ಬಹುಮಹಡಿ ವಾಹನ ನಿಲ್ದಾಣ ಸಂಕೀರ್ಣ ನಿರ್ಮಾಣಕ್ಕೆ ಪಾಲಿಕೆಗೆ ಭೂಮಿ ಮಂಜೂರು
ಮೈಸೂರು

ಬಹುಮಹಡಿ ವಾಹನ ನಿಲ್ದಾಣ ಸಂಕೀರ್ಣ ನಿರ್ಮಾಣಕ್ಕೆ ಪಾಲಿಕೆಗೆ ಭೂಮಿ ಮಂಜೂರು

January 10, 2023

ಮೈಸೂರು,ಜ.9(ಪಿಎಂ)-ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಬಹುಮಹಡಿ ವಾಹನ ನಿಲ್ದಾಣ ಕಟ್ಟಡ (ಮಲ್ಟಿ ಲೆವೆಲ್ ವೆಹಿಕಲ್ ಪಾರ್ಕಿಂಗ್ ಕಾಂಪ್ಲೆಕ್ಸ್) ನಿರ್ಮಿಸಲು ಪಾಲಿಕೆಗೆ ಭೂಮಿ ಮಂಜೂರು, ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಭೂಮಿ ನಿಗದಿ, ಸಾವಿರ ಎಕರೆಯಲ್ಲಿ ನಿವೇಶನಗಳ ನಿರ್ಮಾಣ ಯೋಜನೆಗೆ ಕ್ರಮ ವಹಿ ಸುವುದೂ ಸೇರಿದಂತೆ ನಗರದ ಅಭಿವೃದ್ಧಿಗೆ ಪೂರಕ ವಾಗಿ ಹಲವು ಮಹತ್ವದ ನಿರ್ಣಯಗಳನ್ನು ಇತ್ತೀಚೆಗೆ ನಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸಭೆಯಲ್ಲಿ ಕೈಗೊಳ್ಳಲಾಗಿದೆ.

ಮುಡಾ ಸಭಾಂಗಣದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್, ಜ.7ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ನಗರದ ಅಭಿ ವೃದ್ಧಿಗೆ ಪೂರಕವಾಗಿ ಹಲವು ಮಹತ್ವದ ನಿರ್ಣಯ ಗಳನ್ನು ಕೈಗೊಳ್ಳಲಾಗಿದೆ. ಮೈಸೂರು ಮಹಾನಗರ ಪಾಲಿಕೆಗೆ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಮೈಸೂರು ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿ ಸಲು ಮೈಸೂರಿನ ದಕ್ಷಿಣ ಭಾಗದಿಂದ ಆಗಮಿ ಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶ ದಿಂದ ಪಾಲಿಕೆ ವತಿಯಿಂದ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ಮೈಸೂರು ಕಸಬಾ ಗ್ರಾಮದ ಸರ್ವೆ ನಂ.69ರ ಬ್ಲಾಕ್ ನಂ.2ರಲ್ಲಿ 1 ಎಕರೆ 20 ಗುಂಟೆ ಭೂಮಿ ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ಸದರಿ ಭೂಮಿಯು ನಂಜನ ಗೂಡು ರಸ್ತೆಯ ಶಕ್ತಿಧಾಮದ ಎದುರಲ್ಲಿದೆ. ಅಲ್ಲದೆ, ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-9ರ ಕಟ್ಟಡ ನಿರ್ಮಿಸಲು ಪ್ರಾಧಿಕಾರದ ಗಾಯತ್ರಿಪುರಂ 1ನೇ ಹಂತದಲ್ಲಿ ಅಗತ್ಯ ಭೂಮಿಯನ್ನು ಹರಾಜು ದರ ವಿಧಿಸಿ ಮಂಜೂರು ಮಾಡಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ಕ್ರಿಕೆಟ್ ಸ್ಟೇಡಿಯಂ: ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಪ್ರಾಧಿಕಾರದ ಹಂಚ್ಯಾ ಸಾತಗಳ್ಳಿ `ಬಿ’ ವಲಯದಲ್ಲಿ ಒಟ್ಟು 20 ಎಕರೆ 8 ಗುಂಟೆ ಭೂಮಿ ಗುರುತಿಸಲಾಗಿದೆ. ಪ್ರತಿ ಚದರ ಮೀಟರ್‍ಗೆ 2,100 ರೂ.ನಂತೆ ಒಟ್ಟು 18 ಕೋಟಿ ರೂ.ನಲ್ಲಿ ಗುತ್ತಿಗೆಯಡಿ ನೀಡಲು ತೀರ್ಮಾನಿಸಲಾ ಗಿದೆ. ಈ ಪೈಕಿ 2 ಎಕರೆ 20 ಗುಂಟೆ ವಿಸ್ತೀರ್ಣದಲ್ಲಿ ಸರ್ಕಾರಿ ಕಟ್ಟೆಯಿದ್ದು, ಈ ಸಂಬಂಧ ಕಂದಾಯ ಇಲಾಖೆಯಿಂದ ಕ್ಲಿಯರೆನ್ಸ್ ಪಡೆಯಬೇಕಿದೆ. ಮಂಜೂರಾತಿ ಆದೇಶ ಹಾಗೂ ದರ ನಿಗದಿ ಬಗ್ಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವತಃ ಕ್ರಿಕೆಟಿಗರಾಗಿದ್ದು, ಈ ವಿಚಾರದಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸು ವಂತೆಯೂ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಮಿಲ್ಕ್ ಗ್ಯಾಲಕ್ಸಿಗೆ ಭೂಮಿ: ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಕುಲಪತಿಗಳಿಗೆ ಸುಸಜ್ಜಿತವಾದ ಸರ್ಕಾರಿ ನಿವಾಸ ನಿರ್ಮಿಸುವ ಉದ್ದೇಶಕ್ಕಾಗಿ 50*80 ನಿವೇಶನವನ್ನು ಹರಾಜು ದರ ವಿಧಿಸಿ ಮಂಜೂರು ಮಾಡಲು ತೀರ್ಮಾನಿಸಲಾಯಿತು. ಅಲ್ಲದೆ, ಮೈಸೂರಿನ ನಾಲ್ಕು ದಿಕ್ಕುಗಳಲ್ಲಿ ಮೈಸೂರು ಹಾಲು ಒಕ್ಕೂಟವು ಆಧುನಿಕ ರೀತಿಯಲ್ಲಿ `ನಂದಿನಿ ಮಿಲ್ಕ್ ಗ್ಯಾಲಕ್ಸಿ’ ತೆರೆಯಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೂಕ್ತ ಅಳತೆಯ ನಿವೇ ಶನಗಳನ್ನು ಮಂಜೂರು ಮಾಡಲು ತೀರ್ಮಾ ನಿಸಲಾಯಿತು ಎಂದು ತಿಳಿಸಿದರು.

