ಗಾಂಧಿ ಜಯಂತಿ ಪ್ರಯುಕ್ತ ಬೃಹತ್ ಉದ್ಯೋಗ ಮೇಳ
ಮೈಸೂರು

ಗಾಂಧಿ ಜಯಂತಿ ಪ್ರಯುಕ್ತ ಬೃಹತ್ ಉದ್ಯೋಗ ಮೇಳ

September 9, 2018

ನಂಜನಗೂಡು: ಅಕ್ಟೋಬರ್ 6ರಂದು ಗಾಂಧಿ ಜಯಂತಿ ಅಂಗವಾಗಿ ನಗರದ ವಿದ್ಯಾವರ್ಧಕ ಶಾಲಾ ಮೈದಾನದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳ ಲಾಗಿದೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ತಿಳಿಸಿದರು.

ಅವರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಅಂದು ಬೆಳಿಗ್ಗೆ 11 ಗಂಟೆಯಿಂದ ಉದ್ಯೋಗ ಮೇಳ ಪ್ರಾರಂಭವಾಗಲಿದ್ದು ಉದ್ಘಾಟನೆ ಯನ್ನು ಸಂಸದ ಆರ್.ಧ್ರುವನಾರಾಯಣ್ ನೆರವೇರಿಸುವರು ಮುಖ್ಯ ಅಥಿತಿಗಳಾಗಿ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ವಿವಿಧ ಜನಪ್ರತಿ ನಿಧಿಗಳು ಭಾಗವಹಿಸುವರು ಎಂದರು.

ಮೇಳದಲ್ಲಿ ತಾಂಡ್ಯ, ಕಡಕೊಳ, ಅಡಕನ ಹಳ್ಳಿ, ನಂಜನಗೂಡು ಕೈಗಾರಿಕಾ ಪ್ರದೇಶ ದಲ್ಲಿರುವ ಸುಮಾರು 30 ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದ್ದು, ಐಟಿಐ, ಡಿಪ್ಲೋಮಾ, ಅಲ್ಲದೆ 7ನೇ ತರಗತಿಯಿಂದ ಪದವಿವರೆಗೆ ಅವರ ವಿದ್ಯಾರ್ಹತೆಗನುಗುಣ ವಾಗಿ ನೇಮಕಾತಿ ಮಾಡಿಕೊಳ್ಳಲಿವೆ. ನಿರುದ್ಯೋಗಿ ಯುವಕ ಯುವತಿಯರು ಮೇಳದಲ್ಲಿ ಭಾಗವಹಿಸಲು ಹೆಸರನ್ನು ನೊಂದಾಯಿಸಿ ಕೊಳ್ಳಬೇಕು ಎಂದ ಅವರು ಈ ಹಿಂದೆ ಸಂಸದ ಆರ್.ಧ್ರುವನಾರಾಯಣ್ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಉದ್ಯೋಗ ಮೇಳ ದಲ್ಲಿ ಚಾಮರಾಜನಗರದಲ್ಲೂ, ಅದೇ ದಿನ ಮೇಳವನ್ನು ಹಮ್ಮಿಕೊಂಡಿದ್ದರಿಂದಾಗಿ ಆಗಮಿಸಿದ್ದ ಆಕಾಂಕ್ಷಿಗಳಿಗೆ ನಿರಾಸೆವುಂ ಟಾಗಿತ್ತು, ಅದಕ್ಕೆ ಕ್ಷಮೆಯಾಚಿಸುತ್ತಾ ಈ ಬಾರಿ ಆಕಾಂಕ್ಷಿಗಳಿಗೆ ನಿರಾಸೆಯಾಗದಂತೆ ಉದ್ಯೋಗ ಕಲ್ಪಿಸಿಕೊಡಲಾಗುವುದು ಎಂದರು ನಿರುದ್ಯೋಗಿ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಾದ ಹೆಚ್.ಎಸ್.ಮೂಗಶೆಟ್ಟಿ, ಶೆಟ್ಟಹಳ್ಳಿ ಗುರುಸ್ವಾಮಿ, ಶ್ರೀನಿವಾಸ್ ಹಾಡ್ಯ ರಂಗಸ್ವಾಮಿ, ಜಿಪಂ ಸದಸ್ಯೆ ಲತಾಸಿದ್ದಶೆಟ್ಟಿ, ಎಪಿಎಂಸಿ ಅಧ್ಯಕ್ಷ ಎಂ.ಮಾದಪ್ಪ, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ, ತಾಪಂ ಮಾಜಿ ಅಧ್ಯಕ್ಷ ನಾಗೇಶ್‍ರಾಜ್, ಮುಖಂಡರಾದ ಬಸವಣ್ಣ ಕಮಲೇಶ್, ನಗರಸಭಾ ಸದಸ್ಯ ಸಿ.ಎಂ.ಶಂಕರ್ ಇದ್ದರು.

Translate »