ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
ಮೈಸೂರು

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

September 9, 2018

ಹುಣಸೂರು: ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿರುವ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಸ್ಥಳೀಯ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಕಲ್ಪತರು ವೃತ್ತದಲ್ಲಿ ಸಮಾ ವೇಶಗೊಂಡ ಸಿಪಿಐ(ಎಂ) ಕಾರ್ಯರ್ಕತರು ಮೋದಿ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ನಂತರ ಭಾರತ ಕಮ್ಯನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)ದ ಸ್ಥಳೀಯ ಸಮಿತಿ ಕಾರ್ಯದರ್ಶಿ ಜಗದೀಶ್ ಸೂರ್ಯ ಪ್ರತಿಭಟನಾಕಾ ರರನ್ನು ಉದ್ದೇಶಿಸಿ ಮಾತನಾಡಿ, ಅಚ್ಚೆ ದಿನ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ದೇಶ ಭಕ್ತಿ ಹೆಸರಿನಲ್ಲಿ ಅಸಹಾ ಯಕರು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಸುತ್ತಾ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣ ಮಾಡುತ್ತಿದೆ ಎಂದರು.

ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಗಳನ್ನು ಖಂಡಿಸಿ ಬರಹಗಳ ಮೂಲಕ ವ್ಯಕ್ತ ಪಡಿಸಿದ ಲೇಖಕರು, ಸಾಹಿತಿಗಳು ಬರಹಗಾರರು, ಪ್ರಗತಿಪರ ಚಿಂತಕರು ಹಾಗೂ ಮಾಧ್ಯಮ ಅಂಕಣಕಾರರನ್ನು ನಕ್ಸಲರ ಹೆಸರಿನಲ್ಲಿ ದೇಶ ದ್ರೋಹಿಗಳೆಂದು ಬಿಂಬಿಸಿ ಬಂಧಿಸುವ ಮೂಲಕ ತಮ್ಮ ಅನ್ಯಾಯ ಮತ್ತು ಅಕ್ರಮ ಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡ ಲಾಗುತ್ತಿದೆ. ಹಿಂದೆ ಯುಪಿಎ ಸರ್ಕಾರ ಬೆಲೆ ಏರಿಕೆ ಮಾಡಿದಾಗ ಬೀದಿಗಿಳಿದು ಸೈಕಲ್ ತುಳಿದಿದ್ದ ಬಿಜೆಪಿ ನಾಯಕರು ಈಗೆಲ್ಲಿದ್ದಾ ರೆಂದು ಪ್ರಶ್ನಿಸಿದರು.

ಪ್ರಧಾನಿ ಮೋದಿಯವರ ಗುಜರಾತ್ ನಲ್ಲಿ ದಲಿತ ಹೆಣ್ಣು ಮಗಳ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದರೂ ಮೌನವಹಿಸಿರುವುದನ್ನು ಖಂಡನೀಯ ಎಂದರು.ದೇಶದ ಎಲ್ಲಾ ರಂಗದಲ್ಲಿ ಮೋದಿ ಸರ್ಕಾರ ವಿಫಲಗೊಂಡಿದ್ದು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ದುಪಟ್ಟಾಗಿದೆ. ಜಾಗತಿಕ ಮಾರುಕಟ್ಟೆ ಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 130 ಡಾಲರ್ ಇದ್ದಾಗಲೂ ಪೆಟ್ರೋಲ್ ಬೆಲೆ ಈ ಮಟ್ಟಕ್ಕೆ ತಲುಪಿರಲಿಲ್ಲ. ಬ್ಯಾರಲ್‍ಗೆ 75 ಡಾಲರ್ ಇದ್ದರೂ ಪೆಟ್ರೋಲ್ ಬೆಲೆ ಮೂರು ಪಟ್ಟು ಏರಿಕೆ ಮಾಡಲಾಗಿದೆ. ಇದು ಇವರ ಅಚ್ಚೆ ದಿನ್ ವ್ಯಂಗ್ಯ ವಾಡಿದರು.

ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ವಿ. ಬಸವರಾಜು ಮಾತನಾಡಿ ಮೋದಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಯುವ ಜನರಿಗಾಗಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಉದ್ಯೋಗ ನೀಡದೆ ಮೋಸ ಮಾಡ ಲಾಗಿದೆ ಹಾಗೂ ಕೂಲಿಗಾರರಿಗೆ ಕನಿಷ್ಟ ಕೂಲಿ ವೇತನ ರೂ.18000 ಜಾರಿ ಮಾಡಲು ಮುಂದಾಗದ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ಶ್ರೀಮಂತ ಕಂಪೆನಿಗಳಿಗೆ ಲಾಭ ಮಾಡಿಕೊಡುತ್ತಿದೆ ಎಂದು ದೂರಿದರು. ಸುಲಭ ತೆರಿಗೆ ಜಾರಿ ಮಾಡುವುದಾಗಿ ಹೇಳಿ ಜಿ.ಎಸ್.ಟಿ ಜಾರಿಗೆ

ತಂದು ತೆರಿಗೆ ರೂಪದಲ್ಲಿ ಹಣ ಸುಲಿಗೆ ಮಾಡಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಬೆಳ್ತೂರು ವೆಂಕಟೇಶ್, ಮಹೇಶ್‍ಕುಮಾರ್, ಚಿಕ್ಕಣ್ಣೇಗೌಡ, ಅಶೋಕ್, ಜಗದೀಶ್, ಸಿದ್ದಯ್ಯ, ಸುಬ್ಬೇಗೌಡ, ದರ್ಶನ್, ಕಿರಣ್, ಮಂಜು ಮುಂತಾದ ವರು ಭಾಗವಹಿಸಿದ್ದರು.

Translate »