ಮುಡಾ ಪೀಠ ಸ್ಥಾಪನೆ: ಮೈಸೂರು ವಿವಿಯ ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್ ಸಂಸ್ಥೆಯಲ್ಲಿ ಮುಡಾ ಪೀಠ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಮೈಸೂರು ನಗರದ ಯೋಜನಾಬದ್ಧ ಬೆಳ ವಣಿಗೆಗೆ ಪೂರಕವಾಗಿ ಅಧ್ಯಯನ, ಮಾರ್ಗದರ್ಶನ, ಮಾಸ್ಟರ್ ಪ್ಲಾನ್‍ನ ಪ್ರಕ್ರಿಯೆ, ಟೌನ್ ಪ್ಲಾನಿಂಗ್‍ನ ಯೋಜನೆ, ಅಭಿವೃದ್ಧಿ ಯೋಜನೆಗಳು, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಹಾಗೂ ಅಮೃತ್ ಯೋಜನೆಗಳ ಕಾರ್ಯ ತಂತ್ರಗಳನ್ನು ರೂಪಿಸಲು ಸದರಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಕ್ರಿಯಾ ಯೋಜನೆ: ವಿವಿಧ ಶೀರ್ಷಿಕೆಗಳಡಿಯಲ್ಲಿ ಪ್ರಾಧಿಕಾರದ ಬಡಾವಣೆಗಳ ಅಭಿವೃದ್ಧಿ, ಹೊಸ ಬಡಾವಣೆ ನಿರ್ಮಾಣ ಮೊದಲಾದ ಯೋಜನೆಗಳು ಸೇರಿದಂತೆ ಹಳೇ ಉಂಡವಾಡಿ ಗ್ರಾಮದ ಬಳಿ ಕಾವೇರಿ ನದಿಯಿಂದ ನೀರು ಸರಬರಾಜು ಯೋಜನೆ (ವಂತಿಕೆ ಪಾವತಿ) ಮತ್ತು ಬಿದರಗೂಡಿನಿಂದ ನೀರು ಸರಬರಾಜು ಯೋಜನೆ (ವಂತಿಕೆ ಪಾವತಿ) ಒಳಗೊಂಡ ಕಾಮಗಾರಿಗಳಿಗಾಗಿ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ವಿವಿಧ ಶೀರ್ಷಿಕೆಗಳಡಿ 447 ಮುಂದುವರೆದ ಕಾಮಗಾರಿಗಳು ಮತ್ತು 472 ಹೊಸ ಕಾಮಗಾರಿಗಳನ್ನು ಒಟ್ಟು 729.63 ಕೋಟಿ ರೂ. ಗಳಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ 2022-23ನೇ ಸಾಲಿನ ಕ್ರಿಯಾಯೋಜನೆಗೆ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

ಉಂಡವಾಡಿ ಯೋಜನೆಗೆ 208.75 ಕೋಟಿ: ಹಳೇ ಉಂಡವಾಡಿ ಯೋಜನೆ ಸಂಬಂಧ ಪರಿಷ್ಕøತ ಅಂದಾಜು ಪಟ್ಟಿಯ ಮೊತ್ತ 615 ಕೋಟಿ ರೂ.ಗಳ ಪೈಕಿ ಸರ್ಕಾರದಿಂದ ಮುಡಾ ವಂತಿಗೆಯಾಗಿ ನಿಗದಿ ಪಡಿಸಿರುವ 208.75 ಕೋಟಿ ರೂ. ಅನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ನಿರ್ಣಯಿಸಲಾ ಗಿದೆ ಎಂದು ತಿಳಿಸಿದರು. ಮೇಯರ್ ಶಿವಕುಮಾರ್, ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಸದಸ್ಯರಾದ ಎಸ್.ಲಕ್ಷ್ಮೀದೇವಿ, ಜಿ.ಲಿಂಗಯ್ಯ, ಕೆ.ಮಾದೇಶ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »