ನೀಲಕಂಠನಗರ ಬಡಾವಣೆಗೆ ಮೂಲಭೂತ ಸೌಕರ್ಯಕ್ಕೆ ಕ್ರಮ
ಮೈಸೂರು

ನೀಲಕಂಠನಗರ ಬಡಾವಣೆಗೆ ಮೂಲಭೂತ ಸೌಕರ್ಯಕ್ಕೆ ಕ್ರಮ

August 28, 2018

ನಂಜನಗೂಡು:  ನಗರದ 19ನೇ ವಾರ್ಡ್ ನೀಲಕಂಠನಗರ ಬಡಾವಣೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ದಿ ಪಡಿಸಲು ಕ್ರಮ ವಹಿಸುವುದಾಗಿ ಶಾಸಕ ಬಿ. ಹರ್ಷವರ್ಧನ್ ತಿಳಿಸಿದ್ದಾರೆ.

ಸೋಮವಾರ ನೀಲಕಂಠನಗರ ಬಡಾವಣೆಗೆ ಭೇಟಿ ನೀಡಿದಾಗ ನಾಗರಿಕರು ಬಡಾವಣೆಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲಾ, ಈ ಭಾಗದ ಸದಸ್ಯರು ಸರಿಯಾಗಿ ಕೆಲಸ ಮಾಡಿಲ್ಲ ಕಳೆದ ಹಲವು ವರ್ಷಗಳಿಂದ ಈ ಬಡಾವಣೆ ನಿರೀಕ್ಷೆಯಷ್ಟು ಅಭಿವೃದ್ಧಿ ಯಾಗಿಲ್ಲ ಎಂದು ದೂರಿದರು. ಶಾಸಕರು ಸಂಬಂಧಪಟ್ಟ ಅಧಿಕಾರಿ ಜೊತೆ ದೊರವಾಣಿ ಯಲ್ಲಿ ಚರ್ಚಿಸಿ ಬಡಾವಣೆಯ ಅಭಿವೃದ್ಧಿ ಕಡೆ ಗಮನ ಹರಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ವಾರ್ಡ್‍ನ ಆಕಾಂಕ್ಷಿ ಮಂಜುಳಾ ಅನಂತ್, ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಅಧ್ಯಕ್ಷ ಬಾಲಚಂದ್ರ, ಕೃಷಂ್ಣರಾಜು, ಭಾಗ್ಯರಾಜು, ಕುಮಾರ್, ತಾಪಂ ಅಧ್ಯಕ್ಷ ಬಿ.ಮಹದೇವಪ್ಪ, ಡಿ.ಪಿ.ಲೋಕೇಶ್ ಇತರರಿದ್ದರು.

Translate »