ಮೈಸೂರು

ಮುಂದಿನ ವಾರದಿಂದ ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣ ದರ ಶೇ.28ರಷ್ಟು ದುಬಾರಿ
ಮೈಸೂರು

ಮುಂದಿನ ವಾರದಿಂದ ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣ ದರ ಶೇ.28ರಷ್ಟು ದುಬಾರಿ

September 10, 2018

ಮಂಡ್ಯ: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬಿಸಿ ಅನುಭವಿಸುತ್ತಿರುವ ನಾಗರಿಕರು ಈಗ ದುಬಾರಿ ದರದ ಬಸ್ ಪ್ರಯಾಣ ದರವನ್ನು ಹೊರಬೇಕಾಗಿದೆ. ಮುಂದಿನ ವಾರದಿಂದ ಶೇ.28ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡಲು ರಾಜ್ಯಸರ್ಕಾರ ಮುಂದಾಗಿದೆ. ಜಿಲ್ಲೆಯ ಮಾದನಾಯಕನಹಳ್ಳಿಯಲ್ಲಿ ಬಸ್ ಪ್ರಯಾಣ ದರದ ಏರಿಕೆಯ ಮುನ್ಸೂಚನೆ ನೀಡಿರುವ ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ ಮುಂದಿನ ವಾರದಿಂದಲೇ ಬಸ್ ಪ್ರಯಾಣ ದರ ಏರಿಕೆ ಅನ್ವಯವಾಗಲಿದೆ ಎಂದು ತಿಳಿಸಿದರು. ಪೆಟ್ರೋಲ್, ಡೀಸೆಲ್ ದರ ಪದೇ ಪದೇ ಏರಿಕೆಯಾಗುತ್ತಿರುವುದರಿಂದ ಸಾರಿಗೆ…

ರಾಜ್ಯದ ಸರ್ಕಾರಿ ಶಾಲೆಗಳಿಗೆ ದಸರಾ ರಜೆ 8 ದಿನ ಕಡಿತಕ್ಕೆ ಸರ್ಕಾರ ನಿರ್ಧಾರ
ಮೈಸೂರು

ರಾಜ್ಯದ ಸರ್ಕಾರಿ ಶಾಲೆಗಳಿಗೆ ದಸರಾ ರಜೆ 8 ದಿನ ಕಡಿತಕ್ಕೆ ಸರ್ಕಾರ ನಿರ್ಧಾರ

September 10, 2018

ಬೆಂಗಳೂರು: ಈ ವರ್ಷ ಕರ್ನಾಟಕ ಸರ್ಕಾರದಡಿಯಲ್ಲಿ ಬರುವ ಶಾಲೆಗಳಿಗೆ ದಸರಾ ರಜೆ ದಿನಗಳು ಕಡಿಮೆಯಾಗಲಿವೆ. ಈ ವರ್ಷ 8 ದಿನಗಳ ದಸರಾ ರಜೆ ಕಡಿತಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದಾಗಿ ಹಲವು ರಜೆಗಳನ್ನು ನೀಡಬೇಕಾಗಿ ಬಂದಿದ್ದರಿಂದ ದಸರಾ ರಜೆಯನ್ನು ಕಡಿತ ಮಾಡಲು ಸರ್ಕಾರ ನಿರ್ಧರಿಸಿದೆ. ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ದಸರಾ ರಜೆ ಅಕ್ಟೋಬರ್ 8ರಿಂದ 21ರವರೆಗೆ ಇರುತ್ತದೆ. ಕಳೆದ ವರ್ಷ ವಿದ್ಯಾರ್ಥಿಗಳಿಗೆ 22 ದಿನ ದಸರಾ ರಜೆ ಇತ್ತು. ಆದರೆ…

