ಬಸ್ ಸಂಚಾರಕ್ಕೆ ಶಾಸಕರಿಂದ ಚಾಲನೆ: ಬಸ್‍ನಲ್ಲೇ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದ ವಿಶ್ವನಾಥ್
ಮೈಸೂರು

ಬಸ್ ಸಂಚಾರಕ್ಕೆ ಶಾಸಕರಿಂದ ಚಾಲನೆ: ಬಸ್‍ನಲ್ಲೇ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದ ವಿಶ್ವನಾಥ್

September 9, 2018

ಹಿರೀಕ್ಯಾತನಹಳ್ಳಿ:  ಹುಣಸೂರು-ಮುಳ್ಳೂರು ಮಾರ್ಗವಾಗಿ ಕೆ.ಆರ್.ನಗರ ಹಾಗೂ ಹೆಜ್ಜೊಡ್ಲು-ರಾಯನಹಳ್ಳಿ-ಮಂಟಿಕೊಪ್ಪಲು ಮಾರ್ಗದ ಬಸ್ ಸಂಚಾರಕ್ಕೆ ಶಾಸಕ ಎಚ್.ವಿಶ್ವನಾಥ್ ಗಾವಡಗೆರೆ ಹೋಬಳಿಯ ಮುಳ್ಳೂರಿ ನಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಭಾಗದ ಬಹು ದಿನಗಳ ಬೇಡಿಕೆಯಂತೆ ಕೆ.ಆರ್.ನಗರ ಡಿಪೋದಿಂದ ಮುಳ್ಳೂರು, ತೊಂಡಾಳು, ಉಂಡುವಾಡಿ ಮಾರ್ಗ ಹುಣ ಸೂರು ಹಾಗೂ ಹುಣಸೂರು ಡಿಪೋದಿಂದ ಕೆ.ಆರ್.ನಗರ-ಹೆಜ್ಜೊಡ್ಲು-ರಾಯನ ಹಳ್ಳಿ-ಮಂಟಿಕೊಪ್ಪಲು ಮಾರ್ಗ ಹುಣ ಸೂರಿಗೆ ಸಂಪರ್ಕ ಕಲ್ಪಿಸುವ ಬಸ್‍ಗಳನ್ನು ನಿತ್ಯ ಬೆಳಿಗ್ಗೆ-ಸಂಜೆ ಎರಡು ಬಾರಿ ಒಡಾ ಡಲಿದೆ. ಜನರು ಟಿಕೆಟ್ ಪಡೆದು ಪ್ರಯಾಣಿ ಸಬೇಕೆಂದು ಮನವಿ ಮಾಡಿದರು.

ಶಾಸಕರ ಬಸ್ ಪ್ರಯಾಣ: ಮುಳ್ಳೂರಿ ನಲ್ಲಿ ಹೊಸ ಬಸ್ ಮಾರ್ಗಕ್ಕೆ ಚಾಲನೆ ನೀಡಿದ ಶಾಸಕರು ತಮ್ಮ ಬೆಂಬಲಿಗರು, ಗ್ರಾಮ ಸ್ಥರೊಂದಿಗೆ ಟಿಕೆಟ್ ಪಡೆದು ಹೆಜ್ಜೊಡ್ಲು, ರಾಯನಹಳ್ಳಿ ಹಾಗೂ ಮಂಟಿಕೊಪ್ಪಲಿನವರೆಗೆ ತೆರಳಿ, ಬಸ್‍ನಲ್ಲೇ ಗ್ರಾಮಸ್ಥರಿಂದ ಸಮಸ್ಯೆ ಗಳನ್ನು ಆಲಿಸಿದರು.

ಕೆರೆ ಒತ್ತುವರಿ ತೆರವು: ಸಭೆಯಲ್ಲಿ ರೈತರು ಈ ಭಾಗದ ಕೆರೆಗಳ ಒತ್ತುವರಿ ಸಾಕಷ್ಟಾಗಿದ್ದು, ತೆರವುಗೊಳಿಸಬೇಕೆಂಬ ಒತ್ತಾಯಕ್ಕೆ ಕೆರೆ ಒತ್ತು ವರಿ ವಿಚಾರದಲ್ಲಿ ರಾಜಿ ಇಲ್ಲ, ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಮುಲಾಜಿಲ್ಲದೆ ತೆರವು ಗೊಳಿಸಲಾಗುವುದೆಂದು ಭರವಸೆ ಇತ್ತರು.

ಮುಳ್ಳೂರು ಗ್ರಾಮದ ಸಮಗ್ರ ಅಭಿವೃದ್ದಿಗೆ ಸ್ಪಂದಿಸುತ್ತೇನೆ. ಯಾವುದೇ ಸಮಸ್ಯೆಗಳಿ ದ್ದಲ್ಲಿ ಖುದ್ದು ಭೇಟಿ ಮಾಡಿ ಪರಿಹರಿಸಿ ಕೊಳ್ಳಿ. ಗ್ರಾಮದ ಅಭಿವೃದ್ಧಿಯಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜೇ ಅರಸರ ಆಪ್ತ ಗ್ರಾಮದ ಶಂಕರರಾವ್‍ಕದಂರವರು ಅನೇಕ ಕೊಡುಗೆ ನೀಡಿದ್ದನ್ನು ಸ್ಮರಿಸಿ, ಅವರು ನಮಗೆ ಮಾರ್ಗದರ್ಶಕರಾಗಿದ್ದರೆಂದರು.

ಚುನಾಯಿತರಾದ ನಂತರ ಮುಳ್ಳೂರು ಗ್ರಾಮಕ್ಕಾಗಮಿಸಿದ ಶಾಸಕ ವಿಶ್ವನಾಥರನ್ನು ಮಂಗಳ ವಾದ್ಯಗಳೊಂದಿಗೆ ಬರಮಾಡಿಕೊಂಡ ಗ್ರಾಮಸ್ಥರು ಸಮಾರಂಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ನಂತರ ವಿನಾಯಕ ಯುವ ಸೇನೆ ಸಂಘವನ್ನು ಶಾಸಕರು ಉದ್ಘಾಟಿಸಿದರು. ಸಮಾರಂಭ ದಲ್ಲಿ ಗ್ರಾಮದ ಮುಖಂಡ ರಾದ ಬಸವರಾಜು, ಮಹದೇವು, ಮಂಜು, ಮಹದೇವರಾಜು, ಅಣ್ಣಯ್ಯನಾಯ್ಕ ಮತ್ತಿತರ ಮುಖಂಡರು ಹಾಗೂ ಚೆಸ್ಕಾಂ ಎ.ಇ.ಇ. ಸಿದ್ದಪ್ಪ, ಕೆಎಸ್‍ಆರ್‍ಟಿಸಿಯ ಡಿ.ಟಿ.ಓ. ದಶರಥ, ಎ.ಟಿ.ಎಸ್. ಕೃಷ್ಣ ಮೂರ್ತಿ ಭಾಗವಹಿಸಿದ್ದರು.

Translate »