ಇಂದು ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್‍ವೇ ಅನ್ನು ಹೆಲಿಕಾಪ್ಟರ್‍ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ರಾಮನಗರ ಜಿಲ್ಲೆ ಜೀಗೇನಹಳ್ಳಿ (ಕೆಂಪೇಗೌಡನದೊಡ್ಡಿ) ಬಳಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 117 ಕಿ.ಮೀ. ಉದ್ದದ ಈ ಹೆದ್ದಾರಿಯನ್ನು 8,408 ಕೋಟಿ ರೂ. ವೆಚ್ಚದಲ್ಲಿ ಎರಡು ಪ್ಯಾಕೇಜ್‍ಗಳಲ್ಲಿ ನಿರ್ಮಿಸಲಾಗಿದೆ. ಶೇ.90ರಷ್ಟು ಕಾಮಗಾರಿ…
ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ರಾಜ್ಯದ ಹೆಗ್ಗಳಿಕೆ
January 6, 2023ಮೈಸೂರು, ಜ.5(ಆರ್‍ಕೆ)- ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿದ್ದ ಹೆಲಿಕಾಪ್ಟರ್ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಇಂದು ಲ್ಯಾಂಡಿಂಗ್ ಆಯಿತು. ಇದರೊಂದಿಗೆ ಹೆಲಿಕಾಪ್ಟರ್ ಲ್ಯಾಂಡ್ ಆದ ರಾಜ್ಯದ ಮೊದಲ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ದಾಖಲೆ ಬರೆಯಿತು. ಮಾತ್ರವಲ್ಲ, ಇದೊಂದು ಪ್ರಥಮ ಯಶಸ್ವಿ ಪ್ರಯೋಗವೂ ಆಗಿದೆ. ಮೈಸೂರು-ಬೆಂಗಳೂರು ದಶಪಥ ಎಕ್ಸ್ ಪ್ರೆಸ್ ಕಾರಿಡಾರ್ ಯೋಜನೆ ಪರಿಶೀಲನೆ ಗಾಗಿ ಆಗಮಿಸಿದ್ದ ಸಚಿವರು, ಸಂಸದ ಪ್ರತಾಪ್ ಸಿಂಹರೊಡನೆ…
ಅರ್ಹ ಮತದಾರ ಸಂಖ್ಯೆ 25,59,855,30,650 ಹೊಸ ಸೇರ್ಪಡೆ, 22,625 ರದ್ದು
January 6, 2023ಮೈಸೂರು, ಜ.5- ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಇಂದು(ಜ.5) ಅಂತಿಮ ಮತದಾರರ ಪಟ್ಟಿ ಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟ ಸಂಬಂಧ ಹಮ್ಮಿಕೊಂಡಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ರಾಜ್ಯ ಇವರ ಅಧಿ ಕೃತ ಜಾಲತಾಣ hಣಣಠಿs://ಛಿeo.ಞಚಿಡಿಟಿಚಿಣಚಿಞಚಿ.gov.iಟಿ ದಲ್ಲಿ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ…