ಮೈಸೂರು

ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕ ಅನಿರ್ಧಿಷ್ಟಾವಧಿ ಧರಣಿ ಮುಂದುವರಿಕೆ
ಮೈಸೂರು

ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕ ಅನಿರ್ಧಿಷ್ಟಾವಧಿ ಧರಣಿ ಮುಂದುವರಿಕೆ

September 9, 2018

ಮೈಸೂರು ನಗರ ಪಾಲಿಕೆ ಪೌರ ಕಾರ್ಮಿಕರ ಬೆಂಬಲ ಮೈಸೂರು: ಕನಿಷ್ಠ ಕೂಲಿ, ಇಎಸ್‍ಐ, ಪಿಎಫ್ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಐದು ದಿನಗಳಿಂದ ಮೈಸೂರು ವಿಶ್ವವಿದ್ಯಾನಿಲಯದ ಮಹಿಳಾ ಪೌರಕಾರ್ಮಿಕರು ನಡೆಸುತ್ತಿರುವ ಧರಣಿಯಲ್ಲಿ ಶನಿವಾರ ಮೈಸೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಮುಖಂಡರು ಪಾಲ್ಗೊಂಡು ಬೆಂಬಲ ಸೂಚಿಸಿದರಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮುಖ್ಯ ದ್ವಾರದ ಬಳಿ ಅಹೋರಾತ್ರಿ ಧರಣಿ ಮುಂದುವರೆಸಿದ್ದ ವಿವಿಯ ಪೌರಕಾರ್ಮಿಕರು ವಿವಿಧ ಆಡಳಿತ ಮಂಡಳಿಯ ವಿರುದ್ದ…

ಶಿಸ್ತು ಪಾಲಿಸದಿದ್ದರೆ ಪೊಲೀಸ್ ವ್ಯವಸ್ಥೆಯೇ ವಿಫಲವಾಗುತ್ತದೆ
ಮೈಸೂರು

ಶಿಸ್ತು ಪಾಲಿಸದಿದ್ದರೆ ಪೊಲೀಸ್ ವ್ಯವಸ್ಥೆಯೇ ವಿಫಲವಾಗುತ್ತದೆ

September 9, 2018

ನಿರ್ಗಮನ ಪಥಸಂಚಲನದಲ್ಲಿ ವಂದನೆ ಸ್ವೀಕರಿಸಿ ಐಜಿಪಿ ಶರತ್‍ಚಂದ್ರ ಅಭಿಮತ ಮೈಸೂರು: ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತು ಪಾಲಿಸದಿದ್ದರೆ ಇಡೀ ಪೊಲೀಸ್ ವ್ಯವಸ್ಥೆಯೇ ವಿಫಲವಾಗುತ್ತದೆ ಎಂದು ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್‍ಚಂದ್ರ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಲಲಿತ್‍ಮಹಲ್ ರಸ್ತೆಯಲ್ಲಿರುವ ಕೆಎಸ್‍ಆರ್‍ಪಿ 5ನೇ ಪಡೆ ಕವಾಯತು ಮೈದಾನದಲ್ಲಿ ಇಂದು ಆಯೋಜಿಸಿದ್ದ ಸಿಎಆರ್ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಂದನೆ ಸ್ವೀಕರಿಸಿ ಮಾತನಾಡಿದರು. ಶಿಸ್ತಿಗೆ ಹೆಸರಾಗಿರುವ…

ಮೂಲ ಸೌಕರ್ಯಕ್ಕೆ ಆಗ್ರಹಿಸಿ: ಮೈಸೂರು ಮಾನಸ ಗಂಗೋತ್ರಿ ಹಳೆ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಮೂಲ ಸೌಕರ್ಯಕ್ಕೆ ಆಗ್ರಹಿಸಿ: ಮೈಸೂರು ಮಾನಸ ಗಂಗೋತ್ರಿ ಹಳೆ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಪ್ರತಿಭಟನೆ

