ಹೆಚ್.ಡಿ.ಕೋಟೆಯಲ್ಲಿ ಶ್ರೀನಾರಾಯಣ ಗುರು ಜಯಂತಿ
ಮೈಸೂರು

ಹೆಚ್.ಡಿ.ಕೋಟೆಯಲ್ಲಿ ಶ್ರೀನಾರಾಯಣ ಗುರು ಜಯಂತಿ

August 28, 2018

ಹೆಚ್.ಡಿ.ಕೋಟೆ:  ಜಾತಿ ವ್ಯವಸ್ಥೆಯನ್ನು ತೊಡೆದು ಹಾಕುವಲ್ಲಿ ನಾರಾಯಣ ಗುರುಗಳು ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಉಂಟು ಮಾಡಿದ್ದರು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ 164ನೇ ನಾರಾ ಯಣ ಗುರುರವರ ಜಯಂತಿ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಅಂದಿನ ದಿನಗಳಲ್ಲಿ ಸಮಾಜದಲ್ಲಿ ಕಟ್ಟುಪಾಡುಗಳು ಅತೀ ಹೆಚ್ಚಿದ್ದವು. ಜನ ಸಾಮಾನ್ಯರಿಗೆ ನರಕದ ಜೀವನ ಆಗಿತ್ತು. ಈ ನರಕದ ಜೀವನದಿಂದ ಸಾಮಾನ್ಯ ಜನತೆಯನ್ನು ದೂರ ಮಾಡಬೇಕಾದರೆ ಅವರಿಗೆ ಶಿಕ್ಷಣದ ಅವಶ್ಯಕತೆ ಇದೆ ಎನ್ನುವುದನ್ನು ಅರಿತಿದ್ದ ಅವರು, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದರು ಎಂದರು.
ಸಮಾಜ ಪರಿವರ್ತನೆ ಆಗಬೇಕೆಂದು ದೇವಾಲಯಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಕೊಡಬೇಕು ಎಂದಿದ್ದರು. ಆ ನಿಟ್ಟಿನಲ್ಲಿ ಅನೇಕ ಶಿವ ದೇವಾಲಯ ಗಳನ್ನು ಪ್ರತಿಷ್ಠಾಪನೆ ಮಾಡಿದ್ದರು ಎಂದರು.

ಮುಖಂಡರಾದ ಎಸ್.ಎನ್.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ನಾರಾಯಣಗುರುಗಳು ಸಂಸ್ಕøತ ಅಭ್ಯಾಸ ಮಾಡಿ. ಉಪನಿಷತ್ ಅವರಲ್ಲಿ ಪ್ರಭಾವ ಬೀರಿದ್ದರಿಂದ ಅವರಿಗೆ ವಿಶ್ವ ಕುಟುಂಬದ ಭಾವನೆ ಮೂಡಿತ್ತು. ಸಮಾ ಜದಲ್ಲಿ ರೂಢಿ ಮತ್ತು ಕಟ್ಟುಪಾಡುಗಳನ್ನು ಹೋಗಲಾಡಿಸಿ ಸಮಾನತೆಗೆ ಹೋರಾಟ ಮಾಡಿ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜನರಲ್ಲಿ ಅರಿವು ಮೂಡಿಸಿದ್ದರು ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಹೀಮಾ ಸುಲ್ತಾನ್, ಸದಸ್ಯ ವೆಂಕಟಸ್ವಾಮಿ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಗಿರಿಗೌಡ, ತಹಸೀಲ್ದಾರ್ ಮಂಜು ನಾಥ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀಕಂಠರಾಜೇ ಅರಸ್, ಈಡಿಗ ಸಮಾಜದ ಅಧ್ಯಕ್ಷ ಎಸ್.ಎನ್.ರಂಗೇಗೌಡ, ಟಿಎಪಿಸಿ ಎಂಎಸ್ ಅಧ್ಯಕ್ಷ ಎಂ.ಕೃಷ್ಣ, ಜಿಲ್ಲಾ ಪಂಚಾ ಯಿತಿ ಮಾಜಿ ಸದಸ್ಯ ಚಿಕ್ಕವೀರನಾಯಕ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಕನ್ನಡ ಪ್ರಮೋದ್, ಮುದ್ದುಮಲ್ಲಯ್ಯ, ರಾಮಣ್ಣ, ಮುತ್ತು ರಾಜ್, ಅನಿಲ್, ನಾಗಣ್ಣ, ಲಕ್ಷ್ಮಣ್, ಮಂಜು, ರವೀಗೌಡ, ರಾಜು, ಲೋಕ ನಾಥ್, ಎಸ್.ಎನ್.ನಾಗರಾಜ್ ಹಾಜರಿದ್ದರು.

Translate »