ಸೋಮಹಳ್ಳಿಯಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ
ಮೈಸೂರು

ಸೋಮಹಳ್ಳಿಯಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ

September 10, 2018

ಬೇಗೂರು:  ಸಮೀಪದ ಸೋಮಹಳ್ಳಿ ಜಮೀನಿನಲ್ಲಿ ಹುಲಿ ಹೆಜ್ಜೆಗುರುತುಗಳು ಪತ್ತೆಯಾಗಿದ್ದು, ಗ್ರಾಮಸ್ಥರ ಭೀತಿಗೆ ಕಾರಣವಾಗಿದೆ. ಸೋಮಹಳ್ಳಿ ಅಮೀರ್ ಹೊಸಹಳ್ಳಿ ರಸ್ತೆಯಲ್ಲಿ ಜಮೀನು ಹೊಂದಿರುವ ಪ್ರಭುಸ್ವಾಮಿ ಎಂಬುವರು ತಮ್ಮ ಜಮೀನಿಗೆ ಹೋಗುವಾಗ ಹುಲಿಯು ಇದ್ದುದನ್ನು ಕಂಡು ಗ್ರಾಮಕ್ಕೆ ಹಿಂದಿರುಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಿಬ್ಬಂದಿ ಮಣ್ಣಿನಲ್ಲಿ ಹೆಜ್ಜೆಗುರುತುಗಳು ಮೂಡಿದ್ದನ್ನು ಖಚಿತಪಡಿಸಿದ್ದಾರೆ, ಅಡಗಿರುವ ಹುಲಿಯ ಪತ್ತೆಗೆ ಪಟಾಕಿ ಸಿಡಿಸಿದರೂ ಯಾವುದೇ ಉಪಯೋಗವಾಗದ ಕಾರಣ, ಮತ್ತೊಮ್ಮೆ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿ…

ಹೆಬ್ಬಾಳದ ಜ್ಞಾನೇಶ್ವರಿ ವಿದ್ಯಾಲಯಕ್ಕೆ 10 ಲಕ್ಷ ರೂ. ಅನುದಾನ: ಚಾಮರಾಜ ಶಾಸಕ ಎಲ್.ನಾಗೇಂದ್ರ ಭರವಸೆ
ಮೈಸೂರು

ಹೆಬ್ಬಾಳದ ಜ್ಞಾನೇಶ್ವರಿ ವಿದ್ಯಾಲಯಕ್ಕೆ 10 ಲಕ್ಷ ರೂ. ಅನುದಾನ: ಚಾಮರಾಜ ಶಾಸಕ ಎಲ್.ನಾಗೇಂದ್ರ ಭರವಸೆ

September 10, 2018

ಭಾವಸಾರ ಕ್ಷತ್ರಿಯ ನವ ಪದವೀಧರರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮೈಸೂರು: ಹೆಬ್ಬಾಳದ ಜ್ಞಾನೇಶ್ವರಿ ವಿದ್ಯಾಸಂಸ್ಥೆಯ ಅಭಿವೃದ್ಧಿಗಾಗಿ ತಮ್ಮ ಶಾಸಕರ ನಿಧಿಯಿಂದ 10 ಲಕ್ಷಕ್ಕೂ ಹೆಚ್ಚಿನ ಅನುದಾನ ನೀಡುವುದಾಗಿ ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು. ಮೈಸೂರು ಜಿಲ್ಲಾ ಭಾವಸಾರ ಕ್ಷತ್ರಿಯ ಪದವೀಧರ ಸಂಘ ಮತ್ತು ವಿಠಲ ರುಕ್ಮಿಣಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರಿನ ವಿಜಯನಗರ 3ನೆ ಹಂತದ ವಿಠಲ ರುಕ್ಮಿಣಿ ಕನ್ವೆನ್ಷನ್ ಹಾಲ್‍ನಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಲೆಯ ಎದುರಿನಲ್ಲಿರುವ ಮೈದಾನವನ್ನು ವಿದ್ಯಾರ್ಥಿಗಳ…

ದೇಶದ ಕೀರ್ತಿ ದಶ ದಿಕ್ಕುಗಳಿಗೆ ಹರಡಿಸುವವನೇ ಸುಪುತ್ರ: ಮಾಜಿ ಸಚಿವ ಸಿ.ಹೆಚ್.ವಿಜಯ್‍ಶಂಕರ್
ಮೈಸೂರು

