ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯದಲ್ಲಿ ಸಂಚಾರಕ್ಕೆ ಮುಕ್ತ
ಮೈಸೂರು

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯದಲ್ಲಿ ಸಂಚಾರಕ್ಕೆ ಮುಕ್ತ

January 6, 2023

ಮೈಸೂರು,ಜ.5(ಆರ್‍ಕೆ)-ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು 2023ರ ಫೆಬ್ರವರಿ ಮಾಸಾಂತ್ಯಕ್ಕೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಸಂಸದ ಪ್ರತಾಪ್‍ಸಿಂಹ ಅವರೊಂದಿಗೆ ಇಂದು ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್‍ವೇ ಅನ್ನು ಹೆಲಿಕಾಪ್ಟರ್‍ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ರಾಮನಗರ ಜಿಲ್ಲೆ ಜೀಗೇನಹಳ್ಳಿ (ಕೆಂಪೇಗೌಡನದೊಡ್ಡಿ) ಬಳಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 117 ಕಿ.ಮೀ. ಉದ್ದದ ಈ ಹೆದ್ದಾರಿಯನ್ನು 8,408 ಕೋಟಿ ರೂ. ವೆಚ್ಚದಲ್ಲಿ ಎರಡು ಪ್ಯಾಕೇಜ್‍ಗಳಲ್ಲಿ ನಿರ್ಮಿಸಲಾಗಿದೆ. ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕೆಲಸವನ್ನು ತ್ವರಿತವಾಗಿ ಮುಗಿಸಿ ಫೆಬ್ರವರಿ ಅಂತ್ಯಕ್ಕೆ ಪ್ರಧಾನಮಂತ್ರಿಗಳಿಂದ ಉದ್ಘಾಟಿಸಿ ವಾಹನ ಸಂಚಾರಕ್ಕೆ ಮುಕ್ತ ಗೊಳಿಸಲಾಗುವುದು ಎಂದರು. 6 ಪಥದ ಮುಖ್ಯರಸ್ತೆ ಹಾಗೂ ಎರಡೂ ಬದಿಯಲ್ಲಿ 4 ಸರ್ವಿಸ್ ರೋಡ್ ಹೊಂದಿರುವ ಹತ್ತು ಪಥದ ರಾಷ್ಟ್ರೀಯ ಹೆದ್ದಾರಿಗೆ 8,408 ಕೋಟಿ ರೂ. ವೆಚ್ಚ ಮಾಡಲಾಗಿದೆ. 117 ಕಿಮೀ ಪೈಕಿ 52 ಕಿಮೀ ಹಸಿರು ವಲಯದಿಂದ ಕೂಡಿದ್ದು, 5 ಕಡೆ ಬೈಪಾಸ್ ಇರುವು ದರಿಂದ ನಗರಗಳಲ್ಲಿನ ವಾಹನ ದಟ್ಟಣೆ ಸಮಸ್ಯೆ ಪರಿಹಾರ ವಾದಂತಾಗಿದೆ ಎಂದು ಅವರು ತಿಳಿಸಿದರು.

ಈ ಯೋಜನೆಯಿಂದಾಗಿ ಮೈಸೂರಿನಿಂದ ಬೆಂಗಳೂರು ನಗರದ ಪ್ರಯಾಣ ಅವಧಿ ಗಣನೀಯವಾಗಿ ಕಡಿಮೆಯಾ ಗಲಿದ್ದು, ಪ್ರಯಾಸವಿಲ್ಲದೆ ಒಂದೂವರೆಯಿಂದ 2 ಗಂಟೆ ಯೊಳಗೆ ತಲುಪಬಹುದು. ಈ ಹೆದ್ದಾರಿಯಿಂದ ಮೈಸೂರು, ಶ್ರೀರಂಗಪಟ್ಟಣ, ಕೊಡಗು, ಊಟಿ ಮತ್ತು ಕೇರಳದ ಪ್ರವಾಸಿ ತಾಣಗಳಿಗೆ ತ್ವರಿತ ಸಂಪರ್ಕ ಸಾಧ್ಯವಾಗಲಿದೆ. ಅಲ್ಲದೆ ಬೆಂಗ ಳೂರು ನಗರದ ಒತ್ತಡ ಹಾಗೂ ಕೈಗಾರಿಕಾ ಚಟುವಟಿಕೆಗಳು ಸಾಂಸ್ಕøತಿಕ ನಗರ ಮೈಸೂರಿಗೆ ಸ್ಥಳಾಂತರವಾಗಲು ಪೂರಕ ವಾಗಿದೆ ಎಂದು ಗಡ್ಕರಿ ತಿಳಿಸಿದರು.