September 9, 2018

ಮೈಸೂರು:  ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತೆಗೆ ಆದ್ಯತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶನಿವಾರ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪುರುಷರ ಹಳೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಮಾನಸಗಂಗೋತ್ರಿಯ ಆವರಣದಲ್ಲಿರುವ ಈ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ದಿಢೀರ್ ಪ್ರತಿಭಟನೆ ನಡೆಸಿ, ವಿದ್ಯಾರ್ಥಿನಿಲಯದ ಅವ್ಯವಸ್ಥೆಯನ್ನು ಖಂಡಿಸಿದರು. ಕೆಲಕಾಲ ವಿದ್ಯಾರ್ಥಿನಿಲಯದ ಮುಂದೆ ಪ್ರತಿಭಟನೆ ನಡೆಸಿ, ನಂತರ ವಿಶ್ವವಿದ್ಯಾನಿಲಯದ ಮುಖ್ಯದ್ವಾರದ ಬಳಿ ಧರಣಿ ನಡೆಸಿದರು. ಹಳೆಯ ವಿಶ್ವವಿದ್ಯಾನಿಲಯ ಅವ್ಯವಸ್ಥೆಯ ಆಗರವಾಗಿದೆ. ವಿದ್ಯಾರ್ಥಿಗಳು ವಾಸಿಸುವುದಕ್ಕೆ…

ದೇಶದ ಕಾನೂನು ಗೌರವಿಸಿ, ಸ್ಥಳೀಯರೊಂದಿಗೆ ಸೌಹಾರ್ದತೆಯಿಂದಿರಿ
ಮೈಸೂರು

ದೇಶದ ಕಾನೂನು ಗೌರವಿಸಿ, ಸ್ಥಳೀಯರೊಂದಿಗೆ ಸೌಹಾರ್ದತೆಯಿಂದಿರಿ

September 9, 2018

ಮೈಸೂರು:  ಮೈಸೂ ರಿನ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ನಮ್ಮ ಕಾನೂನನ್ನು ಗೌರವಿಸುವುದರೊಂದಿಗೆ ಸ್ಥಳೀಯರೊಂದಿಗೆ ಸೌಹಾರ್ದಯುತ ವಾಗಿ ನಡೆದುಕೊಳ್ಳುವಂತೆ ಎಸಿಬಿ ಎಸ್ಪಿ ಡಾ.ಹೆಚ್.ಟಿ.ಶೇಖರ್ ಸಲಹೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಶನಿವಾರ ಮೈಸೂರು ವಿವಿಯ ಅಂತರರಾಷ್ಟ್ರೀಯ ಕೇಂದ್ರವು ಆಯೋಜಿ ಸಿದ್ದ ವಿದೇಶಿ ವಿದ್ಯಾರ್ಥಿಗಳ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ವಿದೇಶಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಭಾರತ, ಅದರಲ್ಲಿಯೂ ಕರ್ನಾಟಕದ ಮೈಸೂರು ಜಿಲ್ಲೆ ಸುರಕ್ಷಿತವಾಗಿದೆ. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ…

17 ಕೋರ್ಸುಗಳಿಗೆ 30,000 ವಿದ್ಯಾರ್ಥಿಗಳ ಪ್ರವೇಶ ನಿರೀಕ್ಷೆ: ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ವಿಶ್ವಾಸ
ಮೈಸೂರು

17 ಕೋರ್ಸುಗಳಿಗೆ 30,000 ವಿದ್ಯಾರ್ಥಿಗಳ ಪ್ರವೇಶ ನಿರೀಕ್ಷೆ: ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ವಿಶ್ವಾಸ

September 9, 2018

ಮೈಸೂರು: ಅನುಮತಿ ದೊರೆತಿರುವ 17 ಕೋರ್ಸುಗಳಿಗೆ ಈ ಶೈಕ್ಷಣಿಕ ಸಾಲಿನಲ್ಲಿ 30,000 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದೆ ಎಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 27ರಿಂದ ಪ್ರವೇಶಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅಕ್ಟೋಬರ್ 1ರವರೆಗೆ ಅವಕಾಶವಿರುವುದರಿಂದ ಈಗಾಗಲೇ ರಾಜ್ಯಾದ್ಯಂತ ಇರುವ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳಿಗೆ ಅರ್ಜಿಗಳು ಬರುತ್ತಿವೆ. ವಿಚಾರಣೆಗಳೂ ಹೆಚ್ಚಾಗಿದ್ದು, ಈ ಬಾರಿ ಎಲ್ಲಾ 17 ಕೋರ್ಸುಗಳಿಗೆ 30 ಸಾವಿರ ಮಂದಿ ಪ್ರವೇಶ ಪಡೆಯಬಹುದೆಂದು ನಿರೀಕ್ಷಿಸಲಾಗಿದೆ…