ದೇಶದ ಕೀರ್ತಿ ದಶ ದಿಕ್ಕುಗಳಿಗೆ ಹರಡಿಸುವವನೇ ಸುಪುತ್ರ: ಮಾಜಿ ಸಚಿವ ಸಿ.ಹೆಚ್.ವಿಜಯ್‍ಶಂಕರ್

September 10, 2018

ಮೈಸೂರು:  ದೇಶದ ಕೀರ್ತಿಯನ್ನು ದಶ ದಿಕ್ಕುಗಳಿಗೂ ಹರಡಿಸುವವನೇ ಸುಪುತ್ರ. ಅಪ್ಪ ಮಾಡಿದ ಆಸ್ತಿಯಲ್ಲಿ ಪಾಲು ಕೇಳುವವನು ಬರೀ ಪುತ್ರ ಎಂದು ಮಾಜಿ ಸಚಿವÀ ಸಿ.ಎಚ್. ವಿಜಯಶಂಕರ್ ಹೇಳಿದರು. ಹಿಮಾಲಯ ಫೌಂಡೇಶನ್ ವತಿ ಯಿಂದ ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ ಆಚಾರ್ಯ ಶ್ರೀ ವಿದ್ಯಾರಣ್ಯ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸನ್ಮಾನದ ಹಿಂದೆ ಸಾಧನೆಯಿದ್ದು, ಸಾಧನೆಯನ್ನು ಸಮಾಜ ಗೌರವಿಸುತ್ತದೆ. ಸಾಧಕರು ನಮ್ಮ ದೇಶದ ಹೆಮ್ಮೆಯ…

ವಿದ್ಯಾರ್ಥಿಗಳು ಜೀವನದಲ್ಲಿ ಶ್ರದ್ಧೆ, ನಿಷ್ಠೆ ಅಳವಡಿಸಿಕೊಳ್ಳಬೇಕು: ಎಲ್. ನಾಗೇಂದ್ರ ಸಲಹೆ
ಮೈಸೂರು

ವಿದ್ಯಾರ್ಥಿಗಳು ಜೀವನದಲ್ಲಿ ಶ್ರದ್ಧೆ, ನಿಷ್ಠೆ ಅಳವಡಿಸಿಕೊಳ್ಳಬೇಕು: ಎಲ್. ನಾಗೇಂದ್ರ ಸಲಹೆ

September 10, 2018

ಮೈಸೂರು: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿ ಕೊಳ್ಳಬೇಕು ಎಂದು ಶಾಸಕ ಎಲ್.ನಾಗೇಂದ್ರ ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು. ಮೈಸೂರಿನ ಕಲಾಮಂದಿರದಲ್ಲಿ ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ಸಾಂಸ್ಕøತಿಕ ಮೇಳದಲ್ಲಿ ವಿಜೇತರ ವಿದ್ಯಾರ್ಥಿ ತಂಡಗಳಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು. ಮೈಸೂರು ಸಾಂಸ್ಕøತಿಕ ನಗರವಾಗಿದ್ದು, ವಿದ್ಯಾರ್ಥಿ ಗಳು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಅವರ ವ್ಯಾಸಂಗದಲ್ಲಿ ಉನ್ನತ ಸಾಧನೆಗೆ ಪೂರಕ ವಾತಾವರಣ ನಿರ್ಮಾಣ ಆಗಲಿದೆ….

ಸಿಗ್ಮಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ
ಮೈಸೂರು

ಸಿಗ್ಮಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ

September 10, 2018

ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ಸಿಗ್ಮಾ ಆಸ್ಪತ್ರೆಯಲ್ಲಿ ಆರಂಭಿಸಲಾಗಿರುವ ಮೂತ್ರ ಸಂಬಂಧಿ ರೋಗಗಳ ಘಟಕ ಹಾಗೂ ಡಯಾ ಲಿಸಿಸ್ ಕೇಂದ್ರದ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು. ಉದ್ಘಾಟನೆ ನೆರವೇರಿಸಿದ ಬೆಂಗಳೂರಿನ ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನ ನೆಫ್ರಾಲಜಿ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಕೆ.ಸಿ.ಗುರುದೇವ ಅವರು ಮಾತನಾಡಿ, ಮೂತ್ರ ಸಂಬಂಧಿ ಶಸ್ತ್ರಚಿಕಿತ್ಸೆ ಮೈಸೂರಿನಲ್ಲಿ ಎರಡು ದಶಕಗಳ ಹಿಂದೆ ಅಭಿವೃದ್ಧಿಗೊಂಡಿತು. ಸಿಗ್ಮಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಗಳಿದ್ದು ಉತ್ತಮವಾಗಿ ಸೇವೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು. ತಜ್ಞ ವೈದ್ಯರಾದ ಡಾ.ಸೋಮಣ್ಣ ಮಾತ ನಾಡಿ, ಕಳೆದ…

ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕಮೀಷ್ನರ್ ಡಾ.ಎ.ಎಸ್.ರಾವ್
ಮೈಸೂರು

ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕಮೀಷ್ನರ್ ಡಾ.ಎ.ಎಸ್.ರಾವ್

September 10, 2018

ಮೈಸೂರು: ತೈಲ ಬೆಲೆ ಏರಿಕೆ ಹಿನ್ನೆಲೆ ನಾಳೆ(ಸೆ.10) ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಕರೆ ನೀಡಿರುವ ಭಾರತ್ ಬಂದ್‍ಗೆ ಮೈಸೂರು ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವವರ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಮೈಸೂರು ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಯಾವುದೇ ಸಂಘಟನೆಗಳು ಭಾರತ್ ಬಂದ್ ನೆಪದಲ್ಲಿ ಗಲಾಟೆ, ಸಾರ್ವಜನಿಕ…

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮ ದಿನಾಚರಣೆ
ಮೈಸೂರು

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮ ದಿನಾಚರಣೆ

September 10, 2018

ಮೈಸೂರು:  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮನೆಯ ಪ್ರತಿ ಮತವೂ ಕೋಮುವಾದಿಗಳನ್ನು ಸೋಲಿಸಲು ಚಲಾಯಿಸುತ್ತೇವೆ ಹಾಗೂ ಕೋಮುವಾದ ವಿರುದ್ಧದ ಮತ ಹರಿದು ಹಂಚಿ ಹೋಗುವಂತೆ ಎಚ್ಚರ ವಹಿಸುತ್ತೇವೆ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನಲ್ಲಿ ನಾವಿಂದು ಸಂಕಲ್ಪ ಮಾಡಬೇಕು ಎಂದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಕರೆ ನೀಡಿದರು. ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಅಭಿರುಚಿ ಪ್ರಕಾಶನ, ಮೈಸೂರು ಫಿಲಂ ಸೊಸೈಟಿ, ನಿರಂತರ, ಮಾನವ ಮಂಟಪ, ಕರ್ನಾಟಕ ರಾಜ್ಯ ರೈತ ಸಂಘದ ಸಂಯುಕ್ತಾಶ್ರಯದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ…

ರಾಸಾಯನಿಕ ರಹಿತ ಗಣೇಶ ಮೂರ್ತಿ ತಯಾರಕ ಕಲಾವಿದರಿಗೆ ಸನ್ಮಾನ
ಮೈಸೂರು

ರಾಸಾಯನಿಕ ರಹಿತ ಗಣೇಶ ಮೂರ್ತಿ ತಯಾರಕ ಕಲಾವಿದರಿಗೆ ಸನ್ಮಾನ

September 10, 2018

ಮೈಸೂರು: ರಾಸಾಯನಿಕ ರಹಿತ ಗಣೇಶ ಮೂರ್ತಿಗಳನ್ನು ತಯಾರಿಸಲು ಒತ್ತು ನೀಡುತ್ತಿರುವ ಹಲವು ಕಲಾವಿದರರನ್ನು ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರಿನ ಕುಂಬಾರಗೇರಿಯ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು. ಇಂದಿನ ಯಾಂತ್ರಿಕ ಯುಗದಲ್ಲಿ ಕೈಯಿಂದ ಮೂರ್ತಿ ತಯಾರಿಸುವ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಕಲಾವಿದರ ಪ್ರೋತ್ಸಾಹಕ್ಕೆ ಸರ್ಕಾರ ಯಾವುದೇ ಯೋಜನೆ ರೂಪಿಸಿಲ್ಲ. ಹೀಗಾಗಿ ನಮ್ಮ ಸಂಸ್ಥೆ ಗಣೇಶ ಮೂರ್ತಿ ತಯಾರಕ ಕಲಾವಿದರಾದ ರೇವಣ್ಣ, ಸುಬ್ಬಮ್ಮ, ನಿಂಗಮ್ಮ, ಸಿದ್ದಪ್ಪ, ಸಾಕಮ್ಮ ಅವರನ್ನು sಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಸದರ ಪತ್ನಿ ಅರ್ಪಿತಾ ಪ್ರತಾಪ್‍ಸಿಂಹ,…

1 1,398 1,399 1,400 1,401 1,402 1,611
Translate »