ಪ್ರಯಾಣದ ಅವಧಿ ಕಡಿಮೆಯಾಗಿರುವುದರಿಂದ ಮೈಸೂರಿನಲ್ಲಿ ಹೂಡಿಕೆಗೆ ಪ್ರೇರಣೆಯಾದಂತಾಗುತ್ತದೆಯಲ್ಲದೆ, ಐಟಿ-ಬಿಟಿ ಕಂಪನಿಗಳ ಸ್ಥಾಪನೆಗೆ ಅನು ಕೂಲವಾಗಲಿದೆ. ರಿಯಲ್ ಎಸ್ಟೇಟ್ ಉದ್ಯಮ, ಶಿಕ್ಷಣ ಸಂಸ್ಥೆಗಳು ಹೊಸ ಕೋರ್ಸ್ ಆರಂಭಿಸಿ ವಿಸ್ತರಿಸಲು ಸಹಕಾರಿಯಾಗಲಿದೆ. ಹೆದ್ದಾರಿ ನಿರ್ಮಾಣದಲ್ಲಿ ಪರಿಣತಿ ಹೊಂದಿದ ಸಂಸ್ಥೆಯಿಂದ ವಿನ್ಯಾಸ ಮಾಡಿಸಿ ಅದರನ್ವಯ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಲಾಗಿದೆ, ಇದರಿಂದ ಪ್ರಯಾಣದ ಅವಧಿ ಕಡಿತ ಮಾತ್ರವಲ್ಲ ಇಂಧನ ಉಳಿತಾಯವೂ ಆಗಲಿದ್ದು, ಎರಡೂ ಬದಿಯಲ್ಲಿ ಉದ್ದಿಮೆಗಳು, ಗುಡಿಗಾರಿಕೆ ಉತ್ಪನ್ನಗಳ ಮಾರಾಟ, ಟೌನ್‍ಶಿಪ್‍ಗಳು ತಲೆ ಎತ್ತಲಿದ್ದು, ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ಇದೇ ಸಂದರ್ಭ ನುಡಿದರು. ಕುಂಬಳಗೋಡು, ಬಿಡದಿ, ಗೆಜ್ಜಲಗೆರೆ ಹಾಗೂ ತೂಬಿನಕೆರೆ ಇಂಡಸ್ಟ್ರಿಯಲ್ ಟೌನ್‍ಶಿಪ್‍ಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಅಲ್ಲಿನ ಕೈಗಾರಿಕೋದ್ಯಮಕ್ಕೆ ಪೂರಕ ಸೌಲಭ್ಯ, ಸಾರ್ವಜನಿಕ ಸಾರಿಗೆ, ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.

ಬೆಂಗಳೂರು-ಕಡಪ-ವಿಜಯವಾಡ: ಕೇಂದ್ರ ಸರ್ಕಾರವು ಬೆಂಗಳೂರು-ಕಡಪ-ವಿಜಯವಾಡ ನಡುವೆ 342 ಕಿಮೀ ಹಸಿರು ವಲಯವುಳ್ಳ ಸುವಿಶಾಲ ಹೆದ್ದಾರಿ ಕಾರಿಡಾರ್ ಯೋಜನೆಯನ್ನು 13,600 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಇದರಿಂದ ಕರ್ನಾಟಕ ಮತ್ತು ಆಂಧ್ರಪ್ರದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆಯಲ್ಲದೆ 75 ಕಿಮೀ ಅಂತರ ಕಡಿತಗೊಂಡು, 5 ಗಂಟೆ ಪ್ರಯಾಣದ ಅವಧಿಯೂ ಕಡಿಮೆಯಾಗಲಿದೆ ಎಂದರು.
ಬೆಂಗಳೂರು-ಚೆನ್ನೈ ಎಕ್ಸ್‍ಪೆಸ್ ವೇ: 16,730 ಕೋಟಿ ರೂ. ವೆಚ್ಚದಲ್ಲಿ 8 ಪಥದ 262 ಕಿಮೀ ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ವೇ ಕಾಮಗಾರಿ ಭರದಿಂದ ಸಾಗಿದ್ದು, 5 ಗಂಟೆ ಪ್ರಯಾಣದ ಅವಧಿಯು ಎರಡೂವರೆ ಗಂಟೆಗೆ ಕಡಿತವಾಗಲಿದೆ. 2024ರ ಡಿಸೆಂಬರ್‍ನಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ಅದೇ ರೀತಿ ಮುಂಬೈ-ಕನ್ಯಾಕುಮಾರಿ, ಪುಣೆ-ಬೆಂಗಳೂರು ನ್ಯೂ ಗ್ರೀನ್ ಫೀಲ್ಡ್, ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್, ಸೊಲ್ಲಾಪುರ-ಕರ್ನೂಲ್-ಚೆನ್ನೈ ಎಕನಾಮಿಕ್ ಕಾರಿಡಾರ್ ಸೇರಿದಂತೆ ಕೇಂದ್ರ ಸರ್ಕಾರ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ 4.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ 27 ಗ್ರೀನ್‍ಫೀಲ್ಡ್ ಎಕ್ಸ್‍ಪ್ರೆಸ್ ವೇ ಮತ್ತು ಅಕ್ಸೆಸ್ ಕಂಟ್ರೋಲ್ಡ್ ಕಾರಿಡಾರ್ (ಒಟ್ಟು 10,000 ಕಿಮೀ) ಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಸಚಿವರಾದ ಕೆ. ಗೋಪಾಲಯ್ಯ, ಡಾ.ಸಿ.ಎನ್.ಅಶ್ವಥ್‍ನಾರಾಯಣ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಸಂಸದರಾದ ಪ್ರತಾಪ್ ಸಿಂಹ, ಡಿ.ಕೆ. ಸುರೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »