ಮತ್ತೆ ಸಕ್ರಿಯ ರಾಜಕಾರಣಕ್ಕಿಳಿದ ಸುನೀಲ್ ಬೋಸ್
ಮೈಸೂರು

ಮತ್ತೆ ಸಕ್ರಿಯ ರಾಜಕಾರಣಕ್ಕಿಳಿದ ಸುನೀಲ್ ಬೋಸ್

August 28, 2018

ತಿ.ನರಸೀಪುರ: ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಪುತ್ರ, ವಸತಿ ಯೋಜನೆ ಜಾಗೃತಿ ಉಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಸುನೀಲ್ ಬೋಸ್ ಹಲವು ತಿಂಗಳ ನಂತರ ಪುರಸಭೆ ಚುನಾವಣೆ ಪ್ರಚಾರದ ಮೂಲಕ ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ.

ಪರಿವರ್ತಿತ ಪುರಸಭೆಗೆ ನಡೆಯು ತ್ತಿರುವ ಸಾರ್ವತ್ರಿಕ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದ ಸುನೀಲ್ ಬೋಸ್, ಪಟ್ಟಣದಲ್ಲಿ ಸೋಮವಾರ ವರುಣಾ ಶಾಸಕ ಡಾ.ಎಸ್.ಯತೀಂದ್ರ ಅವರೊಂದಿಗೆ ವಿವಿಧ ವಾರ್ಡುಗಳಲ್ಲಿ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿದರು.

ಸುಶೀಲಮ್ಮ ಕಾಲೋನಿಯಲ್ಲಿ ಪಾದಯಾತ್ರೆ ನಡೆಸಿ, ಮನೆ ಮನೆಗೆ ತೆರಳಿ 19ನೇ ವಾರ್ಡಿನ ಅಭ್ಯರ್ಥಿ ಜ್ಞಾನೇಶ್ವರಿ ಪರ ಮತಯಾಚಿಸಿ, ಸಕ್ರಿಯ ರಾಜಕಾರಣ ದಲ್ಲಿ ಕ್ರಿಯಾಶೀಲರಾದರು.

ಮತಯಾಚನೆ ನಂತರ ಸುನೀಲ್ ಬೋಸ್ ಮಾತನಾಡಿ, ರಾಜ್ಯದಲ್ಲಿ ಐದು ವರ್ಷಗಳ ಕಾಲ ಸ್ಥಿರ ಸರ್ಕಾರವನ್ನು ನೀಡಿದ ಸಿದ್ದರಾಮಯ್ಯ ಹಾಗೂ ಡಾ.ಹೆಚ್.ಸಿ. ಮಹದೇವಪ್ಪ ಅವರು ಆಯ್ಕೆ ಮಾಡಿದ ಜನರ ಋಣವನ್ನು ಅಭಿವೃದ್ಧಿ ಮೂಲಕ ತೀರಿಸಿದ್ದರಿಂದ ಪಟ್ಟಣದಲ್ಲಿ ನೂರಾರು ಶಾಶ್ವತ ಯೋಜನೆಗಳು ಅನುಷ್ಠಾನಗೊಂಡಿವೆ. ಮಹದೇವಪ್ಪ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವುದಿಲ್ಲ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಪಕ್ಷವನ್ನು ಬಲಪಡಿಸಲು ದುಡಿಯಲಿದ್ದಾರೆ, ಜನರು ಹಾಗೂ ಕಾರ್ಯ ಕರ್ತರು ಯಾವುದೇ ಗೊಂದಲಕ್ಕೆ ಕಿವಿ ಗೊಡದೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿ ಸಬೇಕೆಂದು ಮನವಿ ಮಾಡಿದರು.

ವರುಣಾ ಶಾಸಕ ಡಾ.ಎಸ್.ಯತೀಂದ್ರ, ಜಿ.ಪಂ ಸದಸ್ಯ ಮಂಜುನಾಥನ್, ಮಾಜಿ ಸದಸ್ಯ ಕೆ.ಮಹದೇವ, ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ನಿರ್ದೇಶಕ ಮಹ ದೇವಣ್ಣ, ವರುಣಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ದೇಗೌಡ, ಟಿಎಪಿಸಿಎಂಎಸ್ ನಿರ್ದೇ ಶಕ ಬಿ.ಮಹದೇವ, ಪ.ಪಂ ಮಾಜಿ ಅಧ್ಯಕ್ಷರಾದ ಕನಕರಾಜು, ಎನ್.ಮಹದೇವ ಸ್ವಾಮಿ, ವೀರೇಶ್, ಎಸ್.ನಂಜುಂಡಸ್ವಾಮಿ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇ ಶಕ ಅಮ್ಜದ್‍ಖಾನ್, ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜು(ಚೀಕಾ), ಕೆಪಿಸಿಸಿ ಅಲ್ಪ ಸಂಖ್ಯಾತ ಸಂಚಾಲಕ ಬಿ.ಮನ್ಸೂರ್ ಆಲಿ, ಮುಖಂಡರಾದ ಡಣಾಯಕನಪುರ ಸೋಮಣ್ಣ, ಜೆ.ಅನೂಪ್‍ಗೌಡ, ಸುಬೇಲ್, ಸತೀಶ ಹಾಗೂ ಇನ್ನಿತರರು ಹಾಜರಿದ್ದರು.

Translate »