ಪುರಸಭಾ ಸದಸ್ಯರೊಂದಿಗೆ ಚರ್ಚಿಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಮೈಸೂರು

ಪುರಸಭಾ ಸದಸ್ಯರೊಂದಿಗೆ ಚರ್ಚಿಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

September 9, 2018

ತಿ.ನರಸೀಪುರ: ವರುಣಾ ಶಾಸಕ ಡಾ.ಎಸ್.ಯತೀಂದ್ರ ಸೇರಿದಂತೆ ಪುರಸಭೆಯ ನೂತನ ಸದಸ್ಯರೊಂದಿಗೆ ಚರ್ಚೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಲಾಗುವುದು ಎಂದು ವಸತಿ ಯೋಜನೆ ಜಾಗೃತಿ ಉಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಸುನೀಲ್ ಬೋಸ್ ಹೇಳಿದರು.

ಪಟ್ಟಣದ ಪುರಸಭಾ ಚುನಾವಣೆಯಲ್ಲಿ ನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಯಲ್ಲಿ ಆಯ್ಕೆಗೊಂಡ ನೂತನ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ. ಡಾ.ಎಸ್.ಯತೀಂದ್ರ ವಿದೇಶ ಪ್ರವಾಸದಿಂದ ಬಂದ ಕೂಡಲೇ ಸದಸ್ಯರೊಡನೆ ಸಮಾಲೋಚನೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಂತಿಮಗೊಳಿ ಸಲಾಗುವುದು ಎಂದರು.

ಪುರಸಭೆಯ ಚುನಾವಣೆಯಲ್ಲಿ 10 ವಾರ್ಡ್‍ಗಳು ಕೈವಶವಾಗಿದ್ದು, ಆರು ಪಕ್ಷೇ ತರರಲ್ಲಿ ಕೆಲವರು ಕಾಂಗ್ರೆಸ್ ಬೆಂಬಲಿಸು ವುದರಿಂದ ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಪುರಸಭೆ ಸದಸ್ಯರು ಕುದುರೆ ವ್ಯಾಪಾರಕ್ಕೆ ಸೊಪ್ಪು ಹಾಕದ ಗುಣದವ ರಾಗಿರುವುದರಿಂದ, ವಿಪಕ್ಷಗಳ ತಂತ್ರಗಾರಿಕೆಗೆ ಯಾವುದೇ ಅವಕಾಶವಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಮುಂದು ವರೆಸಲು ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಮುಖಂಡ ಎಲ್.ಮಹದೇವಪ್ಪ ಮಾತನಾಡಿ, ಅಭಿವೃದ್ಧಿ ಕೆಲಸ ಮಾಡಿಯೂ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಯಾಗಿದೆ. ಪಕ್ಷವನ್ನು ಬಲಪಡಿಸಿ ಮುಂದಿನ ಚುನಾವಣೆಗೆ ಸಜ್ಜಾಗಬೇಕು ಹಾಲಿ ಶಾಸಕರು ಜನರ ವಿಶ್ವಾಸವನ್ನು ಕಳೆದುಕೊಂಡಿ ರುವುದರಿಂದ ಯಾವುದೇ ಸಂದರ್ಭದಲ್ಲೂ ಚುನಾವಣೆ ನಡೆದರೆ ಕಾಂಗ್ರೆಸ್ ಭಾರೀ ಅಂತರದಲ್ಲಿ ಗೆಲ್ಲಲಿದೆ ಎಂದು ತಿಳಿಸಿದರು.

ಪುರಸಭೆ ಚುನಾವಣೆಯಲ್ಲಿ ಗೆಲುವಿಗೆ ಸಹಕಾರ ನೀಡಿದ ಸುನೀಲ್ ಬೋಸ್ ಅವರನ್ನು ನೂತನ ಸದಸ್ಯ ಬಾದಾಮಿ ಮಂಜು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಪ.ಪಂ ಮಾಜಿ ಅಧ್ಯಕ್ಷ ಎನ್.ಮಹದೇವಸ್ವಾಮಿ, ಶ್ರೀ ಗುಂಜಾ ನರಸಿಂಹಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಆರ್.ಮಹದೇವ(ಪುಳ್ಳಾರಿಗೌಡ), ಟೌನ್ ಕುರುಬರ ಸಂಘದ ಖಜಾಂಚಿ ಗುರು ಮಲ್ಲಪ್ಪ, ಅಹಿಂದ ಯುವ ಜಿಲ್ಲಾಧ್ಯಕ್ಷ ಜೆ. ಅನೂಪ್‍ಗೌಡ, ಮುಖಂಡರಾದ ಶ್ರೀಕಾಂತ್, ಡಿಕ್ಕು ಮಂಜು, ಟೈಲರ್ ನಂಜುಂಡ, ಚೌಹಳ್ಳಿ ಮಲ್ಲೇಶ, ಸೋಮುದಾದಾ, ಸಬೀಲ್ ಖಾನ್, ಕೌಸರ್ ಪಾಷ, ಅಸ್ಗರ್ ಪಾಷ, ಅಫ್ರೊಜ್, ಸತೀಶ, ಲಕ್ಷ್ಮೀನಾರಾಯಣ, ಹದಿನಾರು ಶಿವಕುಮಾರ, ಪಿಎ ಬಸವರಾಜು ಹಾಗೂ ಇನ್ನಿತರರು ಹಾಜರಿದ್ದರು.

Translate »