ಶಾಸಕ ರಾಮದಾಸರ ‘ಜನಸ್ಪಂದನಾ ಕಚೇರಿ’ ಉದ್ಘಾಟನೆ: ಕೆ.ಆರ್. ಕ್ಷೇತ್ರ ಮಾದರಿ ಮಾಡುವ ಉದ್ದೇಶ
ಮೈಸೂರು

ಶಾಸಕ ರಾಮದಾಸರ ‘ಜನಸ್ಪಂದನಾ ಕಚೇರಿ’ ಉದ್ಘಾಟನೆ: ಕೆ.ಆರ್. ಕ್ಷೇತ್ರ ಮಾದರಿ ಮಾಡುವ ಉದ್ದೇಶ

September 9, 2018

ಮೈಸೂರು:  ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಕಾಡಾ ಕಚೇರಿ ಸಂಕೀರ್ಣದಲ್ಲಿ ಕೆಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರ `ಜನಸ್ಪಂದನಾ ಕಚೇರಿ (ಶಾಸಕರ ಕಚೇರಿ)’ ಶನಿವಾರ ಉದ್ಘಾಟನೆಗೊಂಡಿತು. ತಳಿರು-ತೋರಣ ಹಾಗೂ ಹೂವಿನಿಂದ ಶೃಂಗರಿಸಿದ್ದ `ಜನಸ್ಪಂದನಾ ಕಚೇರಿ’ಯನ್ನು ಬಿಜೆಪಿ ಹಿರಿಯ ಮುಖಂಡರೂ ಆದ ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಉದ್ಘಾಟಿಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಹಾಗೂ ಮಾಜಿ ಸಚಿವರೂ ಆದ ಎಸ್.ಎ.ರಾಮದಾಸ್, ಎಲ್ಲಾ ಇಲಾಖೆಗಳ ನಿರಂತರ ಸಂಪರ್ಕಕ್ಕೆ ಕಚೇರಿ ವ್ಯವಸ್ಥೆಯಿಂದ ಅನುಕೂಲವಾಗಲಿದೆ. ಕೆಆರ್ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ…

ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಆಗ್ರಹ
ಮೈಸೂರು

ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಆಗ್ರಹ

September 9, 2018

ಮೈಸೂರು: ಕನಿಷ್ಠ ಕೂಲಿ ಮತ್ತಿತರ ಬೇಡಿಕೆ ಈಡೇರಿಸುವಂತೆ ಮೈಸೂರು ವಿವಿ ಮಹಿಳಾ ಪೌರಕಾರ್ಮಿಕರ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿರಿಸಿದ್ದರೂ ವಿವಿಯ ಆಡಳಿತ ಮಂಡಳಿ ಹಾಗೂ ಉನ್ನತ ಶಿಕ್ಷಣ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರೂ ಆದ ಮಾಜಿ ಮೇಯರ್ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯರೇ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಈ ಪ್ರತಿಭಟನೆಯನ್ನು…

ಕೇಂದ್ರದ ಜನ ವಿರೋಧಿ ನೀತಿ ಖಂಡಿಸಿ ನಾಳಿನ ಬಂದ್ ಬೆಂಬಲಿಸಲು ಶಾಸಕ ತನ್ವೀರ್ ಮನವಿ
ಮೈಸೂರು

ಕೇಂದ್ರದ ಜನ ವಿರೋಧಿ ನೀತಿ ಖಂಡಿಸಿ ನಾಳಿನ ಬಂದ್ ಬೆಂಬಲಿಸಲು ಶಾಸಕ ತನ್ವೀರ್ ಮನವಿ

September 9, 2018

ಮೈಸೂರು: ಕೇಂದ್ರ ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿ ದೇಶದ ಜನತೆಯ ದನಿಯಾಗಲು ಕಾಂಗ್ರೆಸ್ ಪಕ್ಷವು ಸೆ.10ರಂದು ಭಾರತ್ ಬಂದ್‍ಗೆ ಕರೆ ನೀಡಿದೆ ಎಂದು ಶಾಸಕರೂ ಆದ ಮಾಜಿ ಸಚಿವ ತನ್ವೀರ್ ಸೇಠ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಅವೈಜ್ಞಾನಿಕ ನಿಲುವುಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರಿದ್ದು, ಪರಿಣಾಮ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳಗೊಂಡು ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ದಿನೇ ದಿನೆ ತೈಲ…

ಜಮೀನಿನಲ್ಲಿ ಜೀತ ಮಾಡುತ್ತಿದ್ದ 15 ಕಾರ್ಮಿಕರಿಗೆ ಬಂಧ ಮುಕ್ತಿ
ಮೈಸೂರು

ಜಮೀನಿನಲ್ಲಿ ಜೀತ ಮಾಡುತ್ತಿದ್ದ 15 ಕಾರ್ಮಿಕರಿಗೆ ಬಂಧ ಮುಕ್ತಿ

September 9, 2018

ಪಿರಿಯಾಪಟ್ಟಣ ತಹಸೀಲ್ದಾರ್ ದಾಳಿ: ಒಬ್ಬನ ಬಂಧನ ಬೈಲಕುಪ್ಪೆ:- ಕೆಲಸಕ್ಕೆಂದು ಕರೆದುಕೊಂಡು ಬಂದು, ಬಂಧನದ ವಾತಾವರಣದಲ್ಲಿ, ಹಿಂಸೆ ನೀಡುವ ಮೂಲಕ ಜಮೀನು ಕೆಲಸ ಮಾಡಿಸಲಾಗುತ್ತಿದ್ದ 15 ಮಂದಿ ಯನ್ನು ತಾಲೂಕು ಆಡಳಿತ ಬಂಧ ಮುಕ್ತಗೊಳಿಸಿದೆ. ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟಿಯನ್ 11ನೇ ಕ್ಯಾಂಪ್‍ನಲ್ಲಿ ಈ ಘಟನೆ ನಡೆದಿದ್ದು, ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರಿಗೆ ಸೇರಿದ್ದ 25 ಎಕರೆಗೂ ಅಧಿಕ ಜಮೀನನ್ನು ಅರಸೀಕೆರೆ ಮೂಲದ ಮೂವರು ವ್ಯಕ್ತಿಗಳು ಲೀಸ್‍ಗೆ ಪಡೆದು ಅದರಲ್ಲಿ ಶುಂಠಿ ಬೆಳೆ ಮಾಡು ತ್ತಿದ್ದರು. ಶುಂಠಿ ಬೆಳೆಗೆ ಕೆಲಸಕ್ಕಾಗಿ…

ಬಸ್ ಸಂಚಾರಕ್ಕೆ ಶಾಸಕರಿಂದ ಚಾಲನೆ: ಬಸ್‍ನಲ್ಲೇ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದ ವಿಶ್ವನಾಥ್
ಮೈಸೂರು

ಬಸ್ ಸಂಚಾರಕ್ಕೆ ಶಾಸಕರಿಂದ ಚಾಲನೆ: ಬಸ್‍ನಲ್ಲೇ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದ ವಿಶ್ವನಾಥ್

September 9, 2018

ಹಿರೀಕ್ಯಾತನಹಳ್ಳಿ:  ಹುಣಸೂರು-ಮುಳ್ಳೂರು ಮಾರ್ಗವಾಗಿ ಕೆ.ಆರ್.ನಗರ ಹಾಗೂ ಹೆಜ್ಜೊಡ್ಲು-ರಾಯನಹಳ್ಳಿ-ಮಂಟಿಕೊಪ್ಪಲು ಮಾರ್ಗದ ಬಸ್ ಸಂಚಾರಕ್ಕೆ ಶಾಸಕ ಎಚ್.ವಿಶ್ವನಾಥ್ ಗಾವಡಗೆರೆ ಹೋಬಳಿಯ ಮುಳ್ಳೂರಿ ನಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಭಾಗದ ಬಹು ದಿನಗಳ ಬೇಡಿಕೆಯಂತೆ ಕೆ.ಆರ್.ನಗರ ಡಿಪೋದಿಂದ ಮುಳ್ಳೂರು, ತೊಂಡಾಳು, ಉಂಡುವಾಡಿ ಮಾರ್ಗ ಹುಣ ಸೂರು ಹಾಗೂ ಹುಣಸೂರು ಡಿಪೋದಿಂದ ಕೆ.ಆರ್.ನಗರ-ಹೆಜ್ಜೊಡ್ಲು-ರಾಯನ ಹಳ್ಳಿ-ಮಂಟಿಕೊಪ್ಪಲು ಮಾರ್ಗ ಹುಣ ಸೂರಿಗೆ ಸಂಪರ್ಕ ಕಲ್ಪಿಸುವ ಬಸ್‍ಗಳನ್ನು ನಿತ್ಯ ಬೆಳಿಗ್ಗೆ-ಸಂಜೆ ಎರಡು ಬಾರಿ ಒಡಾ ಡಲಿದೆ. ಜನರು…

1 1,400 1,401 1,402 1,403 1,404 1,611
Translate »